TUMAKURU:SHAKTHIPEETA FOUNDATION
ಹಾಸನ ಜಿಲ್ಲೆಯ, ಸಕಲೆಶಪುರ ತಾಲ್ಲೋಕಿನ, ಮೂಕಾನನ ರೆಸಾರ್ಟ್‍ನಲ್ಲಿ ನಡೆದ ‘ಜಲಗ್ರಂಥ’ದ ರೂಪುರೇಷೆಗಳ ಕಾರ್ಯಾಗಾರದಲ್ಲಿ ಮಾತನಾಡಿದ ತುಮಕೂರಿನ ಸಾಹಿತಿ ಶ್ರೀ ಕವಿತಾ ಕೃಷ್ಣಾರವರು ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳು ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳ 2000 ದಿಂದ 2500 ಟಿ.ಎಂ.ಸಿ ಅಡಿ ನೀರಿನಲ್ಲಿ ಬಯಲು ಪ್ರದೇಶಕ್ಕೆ ಎಷ್ಟು ನೀರು ಬಳಸ ಬಹುದು ಎಂದು ಒಂದು ಒಮ್ಮತದ ನಿರ್ಧಾರಕ್ಕೆ ಬರಲು ಕರೆ ನೀಡಿದರು.
ನಾನು, ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ, ಕುಂದರನಹಳ್ಳಿ ರಮೇಶ್ ವೇದಾನಂದಾಮೂರ್ತಿಯವರು ಕಳೆದ 22 ವರ್ಷಗಳ ಹಿಂದೆ ಇದೇ ಜಾಗದಲ್ಲಿ ಸುತ್ತಾಡಿ, ಅಧ್ಯಯನ ಮಾಡಿದ್ದು ಇತಿಹಾಸ. ಈಗ ಒಂದು ನಿರ್ದಾರಕ್ಕೆ ಬರಲು ಕುಂದರನಹಳ್ಳಿಯವರು ನ್ಯಾಯಾಲಯಕ್ಕೆ ಹೋಗುವುದು ಸೂಕ್ತ ಎಂದು ಸಲಹೆ ನೀಡಿದರು.
ತುಮಕೂರಿನ ಪ್ರಜಾ ಪ್ರಗತಿ ಸಂಪಾದಕರಾದ ಶ್ರೀ ಎಸ್.ನಾಗಣ್ಣನವರು ಮಾತನಾಡಿ, ಪಶ್ಚಿಮಘಟ್ಟಗಳೂ ಉಳಿಯ ಬೇಕು, ಬಯಲು ಪ್ರದೇಶದ ರೈತರ ಬದುಕು ಹಸನಾಗಬೇಕು, ಎರಡು ಭಾಗದ ಜನರನ್ನು ಸೇರಿಸಿಕೊಂಡು ಒಂದು ನಿರ್ಧಾರಕ್ಕೆ ಬರಲು ಇದೊಂದು ಸಕಾಲವಾಗಿದೆ ನಾನೂ ಸಹ ಇದು ನ್ಯಾಯಾಲಯದಲ್ಲಿ ಬಗೆಹರಿಯುವುದು ಸೂಕ್ತ ಎಂದು ಸಲಹೆ ನೀಡುತ್ತೇನೆ. ಜೊತೆಗೆ ಎರಡುಭಾಗದ ಜನರ ಮನಸ್ಸುನ್ನು ಗೆಲ್ಲುವುದು ಬಹಳ ಮುಖ್ಯವಾಗಿದೆ ಎಂದು ಪ್ರತಿಪಾದಿಸಿದರು.
ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮಾತನಾಡಿ, ನನಗೂ ಮಾತನಾಡಿ, ಮಾತನಾಡಿ ಸಾಕಾಗಿ ಹೋಗಿದೆ. ಇದೂವರೆಗೂ ಕೇವಲ 24 ಟಿ.ಎಂ.ಸಿ ಅಡಿ ನೀರಿನ ಎತ್ತಿನಹೊಳೆ ನೀರಿನ ಯೋಜನೆ ಮಾತ್ರ ಜಾರಿಯಾಗುತ್ತಿದೆ. ಇದರಿಂದ ನಾವೂ, ನೀವೂ ನೀರಿಕ್ಷಿಸಿದಷ್ಟು ನೀರು ಬರಲು ಸಾಧ್ಯಾವಿಲ್ಲ.
ಆದರೆ ಒಂದು ತೆರೆದ ಕಾಲುವೆ ನಿರ್ಮಾಣವಾಗಿರುವುದು ತೃಪ್ತಿ ತಂದಿದೆ. ಈ ಕಾಲುವೆಗೆ ಇನ್ನೂ ಯಾವ ನದಿ ನೀರು ಹರಿಸಬಹುದು ಎಂಬ ಬಗ್ಗೆ ಸರ್ಕಾರಗಳು ಧೃಡ ನಿರ್ಧಾರ ಕೈಗೊಳ್ಳಬೇಕು. ನಾನು ಕೇಂದ್ರ ಸರ್ಕಾರದ ಪರ ಇರುವವನು.
‘ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಪತ್ರಗಳಿಗೆ ಸ್ಪಂಧಿಸದೇ ಇದ್ದರೆ. ರಾಜ್ಯದಲ್ಲಿ ನಮ್ಮ ಪಕ್ಷದ ಸರ್ಕಾರ ಇದ್ದರೂ ಬೀದಿಗೀಳಿಯಲೇ ಬೇಕಾಗುತ್ತದೆ. ಇದಕ್ಕೊಂದು ಅಂತಿಮ ನಿರ್ಧಾರವನ್ನು ನಮ್ಮ ಮುಖ್ಯಮಂತ್ರಿಗಳು ಕೈಗೊಳ್ಳಲೇ ಬೇಕು ಎಂದು ಪ್ರತಿಪಾದಿಸಿದರು’.
ಶಿವಮೊಗ್ಗದ ಕುವೆಂಪು ಯೂನಿವರ್ಸಿಟಿಯಲ್ಲಿರುವ ಕೆ.ಹೆಚ್.ಪಾಟೀಲ್ ಅಧ್ಯಯನ ಪೀಠದ ನಿರ್ದೇಶಕರಾದ ಶ್ರೀ ಬಸವರಾಜ್‍ರವರು ಮಾತನಾಡಿ, ಇಂದು ರಾಜ್ಯದ ಬಹುತೇಕ ನೀರಾವರಿ ತಜ್ಞರು ಚರ್ಚೆ ಮಾಡಿದ ಹಾಗೆ, ಈ ಭಾಗದ ಪರಿಸರ ಹೋರಾಟಗಾರರ ಕಾರ್ಯಾಗಾರ ಆಯೋಜಿಸಿ ಅವರ ಭಾವನೆಗಳನ್ನು ಸಂಗ್ರಹಿಸಲು ಸಲಹೆ ನೀಡಿದರು.
ಸಭೆಯಲ್ಲಿ ಭಾಗವಹಿಸಿದ್ದ ಎಲ್ಲಾರೂ ಸಹ ನ್ಯಾಯಾಲಯಕ್ಕೆ ಹೋಗಿ ಬಗೆ ಹರಿಸುವುದೇ ಸೂಕ್ತ ಎಂಬ ಅಭಿಪ್ರಾಯಕ್ಕೆ ಬೆಂಬಲಿಸಿದರು.
ವಡವೇ ಮಾರಿ ಪಿ.ಐ.ಎಲ್ ಹಾಕಿ.
ಮನೆಗೆ ಬಂದ ನಂತರ ನನ್ನ ಧರ್ಮಪತ್ನಿ ಶ್ರೀಮತಿ ಬಿ.ಸುಜಾತಕುಮಾರಿ ಈ ಬಗ್ಗೆ ಮಾತನಾಡಿ, ಮೈಸೂರಿನ ಮಹಾರಾಣಿಯವರು ತನ್ನ ಒಡವೆ ಮಾರಿ ವಾಣಿವಿಲಾಸ ಡ್ಯಾಂ ಕಟ್ಟಿಸಿದರಂತೆ, ನಾನೂ ಮದುವೆ ಆದ ದಿನದಿಂದಲೂ, ನೀವೂ ನೀರಾವರಿ ಹೋರಾಟ ಮಾಡುತ್ತಾ ಬಂದಿದ್ದೀರಿ, ಈಗ ಎಲ್ಲರೂ ನ್ಯಾಯಾಲಯಕ್ಕೆ ಪಿ.ಐ.ಎಲ್ ಹಾಕಲು ಸಲಹೆ ನೀಡುತ್ತಿದ್ದಾರೆ. ನನ್ನ ವಡವೇ ಮಾರಿಯಾದರೂ ಪಿಐಎಲ್ ಹಾಕಿ ಎಂದಾಗ ನನಗೆ ಮಾತೇ ಬರಲಿಲ್ಲ.