28th March 2024
Share

TUMAKURU:SHAKTHIPEETA FOUNDATION

ಗುಬ್ಬಿ ಹೆಚ್.ಎ.ಎಲ್ ಘಟಕವನ್ನು ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರು ದಿನಾಂಕ: 03.01.2016 ಶಂಕುಸ್ಥಾಪನೆ ಮತ್ತು ದಿನಾಂಕ:06.02.2023 ಲೋಕಾರ್ಪಣೆ ಮಾಡಿದ ಅಂಗವಾಗಿ ಹಾಗೂ ಕಳೆದ 35 ವರ್ಷಗಳಿಂದ ಸರ್ಕಾರಿ ಭೂಮಿಯನ್ನು ಉಳುಮೆ ಮಾಡುತ್ತಿದ್ದ ರೈತರಿಗೆ, ಹೆಚ್.ಟಿ.ಲೈನ್ ಸಂತ್ರಸ್ಥರಿಗೆ, ಅಕ್ಕಪಕ್ಕದ ಗ್ರಾಮದ ಜನರಿಗೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ನಾನು ನೀಡಿದ್ದ ಭರವಸೆಗಳನ್ನು ಜಾರಿಗೊಳಿಸಲು ಮಾನ್ಯ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಗಿತ್ತು.

ಈಗ ಈ ಯೋಜನೆಗಳ ಬಗ್ಗೆ ದೇಶ ಮೆಚ್ಚುವಂಥಹ, ಸೂಕ್ತ ಪ್ರಸ್ಥಾವನೆ ಸಿದ್ಧಪಡಿಸುವ ಹೊಣೆಗಾರಿಕೆ ನಮ್ಮ ತುಮಕೂರು ಜಿಲ್ಲಾಧಿಕಾರಿ ಶ್ರೀ ವೈ.ಎಸ್.ಪಾಟೀಲ್ ರವರ ಅಂಗಳದಲ್ಲಿದೆ. ಶಕ್ತಿಪೀಠ ಫೌಂಡೇಷನ್ ಹೆಚ್..ಎಲ್ ಸ್ಮಾರ್ಟ್ ವಿಲೇಜ್ ದತ್ತು ಪಡೆದು ಕೊಂಡು ವಿವಿಧ ಅಭಿವೃದ್ಧಿ ಯೋಜನೆಗಳ ಜಾರಿ ಮೂಲಕ ದೇಶದಲ್ಲಿಯೇ ಬೃಹತ್ ಉದ್ದಿಮೆಗಳ ಸುತ್ತ-ಮುತ್ತ ಇಂಥಹ ಯೋಜನೆಗಳ ಜಾರಿಗೆ ಮುನ್ನುಡಿ ಬರೆಯಲು ಶ್ರಮಿಸಲು ಉದ್ದೇಶಿಸಲಾಗಿದೆ.

ಈ ಮನವಿಯಲ್ಲಿನ ಕೆಲವು ಅಂಶಗಳಿಗೆ ದೇಶದ ಪ್ರಧಾನಿಯವರು ಮತ್ತು ರಾಜ್ಯದ ಮುಖ್ಯಮಂತ್ರಿಯವರು ಸೂಕ್ತ ನಿರ್ಧಾರ ಕೈಗೊಳ್ಳಬೇಕಾಗಿದೆ.

ಪ್ರಧಾನಿಯವರ ಇಂಡಿಯಾ @ 100 ಹಾಗೂ ನವ ಕರ್ನಾಟಕ ವಿಷನ್ ಡಾಕ್ಯುಮೆಂಟ್-2047  ರ  ಯೋಜನೆಯು ಇದಾಗಲಿದೆ. ಆಸಕ್ತರು ಕೈ ಜೋಡಿಸಬಹುದಾಗಿದೆ.