12th September 2024
Share

TUMAKURU:SHAKTHIPEETA FOUNDATION

  ದೇಶದ ಇತಿಹಾಸದಲ್ಲಿಯೇ ಒಂದು ರಾಜ್ಯದ ಅಂದರೆ,  ಕರ್ನಾಟಕ  ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ, ಶಕ್ತಿಪೀಠ ಫೌಂಡೇಷನ್ ಮತ್ತು ಅಭಿವೃದ್ಧಿ ರೆವೂಲ್ಯೂಷನ್ ಫೋರಂ  ಸಂಸ್ಥೆಗಳು, ರಾಜ್ಯದ ಸರ್ವಪಕ್ಷಗಳ ನೇತೃತ್ವದಲ್ಲಿ ಸಿದ್ಧಪಡಿಸಲು ಉದ್ದೇಶಿರುವ  ನವ ಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ಕ್ಕೆ, ಕರ್ನಾಟಕ ಮೀಡಿಯಾ ಅಕಾಡೆಮಿ, ಕರ್ನಾಟಕ ರಾಜ್ಯz ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಬೆಂಗಳೂರು ಪ್ರೆಸ್‍ಕ್ಲಬ್ ಸಹಭಾಗಿತ್ವದ ಬಗ್ಗೆ ಚರ್ಚೆ ನಡೆಯುತ್ತಿರುವುದಕ್ಕೆ, ರಾಜ್ಯದ  ಆನೇಕ ಸಂಘ ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿವೆ.

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಸ್ವತಃ ಬೆಂಗಳೂರು ಪ್ರೆಸ್ ಕ್ಲಬ್‍ಗೆ ಭೇಟಿ ನೀಡಿ ಬೆಂಗಳೂರು ಪ್ರೆಸ್‍ಕ್ಲಬ್ ಅಧ್ಯಕ್ಷರಾದ ಶ್ರೀ ಶ್ರೀಧರ್, ಕರ್ನಾಟಕ ರಾಜ್ಯz ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀ ಶಿವಾನಂದ್ ತಗಡೂರು, ಕರ್ನಾಟಕ ಮೀಡಿಯಾ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಶ್ರೀ ಪೊನ್ನಪ್ಪನವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

ಸಕಲೇಶ ಪುರದ ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಮೂಕಾನನ ರೆಸಾರ್ಟ್ ಮತ್ತು ಸಕಲೇಶಪುರ ತಾಲ್ಲೂಕು ರೆಸಾರ್ಟ್ ಮತ್ತು ಹೋಂಸ್ಟೇಗಳ ಮಾಲೀಕರ ಅಸೋಶಿಯೇಷನ್‍ಗಳು ಮೌಖಿಕವಾಗಿ ಈಗಾಗಲೇ ಬೆಂಬಲ ವ್ಯಕ್ತಪಡಿಸಿವೆ.

ವೆಸ್ಟರ್ನ್ ಘಾಟ್ ಫೌಂಡೇಷನ್ ನ ಮ್ಯಾನೇಜಿಂಗ್ ಟ್ರಸ್ಟಿ ಶ್ರೀ ವೇದಾನಂದಾಮೂರ್ತಿ, ಸಿಇಓ ಚಿ.ಹಿತೇಶ್ ರವರು ಸ್ಥಾಪಿಸಲು ಉದ್ದೇಶಿರುವ ‘ಪಶ್ಚಿಮಘಟ್ಟಗಳ ಥೀಮ್ ಪಾರ್ಕ್’ಗೆ ನಾನೇ ಮೆಂಟರ್ ಆಗಿದ್ದು, ಶ್ರೀ ತ್ಯಾಗಟೂರ್ ಶ್ರೀ ಸಿದ್ದೇಶ್ ರವರು ಮತ್ತು ತಂಡ, ರಾಜ್ಯ ಮಟ್ಟದ ಪಶ್ಚಿಮ ಘಟ್ಟದ ಜ್ಞಾನದಾನಿಗಳ ಕಾರ್ಯಾಗಾರ ನಡೆಸಲು ಸಿದ್ಧತೆ ನಡೆಸಿದೆ.

ಇದೂವರೆಗೂ ಪಶ್ಚಿಮಘಟ್ಟಗಳ ಬಗ್ಗೆ ಅಧ್ಯಯನ, ಸಂಶೋಧನೆ, ಉಳಿವಿಗಾಗಿ ಹೋರಾಟ ಮಾಡಿರುವ ಎಲ್ಲಾ ವರ್ಗದವರ ಹುಡುಕಾಟ ಆರಂಭವಾಗಿದೆ.

ಇದೇ ಕಾರ್ಯಾಗಾರದಲ್ಲಿ ಕರ್ನಾಟಕ ಮೀಡಿಯಾ ಅಕಾಡೆಮಿ, ಕರ್ನಾಟಕ ರಾಜ್ಯz ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಬೆಂಗಳೂರು ಪ್ರೆಸ್‍ಕ್ಲಬ್ ಸಹಭಾಗಿತ್ವದ ಒಡಂಬಡಿಕೆಯ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲು ಚಿಂತನೆ ನಡೆಸಲಾಗಿದೆ.

ವೆಸ್ಟರ್ನ್ ಘಾಟ್ ಫೌಂಡೇಷನ್ ಅನ್ನು ಶಾಲಾ ಮಕ್ಕಳಿಂದ ಪಶ್ಚಿಮಘಟ್ಟದ ಗಿಡಗಳ, ಪಕ್ಷಿ-ಪ್ರಾಣಿಗಳ ಬಗ್ಗೆ ಮಾಹಿತಿ ಪಡೆಯುವ ಮೂಲಕ ಉದ್ಘಾಟನೆÀ ವೈಶಿಷ್ಟತೆ ಮೆರೆಯಲಾಗಿದೆ. ಈ ಸಂದರ್ಭದಲ್ಲಿ ಶ್ರೀ ಜಿ.ಎಸ್.ಬಸವರಾಜ್‍ರವರು, ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ವಿಸಿ ಶ್ರೀ ವೀರಭದ್ರಪ್ಪನವರು, ತುಮಕೂರಿನ ಪ್ರಜಾ ಪ್ರಗತಿ ಸಂಪಾದಕ ಶ್ರೀ ನಾಗಣ್ಣನವರು, ಶ್ರೀ ವೇದಾನಂದಾಮೂರ್ತಿರವರು, ಶ್ರೀ ಶಂಕರಲಿಂಗಪ್ಪನವರು, ಶ್ರೀಮತಿ ನಿವೇದಿತಾರವರು, ಚಿ.ಹಿತೇಶ್‍ರವರು, ಶ್ರೀ ಶಶಿಧರ್‍ರವರು, ಶ್ರೀ ನಯನರವರು, ಹೊಂಗದಹಳ್ಳ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇನ್ನೂ ಮುಂತಾದವರು ಇದ್ದಾರೆ.