27th July 2024
Share

TUMAKURU:SHAKTHIPEETA FOUNDATION

ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರ ಅಧ್ಯಕ್ಷತೆಯಲ್ಲಿರುವ ಕರ್ನಾಟಕ ರಾಜ್ಯ ಮಟ್ಟದ ದಿಶಾ ಸಮಿತಿ, ಇಂಡಿಯಾ @ 100 ಅಂಗವಾಗಿ ನವಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ಸಿದ್ಧಪಡಿಸಲು ದೇಶದಲ್ಲಿಯೇ ವಿÀನೂತನವಾದ ಐತಿಹಾಸಿಕ ನಿರ್ಣಯ ಕೈಗೊಂಡಿದೆ.

ಈಗಾಗಲೇ ‘ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಹೆಚ್ಚಿನ ಅನುದಾನ ತರಲು ಕಾರ್ಯತಂತ್ರ’ ರೂಪಿಸುತ್ತಿದೆ. ಇಂಡಿಯಾ @ 100 ಅಂಗವಾಗಿ ನವಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ರಾಜ್ಯದ್ಯಾಂತ ಇರುವÀ ಎನ್.ಎಸ್.ಎಸ್. ಘಟಕಗಳ ಮೂಲಕ ವ್ಯಾಪಕ ಜನಜಾಗೃತಿ ಮೂಡಿಸಲು ಮತ್ತು ರಾಜ್ಯದ ಪ್ರತಿಯೊಂದು ಗ್ರಾಮದ ಮತ್ತು ನಗರ ಪ್ರದೇಶಗಳ ಪ್ರತಿಯೊಂದು ಬಡಾವಣೆಯಲ್ಲಿರುವ ಜ್ಞಾನಿಗಳು/ವಿಷಯ ಪರಿಣಿತರು ನೀಡುವ ಅತ್ಯುತ್ತಮ ಸಲಹೆಗಳನ್ನು ಸಂಗ್ರಹ ಮಾಡುವ ಆಂದೋಲನಕ್ಕೆ ಚಾಲನೆ ನೀಡಲಿದೆ.

ದಿನಾಂಕ:05.03.2023 ರಂದು ತುಮಕೂರಿನಲ್ಲಿ ನಡೆಯುವ ಸ್ಮಾರ್ಟ್ ಸಿಟಿ ಯೋಜನೆಗಳ ಲೋಕಾರ್ಪಣೆ, ಪಲಾನುಭವಿಗಳ ಸಮ್ಮೇಳನದಲ್ಲಿ, ರಾಜ್ಯ ಮಟ್ಟದ ಜನಾಜಾಗೃತಿ ಆಂದೋಲನಕ್ಕೆ ಮಾನ್ಯ ಮುಖ್ಯಮಂತ್ರಿಯವರು ಹಾಗೂ ರಾಜ್ಯ ದಿಶಾ ಸಮಿತಿ ಅಧ್ಯಕ್ಷರಾದ ಶ್ರೀ ಬೊಮ್ಮಾಯಿರವರು ಚಾಲನೆ ನೀಡಲಿದ್ದಾರೆ.

ಬಾರತ ದೇಶದ ಕೇಂದ್ರಾಡಳಿತ ಪ್ರದೇಶ ಮತ್ತು ರಾಜ್ಯಗಳು ಸೇರಿದಂತೆ 37 ರಾಜ್ಯ ಮಟ್ಟದ ದಿಶಾ ಸಮಿತಿ ಮಾನ್ಯ ಮುಖ್ಯ ಮಂತ್ರಿಯವರ ಅಧ್ಯಕ್ಷತೆಯಲ್ಲಿ ರಚಿಸಬೇಕಿದೆ. ಇದೂವರೆಗೂ ಕೇವಲ ನಾಲ್ಕು ರಾಜ್ಯಗಳಲ್ಲಿ ಮಾತ್ರ ರಾಜ್ಯ ಮಟ್ಟದ ದಿಶಾ ಸಮಿತಿ ರಚನೆಯಾಗಿದೆ.

 2047 ಕ್ಕೆ ಭಾರತ ವಿಶ್ವಗುರುವಾಗುವ ಆಂದೋಲನಕ್ಕೆ ಕರ್ನಾಟಕದಲ್ಲಿ ವಿಧ್ಯಾರ್ಥಿ ಸಮೂಹವನ್ನು ತೊಡಗಿಸಿಕೊಳ್ಳಲು ರೂಪಿಸಿರುವ ಯೋಜನೆ ಅರ್ಥಪೂರ್ಣವಾಗಿದೆ ಹಾಗೂ ದೇಶಕ್ಕೆ ಮಾದರಿಯಾಗಲಿದೆ.

ಈ ಆಂದೋಲನ ರೂಪಿಸಲು ಶ್ರಮಿಸಿದ ಯೋಜನಾ ಇಲಾಖೆಯ ಸಚಿವರಾದ ಶ್ರೀ ಮುನಿರತ್ನರವರು, ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು, ತುಮಕೂರು ನಗರ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು, ರಾಜ್ಯ ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿಯವರಾದ ಶ್ರೀಮತಿ ಶಾಲಿನಿ ರಜನೀಶ್ ರವರು, ಯೋಜನಾ ಇಲಾಖೆಯ ಆಪ್ತಕಾರ್ಯದರ್ಶಿಯವರಾದ ಶ್ರೀ ಸೋಮಶೇಖರ್ ರವರಿಗೆ ಅಭಿನಂದನೆಗಳು.

 ರಾಜ್ಯದ 31 ಜಿಲ್ಲೆಗಳ 224 ವಿಧಾನಸಭಾ ಕ್ಷೇತ್ರಗಳಲ್ಲೂ ವ್ಯಾಪಕ ಕಾರ್ಯಕ್ರಮ ರೂಪಿಸಲು ರೂಪುರೇಷೆಗಳನ್ನು ದಿಶಾ ಸಮಿತಿ ಸಿದ್ಧಪಡಿಸಲು ಸಜ್ಜಾಗಿದೆ.