22nd November 2024
Share

TUMAKURU:SHAKTHIPEETA FOUNDATION

ಕಮಾಂಕ: ಶಕ್ತಿ/ಸಿಎಂ/1/2023                                       ದಿನಾಂಕ:26.02.2023

ಗೆ.

ಶ್ರೀ ಬಸವರಾಜ್ ಬೊಮ್ಮಾಯಿರವರು.

ಮಾನ್ಯ ಮುಖ್ಯ ಮಂತ್ರಿಯವರು.

ಕರ್ನಾಟಕ ಸರ್ಕಾರ, ವಿಧಾನ ಸೌಧ, ಬೆಂಗಳೂರು.

ಮಾನ್ಯರೇ

ವಿಷಯ: ಇಂಡಿಯಾ @ 100 ಅಂಗವಾಗಿ ನವಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ರಚಿಸುವ ಆಂದೋಲನದ ಬಗ್ಗೆ.

 ನಮ್ಮ ಸಂಸ್ಥೆಯ ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರ ಜೈ ಅನುಸಂಧಾನ್’ ಘೋಷಣೆ ಮತ್ತು ಮಾನ್ಯ ಮುಖ್ಯ ಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿರವರವರಾದ ತಾವು ಘೋಷಣೆ ಮಾಡಿರುವ  ಮುಂದಿನ ಯುಗ-ಜ್ಞಾನ ಯುಗ’  ಪ್ರೇರಣೆಯೊಂದಿಗೆ  ಕರ್ನಾಟಕ ರಾಜ್ಯ ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ಪಡೆಯಲು ಸ್ಟ್ರಾಟಜಿ’ ಸಿದ್ಧಪಡಿಸುತ್ತಿದೆ ಎಂದು ತಿಳಿಸಲು ಹರ್ಷಿಸುತ್ತೇನೆ.

ರಾಜ್ಯದ ಸರ್ವಪಕ್ಷಗಳ ನೇತೃತ್ವ’ ದಲ್ಲಿ ಹಾಗೂ ಮಾಜಿ ಮುಖ್ಯಮಂತ್ರಿಯವರ ಮಾರ್ಗದರ್ಶನ’ ದಲ್ಲಿ, ‘ಎಲ್ಲಾ ವರ್ಗದ ಸಂಘ ಸಂಸ್ಥೆಗಳ’ ಸಹಭಾಗಿತ್ವದಲ್ಲಿ ಇಂಡಿಯಾ @ 100’ ಅಂಗವಾಗಿ ನವ ಕರ್ನಾಟಕ ವಿಷನ್ ಡಾಕ್ಯುಮೆಂಟ್-2047’ ಸಿದ್ಧಪಡಿಸಿ ಕೇಂದ್ರ ಮತ್ತು ಸರ್ಕಾರಗಳಿಗೆ ಸಲ್ಲಿಸಲು ಕಾರ್ಯಾರಂಭ ಮಾಡಲಾಗಿದೆ.

ತಾವು ಮಂಡಿಸಿರುವ ಕರ್ನಾಟಕ ರಾಜ್ಯದ 2023-24 ನೇ ಸಾಲಿನ ಆಯವ್ಯಯದ

247 ನೇ ಅಂಶ: ನೀತಿ ಆಯೋಗದ ಮಾದರಿಯಂತೆ, ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗವನ್ನು ಕರ್ನಾಟಕ ರಾಜ್ಯ ಪರಿವರ್ತನಾ ಸಂಸ್ಥೆ ಎಂದು ಪುನರ್ ರಚಿಸಲಾಗಿದ್ದು, ಸಂಸ್ಥೆಯ ಮೂಲಕ ನವ ಭಾರತಕ್ಕಾಗಿ ನವ ಕರ್ನಾಟಕ ನಿರ್ಮಾಣಕ್ಕೆ ವಿನೂತನ ಪರಿಹಾರಗಳನ್ನು ರೂಪಿಸಲಾಗುವುದು.’ ಎಂಬ ಅಂಶಕ್ಕೆ ಪೂರಕವಾಗಿ,

ರಾಜ್ಯದ ಶಾಲಾ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 

  1. ನ್ಯಾಷನಲ್ ಟೂರಿಸಂ ಯೂತ್ ಕ್ಲಬ್- ಟೂರಿಸಂ ಇಲಾಖೆ.
  2. ಇಕೋಕ್ಲಬ್ – ಶಿಕ್ಷಣ ಇಲಾಖೆ.
  3. ಎನ್.ಎಸ್.ಎಸ್. ಘಟಕಗಳು – ಶಿಕ್ಷಣ ಇಲಾಖೆ.
  4. ಇಂಜಿನಿಯರಿಂಗ್ ಕಾಲೇಜುಗಳ ಆಕ್ಟಿವಿಟಿ ಪಾಯಿಂಟ್ಸ್ – ಉನ್ನತ ಇಲಾಖೆ.
  5. ವಿಶ್ವ ವಿದ್ಯಾಲಯಗಳಲ್ಲಿರುವ ಅಧ್ಯಯನ ಪೀಠ ಮತ್ತು ಸಂಶೋಧನಾ ಕೇಂದ್ರಗಳು – ಉನ್ನತ ಇಲಾಖೆ.

  ಹಾಗೂ ರಾಜ್ಯದ ಗ್ರಾಮಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ರಚಿಸಿರುವ  ಬಯೋಡೈವರ್ಸಿಟಿ ಮ್ಯಾನೇಜ್‍ಮೆಂಟ್ ಕಮಿಟಿ’ ಗಳ ಮೂಲಕ, ರಾಜ್ಯದ ಪ್ರತಿಯೊಂದು ಗ್ರಾಮದ, ಪ್ರತಿಯೊಂದು ಸ್ಥಳೀಯ ಸಂಸ್ಥೆಗಳ, ವಿಧಾನಸಭಾ ಕ್ಷೇತ್ರಗಳ, ಲೋಕಸಭಾ ಕ್ಷೇತ್ರಗಳ ಅಭಿವೃದ್ಧಿ ಮೌಲ್ಯಮಾಪನ, ಚುನಾಯಿತ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಜನಜಾಗೃತಿ ಮೂಡಿಸಲು, ನಿಖರವಾದ ಡಿಜಿಟಲ್ ಮಾಹಿತಿ ಸಂಗ್ರಹ ಮಾಡಲು ಸರ್ಕಾರಗಳೊಂದಿಗೆ ಎಂ.ಓ.ಯು ಮಾಡಿಕೊಳ್ಳಲು ಚಿಂತನೆ ನಡೆಸಿದೆ.

  ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳು ಅವರವರ ಪಕ್ಷದ ಪ್ರಧಾನ ಮಂತ್ರಿಗಳ ಮತ್ತು ಮುಖ್ಯ ಮಂತ್ರಿಯವರ ಕಾಲದ ಯೋಜನೆಗಳ ಬಗ್ಗೆ ನಿಖರವಾದ ಮಾಹಿತಿಯನ್ನು ಜನತೆಯ ಮುಂದೆ ಇಡುವುದು ಅಗತ್ಯವಾಗಿದೆ. ಇದು ಮುಂದಿನ 25 ವರ್ಷಗಳ ಅವಧಿಗೆ ಭಧ್ರ ಅಡಿಪಾಯ ಆಗಬೇಕಿದೆ.

 ಜನತೆಗೆ ಬೇಕಿರುವುದು ಕೇವಲ ಅಂಕಿ ಅಂಶಗಳ ಅಭಿವೃದ್ಧಿಯಲ್ಲ, ವಾಸ್ತವಿಕವಾಗಿ ಪ್ರತಿಯೊಂದು ಗ್ರಾಮದ, ನಗರ ಪ್ರದೇಶಗಳ ಪ್ರತಿ ಬಡಾವಾಣೆಯ, ಜಿಐಎಸ್ ಲೇಯರ್ ಸಹಿತ, ಪ್ರತಿ ಗ್ರಾಮದ ರೆವಿನ್ಯೂ ಮ್ಯಾಪ್‍ನಲ್ಲಿ, ಅಭಿವೃದ್ಧಿ ಡಿಜಿಟಲ್ ವಿಲೇಜ್ ಮ್ಯಾಪ್’ ತಯಾರಿಸಲು ಸರ್ಕಾರಗಳ ಗಮನ ಸೆಳೆಯ ಬೇಕಿದೆ.

  ಕಳೆದ 75 ವರ್ಷಗಳಿಂದ ಆಗಿರುವ ಯೋಜನೆಗಳನ್ನು ಒಂದು ಕಲರ್ ಮತ್ತು ಮುಂದಿನ 25 ವರ್ಷಗಳವರೆಗೆ ಆಗಬೇಕಿರುವ ಯೋಜನೆಗಳ ಮಾಹಿತಿಯನ್ನು ಇನ್ನೊಂದು ಕಲರ್‍ನಲ್ಲಿ ನಮೂದಿಸಿ, 224 ವಿಧಾನಸಭಾ ಕ್ಷೇತ್ರಗಳ ಶಾಸಕರ ಅಧ್ಯಕ್ಷತೆಯ ಕೆಡಿಪಿ ಸಭೆಯಲ್ಲಿ ಪ್ರತಿ ತಿಂಗಳು, ಎಷ್ಟು ಕೆಲಸ ಮಾಡಲಾಗಿದೆ ಎಂಬ ಇನ್ನೊಂದು ಕಲರ್ ನಿಂದ ಯೋಜನೆಗಳನ್ನು ಗುರುತಿಸುವ ಕೆಲಸ ಆಗಬೇಕು.

  ನಕ್ಷೆ ಸಹಿತ ಡಿಜಿಟಲ್ ಮಾಹಿತಿ, ಪ್ರತಿ ಗ್ರಾಮವಾರು/ ಬಡವಾಣೆವಾರು ಜನರಿಗೆ ಪಾರದರ್ಶಕವಾಗಿ, ಉಚಿತವಾಗಿ ಸಿಗಬೇಕು, ಇದು ಡಿಜಿಟಲ್ ಇಂಡಿಯಾ ಮೂಲಕ 2047 ಕ್ಕೆ ಭಾರತ ‘ವಿಶ್ವ ಗುರು’ ಆಗುವುದರ ಜೊತೆಗೆ ‘ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ’ ನೀಡುವ ಮಾನದಂಡವಾಗ ಬೇಕು.

ರಾಜ್ಯದ್ಯಾಂತ ವಿಷಯ ತಜ್ಞರ, ಪರಿಣಿತರ, ಅನುಭವಿಗಳ, ಜ್ಞಾನಿಗಳ ಡಿಜಿಟಲ್ ಡಾಟಾ ಬೇಸ್‍ನೊಂದಿಗೆ ನಾಲೇಡ್ಜ್ ಬ್ಯಾಂಕ್’ ಮಾಡಿ, ಅವರೆಲ್ಲರ ಸಲಹೆಗಳೊಂದಿಗೆ ನವ ಕರ್ನಾಟಕ ವಿಷನ್ ಡಾಕ್ಯುಮೆಂಟ್-2047’ ಸಿದ್ಧಪಡಿಸಿ, ಜ್ಞಾನ ದಾನ ಮಾಡಿದವರಿಗೆ  ಜ್ಞಾನದಾನ ಪ್ರಶಸ್ತಿ’ ನೀಡಲು ಸರ್ಕಾರಗಳ ಗಮನ ಸೆಳೆಯಲು ಚಿಂತನೆ ನಡೆಸಿದೆ.

   ಚುನಾಯಿತ ಜನಪ್ರತಿನಿಧಿಗಳನ್ನು, ಮತ ಕೇಳಲು ಬಂದವರನ್ನು, ‘224 ವಿಧಾನಸಭಾ ಕ್ಷೇತ್ರಗಳ RANKING’ ಮತ್ತು ಗ್ರಾಮವಾರು/ಬಡವಾಣೆವಾರು RANKING’ ಪಟ್ಟಿಯನ್ನು ಕೇಳುವಂತಾಗಲು, ಪಾರದರ್ಶಕವಾಗಿ ಜಾಗೃತಿ ಮೂಡಿಸಲು ಕರ್ನಾಟಕ ರಾಜ್ಯ ಮೌಲ್ಯಮಾಪನ ಪ್ರಾಧಿಕಾರ ದಿಟ್ಟ ನಿರ್ಧಾರ ಕೈಗೊಳ್ಳ ಬೇಕಿದೆ.

    ಈ ಹಿನ್ನಲೆಯಲ್ಲಿ ನಮ್ಮ ಸಂಸ್ಥೆಯು, ಗ್ರಾಮ ಮಟ್ಟದಿಂದ ಆರಂಭಿಸಿ, ತಾಲ್ಲೋಕುಗಳ, ಜಿಲ್ಲೆಗಳ, ರಾಜ್ಯದ, ದೇಶದ, ವಿಶ್ವದ ಆನೇಕ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲು ಯೋಚಿಸಿದೆ. ಈಗಾಗಲೇ ತಮ್ಮ ಅಧ್ಯಕ್ಷತೆಯ ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ’ ನಾದ ನಾನು ಕರ್ನಾಟಕ ರಾಜ್ಯ ಮೌಲ್ಯಮಾಪನ ಪ್ರಾಧಿಕಾರೊಂದಿಗೆ ಉಚಿತವಾಗಿ ಎಂ.ಓ.ಯು ಮಾಡಿಕೊಂಡು ಕಾರ್ಯಪ್ರವೃತ್ತನಾಗಿದ್ದೇನೆ.

ದಿನಾಂಕ:05.03.2023 ರಂದು ತುಮಕೂರಿನ ಸ್ಮಾರ್ಟ್ ಸಿಟಿ ಕಾಮಗಾರಿಗಳ ಲೋಕಾರ್ಪಣೆಗೆ ಬರುವ ತಾವು ‘ಇಂಡಿಯಾ @ 100’ ಅಂಗವಾಗಿ ‘ನವ ಕರ್ನಾಟಕ ವಿಷನ್ ಡಾಕ್ಯುಮೆಂಟ್-2047’ ರಾಜ್ಯ ಮಟ್ಟದ ‘ಜನ ಜಾಗೃತಿ ಆಂದೋಲನ’ ವನ್ನು ತುಮಕೂರಿನಲ್ಲಿ ಆಯೋಜಿಸಲು, ಯೋಜನಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರು ಹಾಗೂ ರಾಜ್ಯ ಮಟ್ಟದ ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿರವರಿಗೆ ಸೂಕ್ತ ನಿರ್ದೇಶನ ನೀಡಲು ಮೂಲಕ ಕೋರಿದೆ.

ವಂದನೆಗಳೊಂದಿಗೆ                                           ತಮ್ಮ ವಿಶ್ವಾಸಿ

(ಕುಂದರನಹಳ್ಳಿ ರಮೇಶ್)

ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ