27th July 2024
Share

TUMAKURU:SHAKTHIPEETA FOUNDATION

ದೇಶದ ಕಲೆ ಸಂಸ್ಕøತಿ, ಪ್ರವಾದಸೋಧ್ಯಮ ಸ್ಥಳಗಳು, ಹೆರಿಟೇಜ್ ಸ್ಥಳಗಳ, ಶಾಸನಗಳ, ಇತ್ಯಾದಿ ಬಗ್ಗೆ ಸಂಶೋಧನೆ, ಅಧ್ಯಯನ, ವ್ಯಾಪಕ ಪ್ರಚಾರ ಮಾಡಲು, 7 ನೇ ತರಗತಿ ಮೇಲ್ಪಟ್ಟ ಎಲ್ಲಾ ಶಾಲಾ-ಕಾಲೇಜು, ವಿಶ್ವವಿದ್ಯಾನಿಲಯಗಳಲ್ಲೂ ಸುಮಾರು 25 ಜನರ ತಂಡದ   ‘ನ್ಯಾಷನಲ್ ಟೂರಿಸಂ ಯೂತ್ ಕ್ಲಬ್’ ರಚಿಸಲು ಕೇಂದ್ರ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದೆ.

ನಿಜಕ್ಕೂ ಇದೊಂದು ಅತ್ಯುತ್ತಮ ಯೋಜನೆ, ಪ್ರವಾಸೋಧ್ಯಮ ಇಲಾಖೆ, ಕ್ರೀಡಾ ಇಲಾಖೆ, ಶಿಕ್ಷಣ ಇಲಾಖೆ,ಸಂಸ್ಕøತಿ ಇಲಾಖೆಗಳ ಸಹಭಾಗಿತ್ವದಲ್ಲಿ ಶ್ರಮಿಸಬೇಕಿದೆ, ಇಂಡಿಯಾ @75 ಅಂಗವಾಗಿ ಆತ್ಮನಿರ್ಭರ ಯೋಜನೆಯಡಿಯಲ್ಲಿ, ಯೂತ್ ಕ್ಲಬ್ ರಚಿಸಬೇಕಿತ್ತು, ಏಕೆ ವಿಳಂಭವಾಗಿದೆ ಎಂಬುದು ಗೊತ್ತಿಲ್ಲ.

ಆದರೂ ದಿನಾಂಕ:05.03.2023 ರಂದು ತುಮಕೂರಿಗೆ ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು ತುಮಕೂರು ಸ್ಮಾಟ್ ಸಿಟಿ ಕಾಮಗಾರಿಗಳ ಲೋಕಾರ್ಪಣೆಗೆ ಬರುವ ಸಮಯದಲ್ಲಿ, ರಾಜ್ಯಾದ್ಯಾಂತ ನ್ಯಾಷನಲ್ ಟೂರಿಸಂ ಯೂತ್ ಕ್ಲಬ್  ರಚಿಸುವ ಹಿನ್ನಲೆಯಲ್ಲಿ , ರಾಜ್ಯ ಮಟ್ಟದ ಜನಜಾಗೃತಿ ಆಂದೋಲನಕ್ಕೆ ಚಾಲನೆ ನೀಡಲಿದ್ದಾರೆ ಎಂಬ ಆಶಾಭಾವನೆ ನನ್ನದಾಗಿದೆ.

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು, ತುಮಕೂರು ನಗರ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು, ಮಾನ್ಯ ಮುಖ್ಯಮಂತ್ರಿಯವರಿಗೆ, ಪ್ರವಾಸೋಧ್ಯಮ ಸಚಿವರಿಗೆ ಮನವಿ ಮಾಡಿದ್ದಾರೆ.

ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯನಾಗಿ ಕೇಂದ್ರ ಸರ್ಕಾರದ ಯೋಜನೆ ಜಾರಿಗೊಳಿಸಲು ಶ್ರಮಿಸುವುದು ನನ್ನ ಆಧ್ಯಕರ್ತವ್ಯ. ಈ ಹಿನ್ನಲೆಯಲ್ಲಿ  ಕಡತದ ಅನುಸರಣೆ ಆಮೆ ವೇಗದಲ್ಲಿ ಸಾಗಿದೆ.

ಪ್ರವಾಸೋಧ್ಯಮ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಾದ ಶ್ರೀ ಕಪಿಲ್ ಮೋಹನ್ ರವರ ಅಂಗಳದಲ್ಲಿ ಕಡತ ಇದೆ.

ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ ಕಾರ್ಯದರ್ಶಿಯವರಾದ ಶ್ರಿಮತಿ ಶಾಲಿನಿ ರಜನೀಶ್ ರವರು ಸಹಕರಿಸುತ್ತಿದ್ದಾರೆ.