4th January 2025
Share

TUMAKURU:SHAKTHIPEETA FOUNDATION

ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು 2023-2024 ರ ಆಯವ್ಯಯದಲ್ಲಿ ಪ್ರಕಟಿಸಿರುವ 247 ನೇ ಅಂಶಕ್ಕೆ ತುಮಕೂರಿನಲ್ಲಿ ಚಾಲನೆ ನೀಡಲು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಹಾಗೂ ತುಮಕೂರು ನಗರ ವಿಧಾನಸಭಾ ಸದಸ್ಯರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಮಾನ್ಯ ಮಂತ್ರಿಯವರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.

247 ನೇ ಅಂಶ: ನೀತಿ ಆಯೋಗದ ಮಾದರಿಯಂತೆ, ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗವನ್ನು ಕರ್ನಾಟಕ ರಾಜ್ಯ ಪರಿವರ್ತನಾ ಸಂಸ್ಥೆ(SITK-STATE INSTITUE FOR TRANSFORMATION OF KARNATAKA) ಎಂದು ಪುನರ್ ರಚಿಸಲಾಗಿದ್ದು, ಸಂಸ್ಥೆಯ ಮೂಲಕ ನವ ಭಾರತಕ್ಕಾಗಿ ನವ ಕರ್ನಾಟಕ ನಿರ್ಮಾಣಕ್ಕೆ ವಿನೂತನ ಪರಿಹಾರಗಳನ್ನು ರೂಪಿಸಲಾಗುವುದು.’

ಯೋಜನಾ ಸಚಿವರಾದ ಶ್ರೀ ಮುನಿರತ್ನರವರೊಂದಿಗೂ, ಯೋಜನಾ ಇಲಾಖೆಯ ಅಪರಮುಖ್ಯ ಕಾರ್ಯದರ್ಶಿಯವರಾದ ಶ್ರೀಮತಿ ಶಾಲಿನಿ ರಜನೀಶ್ ರವರೊಂದಿಗೂ ಸಮಾಲೋಚನೆ ನಡೆಸಲಾಗುವುದು.

ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು, ತುಮಕೂರಿಗೆ ಸ್ಮಾರ್ಟ್ ಸಿಟಿ ಯೋಜನೆಗಳನ್ನು ಲೋಕಾರ್ಪಣೆ ಮಾಡಲು ಆಗಮಿಸಲಿದ್ದು, ತುಮಕೂರಿನ ಮಹಾತ್ಮ ಕ್ರಿಡಾಂಗಣದ ಲೋಕಾರ್ಪಣೆ ಜೊತೆಗೆ, ಈ ಯೋಜನೆಗೆ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುವ ಸಂಭಂದ, ಕೇಂದ್ರ ಸರ್ಕಾರದ ಎಲ್ಲಾ ಮಾರ್ಗಸೂಚಿಯನ್ವಯ ಸಮನ್ವಯತೆಯೊಂದಿಗೆ ಬೃಹತ್ ಸಮಾವೇಶ ನಡೆಸಲು  ಉನ್ನತ ಮಟ್ಟದಲ್ಲಿ ಚರ್ಚೆ ಆರಂಭವಾಗಿದೆ.