24th April 2024
Share

TUMAKURU:SHAKTHIPEETA FOUNDATION

1947 ರಿಂದ 2023 ರವರೆಗೆ ಘೋಷಣೆಯಾಗಿರುವ ಭಾರತದ ಎಲ್ಲಾ ಪ್ರಧಾನ ಮಂತ್ರಿಗಳ ಅವಧಿಯ ಮತ್ತು ಕರ್ನಾಟಕ ರಾಜ್ಯದ ಎಲ್ಲಾ ಮುಖ್ಯಮಂತ್ರಿಯವರ ಅವಧಿಯ ಯೋಜನೆಗಳ ಮಾಹಿತಿಯನ್ನು ಒಂದೆ ವೆಬ್‍ಸೈಟ್ ನಲ್ಲಿ ತಂದು ಪಾರದರ್ಶಕವಾಗಿ ಎಲ್ಲರಿಗೂ ಮಾಹಿತಿ ದೊರೆಯುಂತೆ ಮಾಡಲು ಮೈಸೂರಿನ ಬಸುದೇವ್ ಸೋಮನಿ  ಕಾಲೇಜು ವಿಧ್ಯಾರ್ಥಿಗಳು ಪ್ರಾಜೆಕ್ಟ್ ಆಗಿ ಪಡೆಯಲು ಮಹತ್ವದ ನಿರ್ಧಾರ ಕೈಗೊಂಡರು.

ಜೊತೆಗೆ 2047 ರವರೆಗೆ ಯಾವ ಯೋಜನೆಗಳ ಅಗತ್ಯವಿದೆ ಎಂಬ ಜ್ಞಾನಿಗಳ ಸಲಹೆಗಳನ್ನು ಅದೇ ವೆಬ್‍ಸೈಟ್‍ನಲ್ಲಿ ತರಬೇಕು. ಒಂದೊಂದು ಯೋಜನೆಯನ್ನು, ಒಂದೊಂದು ವಿದ್ಯಾರ್ಥಿ ತಂಡ ಪ್ರಾಜೆಕ್ಟ್ ಆಗಿ ಪಡೆಯಬೇಕು.

  ಮೈಸೂರು ವಿಶ್ವವಿದ್ಯಾಲಯವೇ ಮುಂದೆ ಬಂದರೆ ಅನೂಕೂಲವಾಗಲಿದೆ ಎಂಬ ಸಲಹೆಯನ್ನು ವಿದ್ಯಾರ್ಥಿಗಳು ನೀಡಿದ್ದು, ಮೈಸೂರಿನ ಈ ಕಾಲೇಜು ನವ ಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ಕ್ಕೆ ‘ತವರು ಮನೆ’ ಆಗುವ ಲಕ್ಷಣಗಳು ಎದ್ದು ಕಾಣುತ್ತಿತ್ತು.

 ನಮ್ಮ ಕಾಲೇಜಿನ ಜೊತೆಗೆ ಮೈಸೂರಿನ ಇತರೆ ಎಲ್ಲಾ ಕಾಲೇಜು ವಿದ್ಯಾರ್ಥಿಗಳಿಗೂ ಮನವಿ ಮಾಡುವ ಅಗತ್ಯವಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಶ್ರೀ ವಾಸುದೇವಮೂರ್ತಿರವರು, ಕಾಮರ್ಸ್ ವಿಭಾಗದ ಹೆಚ್.ಓ.ಡಿ ಡಾ. ಶ್ರೀ ಮನೋಜ್‍ರವರು, ಅಸಿಸ್ಟೆಂಟ್ ಪ್ರೋಫೆಸರ್ ಡಾ.ಶ್ರೀ ರಮೇಶ್‍ರವರು ಸಲಹೆ ನೀಡಿದರು.

  1. ಭಾರತದ ಗೃಹ ಸಚಿವರಾದ ಶ್ರೀ ಅಮಿತ್ ಶಾ ರವರು ಬೆಂಗಳೂರಿನಲ್ಲಿ ಸ್ವತಂತ್ರ್ಯ ಬಂದ 65 ವರ್ಷಗಳ ಅವಧಿಯ ಹಾಗೂ ಶ್ರೀ ನರೇಂದ್ರಮೋದಿಯವರು ಪ್ರಧಾನಿಯವರಾದ 10 ವರ್ಷಗಳ ಅವಧಿಯ ಯೋಜನೆಗಳ ಮೌಲ್ಯಮಾಪನ ಮಾಡಲು ಹಾಕಿರುವ ಸವಾಲು  ನಂತರ.
  2. ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು ರಾಜ್ಯದ ಎಲ್ಲಾ ಮುಖ್ಯಮಂತ್ರಿಯವರ ಕಾಲದ ಯೋಜನೆಗಳು ಮತ್ತು ಸಾಹಿತ್ಯ ಒಂದೇ  ಕಡೆ ಮ್ಯೂಸಿಯಂ ಮಾಡಿ ಸಂಗ್ರಹ ಮಾಡಬೇಕು ಎನ್ನುತ್ತಾರೆ.
  3. ಮಾಜಿ ಮುಖ್ಯ ಮಂತ್ರಿಯವರು ಮತ್ತು ವಿರೋಧ ಪಕ್ಷದ ನಾಯಕರಾದ ಶ್ರೀ ಸಿದ್ಧರಾಮಯ್ಯನವರು ಮೋದಿಯವರ ಅವಧಿಗಿಂತ ಶ್ರೀ ಮನೋಮೋನ್ ಸಿಂಗ್ ರವರ ಅವಧಿಯಲ್ಲೆಯೇ, ಕರ್ನಾಟಕ ರಾಜ್ಯದಲ್ಲಿ, ಹೆಚ್ಚಿಗೆ ರಾಷ್ಟ್ರೀಯ ಹೆದ್ಧಾರಿ ಮತ್ತು ರೈಲ್ವೇ ಮಾರ್ಗಗಳನ್ನು, ಕಡಿಮೆ ಆಯವ್ಯಯದ ವೆಚ್ಚದಲ್ಲೂ ಮಾಡಿದ್ದೇವೆ, ನಾವೇ ಗ್ರೇಟ್ ಎನ್ನುವ ರೀತಿ ಹೇಳಿಕೆ ನೀಡಿದ್ದಾರೆ.
  4. ಮಾಜಿ ಮುಖ್ಯಮಂತ್ರಿಯವರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರು ಎಲ್ಲಾ ಇವರೇ 10 ವರ್ಷದಲ್ಲಿ ಮಾಡಿದ್ದಾರೆಯೇ? ಹಿಂದಿನವರು ಏನು ಮಾಡಿಲ್ಲವೇ ಎಂಬ ಹೇಳಿಕೆ ಮಾಡಿದ್ದಾರೆ.
  5. ಕಟು ಸತ್ಯ ಎಂದರೆ, ಈವರೆಗೂ ಎಲ್ಲಾ ನಿಖರವಾದ ಮಾಹಿತಿಗಳು ಒಂದೇ ಕಡೆ ಇರುವ ಮಾಹಿತಿಯೇ ನನಗೆ ಇನ್ನೂ ಸಿಕ್ಕಿಲ್ಲ ಎಂಬ ನನ್ನ ಮಾತು, ಸಂವಾದದಲ್ಲಿ  ಹಾಜರಿದ್ದವರೆಲ್ಲರಿಗೂ ರೀತಿ ನಿರ್ಣಯ ಕೈಗೊಳ್ಳಲು ಪ್ರೇರಣೆ ಆಯಿತು ಎಂದರೆ ತಪ್ಪಾಗಲಾರದು.

ದಿನಾಂಕ:28.02.2023 ರಂದು ಮೈಸೂರಿನ ಬಸುದೇವ್ ಸೋಮನಿ  ಕಾಲೇಜಿನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕೇಳುವ ಪ್ರತಿಯೊಂದು ಯೋಜನೆಗಳ ಮಾಹಿತಿಯ ದಾಹ ನೋಡಿ, ಕಾಮರ್ಸ್ ವಿಭಾಗದ ಹೆಚ್.ಓ.ಡಿ ಶ್ರೀ ಮನೋಜ್‍ರವರು ಈ ಸಲಹೆ ಮಂಡಿಸಿದಾಗ ಎಲ್ಲರೂ ಕರತಾಡನ ಮಾಡುವ ಮೂಲಕ ಒಪ್ಪಿಗೆ ಸೂಚಿಸಿದ್ದು ನಿಜಕ್ಕೂ ನನಗೆ ‘ಆನೆ ಬಲ’ ತಂದಿದೆ.

ಈ ಆಲೋಚನೆ ನಿಜಕ್ಕೂ ಇಂಡಿಯಾ @ 100 ಜನಸ್ನೇಹಿ’ ಯೋಜನೆಯಾಗಲಿದೆ ಎಂಬ ಆಶಾಭಾವನೆ ನನ್ನದಾಗಿದೆ.

ಮೂಕಾನನ ರೆಸಾರ್ಟ್‍ನ ಶ್ರೀ ವೇದಾನಂದಾಮೂರ್ತಿರವರು, ಪ್ರೋಫೆಸರ್ ಶ್ರೀ ಬಸವರಾಜ್ ರವರು, ಶ್ರೀ ಚಂದ್ರೇಗೌಡರು, ಶ್ರೀ ಹಿತೇಶ್‍ರವರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಸಾಕ್ಷಿಯಾದರು.