TUMAKURU:SHAKTHIPEETA FOUNDATION
ನಾನು ಕಳೆದ ಹಲವಾರು ವರ್ಷಗಳಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಯವ್ಯಯಗಳ ಬಗ್ಗೆ ಗಮನ ಹರಿಸುತ್ತಿದ್ದೇನೆ. ಈ ವóರ್ಷ ಚುನಾವಣಾ ವರ್ಷದ ಬೊಗಳೆ ಆಯವ್ಯಯ ಮಂಡಿಸುತ್ತಾರೆ ಎಂಬ ವಿಶ್ಲೇಷಣೆಗಳು ಹರಿದಾಡುತ್ತಿದ್ದವು.
ನಿಜಕ್ಕೂ 2047 ಕ್ಕೆ ‘ವಿಶ್ವ ಗುರು’ವಾಗಲು ಅಗತ್ಯವಿರುವ ಆಯವ್ಯಯ ಇದಾಗಿದೆ. ಬಡವರ್ಗದವರ ಪಾಲಿಗೂ, ದುಡಿಯುವ ಕೈಗಳಿಗೆ ಕೆಲಸ ಕೊಡುವ ಆಯವ್ಯಯವಾಗಿದೆ ಎಂದರೆ ಅತಿಶಯೋಕ್ತಿ ಆಗಲಾರದು.
‘ಯಾವ ರಾಜ್ಯ, ತನ್ನ ಪಾಲಿನ ಹಣದ ಹೊಂದಾಣಿಕೆ ಮಾಡಿ, ಕೇಂದ್ರ ಸರ್ಕಾರಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸಿದಲ್ಲಿ ಅಗತ್ಯ ಅನುದಾನವನ್ನು ಮುಕ್ತವಾಗಿ ಮಂಜೂರು ಮಾಡುವುದೇ ಬ್ಲಾಂಕ್ ಚೆಕ್ ಅರ್ಥ. ಇದು ಬೊಮ್ಮಾಯಿರವರ ಆಯವ್ಯಯದ ಮೇಲೆ ಅವಲಂಭಿತವಾಗಿದೆ.’
ತುಮಕೂರು ಜಿಲ್ಲೆಯೂ ಸೇರಿದಂತೆ, ಚಿತ್ರದುರ್ಗ, ಚಿಕ್ಕಮಂಗಳೂರು, ದಾವಣಗೆರೆ ಜಿಲ್ಲೆಗಳಿಗೆ ಅನೂಕೂಲವಾಗುವ ಭದ್ರಾ ಮೇಲ್ದಂಡೆ ಯೋಜನೆಗೆ, ನೆರೆ ರಾಜ್ಯಗಳ ಕಿತಾಪತಿಗೆ ಚಳ್ಳೆಣ್ಣೆ ತಿನ್ನಿಸಿ, ಮೈಕ್ರೋ ಇರ್ರಿಗೇಷನ್ ಮತ್ತು ಕೆರೆಗಳಿಗೆ ನದಿ ನೀರು ಯೋಜನೆಗೆ ಅನುದಾನ ನೀಡುವ ಮೂಲಕ ರಾಜ್ಯಕ್ಕೆ ಬೃಹತ್ ಕೊಡುಗೆ ನೀಡಿರುವುದು ಕಡತದ ಅನುಸರಣೆ ಮಾಡುತ್ತಿದ್ದ ನನಗೆ ತೃಪ್ತಿ ತಂದಿದೆ. ಕೇಂದ್ರ ಸರ್ಕಾರದ ಈ ತಂತ್ರಗಾರಿಕೆಗೆ ಮೆಚ್ಚಲೇ ಬೇಕು.
ತುಮಕೂರು ಜಿಲ್ಲೆಯ ಅಧಿಕಾರಿUಳೂ ನನಗೆ ಸೋಶಿಯಲ್ ಮೀಡಿಯಾ ಮೂಲಕ, ನಿಮ್ಮ ದಿಶಾ ಸಮಿತಿಯಲ್ಲಿನ ಕೂಗು ಮೋದಿಯವರಿಗೆ ಕೇಳಿರ ಬಹುದು ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ನಾನು 2017 ರಲ್ಲಿಯೇ ಒಂದು ಜಿಲ್ಲೆ ಒಂದು ಉತ್ಪನ್ನ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದೆ. ಕೇಂದ್ರ ಸರ್ಕಾರ ಇಡೀ ದೇಶಕ್ಕೆ ಚಾಲನೆ ನೀಡಿದ್ದು ಇತಿಹಾಸ. ಮತ್ತೆ ನಾನು ಒಂದು ಉತ್ಪನ್ನ ಒಂದು ಜಿಲ್ಲೆ ಹಾಗೂ ಮಹಿಳಾ ಉತ್ಪನ್ನಗಳ ‘ಮಾಲ್’ ಮಾಡಿ ಎಂದು ಬೊಬ್ಬೆ ಹೊಡೆಯುತ್ತಿದ್ದೆ. ಅಧಿಕಾರಿಗಳ ಮಂದಗತಿಯಿಂದ ಯೋಜನೆ ವಿಳಂಭವಾಯಿತು.
ತುಮಕೂರು ಸ್ಮಾರ್ಟ್ ಸಿಟಿ ಮೂಲಕವೂ ಯೋಜನೆ ಜಾರಿಗೊಳಿಸಲು ಶ್ರಮಿಸಿದ್ದೆ. ತುಮಕೂರು ಜಿಲ್ಲಾ ಪಂಚಾಯತ್ ಕಚೇರಿಯ ಬಿ.ಹೆಚ್.ರಸ್ತೆಗೆ ಹೊಂದಿಕೊಂಡಂತೆ ಇರುವ ನಿವೇಶನದಲ್ಲಿ, ಪ್ಲಾನ್ ಮಾಡಲು ಚಾಲನೆ ನೀಡಲಾಗಿತ್ತು. ಆದರೆ ಈಗ ಕೇಂದ್ರ ಸರ್ಕಾರವೇ ಮಾಲ್ ಯೋಜನೆ ಜಾರಿಗೊಳಿಸಿರುವುದು ನಿಜಕ್ಕೂ ಹೆಮ್ಮೆಯೆನಿಸಿದೆ.
ನನ್ನ ಬಹಳ ವರ್ಷದ ಹೋರಾಟ ಆರ್ಟಿಸಾನ್ ಹಬ್ ಯೋಜನೆಗೆ ಪೂರಕವಾಗಿ, ಆರ್ಟಿಸಾನ್ ‘ಪಿಎಂ–ವಿಕಾಸ್ ‘ಯೋಜನೆ ಘೋಷಣೆಯೂ ಮನಸ್ಸಿಗೆ ನೆಮ್ಮದಿ ತಂದಿದೆ.
ಡಿಜಿಟಲ್ ಇಂಡಿಯಾ ಕ್ಕೆ ಬಹಳ ಒತ್ತು ನೀಡಿದೆ. ಎಲ್ಲದಕ್ಕೂ ‘ಪಾನ್ ಕಾರ್ಡ್’ ದೊಡ್ಡಪ್ಪನಾಗಲಿದೆ. ನ್ಯಾಷನಲ್ ಡಿಜಿಟಲ್ ಲೈಬ್ರರಿ ರಿಸೋರ್ಸಸ್ ಇಡೀ ಗ್ರಾಮೀಣ ಜಗತ್ತನ್ನೆ ಬದಲಾಯಿಸಲಿದೆ. ಟೀಚರ್ಸ್ ಟ್ರೈನಿಂಗ್ ನಿಜಕ್ಕೂ ಅಗತ್ಯವಿತ್ತು.
ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ ಒದಗಿಸಲು ದೇಶದ 500 ಹಿಂದುಳಿದ ತಾಲ್ಲೋಕುಗಳ ಆಯ್ಕೆ, ನಿಜಕ್ಕೂ ಅದ್ಭುತವಾಗಿದೆ. ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯದ ಪ್ರತಿಪಾದನೆಗೆ ಒತ್ತು ನೀಡಿದಂತಿದೆ.
ನ್ಯಾಷನಲ್ ಡಾಟಾ ಪಾಲಿಸಿ ಬೋಗಸ್ ಡಾಟಾ ನೀಡುತ್ತಿದ್ದ, ಮೈಗಳ್ಳ ಅಧಿಕಾರಿಗಳ ಪಾಲಿಗೆ ಮರಣ ಶಾಸನವಾಗಲಿದೆ. ಈ ಪಾಲಿಸಿ ಮಾಡುವವರ ಜೊತೆಗೆ ಅಧಿಕೃತವಾಗಿ ಅಥವಾ ಅನಧಿಕೃತವಾಗಿ ಸೇರಿಕೊಳ್ಳಲೇ ಬೇಕು ಎಂದೇನಿಸಿದೆ.
ಇದು ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯದ ಅಡಿಪಾಯ ಆಗಲಿದೆ. ಬಯೋ ರಿಸರ್ಚ್ ಸಂಸ್ಥೆಗಳಿಗೆÀ ಒತ್ತು, ಟೂರಿಸಂ ಯೋಜನೆ, ಮ್ಯಾನ್ ಹೋಲ್ ಮುಕ್ತ ನಗರ, ಮಹಿಳಾ ಸಮ್ಮಾನ್, ಹಿರಿಯನಾಗರೀಕರ ಡಿಪಾಸಿಟ್ ಮಿತಿ ಹೆಚ್ಚಳ,ಸೆಂಟರ್ ಆಪ್ ಎಕ್ಸಲೆನ್ಸ್ ಆರ್ಟಿಫಿಸಿಯಲ್ ಇಂಟಲಿಜೆನ್ಸ್ ಇವೆಲ್ಲಾ ಉತ್ತಮ ಯೋಜನೆಗಳಾಗಿವೆ.
ನಿಧಾನವಾಗಿ ಅಧ್ಯಯನ ಮಾಡಿದ ನಂತರ ನಿರ್ದಿಷ್ಠ ಯೋಜನೆಗಳ ಬಗ್ಗೆ ಮಾತನಾಡಬಹುದು.