26th December 2024
Share

TUMAKURU:SHAKTHIPEETA FOUNDATION

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ರವರೊಂದಿಗೆ, ದಿನಾಂಕ:23.02.2023 ರಂದು ಬೆಂಗಳೂರಿನ ಟೌನ್ ಹಾಲ್‍ನಲ್ಲಿ ಸಂಜೆ 6 ಗಂಟೆಗೆ ಸಂವಾದ ಅರ್ಪಿಸುವ  ಭಾರತೀಯ ರಾಜಕೀಯ ವ್ಯವಸ್ಥೆ- 65 ವರ್ಷಗಳ ದೇಶದ ರಾಜಕೀಯ ಸ್ಥಿತಿ ಗತಿ ಹಾಗೂ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಆದ ಮನ್ವಂತರ’ ದ ಸಂವಾದ ಕಾರ್ಯಕ್ರಮ ನಡೆಯಿತು.

ಈ ಸಂವಾದಕ್ಕೆ ಪಕ್ಷಾತೀತವಾಗಿ, ಎಲ್ಲಾ ರಂಗದ ಪರಿಣಿತರನ್ನು ಆಹ್ವಾನಿಸಿದ್ದು ವಿಶೇಷವಾಗಿತ್ತು. ಸಂಘಸಂಸ್ಥೆಗಳ ಪಧಾದಿಕಾರಿಗಳು, ಜ್ಞಾನಿಗಳು, ಕೈಗಾರಿಕೋದ್ಯಮಗಳು, ಚಲನ ಚಿತ್ರರಂಗದವರು, ಶಿಕ್ಷಣ ತಜ್ಞರು ಹೀಗೆ ಎಲ್ಲಾ ವರ್ಗದವರು ಹಾಜರಿದ್ದರು. ನನಗೂ ಆಹ್ವಾನವಿತ್ತು ನಾನು ಸಹ ಭಾಗವಹಿಸಿದ್ದೆ.

‘ಆದರೂ ಆಗಾಗ ಜೈ ಶ್ರೀ ರಾಮ್ ಘೋಷಣೆಗಳನ್ನು ಕೇಳಿದಾಗ ಬಿಜೆಪಿ ಪಕ್ಷದ ಹಾಗೂ ಆರ್.ಎಸ್.ಎಸ್ ವಿವಿಧ ವಿಭಾಗದ ಪ್ರತಿನಿಧಿಗಳು ಹಾಜರಿ ಎದ್ದು ಕಾಣುತ್ತಿತ್ತು.’

ಅಮಿತ್ ಶಾ ರವರು ಮಾತನಾಡಿದ ಒಂದು ವಾಕ್ಯವನ್ನು ಮಾತ್ರ ನಾನು ವ್ಯಾಖ್ಯಾನ ಮಾಡುತ್ತಿದ್ದೇನೆ. ಬರೀ ಮಾತಿನಲ್ಲಿ ಟೀಕೆ ಟಿಪ್ಪಣೆ ಬೇಡ, 75 ವರ್ಷಗಳಿಂದ ಪ್ರತಿ ವರ್ಷ ಅಥವಾ ಆಯಾ ಪ್ರಧಾನ ಮಂತ್ರಿಯವರ ಅವಧಿಯ ಯೋಜನೆಗಳಿಂದ ಆದ ದೇಶದ ಪ್ರಗತಿ ಹಾಗೂ ಪ್ರಧಾನಿ ಶ್ರೀ ನರೇಂದ್ರಮೋದಿಯವರ ಅವಧಿಯ ಯೋಜನೆಗಳಿಂದ ಆದ ದೇಶದ ಪ್ರಗತಿಯ ನಿಖರವಾದ ಅಂಕಿ ಅಂಶಗಳೊಂದಿಗೆ ನೀವೇ ಸಂಶೋಧನೆ ಮಾಡಿ. ಅನಾಲೀಸಿಸ್ ಮಾಡಿ. ನಮಗೆ ಸೂಕ್ತ ಸಲಹೆ ನೀಡಿ. ತಪ್ಪಿದ್ದರೆ ತಿದ್ದಿಕೊಳ್ಳೊಣ ಎಂಬ ಪರೋಕ್ಷ ಸಲಹೆಯಂತಿತ್ತು.

ನಾನು ನಮ್ಮ ದೇಶ ಆರಂಭದಿಂದ ಅಭಿವೃದ್ಧಿ ಯಾಗಿಲ್ಲ ಎಂದು ಹೇಳುವುದಿಲ್ಲ, ಎಲ್ಲಾ ಮಾಜಿ ಪ್ರಧಾನ ಮಂತ್ರಿಯವರ ಶ್ರಮವೂ ಇದೆ. ಮುಂದಿನ 25 ವರ್ಷಗಳಿಗೆ, ಇದೂವರೆಗೂ ಏನಾಗಿದೆ, ಏನಾಗಿಲ್ಲ, ಮುಂದೆ ಏನಾಗಬೇಕು, ಎಂಬ ಅಂಕಿ ಅಂಶಗಳ ಆಧಾರದಲ್ಲಿ ನಾವು ಹೆಜ್ಜೆ ಇಡಬೇಕು ಎಂದು ಶಾ ರವರು ಸವಾಲು ಹಾಕಿದ ರೀತಿಯಲ್ಲಿ ಮಾತನಾಡಿದ್ದು ನಿಜಕ್ಕೂ ಅದ್ಭುತವಾಗಿತ್ತು. ನನಗಂತು ಹಿಡಿಸಿತು.’

ಮೋದಿಯವರ ಕಾಲದ ಅವಧಿಯ ಅಂಕಿ ಅಂಶಗಳ ಬಗ್ಗೆ ಎಳೆ, ಎಳೆಯಾಗಿ ಯೋಜನೆಯ ಬಗ್ಗೆ ಮನವರಿಕೆ ಮಾಡಿದರು. ಅವರು ಮಾತನಾಡಿದ ಎಲ್ಲಾ ಯೋಜನೆಗಳ ಮಾಹಿತಿಯನ್ನು ಸಂಘಟಕರು ಪುಸ್ತಕ ರೂಪದಲ್ಲಿ ಹೊರತರುವುದು ಸೂಕ್ತವಾಗಿದೆ.

‘ಇದೇ ರೀತಿ ಎಲ್ಲಾ ರಾಜಕೀಯ ಪಕ್ಷಗಳು ಅವರವರ ಪಕ್ಷದ ಪ್ರಧಾನ ಮಂತ್ರಿಗಳ ಮತ್ತು ಮುಖ್ಯ ಮಂತ್ರಿಯವರ ಕಾಲದ ಯೋಜನೆಗಳ ಬಗ್ಗೆ ನಿಖರವಾದ ಮಾಹಿತಿಯನ್ನು ಜನತೆಯ ಮುಂದೆ ಇಡುವುದು ಅಗತ್ಯವಾಗಿದೆ. ಇದು ಮುಂದಿನ 25 ವರ್ಷಗಳ ಅವಧಿಗೆ ಭಧ್ರ ಅಡಿಪಾಯ ಆಗಬೇಕಿದೆ.’

ಜನತೆಗೆ ಬೇಕಿರುವುದು ಅಂಕಿ ಅಂಶಗಳ ಅಭಿವೃದ್ಧಿಯಲ್ಲ, ವಾಸ್ತವಿಕವಾಗಿ, ಪ್ರತಿಯೊಂದು ಗ್ರಾಮದ, ನಗರ ಪ್ರದೇಶಗಳ ಪ್ರತಿ ಬಡಾವಾಣೆಯ, ಜಿಐಎಸ್ ಲೇಯರ್ ಸಹಿತ, ಪ್ರತಿ ಗ್ರಾಮದ ರೆವಿನ್ಯೂ ಮ್ಯಾಪ್ ನಲ್ಲಿ, ಅಭಿವೃದ್ಧಿ ಡಿಜಿಟಲ್ ವಿಲೇಜ್ ಮ್ಯಾಪ್’ ತಯಾರಿಸ ಬೇಕಿದೆ.

ಕಳೆದ 65 ವರ್ಷಗಳಿಂದ ಆಗಿರುವ ಯೋಜನೆಗಳನ್ನು ಒಂದು ಕಲರ್, ಕಳೆದ 10 ವರ್ಷಗಳಿಂದ ಆಗಿರುವ ಯೋಜನೆಗಳನ್ನು ಒಂದು ಕಲರ್, ಮುಂದಿನ 25 ವರ್ಷಗಳವರೆಗೆ ಆಗಬೇಕಿರುವ ಯೋಜನೆಗಳ ಮಾಹಿತಿಯನ್ನು ಒಂದು ಕಲರ್ ನಲ್ಲಿ ನಮೂದಿಸ ಬೇಕು.

224 ವಿಧಾನ ಸಭಾ ಕ್ಷೇತ್ರಗಳ ಶಾಸಕರ ಅಧ್ಯಕ್ಷತೆಯ ಕೆಡಿಪಿ ಸಭೆಯಲ್ಲಿ ಪ್ರತಿ ತಿಂಗಳು, ಎಷ್ಟು ಕೆಲಸ ಮಾಡಲಾಗಿದೆ ಎಂಬ ಇನ್ನೊಂದು ಕಲರ್ ನಿಂದ ಯೋಜನೆಗಳನ್ನು ಗುರುತಿಸುವ ಕೆಲಸ ಆಗಬೇಕು.

ಈ ನಕ್ಷೆ ಸಹಿತ ಡಿಜಿಟಲ್ ಮಾಹಿತಿ, ಪ್ರತಿ ಗ್ರಾಮವಾರು/ ಬಡವಾಣೆವಾರು ಜನರಿಗೆ ಪಾರದರ್ಶಕವಾಗಿ, ಉಚಿತವಾಗಿ ಸಿಗಬೇಕು, ಇದು ಡಿಜಿಟಲ್ ಇಂಡಿಯಾ ಮೂಲಕ 2047 ಕ್ಕೆ ಭಾರತ ವಿಶ್ವ ಗುರು’ ಆಗುವುದರ ಜೊತೆಗೆ ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ’ ನೀಡುವ ಮಾನದಂಡವಾಗ ಬೇಕು.

ಚುನಾಯಿತ ಜನಪ್ರತಿನಿಧಿಗಳನ್ನು, ಮತ ಕೇಳಲು ಬಂದವರನ್ನು, ಜನ ಕೇಳ ಬೇಕಿರುವುದು, ಈ ರೀತಿಯ 224 ವಿಧಾನಸಭಾ ಕ್ಷೇತ್ರಗಳ RANKING’ ಪಟ್ಟಿಯನ್ನು. ಗ್ರಾಮವಾರು/ಬಡವಾಣಿವಾರು RANKING’ ಪಟ್ಟಿಯನ್ನು, ಇದು ಬಿಟ್ಟು ಎಣ್ಣೆ, ದುಡ್ಡು, ಕುಕ್ಕರ್, ವಡವೆ, ಬಟ್ಟೆ ಕೇಳಿದರೆ ಗೆದ್ದವರು ದೋಚದೆ ಇನ್ನೇನು ಮಾಡಲು ಸಾಧ್ಯಾ? ಎಲ್ಲರಿಗೂ ಹಣ ಹಂಚಲು ಅವರ ಬಳಿ ಅಕ್ಷಯ ಪಾತ್ರೆ ಇದೆಯಾ?’ ಮತದಾರರಿಗೆ ಈ ರೀತಿಯ ಜಾಗೃತಿ ಅಗತ್ಯವಾಗಿದೆ.

ಮುಖ್ಯ ಮಂತ್ರಿಯವರು ಮುನ್ನುಡಿ ಬರೆಯುವರೇ?

ನಮ್ಮ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು, ಹಠಗಾರರು, ಛಲಗಾರರು, ಅವರ ಮನಸ್ಸಿಗೆ ಬಂದರೆ ಯಾರ ಮಾತನ್ನು ಕೇಳದೆ, ಬ್ಲಾಕ್ ಮೇಲ್‍ಗೂ ಬಗ್ಗದೆ, ಅನುಷ್ಠಾನ ಮಾಡುವ ಖ್ಯಾತಿ ಅವರಿಗೆ ಇದೆ.

ನನ್ನ ಪರಿಕಲ್ಪನೆಯ ಅಭಿವೃದ್ಧಿ ಡಿಜಿಟಲ್ ವಿಲೇಜ್ ಮ್ಯಾಪ್’ ಗೆ ಚಾಲನೆ ನೀಡುವರೇ ಎಂಬುದನ್ನು ಕಾದು ನೋಡಬೇಕಿದೆ. ಯೋಜನಾ ಇಲಾಖೆ ಸಚಿವರಾದ ಶ್ರೀ ಮುನಿರತ್ನರವರು ಪಾತ್ರ ಬಹಳವಿದೆ. ಅವರೊಂದಿಗೆ ಸಮಾಲೋಚನೆ ನಡೆಸುವ ಕಾಲ ಸನ್ನಿಹಿತವಾಗಿದೆ.

ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ, ಅಂಶವನ್ನು ಸೇರ್ಪಡೆ ಮಾಡಬೇಕಿದೆ. ಇದೊಂದು ಜನರ ಚಳುವಳಿಯಾಗ ಬೇಕಿದೆ.

ತಮ್ಮೆಲ್ಲರ ಅಭಿಪ್ರಾಯಗಳನ್ನು ನೀಡಲು ನನ್ನ ಮೊಬೈಲ್ ನಲ್ಲಿ ಇರುವ, ಸುಮಾರು 8845 ಪೋನ್ ನಂಬರ್ ಗಳ 25 ಬ್ರಾಡ್ ಕ್ಯಾಸ್ಟ್ ಗ್ರೂಪ್’ ಮಾಡಲಾಗಿದೆ. ಸುಮಾರು 6400 ಕ್ಕೂ ಹೆಚ್ಚು ನಂಬರ್ ಗಳಿಗೆ ವಾಟ್ಸ್ ಅಪ್ ಇರುವುದು ತಿಳಿಯಿತು. ಈ ಸಲಹೆ ನೀಡಿದ ಶ್ರೀ ಪ್ರತಾಪ್ ಆರಾಧ್ಯರವರು ಮತ್ತು ಶ್ರೀ ದರ್ಶನ್ ರವರಿಗೆ ಅಭಿನಂದನೆಗಳು.

 ತಮಗೆ ಪ್ರತಿ ದಿವಸವೂ ಇ ಪೇಪರ್ ಬರಲಿದೆ. ಯಾರು ಇಂಡಿಯಾ @ 100’ ಅಂಗವಾಗಿ, ಚುನಾಯಿತ ಜನಪ್ರತಿ ನಿಧಿಗಳ, ಅಧಿಕಾರಿಗಳ, ಜನ ಜಾಗೃತಿ ಆಂದೋಲನದಲ್ಲಿ ಭಾಗವಹಿಸಲು ಇಚ್ಚೆ ಇದೆಯೋ ಅವರಿಗೆ ಮಾತ್ರ ಅನೂಕೂಲವಿದೆ.

ಉಳಿದವರು ಅವರ ಇಷ್ಟದಂತೆ ಮಾಡಲು ಡಿಜಿಟಲ್ ವ್ಯವಸ್ಥೆಯಲ್ಲಿ ಅವಕಾಶವಿದೆ.