26th December 2024
Share

TUMAKURU:SHAKTHIPEETA FOUNDATION

ಇಂಡಿಯಾ@100’ ಅಂಗವಾಗಿ ನವ ಕರ್ನಾಟಕ ವಿಷನ್ ಡಾಕ್ಯುಮೆಂಟ್-2047’ ರಚಿಸುವ ಸಂಭಂಧ ತುಮಕೂರಿನಲ್ಲಿ ರಾಜ್ಯ ಮಟ್ಟದ ಜನ ಜಾಗೃತಿ ಆಂದೋಲನ ಹಮ್ಮಿಕೊಳ್ಳುವ ಬಗ್ಗೆ ಯೋಜನಾ ಇಲಾಖೆಯ ಸಚಿವರಾದ ಶ್ರೀ ಮುನಿರತ್ನರವರೊಂದಿಗೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಸಮಾಲೋಚನೆ ನಡೆಸಿದರು.

ದಿನಾಂಕ:05.03.2023 ರಂದು ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು ತುಮಕೂರಿಗೆ ಸ್ಮಾರ್ಟ್ ಸಿಟಿ ವಿವಿಧ ಯೋಜನೆಗಳ ಲೋಕಾರ್ಪಣೆ ಮಾಡಲು ಬರಲಿದ್ದಾರೆ. ಅದೇ ಸಮಾರಂಭದಲ್ಲಿ, ಅದೇ ವೇದಿಕೆಯಲ್ಲಿ, ರಾಜ್ಯದ ವಿಧ್ಯಾರ್ಥಿಗಳನ್ನು ಇಂಡಿಯಾ@100’ ಅಂಗವಾಗಿ ನವ ಕರ್ನಾಟಕ ವಿಷನ್ ಡಾಕ್ಯುಮೆಂಟ್-2047’ ನಲ್ಲಿ ತೊಡಗಿಸಿಕೊಳ್ಳಲು ಚಾಲನೇ ನೀಡಲು ಚಿಂತನೆ ನಡೆಸಿದರು.

ಇದೇ ಸಂದರ್ಭದಲ್ಲಿ ತುಮಕೂರು ನಗರ ವಿಧಾನಸಭಾ ಸದಸ್ಯರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರ ಹಾಗೂ ಸಂಸದರಾದ ಶ್ರೀ ಜಿ.ಎಸ್.ಬಸವರಾಜ್ ರವರ ಇಬ್ಬರ ಪತ್ರಗಳನ್ನು ನೀಡಲಾಯಿತು.

ಯೋಜನಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಾದ ಶ್ರೀಮತಿ ಶಾಲಿನಿ ರಜನೀಶ್‍ರವರಿಗೆ ಸೂಕ್ತ ಕ್ರಮಕೈಗೊಳ್ಳಲು ಸಚಿವರು ಸೂಚಿಸಿದ್ದಾರೆ.

ಕರ್ನಾಟಕ ರಾಜ್ಯ ಯಾವಾಗಲೂ ಹಲವಾರು ಯೋಜನೆಗಳ ಅನುಷ್ಠಾನದಲ್ಲಿ ಮುಂಚೂಣೆಯಲ್ಲಿದೆ, ಶ್ರೀ ಬಸವರಾಜ್ ಬೊಮ್ಮಾಯಿರವರು ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಹೋರಾಟ ನಡೆಸಿದವರು, ಈಗಿನ ಅವರ ಅವಧಿಯಲ್ಲಿ ಚಾಲನೆ ನೀಡುವ ಅವಕಾಶ ದೊರಕಿದೆ.

 ಜೊತೆಯಲ್ಲಿ ಶ್ರೀ ಪ್ರತಾಪ್ ಆರಾಧ್ಯರವರು, ಶ್ರೀ ವೇದಾನಂದಾ ಮೂರ್ತಿರವರು ಇದ್ದರು.