24th April 2024
Share

TUMAKURU:SHAKTHIPEETA FOUNDATION

ಇಂಡಿಯಾ@100 ಅಂಗವಾಗಿ ಸರ್ವಪಕ್ಷಗಳ ನೇತೃತ್ವದಲ್ಲಿ, ನವ ಕರ್ನಾಟಕ ವಿಷನ್ ಡಾಕ್ಯುಮೆಂಟ್ –2047  ರಚಿಸುವ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ  ಸುಳ್ಯ ಕೆ.ವಿ.ಜಿ.ಇಂಜಿನಿಯರಿಂಗ್ ಕಾಲೇಜಿನಲ್ಲಿ ದಿನಾಂಕ:22.02.2023 ರಂದು  ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅಕ್ಷರಷಃ ಚಳಿ ಬಿಡಿಸಿದರು ಎಂದರೆ ತಪ್ಪಾಗಲಾರದು.

ಪ್ರಾಂಶುಪಾಲರಾದ ಶ್ರೀ ಸುರೇಶ್ ರವರು, ಮೆಕ್ಯಾನಿಕಲ್ ಹೆಚ್.ಓ.ಡಿ ಶ್ರೀ ಉಮಾಶಂಕರ್ ರವರು ಮತ್ತು ಸುಳ್ಯ ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾದ ಶ್ರೀ ವಿನಯ್‍ರವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನಾನು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ, ಒಂದೊಂದು ಶಾಲಾ ಕಾಲೇಜಿನಲ್ಲಿ ಸಂವಾದ ನಡೆಸಿ ಅತ್ಯಂತ ವಿಶಿಷ್ಠವಾದ ಹಾಗೂ ಬೇರೆ ಕಡೆ ಚರ್ಚೆಯಾಗದೆ ಇರುವ ಅಂಶಗಳನ್ನು ಮಾತ್ರ ವಿಷನ್ ಡಾಕ್ಯಮೆಂಟ್ ನಲ್ಲಿ ಸೇರ್ಪಡೆ ಮಾಡಲು ಚಿಂತನೆ ನಡೆಸಿದ್ದೇನೆ.

ನಾನು ಕೇವಲ 9 ವಿದ್ಯಾರ್ಥಿಗಳ ಪ್ರಶ್ನೆಗಳ ಬಗ್ಗೆ ಮಾತ್ರ ನಿಮ್ಮೊಂದಿಗೆ ಹಂಚಿ ಕೊಳ್ಳುತ್ತೇನೆ, ವಿದ್ಯಾರ್ಥಿಗಳ ಹೆಸರನ್ನು ಸಹ ಈಗ ಹೇಳುವುದಿಲ್ಲ.

ವಿಧ್ಯಾರ್ಥಿನಿ-1: ಸಾರ್ ನಾನು ಎಬಿವಿಪಿ ವಿದ್ಯಾರ್ಥಿನಿ, ಮೊನ್ನೆ ನಮ್ಮ ಜಿಲ್ಲೆಗೆ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್‍ಷಾಜಿಯವರು ಬಂದಿದ್ದರು. ಅಡಿಕೆ ಬೆಳೆಗಾರರ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದರು. ವಿದೇಶಗಳಿಂದ ಕಳ್ಳಸಾಗಾಣಿಕೆ ಮೂಲಕ ಬರುತ್ತಿರುವ ಕೆಟ್ಟ ಅಡಿಕೆಗೆ ಕಡಿವಾಣ ಹಾಕಲು ಏಕೆ ಸಾದ್ಯಾವಾಗುತ್ತಿಲ್ಲ? ನಮ್ಮ ದೇಶದ ಅಡಿಕೆಯನ್ನೆ ರಫ್ತು ಮಾಡುವಷ್ಟು ಬೆಳೆಯುವ ರೈತರು ಇರುವಾಗ, ವಿದೇಶಗಳಿಂದ ಅಡಿಕೆಯನ್ನು ಏಕೆ ಆಮದು ಮಾಡಿಕೊಳ್ಳಬೇಕು? 2047 ವಿಷನ್ ಡಾಕ್ಯುಮೆಂಟ್‍ಗೆ ಅಡಿಕೆ ಬೆಳೆಗಾರರ ಈ ಪ್ರಶ್ನೆಗೆ ನಿಮ್ಮ ಸಲಹೆ ಏನು?

ಕೇಂದ್ರ ಸಚಿವರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಉತ್ತರ ಕೊಡುತ್ತೇನೆ.

ವಿದ್ಯಾರ್ಥಿ-2: ಶ್ರೀ ವಿಶ್ವೇಶ್ವರ ಹೆಗ್ಗಡೆ ಕಾಗೇರಿಯವರು ವಿಧಾನಸಭೆಯಲ್ಲಿ ಸಂವಿಧಾನದ ಬಗ್ಗೆ ಚರ್ಚೆ ನಡೆಸಿದಾಗ ಭ್ರಷ್ಠಾಚಾರದ ಬಗೆ ವಿಷದವಾಗಿ ಏಕೆ ಚರ್ಚೆ ನಡೆಯಲಿಲ್ಲ. ಅರಸಿಕೆರೆಯ ಶಾಸಕರಾದ ಶ್ರೀ ಶಿವಲಿಂಗೇ ಗೌಡರು ಓಟಿಗೆ ಮೂರು ಸಾವಿರ ಹಂಚುವ ಬಗ್ಗೆ ಚರ್ಚೆ ನಡೆಯಬೇಕು ಎಂದು ಪಟ್ಟು ಹಿಡಿದಾಗ, ಕಾಗೇರಿಯವರು ಸೇರಿದಂತೆ ಎಲ್ಲರೂ ನಕ್ಕು ವಿಷಯ ಬದಲಾಯಿಸಿದರು. 2047 ವಿಷನ್ ಡಾಕ್ಯುಮೆಂಟ್‍ಗೆ ಭ್ರಷ್ಠಾಚಾರ ಕಡಿವಾಣದ  ಈ ಪ್ರಶ್ನೆಗೆ ನಿಮ್ಮ ಸಲಹೆ ಏನು?

ಶ್ರೀ ಕಾಗೇರಿಯವರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಉತ್ತರ ಕೊಡುತ್ತೇನೆ.

ವಿಧ್ಯಾರ್ಥಿನಿ-3: ಮಹಿಳೆಯರು ಇಂದು ಎಲ್ಲಾ ಕಡೆ ಸುಕ್ಷಿತವಾಗಿದ್ದಾರೆಯೇ? 2047 ವಿಷನ್ ಡಾಕ್ಯುಮೆಂಟ್‍ಗೆ ಮಹಿಳೆಯರ  ಈ ಪ್ರಶ್ನೆಗೆ ನಿಮ್ಮ ಸಲಹೆ ಏನು?

ಗೃಹ ಸಚಿವಾಲಯದ ಮತ್ತು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ವರದಿಗಳ ಅಧ್ಯಯನ ನಡೆಸಿ ಸೂಕ್ತ ಉತ್ತರ ಕೊಡುತ್ತೇನೆ.

ವಿದ್ಯಾರ್ಥಿ-4: ನಾನು ಪಶ್ಚಿಮ ಬಂಗಾಳ ಮುಖ್ಯಮಂತ್ರಿಯವರಾದ ಶ್ರೀಮತಿ ಮಮತಾಬ್ಯಾನರ್ಜಿಯವರ ಅಭಿಮಾನಿ, ಬಿಜೆಪಿಯವರು 2024 ರೊಳಗೆ ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟುತ್ತೇವೆ ಎಂದು ಹೇಳುತ್ತಾರೆ. ಚುನಾವಣಾ ಸಮಯದಲ್ಲಿ, ಮಮತಾಬ್ಯಾನರ್ಜಿಯವರು ಬಿಜೆಪಿಯವರು 2024 ರೊಳಗೆ ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಿದರೇ, ನಾನು ದುರ್ಗಾ ಮಾತೆ ಥೀಮ್ ಪಾರ್ಕ್ ಮಾಡುತ್ತೇನೆ ಎಂದು ಘೊಷಣೆ ಮಾಡಿದ್ದರು. 2047 ವಿಷನ್ ಡಾಕ್ಯುಮೆಂಟ್‍ಗೆ  ದುರ್ಗಾ ಮಾತೆ ಥೀಮ್ ಪಾರ್ಕ್  ಈ ಪ್ರಶ್ನೆಗೆ ನಿಮ್ಮ ಸಲಹೆ ಏನು?

ಪಶ್ಚಿಮ ಬಂಗಾಳ ಮುಖ್ಯಮಂತ್ರಿಯವರಾದ ಶ್ರೀಮತಿ ಮಮತಾಬ್ಯಾನರ್ಜಿಯವರಿಂದ ಉತ್ತರ ಪಡೆದು ಸೂಕ್ತ ಉತ್ತರ ಕೊಡುತ್ತೇನೆ.

ವಿಧ್ಯಾರ್ಥಿನಿ-5: ಆಯಾ ಜಾತಿಯವರಿಗೆ ನಿಗದಿ ಪಡಿಸಿದ  ಮೀಸಲಾತಿಯಲ್ಲಿ ಆಯಾ ಜಾತಿಯವರು ತೆರಿಗೆ ಪಾವತಿ ಮಾಡುವವರಿಗೂ ಮೀಸಲಾತಿ ಬೇಕೆ? ಅಥವಾ ಆಯಾ ಜಾತಿಯ ಕಡುಬಡವರಿಗೆ ಮೀಸಲಾತಿ ನಿಗದಿಸ ಬೇಕೆ? 2047 ವಿಷನ್ ಡಾಕ್ಯುಮೆಂಟ್‍ಗೆ   ಮಿಸಲಾತಿ  ಈ ಪ್ರಶ್ನೆಗೆ ನಿಮ್ಮ ಸಲಹೆ ಏನು?

ಮಿಸಲಾತಿ ಇರುವ ಜಾತಿಯವರು ತೆರಿಗೆ ಪಾವತಿ ಮಾಡುವ ಉನ್ನತ ಮಟ್ಟದ ನಾಯಕರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಉತ್ತರ ಕೊಡುತ್ತೇನೆ.

ವಿದ್ಯಾರ್ಥಿ-6: ಸುಳ್ಯ ಪಟ್ಟಣ ಪಂಚಾಯಿತಿ, ದೇಶದಲ್ಲಿಯೇ ವಿನೂತನವಾಗಿ ಇನ್ನೋವೇಷನ್ ಮಾಡುತ್ತಿರುವ ಘನತ್ಯಾಜ್ಯ ವಸ್ತು ಘಟಕಕ್ಕೆ, ಕೇಂದ್ರ ಸರ್ಕಾರದ ವತಿಯಿಂದ ಸಂಶೋಧನೆ ನಡೆಸಲು ಅನುದಾನ ಪಡೆಯುವ ಬಗ್ಗೆ ನಿಮ್ಮ ಸಲಹೆ ಏನು?

ಇಲ್ಲಿನ ಲೋಕಸಭಾ ಸದಸ್ಯರಾದ ಶ್ರೀ ನಳೀನ್ ಕುಮಾರ್ ಕಟೀಲ್ ರವರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಉತ್ತರ ಕೊಡುತ್ತೇನೆ.

ವಿದ್ಯಾರ್ಥಿ-7: ನಾನು ಎನ್.ಎಸ್.ಎಸ್. ವಿದ್ಯಾರ್ಥಿ,  ಒಬ್ಬ ವಿದ್ಯಾರ್ಥಿಗೆ ದಿನಕ್ಕೆ ಊಟ ತಿಂಡಿ, ಕಾಫಿ ಎಲ್ಲಾ ಸೇರಿ ರೂ 11 ನೀಡಲು ಸರ್ಕಾರಿ ಆದೇಶ ಇದೆ. ಸಂಸದರು ಶಾಸಕರಿಗೆ ಸಂಬಳ ಹೆಚ್ಚು ಮಾಡಿಕೊಳ್ಳುವಾಗ, ಅಧಿಕಾರಿಗಳಿಗೆ 7 ನೇ ವೇತನ ಆಯೋಗ ಎಂದು ಚರ್ಚೆ ಮಾಡುವಾಗ, ನಮಗೆ ನೀಡುತ್ತಿರುವ ಅನುದಾನದ ಬಗ್ಗೆ 2047 ವಿಷನ್ ಡಾಕ್ಯುಮೆಂಟ್‍ಗೆ   ಎನ್.ಎಸ್.ಎಸ್ ಅನುದಾನದ  ಈ ಪ್ರಶ್ನೆಗೆ ನಿಮ್ಮ ಸಲಹೆ ಏನು?

ಕೇಂದ್ರ ಮತ್ತು ರಾಜ್ಯ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ  ಸಮಾಲೋಚನೆ ನಡೆಸಿ ಸೂಕ್ತ ಉತ್ತರ ಕೊಡುತ್ತೇನೆ.

ವಿಧ್ಯಾರ್ಥಿ-8: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂತನ ಎನ್.ಇ.ಪಿ ಬಗ್ಗೆ ಜನ ಜಾಗೃತಿ ಸರಿಯಾಗಿ ನಡೆಯುತ್ತಾ ಇದೆಯಾ? ಪರ ವಿರೋಧಗಳ ಅಂಶಗಳ ಬಗ್ಗೆ 2047 ವಿಷನ್ ಡಾಕ್ಯುಮೆಂಟ್‍ಗೆ   ಎನ್.ಇ.ಪಿ ಬಗೆಗಿನ ಈ ಪ್ರಶ್ನೆಗೆ ನಿಮ್ಮ ಸಲಹೆ ಏನು?

ಎಲ್ಲಾ ವರ್ಗದವರ ಅಭಿಪ್ರಾಯ ಪಡೆದು, ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ  ಸಮಾಲೋಚನೆ ನಡೆಸಿ ಸೂಕ್ತ ಉತ್ತರ ಕೊಡುತ್ತೇನೆ.

ವಿಧ್ಯಾರ್ಥಿನಿ-9: ಮುಖ್ಯ ಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿರವರು ಮುಂದಿನ ಯುಗ – ಜ್ಞಾನ ಯುಗ’ ಎನ್ನುತ್ತಾರೆ, 2023-24 ರ ಆಯವ್ಯದಲ್ಲಿ ಈ ಬಗ್ಗೆ ಎನಾದರೂ ಪ್ರಸ್ತಾಪಮಾಡಿದ್ದಾರಾ? ನಾಲೇಡ್ಜ್ ಬ್ಯಾಂಕ್’ ಮಾಡುವ ನಿಮ್ಮ ಕನಸಿನ ಈ ಪ್ರಶ್ನೆಗೆ 2047 ವಿಷನ್ ಡಾಕ್ಯುಮೆಂಟ್‍ಗೆ ನಿಮ್ಮ ಸಲಹೆ ಏನು?

ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಉತ್ತರ ಕೊಡುತ್ತೇನೆ.

ಸುಮಾರು ಒಂದು ಗಂಟೆ, 50 ನಿಮಿಷ ನಡೆದ ಸಂವಾದದಲ್ಲಿ ಹಲವಾರು ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ. ನಾನು ನೇರವಾಗಿ ಉತ್ತರ ನೀಡಲಾಗದಂತಹ ಪ್ರಶ್ನೆಗಳ ಬಗ್ಗೆ ಗಮನ ಸೆಳೆದಿದ್ದು ಗಮನಾರ್ಹವಾಗಿತ್ತು.

ಸುಳ್ಯ ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾದ ಶ್ರೀ ವಿನಯ್‍ರವರು ಕಾರ್ಯಕ್ರಮ ಆಯೋಜಿಸಲು ಸಹಕರಿಸಿದ್ದರು, ಬೆಂಗಳೂರಿನಿಂದ ಸುಳ್ಯದವರೆಗೆ ಬೆಂಗಳೂರಿನ ಶ್ರೀ ದರ್ಶನ್‍ರವರು ಮತ್ತು ಶ್ರೀ ಪ್ರತಾಪ್ ಆರಾಧ್ಯಾರವರು ಕರೆದುಕೊಂಡು ಹೋಗಿ ಮತ್ತೆ ಸುಕ್ಷಿತವಾಗಿ ಮನೆಗೆ ಬಿಟ್ಟರು.