27th July 2024
Share

TUMAKURU:SHAKTHIPEETA FOUNDATION

ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದ ರೋಟರಿ ಕ್ಲಬ್ ಶಾಲೆಯ ಸುಮಾರು 400 ಮಕ್ಕಳೊಂದಿಗೆ ಇಂಡಿಯಾ @ 100, ನವಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ಮತ್ತು ಸಕಲೇಶಪುರ ವಿಷನ್ ಡಾಕ್ಯುಮೆಂಟ್-2047 ಬಗ್ಗೆ ನಡೆದ ಸಂವಾದದಲ್ಲಿ ನನ್ನ ಮೈಂಡ್ ಸೆಟ್ ಬದಲಾಯಿಸಿದ 400 ಮಕ್ಕಳು ಎಂದರೆ ತಪ್ಪಾಗಲಾರದು.

ದಿನಾಂಕ:15.02.2023 ರಂದು ಸಕಲೇಶಪುರ ರೋಟರಿ ಸಂಸ್ಥೆ, ರೋಟರಿ ಇಂಗ್ಲೀಷ್ ಶಾಲೆ ಮತ್ತು ಸಕಲೇಶಪುರದ ಮೂಕಾನನ ರೆಸಾರ್ಟ್ ಸಹಭಾಗಿತ್ವದಲ್ಲಿ ಸಂವಾದ ನಡೆಯಿತು.

ಆರಂಭದಲ್ಲಿ ಈ ಮಕ್ಕಳಿಂದ ಜ್ಞಾನ ದಾನ ಹೇಗೆ ಪಡೆಯಬೇಕೆಂಬ ಬಗ್ಗೆ ನನಗೆ ಗೊಂದಲವಿತ್ತು. ಯಾವ ರೀತಿ ಮಕ್ಕಳಿಗೆ ಮನವರಿಕೆ ಮಾಡಬೇಕು ಎಂಬ ಆಲೋಚನೆಯಿಂದ ಮಾತು ಆರಂಭಿಸಿದೆ, ಸುಮಾರು 30 ನಿಮಿಷಗಳಲ್ಲಿ ವಿಧ್ಯಾರ್ಥಿಗಳೇ ಬೆಚ್ಚಿ ಬೀಳುವಂತ ಐಡಿಯಾಗಳನ್ನು ಕ್ಯೂ ನಿಂತು ಕೊಡಲು ವೇದಿಕೆಯ ಮೇಲೆ ಹತ್ತಿಬಂದ ದೃಷ್ಯ ನಿಜಕ್ಕೂ ನನಗೆ ಅಚ್ಚರಿ ಮೂಡಿಸಿತು.

ಸಕಲೇಶಪುರ ಪಟ್ಟಣ, ಸಕಲೇಶಪುರ ವಿಧಾನಸಭಾ ಕ್ಷೇತ್ರ, ಹಾಸನ ಜಿಲ್ಲೆ, ಕರ್ನಾಟಕ ರಾಜ್ಯ ಹಾಗೂ ಭಾರತ ದೇಶ 100 ನೇ ಸ್ವಾಂತಂತ್ಯದ ವೇಳೆಗೆ ಹೇಗೆ ಅಭಿವೃದ್ಧಿ ಹೊಂದಬೇಕು, ಪ್ರಪಂಚದಲ್ಲಿ ವಿಶ್ವಗುರು ಆಗಲು ಏನೇನು ಮಾಡಬೇಕು. ಎಂಬ ವಿನೂತನ ಐಡಿಯಾಗಳ ಸುರಿಮಳೆ ಎಂದರೆ ಅತಿಶಯೋಕ್ತಿಯಾಗಲಾರದು.

ವಿಶ್ವದ 108 ಶಕ್ತಿಪೀಠಗಳ ಬಗ್ಗೆ ಮಕ್ಕಳ ಜ್ಞಾನ ನಿಜಕ್ಕೂ ಊಹಿಸಲಾಗದ ಅನುಭವ ಆಯಿತು, ನೀರಿನ ಬಳಕೆ ಮತ್ತು ಪರಿಸರ ಸಂರಕ್ಷಣೆ ಬಗ್ಗೆ ಅಪಾರ ಅನುಭವವುಳ್ಳ ಪರಿಣಿತರಿಗೂ ಕಡಿಮೆ ಇರಲಿಲ್ಲ ಈ ಮಕ್ಕಳ ಐಡಿಯಾಗಳು.

ಒಬ್ಬರು ಕೊಟ್ಟ ಐಡಿಯಾ ಇನ್ನೊಬ್ಬರೂ ಹೇಳಬಾರದು, ಎಂಬ ಮನವಿಗೆ ಸ್ಪಂಧಿಸಿದ ಮಕ್ಕಳು ಅಷ್ಟು ಕಡಿಮೆ ಸಮಯದಲ್ಲಿ, ಹೇಗೆ ಎಲ್ಲಾ ಇಲಾಖೆಗಳ ಯೋಜನೆಗಳ ಬಗ್ಗೆ ಮಾತನಾಡಿದರು ಎಂಬುದೇ ಒಂದು ಆಶ್ಚರ್ಯವಾಗಿತ್ತು.

ಇನ್ನೂ ಮಾತನಾಡಿ, ಆಟೋ ಗ್ರಾಪ್ ಬರೆಯಿರಿ, ನಿಮ್ಮ ಮೊಬೈಲ್ ನಂಬರ್ ಕೊಡಿ ಎಂಬ ಬೇಡಿಕೆ ನಿಜಕ್ಕೂ ನನಗೆ ತೃಪ್ತಿ ತಂದಿತು, ಸಂಜೆ ಮನಗೆ ಹೋಗಿ ಅವರ ಪೋಷಕರಿಂದ ಮಾತನಾಡಿಸಿ, ಇನ್ನೊಮ್ಮೆ ಸಕಲೇಶಪುರಕ್ಕೆ ಬಂದಾಗ ನಮ್ಮ ಮನೆಗೆ ಊಟಕ್ಕೆ ಬನ್ನಿ ಎನ್ನುವವರೆಗೂ ಮಕ್ಕಳ ಮತ್ತು ನನ್ನ ಸಂಭಂದ ಕೇವಲ ಎರಡು ಗಂಟೆಯ ಸಂವಾದದಲ್ಲಿ ನಡೆಯಿತು ಎಂದರೆ ನಂಬಲಾರದ ವಿಶಿಷ್ಟ ಅನುಭವದಂತಿತ್ತು.

ಅವರ ಐಡಿಯಾಗಳ ಒಂದು ಡಾಕ್ಯುಮೆಂಟ್ ಮಾಡಲು ರೋಟರಿ ಅಧ್ಯಕ್ಷರಾದ ಶ್ರೀ ಶಶಿಕುಮಾರ್ ರವರು, ಕಾರ್ಯದರ್ಶಿ ಶ್ರೀ ಸುರೇಶ್ ರವರು, ಪ್ರಾಂಶುಪಾಲರಾದ ಶ್ರೀ ಸುಮಂತ್ ಭಾರ್ಗವ್ ರವರು,ವಿಜಯಕರ್ನಾಟಕ ವರದಿಗಾರರಾದ ಶ್ರೀ ಅರುಣ್ ರವರು, ಪ್ರಜಾವಾಣಿ ವರದಿಗಾರರಾದ ಶ್ರೀ ಜಾನೇಕೆರೆ ಪರಮೇಶ್ ರವರು, ಮೂಕಾನನ ರೆಸಾರ್ಟ್‍ನ ಶ್ರೀ ವೇದಾನಂದ್ ಮೂರ್ತಿರವರು ಸಮಾಲೋಚನೆ ನಡೆಸಿದೆವು.

ವೆಸ್ಟರ್ನ್ ಘಾಟ್ ಫೌಂಡೇóಷನ್ ವತಿಯಿಂದ, ಸಕಲೇಶಪುರz ಮೂಕಾನನ ರೆಸಾರ್ಟ್ ಸುತ್ತ ಮುತ್ತ ಸುಮಾರು 50 ಎಕರೆ ಪ್ರದೇಶದಲ್ಲಿ  ‘ಮಕ್ಕಳ ಲೋಕ/ಜಗತ್ತು’ ಸೃಷ್ಠಿಸಲು ಪೂರಕವಾಗಿತ್ತು, ಈ ಸಂವಾದ.

ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರ ಜೈ ಅನುಸಂಧಾನ್’ ಕರೆ ಹಾಗೂ ಮುಖ್ಯಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರ ಮುಂದಿನ ಯುಗಜ್ಞಾನ ಯುಗ ಘೋಷಣೆಯ ಅಡಿಯಲ್ಲಿ ಸರ್ವಪಕ್ಷಗಳ ನೇತೃತ್ವದಲ್ಲಿ ರಚಿಸಲು ಉದ್ದೇಶಿಸಿರುವ ನವಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ಕ್ಕೆ ಮಕ್ಕಳ ಐಡಿಯಾ ಅಪಾರವಾಗಲಿದೆ.

‘ಇದೊಂದು ಸರ್ಕಾರಿ ಕಾರ್ಯಕ್ರಮವಾಗಿ ರೂಪಿಸುವ ಅಗತ್ಯವಿದೆ. ಮುಂದಿನ ಸರ್ಕಾರದಲ್ಲಿನ ನೂತನ ಮುಖ್ಯಮಂತ್ರಿಯವರ ಪಾತ್ರ ಮಹತ್ತರವಾಗಿದೆ.

ಮಕ್ಕಳೇ ದೇವರು, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ವಾಕ್ಯಗಳ ಅರ್ಥಗರ್ಭಿತವಾಗಿತ್ತು. ಜೊತೆಯಲ್ಲಿ ಶ್ರೀ ಹಿತೇಶ್, ಶ್ರೀ ಸುಹಾಸ್, ಶ್ರೀ ಶಿವರಾಜ್ ಇದ್ದರು.