22nd November 2024
Share

TUMAKURU:SHAKTHIPEETA FOUNDATION

ಮೈಸೂರು ವಿಶ್ವ ವಿದ್ಯಾಲಯದ ವಿಸಿ ಯವರಾದ ಶ್ರೀ ಮುಜಾಫಾರ್ ಅಸಾದಿಯವರೊಂದಿಗೆ, ತಮ್ಮ ವಿಶ್ವ ವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕಾಲೇಜು ವಿದ್ರ್ಯಾರ್ಥಿಗಳ ಮುಖಾಂತರ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ 1947 ರಿಂದ ಈ ವರೆಗಿನ ಪ್ರತಿಯೊಂದು ಇಲಾಖೆಯ, ಪ್ರತಿಯೊಂದು ಯೋಜನೆಗಳ ಮಾಹಿತಿಗಳ ಬಗ್ಗೆ ಪ್ರಾಜೆಕ್ಟ್ ಮಾಡಿಸುವ ಮುಖಾಂತರ ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ ದ ಜನಜಾಗೃತಿ ಮೂಡಿಸಲು  ಅನೂಕೂಲ ಮಾಡಲು ಸಮಾಲೋಚನೆ ನಡೆಸಲಾಯಿತು.

ಆಯಾ ವಿಭಾಗಕ್ಕೆ ಸಂಧಿಸಿದ ಇಲಾಖೆಗಳ ಯೋಜನೆಗಳ ಪ್ರಾಜೆಕ್ಟ್ ವರ್ಕ್ ಮಾಡಲು ಚಿಂತನೆ ಮಾಡಬಹುದಾಗಿದೆ. ಇದೊಂದು ವಿಶೇಷ ಕಾರ್ಯಕ್ರಮವಾಗಲಿದೆ.

ವಿಶ್ವ ವಿದ್ಯಾನಿಲಯದ ಅಡಿಯಲ್ಲಿ ಬರುವ ಅಧ್ಯಯನ ಪೀಠಗಳು ನಾಯಕತ್ವ ವಹಿಸಬಹುದಾಗಿದೆ. ರಾಜ್ಯದ ಪ್ರತಿಯೊಂದು ವಿಶ್ವ ವಿದ್ಯಾನಿಲಯದಲ್ಲಿರುವ ಅಧ್ಯಯನ ಪೀಠಗಳು ಸಹ ಒಂದೊಂದು ಇಲಾಖೆಯ ಅಥವಾ ಒಂದೊಂದು ಯೋಜನೆಯ ಪ್ರಾಜೆಕ್ಟ್ ವರ್ಕ್ ಮಾಡಬಹುದಾಗಿದೆ.

ಈ ಬಗ್ಗೆ ಪ್ರಾಜೆಕ್ಟ್ ವರ್ಕ್‍ಮಾಡುವ ವಿಭಾಗಗಳ ಹೆಚ್.ಓ.ಡಿ ಗಳು ಮತ್ತು ಅಧ್ಯಯನ ಪೀಠಗಳ ಮುಖ್ಯಸ್ಥರ ಜೊತೆ ಸಮಾಲೋಚನೆ ನಡೆಸಿ, ಒಂದು ರೂಪುರೇಷೆ ನಿರ್ಧರಿಸಬಹುದಾಗಿದೆ. ವಿದ್ಯಾರ್ಥಿಗಳಿಗೆ ಪ್ರಭಂಧ ಸ್ಪರ್ಧೆ, ಭಾಷಣ ಸ್ಪರ್ಧೆ, ಚರ್ಚಾ ಸ್ಪರ್ದೆ’ ಎರ್ಪಡಿಸಿ, ಅವರ ಅಭಿಪ್ರಾಯಗಳನ್ನು ಸಹ ಸಂಗ್ರಹಿಸ ಬಹುದಾಗಿದೆ.

ಕಳೆದ 75 ವರ್ಷಗಳಲ್ಲಿ ಜಾರಿ ಮಾಡಿದ ಯೋಜನೆಯ ನಂತರವೂ, ಮುಂದಿನ 25 ವರ್ಷಗಳಲ್ಲಿ, ಯಾವ ಇಲಾಖೆ, ಯಾವ ರೀತಿಯ ಯೋಜನೆಗಳನ್ನು ರೂಪಿಸಬೇಕು ಎಂಬ ಯೋಚಿಸ ಬಹುದಾಗಿದೆ.

ಇದೂವರೆಗೂ ಆಳ್ವಿಕೆ ಮಾಡಿರುವ ಮಾಜಿ ಪ್ರಧಾನ ಮಂತ್ರಿಯವರ ಮತ್ತು ರಾಜ್ಯದ ಮಾಜಿ ಮುಖ್ಯ ಮಂತ್ರಿಯವರ ಅವಧಿಯ ಯೋಜನೆಗಳ ಬಗ್ಗೆ, ಎಲ್ಲಾ ರಾಜಕೀಯ ಪಕ್ಷಗಳಿಗೂ ಆತ್ಮಾವಲೋಕನ’ ಮಾಡಿಕೊಳ್ಳಲು ನಿಖರವಾದ ಮಾಹಿತಿ ದೊರೆಯಲಿದೆ. 

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ, ಪ್ರತಿಯೊಂದು ಗ್ರಾಮದ ಅಭಿವೃದ್ಧಿ ಡಿÀಜಿಟಲ್ ಮ್ಯಾಪ್ ಗಳನ್ನು ಸಹ. ರಾಜ್ಯದ್ಯಾಂತ ಎಲ್ಲಾ ಹಂತದ ಕಾಲೇಜು ವಿದ್ಯಾರ್ಥಿಗಳಿಂದ ಪ್ರಾಜೆಕ್ಟ್ ವರ್ಕ್‍ಗಳನ್ನು ಮಾಡಿಸುವ ಮೂಲಕ, 100 ನೇ ವರ್ಷದ ಸ್ವಾತಂತ್ರ್ಯದ ವೇಳೆಗೆ ವಿದ್ಯಾರ್ಥಿಗಳ ಕೊಡುಗೆ ಬಗ್ಗೆ ರಾಷ್ಟ್ರದ ಗಮನ ಸೆಳೆಯಲು, ಒಂದು ವಿಶೇಷ ಕಾರ್ಯಕ್ರಮ ರೂಪಿಸಲು ಮನವಿ ಮಾಡಲಾಯಿತು.

ರಾಜ್ಯದ ಯಾವುದೇ ಕಾಲೇಜಿನಲ್ಲಿ ಓದುವ ವಿದ್ಯಾರ್ಥಿಗಳು, ಅವರ ಹುಟ್ಟೂರಿನ ಅಭಿವೃದ್ಧಿ ಡಿÀಜಿಟಲ್ ಮ್ಯಾಪ್ ಪ್ರಾಜೆಕ್ಟ್ ವರ್ಕ್ ಮಾಡಲು,  ಆದೇಶ ಮಾಡಿಸಲು, ಮಾನ್ಯ ಮುಖ್ಯ ಮಂತ್ರಿಯವರ ಜೊತೆ ಸಮಾಲೋಚನೆ ನಡೆಸುವ ಆಲೋಚನೆಯೂ ಇದೆ.

ಇಂಜಿನಿಯರಿಂಗ್ ಕಾಲೇಜಿನ ಆಕ್ಟಿವಿಟಿ ಪಾಯಿಂಟ್ಸ್ ನ ಮೂಲಕವೂ  ಊರಿಗೊಂದು ಪುಸ್ತಕ ಮತ್ತು ಅಭಿವೃದ್ಧಿ ಡಿÀಜಿಟಲ್ ಮ್ಯಾಪ್ ಮಾಡಿಸ ಬಹುದಾಗಿದೆ. ವಿದ್ಯಾರ್ಥಿಗಳಿಗೆ ಹಾಗೂ ಗೈಡ್ ಗಳಿಗೆ ಸರ್ಕಾರಗಳಿಂದ ಪ್ರೋತ್ಸಾಹ ಅನುದಾನ ನೀಡಲು ಸೂಕ್ತ ಪ್ರಸ್ತಾವನೆ ಸಲ್ಲಿಸ ಬಹುದಾಗಿದೆ.

ಇಂಥಹ ಯೋಜನೆಗೆ ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರ ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿಗಳ ಮೂಲಕ ಪಿಬಿಆರ್ (PEOPLE’S  BIODIVERSITY REGISTER) ಮಾಡಿಸಲು, ಅನುದಾನ ನೀಡಿರುವ ಉದಾಹರಣೆಗಳು ನಮ್ಮ ಮುಂದಿದೆ.

ಈ ಬಗ್ಗೆ ಒಂದು ಸಂವಾದ ಘೋಷ್ಠಿ’ ನಡೆಸಲು, ಚರ್ಚೆ ಮಾಡಿದ ತಕ್ಷಣವೇ ಅವರು, ಅವರ ಸಹೋದ್ಯೋಗಿ ಶ್ರೀ ಸೋಮಶೇಖರ್ ರವರಿಗೆ ಕರೆ ಮಾಡಿ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದ್ದು ನಿಜಕ್ಕೂ ನನಗೆ ತೃಪ್ತಿ ತಂದಿದೆ.

ಜೊತೆಯಲ್ಲಿ ಶ್ರೀ ವೇದಾನಂದಾ ಮೂರ್ತಿರವರು, ಡಾ.ಶ್ರೀ ಬಸವರಾಜ್ ರವರು, ಶ್ರೀ ಹಿತೇಶ್ ರವರು ಇದ್ದರು.