12th September 2024
Share

TUMAKURU:SHAKTHIPEETA FOUNDATION

ದಿನಾಂಕ:05.03.2023 ರಂದು, ತುಮಕೂರು ಸ್ಮಾರ್ಟ್ ಸಿಟಿ ಕಾಮಗಾರಿಗಳ ಲೋಕಾರ್ಪಣೆ ಮಾಡುವ ಸಮಾರಂಭದಲ್ಲಿ, ಮಾನ್ಯ ಮುಖ್ಯಮಂತ್ರಿಯªರಾದ ಶ್ರೀ ಬಸವರಾಜ್ ಬೊಮ್ಮಾಯಿರವರು ಈ ಕೆಳಕಂಡ ವಿಚಾರಗಳ ಬಗ್ಗೆ ಬಹಿರಂಗ ಘೋಷಣೆ ಮಾಡಲಿದ್ದಾರೆ ಎಂಬ ಆಶಾ ಭಾವನೆ ನನ್ನದಾಗಿದೆ.

ತುಮಕೂರು ನಗರ ಮಾತ್ರವಲ್ಲರಾಜ್ಯದ ಪ್ರತಿಯೊಂದು ಗ್ರಾಮಗಳು 2047 ರೊಳಗೆ ಸ್ಮಾರ್ಟ್ ವಿಲೇಜ್ ಆಗಬೇಕು.

  ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರ ಜೈ ಅನುಸಂಧಾನ್ ಘೋಷಣೆ ಮತ್ತು ಮಾನ್ಯ ಮುಖ್ಯ ಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿರವರವರಾದ ತಾವು ಘೋಷಣೆ ಮಾಡಿರುವ  ಮುಂದಿನ ಯುಗಜ್ಞಾನ ಯುಗ  ಪ್ರೇರಣೆಯೊಂದಿಗೆ, ರಾಜ್ಯ ದಿಶಾ ಸಮಿತಿ  ಕರ್ನಾಟಕ ರಾಜ್ಯ ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ಪಡೆಯಲು ಸ್ಟ್ರಾಟಜಿ ಸಿದ್ಧಪಡಿಸುತ್ತಿದೆ ಎಂದು ತಿಳಿಸಲು ಹರ್ಷಿಸುತ್ತೇನೆ.

ರಾಜ್ಯದ ಸರ್ವಪಕ್ಷಗಳ ನೇತೃತ್ವ ದಲ್ಲಿ ಹಾಗೂ ಮಾಜಿ ಮುಖ್ಯಮಂತ್ರಿಯವರ ಮಾರ್ಗದರ್ಶನ ದಲ್ಲಿ, ಎಲ್ಲಾ ವರ್ಗದ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಇಂಡಿಯಾ @ 100 ಅಂಗವಾಗಿ ನವ ಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ಸಿದ್ಧಪಡಿಸಿ, ಕೇಂದ್ರ ಮತ್ತು ಸರ್ಕಾರಗಳಿಗೆ ಸಲ್ಲಿಸಲು ನಮ್ಮ ಸಂಸ್ಥೆ ಚಿಂತನೆ ನಡೆಸಲಾಗಿದೆ.

 ಕರ್ನಾಟಕ ರಾಜ್ಯದ 2023-24 ನೇ ಸಾಲಿನ ಆಯವ್ಯಯದ ‘247 ನೇ ಅಂಶ: ನೀತಿ ಆಯೋಗದ ಮಾದರಿಯಂತೆ, ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗವನ್ನು ಕರ್ನಾಟಕ ರಾಜ್ಯ ಪರಿವರ್ತನಾ ಸಂಸ್ಥೆ ಎಂದು ಪುನರ್ ರಚಿಸಲಾಗಿದ್ದು, ಈ ಸಂಸ್ಥೆಯ ಮೂಲಕ ನವ ಭಾರತಕ್ಕಾಗಿ ನವ ಕರ್ನಾಟಕ ನಿರ್ಮಾಣಕ್ಕೆ ವಿನೂತನ ಪರಿಹಾರಗಳನ್ನು ರೂಪಿಸಲಾಗುವುದು.’ ಎಂಬ ಅಂಶಕ್ಕೆ ಪೂರಕವಾಗಿ,

ಶ್ರೀ ಬಸವರಾಜ್ ಬೊಮ್ಮಾಯಿರವರು, ಯೋಜನಾ ಇಲಾಖೆಯ ಸಚಿವರಾದ ಶ್ರೀ ಮುನಿರತ್ನರವರು ಮತ್ತು ರಾಜ್ಯ ದಿಶಾ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಯೋಜನಾ ಇಲಾಖೆಯ ಅಪರಮುಖ್ಯ ಕಾರ್ಯದರ್ಶಿಯವರಾದ ಶ್ರಿಮತಿ ಶಾಲಿನಿ ರಜನೀಶ್ ರವರು, ರಾಜ್ಯಾಧ್ಯಾಂತ ಬೃಹತ್ ಆಂದೋಲನಕ್ಕೆ ಚಾಲನೆ ನೀಡಬಹುದು.

ದೇಶದಲ್ಲಿಯೇ ಮಾದರಿ, ಜನಸ್ನೇಹಿ ಮತ್ತು ಪಾರದರ್ಶಕತೆಗೆ ಒತ್ತು ನೀಡುವ ವಿಫುಲ ಅವಕಾಶಗಳಿವೆ.

1.ರಾಜ್ಯ ಮಟ್ಟದ ದಿಶಾ ಸಮಿತಿ

ಮೂಲ ಉದ್ದೇಶಗಳ ಜೊತೆಗೆ ಕೆಳಕಂಡ ವಿಷಯಗಳ ಹೊಣೆಗಾರಿಕೆ ನೀಡುವುದು ಸೂಕ್ತವಾಗಿದೆ.

1.ಕೇಂದ್ರ ಸರ್ಕಾರಗಳ ಅನುದಾನ ಪ್ರಗತಿ ಪರಿಶೀಲನೆ.

2.ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಹೆಚ್ಚಿನ ಅನುದಾನ ತರಲು ಸ್ಟ್ರಾಟಜಿ.

3.ಇಂಡಿಯಾ @ 100 ಅಂಗವಾಗಿ ನವಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ಪ್ರಗತಿ ಪರಿಶೀಲನೆ ಹೊಣೆಗಾರಿಕೆ.

4.ಸೆಂಟರ್ ಫಾರ್ ಎಕ್ಸಲೆನ್ಸ್ ಕ್ಯಾಪ್ಚರಿಂಗ್ ಗೌರ್ವನಮೆಂಟ್ ಆಪ್ ಇಂಡಿಯಾ ಫಂಡ್ಸ್ ಸ್ಥಾಪನೆ.

5.ಕೇಂದ್ರ ಸರ್ಕಾರದಿಂದ ಬಂದಿರುವ ಎಲ್ಲಾ ಇಲಖೆಗಳ ಪತ್ರಗಳ ಸಂಗ್ರಹ.

6.ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಇಲಾಖಾವಾರು, ಯೋಜನಾವಾರು ಯಟಿಲೈಸೆನ್(ಯುಸಿ) ಸಂಗ್ರಹ.

7.ಲೋಕಸಭಾ ಕ್ಷೇತ್ರಕ್ಕೊಂದು ದಿಶಾ ಸಮಿತಿ,

8.28 ಲೋಕಸಭಾ  ಕ್ಷೇತ್ರಗಳ ದಿಶಾ ಮೀಟಿಂಗ್ ಟೆಂಪ್ಲೇಟ್.

2.ಸೆಂಟರ್ ಫಾರ್ ಎಕ್ಸಲೆನ್ಸ್ ಕ್ಯಾಪ್ಚರಿಂಗ್ ಗೌರ್ವನಮೆಂಟ್ ಆಪ್ ಇಂಡಿಯಾ ಫಂಡ್ಸ್

1947 ರಿಂದ 2022 ರವರೆಗೂ ಕೇಂದ್ರ ಸರ್ಕಾರದ ಎಲ್ಲಾ ಮಾಜಿ ಪ್ರಧಾನ ಮಂತ್ರಿಯವರ ಅವಧಿಯ ಮತ್ತು ಕರ್ನಾಟಕ ರಾಜ್ಯದ ಎಲ್ಲಾ ಮಾಜಿ ಮುಖ್ಯಮಂತ್ರಿಯವರ ಅವಧಿಯ, ಪ್ರತಿಯೊಂದು ಇಲಾಖೆಯ, ಪ್ರತಿಯೊಂದು ಯೋಜನೆಯ ಮೌಲ್ಯಮಾಪನ ಮಾಡಲು ಹಾಗೂ ಮುಂದಿನ 25 ವರ್ಷಗಳ ಅಗತ್ಯವಿರುವ ಯೋಜನೆಗಳ ಜಾರಿಗೆ ಶ್ರಮಿಸುವುದು ಅಗತ್ಯವಾಗಿದೆ.

224 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿಯೂ, ಅಗತ್ಯಕ್ಕೆ ಅನುಗುಣವಾಗಿ, ಕೇಂದ್ರ ಸರ್ಕಾರದ ಯಾವ ಯೋಜನೆಯ ಅನುದಾನ ತರಬೇಕು ಎಂಬ ವರದಿ ಸಿದ್ಧಪಡಿಸಲು, ತುಮಕೂರು ಸ್ಮಾರ್ಟ್  ಸಿಟಿ ವತಿಯಿಂದ, ಮಾದರಿಯಾಗಿ ನಿರ್ಮಾಣ ಮಾಡಿರುವ, ಈ ಕೆಳಕಂಡ ಮೂರು ಬೃಹತ್ ಕಟ್ಟಡಗಳನ್ನು ತಾತ್ಕಾಲಿಕವಾಗಿ ಬಳಸಿಕೊಳ್ಳ ಬಹುದಾಗಿದೆ. ನಂತರ ನೂತನ ಕ್ಯಾಂಪಸ್ ಮಾಡಬಹುದಾಗಿದೆ.

1.ತುಮಕೂರು ಗ್ರಂಥಾಲಯ: ಡಿಜಿಟಲ್ ಗ್ರಂಥಾಲಯ, ಫಿಸಿಕಲ್ ಗ್ರಂಥಾಲಯ, ಹ್ಯೂಮನ್ ಗ್ರಂಥಾಲಯ ವಾಗಿ ಬಳಸಿಕೊಳ್ಳ ಬಹುದು.

2.ತುಮಕೂರು ಇಂಟಿಗ್ರೇಟೆಡ್ ಕಮ್ಯಾಂಡ್ ಕಂಟ್ರೋಲ್ ಸೆಂಟರ್: 2047 ಡಾಟಾ ಸೆಂಟರ್ ಆಗಿ ಬಳಸಿಕೊಳ್ಳಬಹುದು.

3.ತುಮಕೂರು ಮಹಾತ್ಮಗಾಂಧಿ ಕ್ರೀಡಾಂಗಣ:  ರಾಜ್ಯದ 31 ಜಿಲ್ಲೆಗಳ ಪರಿಣಿತರು ಉಳಿದು ಕೊಂಡು ವಿಷಯವಾರು ಚರ್ಚೆ ಮಾಡಲು ಬಳಸಿಕೊಳ್ಳಬಹುದು.

4.1947 ರಿಂದ 2023 ವರೆಗಿನ ಸರ್ವಪಕ್ಷಗಳ ಎಲ್ಲಾ ಚುನಾವಣಾ ಪ್ರಣಾಳಿಕೆಗಳ ಸಂಗ್ರಹ.

5.1947 ರಿಂದ 2023 ವರೆಗಿನ  ಕೇಂದ್ರ ಮತ್ತು ರಾಜ್ಯಸರ್ಕಾರಗಳ ಎಲ್ಲಾ  ಆಯವ್ಯಯ ಪುಸ್ತಕಗಳ ಸಂಗ್ರಹ.

6.1947 ರಿಂದ 2023 ವರೆಗಿನ ಹುಟ್ಟುವ ಮಗುವಿನಿಂದ ಆರಂಭಿಸಿ ಸಾಯುವವರೆಗೂ ಇರುವ ಯೋಜನೆಗಳ ವರ್ಗವಾರು ಮಾಹಿತಿ ಸಗ್ರಹ.

7.ಇಲಾಖಾವಾರು ಪರಿಣಿತರ ವರದಿಗಳ ಸಂಗ್ರಹ.

3.ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ

ಮೂಲ ಉದ್ದೇಶಗಳ ಜೊತೆಗೆ ಕೆಳಕಂಡ ವಿಷಯಗಳ ಹೊಣೆಗಾರಿಕೆ ನೀಡುವುದು ಸೂಕ್ತವಾಗಿದೆ.

1.ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ ಮೌಲ್ಯ ಮಾಪನ.

2.ಅಭಿವೃದ್ಧಿ ಡಿಜಿಟಲ್ ವಿಲೇಜ್ ಮ್ಯಾಪ್ ಮೌಲ್ಯಮಾಪನ ಹಾಗೂ ರ್ಯಾಂಕಿಂಗ್: 1947 ರಿಂದ ಆಯಾ ಗ್ರಾಮಕ್ಕೆ ಆಗಿರುವ ಕೆಲಸಗಳ ಬಗ್ಗೆ ಮತ್ತು ಮುಂದಿನ 25 ವರ್ಷಗಳಲ್ಲಿ ಆಗಬೇಕಾಗಿರುವ ಕೆಲಸಗಳ ಡಿಜಿಟಲ್ ನಕ್ಷೆ ಮೌಲ್ಯಮಾಪನ.

3.1947 ರಿಂದ ಪ್ರತಿ ವ್ಯಕ್ತಿ/ಕುಟುಂಬವಾರು ನೀಡಿರುವ ಸವಲತ್ತುಗಳು ಮತ್ತು ಮುಂದಿನ 25 ವರ್ಷಗಳಲ್ಲಿ ಅಗತ್ಯವಿರುವ ಸವಲತ್ತುಗಳ ಡಿಜಿಟಲ್ ನಕ್ಷೆ ಮೌಲ್ಯಮಾಪನ.

4.ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿ ಮೌಲ್ಯಮಾಪನ ಹಾಗೂ ರ್ಯಾಂಕಿಗ್.

5.224 ವಿಧಾನಸಭಾ ಕ್ಷೇತ್ರಗಳ ಕೆಡಿಪಿ ಮೀಟಿಂಗ್ ಟೆಂಪ್ಲೇಟ್.

6.ಜಿಲ್ಲಾ/ಲೋಕಸಭಾ ಕ್ಷೇತ್ರ ಮಟ್ಟದ ದಿಶಾ ಸಮಿತಿಗಳ ಅಭಿವೃದ್ಧಿ ಮೌಲ್ಯಮಾಪನ ಹಾಗೂ ರ್ಯಾಂಕಿಗ್.

7.ನಗರ ಶಾಸಕರ ಅಧ್ಯಕ್ಷತೆಯಲ್ಲಿ ಕೆಡಿಪಿ ಸಮಿತಿ.

4.ರಾಜ್ಯಾಧ್ಯಾಂತ ವಿದ್ಯಾರ್ಥಿವಿದ್ಯಾರ್ಥಿನಿ ಶಕ್ತಿ ಬಳಸಿಕೊಳ್ಳಲು ಯೋಚನೆ.

ಮೂಲ ಉದ್ದೇಶಗಳ ಜೊತೆಗೆ 2047À ವಿಷಯಗಳ ಹೊಣೆಗಾರಿಕೆ ನೀಡುವುದು ಸೂಕ್ತವಾಗಿದೆ.

ರಾಜ್ಯದ ಪ್ರತಿಯೊಂದು ಗ್ರಾಮದಲ್ಲಿರುವ ಎಲ್ಲಾ ಹಂತದ ವಿಧ್ಯಾರ್ಥಿಗಳು, ಆಯಾ ಗ್ರಾಮದ ಅಭಿವೃದ್ಧಿ ಡಿಜಿಟಲ್ ಮ್ಯಾಪ್ ಮತ್ತು ಊರಿಗೊಂದು ಪುಸ್ತಕ ಮಾಡಲು ಶ್ರಮಿಸಲು ಸೂಕ್ತ ಆದೇಶ ಮಾಡುವುದು ಅಗತ್ಯವಾಗಿದೆ. 

ಕೆಳಕಂಡ ಘಟಕಗಳಿಗೆ ವ್ಯಾಪಕ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. 1947 ರಿಂದ 2023 ರವರೆಗಿನ ಎಲ್ಲಾ ಯೋಜನೆಗಳ ಮಾಹಿತಿಗಳ ಹ್ಯಾಂಡ್ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಸರಬರಾಜು ಮಾಡುವುದು.

1.ಎನ್.ಎಸ್.ಎಸ್.

2.ಇಕೋಕ್ಲಬ್

3.ನ್ಯಾಷನಲ್ ಟೂರಿಸಂ ಯೂತ್ ಕ್ಲಬ್.

4.ಇಂಜಿನಿಯರಿಂಗ್ ಕಾಲೇಜುಗಳ ಆಕ್ಟಿವಿಟಿ ಪಾಯಿಂಟ್ಸ್.

5.ಎಲ್ಲಾ ಕಾಲೇಜು ವಿದ್ಯಾರ್ಥಿಗಳ ಕೈಗೊಳ್ಳುವ ಪ್ರಾಜೆಕ್ಟ್ ವರ್ಕ್.

5.ವಿಶ್ವವಿದ್ಯಾನಿಲಯಗಳಲ್ಲಿರುವ ಅಧ್ಯಯನ ಪೀಠಗಳ ಬಳಕೆ.

ಮೂಲ ಉದ್ದೇಶಗಳ ಜೊತೆಗೆ ಕೆಳಕಂಡ ವಿಷಯಗಳ ಹೊಣೆಗಾರಿಕೆ ನೀಡುವುದು ಸೂಕ್ತವಾಗಿದೆ.

 ರಾಜ್ಯದಲ್ಲಿರುವ ಎಲ್ಲಾ ವಿಶ್ವ ವಿದ್ಯಾನಿಲಯಗಳಲ್ಲಿರುವ ಅಧ್ಯಯನ ಪೀಠಗಳು ಮತ್ತು ಸಂಶೋದನಾ ಸಂಸ್ಥೆಗಳಿಗೂ ಒಂದೊಂದು ಹೋಣೆಗಾರಿಕೆ ನೀಡಬಹುದಾಗಿದೆ. ಹಾಲಿ ಇರುವ ಅಧ್ಯಯನ ಪೀಠಗಳು ಸೇರಿದಂತೆ. 500 ಅಧ್ಯಯನ ಪೀಠಗಳ ಸ್ಥಾಪನೆಯಾಗ ಬೇಕು. ಅವರವರ ಕಚೇರಿಯಲ್ಲಿ ಆಗಿರುವ ಪ್ರಗತಿ ಮತ್ತು ಕಡತಗಳ ಪೆಂಡಿಗ್ ಬಗ್ಗೆ ಮೂರು ತಿಂಗಳಿಗೊಮ್ಮೆ RANKING ವರದಿ ಬಿಡುಗಡೆ ಮಾಡುತ್ತಿರ ಬೇಕು.

1.ಕರ್ನಾಟಕ ರಾಜ್ಯದಲ್ಲಿರುವ ವಿಧಾನಸಭಾ ಸದಸ್ಯರು-225

2.ಕರ್ನಾಟಕ ರಾಜ್ಯದಲ್ಲಿರುವ ವಿಧಾನಪರಿಷತ್ ಸದಸ್ಯರು-75

3.ಕರ್ನಾಟಕ ರಾಜ್ಯದ ಲೋಕಸಭಾ ಸದಸ್ಯರು-28

4.ಕರ್ನಾಟಕ ರಾಜ್ಯದ ರಾಜ್ಯಸಭಾ ಸದಸ್ಯರು-12

5.ಕರ್ನಾಟಕ ರಾಜ್ಯದ ನಾಮನಿರ್ದೇಶಿತ ರಾಜ್ಯಸಭಾ ಸದಸ್ಯರು-1

6.ದೆಹಲಿ ಪ್ರತಿನಿಧಿ-1

7.31 ಜಿಲ್ಲೆಗಳ ಜಿಲ್ಲಾಧಿಕಾರಿಗಳು-31

8.31 ಜಿಲ್ಲೆಗಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು-31

9.31 ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರು-31

10.ಪ್ರಧಾನ ಮಂತ್ರಿ ಕಚೇರಿ-1

11.ಮುಖ್ಯ ಮಂತ್ರಿ ಕಚೇರಿ-1

12.ನೀತಿ ಆಯೋಗ ಕೇಂದ್ರ ಸರ್ಕಾರ-1

13.ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಸಚಿವಾಲಯಗಳ ಕ್ಲಸ್ಟರ್-62

6.ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿ

ಮೂಲ ಉದ್ದೇಶಗಳ ಜೊತೆಗೆ ಕೆಳಕಂಡ ವಿಷಯಗಳ ಹೊಣೆಗಾರಿಕೆ ನೀಡುವುದು ಸೂಕ್ತವಾಗಿದೆ.

1.ಗ್ರಾಮ ಪಂಚಾಯತ್ ಮತ್ತು ನಗರ ಸ್ತಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿ ಮೂಲಕ, ಪರಿಣಿತರ ನಾಲೆಡ್ಜ್ ಬ್ಯಾಂಕ್ ಮಾಡಿ, ಉತ್ತಮ ಸಲಹೆ ನೀಡುವವರೆಗೆ ಜ್ಞಾನದಾನ ಪ್ರಶಸ್ತಿ ನೀಡುವುದು.

2.ಊರಿಗೊಂದು ಪುಸ್ತಕ.

3.ಊರಿಗೊಂದು ಥೀಮ್ ಪಾರ್ಕ್

4.ವಿಧಾನಸಭಾ ಕ್ಷೇತ್ರಕ್ಕೊಂದು ಥೀಮ್ ಪಾರ್ಕ್

5.ಲೋಕಸಭಾ ಕ್ಷೇತ್ರಕ್ಕೊಂದು ಥೀಮ್ ಪಾರ್ಕ್

6.ವಿಧಾನಪರಿಷತ್ ಸದಸ್ಯರ ವ್ಯಾಪ್ತಿ ಥೀಮ್ ಪಾರ್ಕ್

7.ರಾಜ್ಯಸಭಾ ಸದಸ್ಯರ ವ್ಯಾಪ್ತಿ ಥೀಮ್ ಪಾರ್ಕ್

8.ದೆಹಲಿ ಪ್ರತಿನಿಧಿ ಥೀಮ್ ಪಾರ್ಕ್

7.ಒಂದು ರಾಜ್ಯಒಂದು ಡಾಟಾ ಮತ್ತು ಒಂದು ರಾಜ್ಯಒಂದು ನಕ್ಷೆ.

ರಾಜ್ಯದ್ಯಾಂತ ಬೇಸ್ ಮ್ಯಾಪ್ ಮತ್ತು ಬೇಸ್ ಡಾಟಾ ಒಂದೇ ಆಗಿರಬೇಕು. ವಿದ್ಯಾಥಿಗಳು, ಯಾವುದೇ ಗ್ರಾಮದ ನಕ್ಷೆ ಅಥವಾ ಡಾಟಾ ಕೇಳಿದರೂ ತಕ್ಷಣ ಆನ್ ಲೈನ್ ನಲ್ಲಿರುವ ಮಾಹಿತಿಗಳನ್ನು ಉಚಿತವಾಗಿ ನೀಡಬೇಕು. ತಾಜಾ ಡಾಟಾ ಅಪ್ ಡೇಟ್ ಮಾಡಲು ಸ್ಥಳೀಯ ಸಂಸ್ಥೆಗಳಿಗೆ ಖಡಕ್ ಆದೇಶ ಮಾಡಬೇಕು. ಈ ಕೆಳಕಂಡ ಸಂಸ್ಥೆಗಳ ಕನ್ವರ್ಜೆನ್ಸ್ ಮಾಡಬೇಕು.

1.ಕರ್ನಾಟಕ ಸ್ಟೇಟ್ ರಿಮೋಟ್ ಸೆನ್ಸಿಂಗ್ ಸೆಂಟರ್

2.ಎನ್.ಆರ್.ಡಿ.ಎಂ.ಎಸ್.

3.ಎನ್.ಐ.ಸಿ

4.ಕೆ.ಎಂ.ಡಿ.ಎಸ್

5.ಮಾಹಿತಿ ಕಣಜ.

6.ಡಾಟಾ ಲೇಕ್.

7.ಕುಟುಂಬ

8.ಸ್ಮಾರ್ಟ್ ಸಿಟಿಗಳ ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸೆಂಟರ್.

9.ಇಲಾಖಾವಾರು ಇರುವ ಡಾಟಾ ಆಪರೇಟರ್.

8.ಸೋಶಿಯಲ್ ಮೀಡಿಯಾ

1.2047 ಇ ಪೇಪರ್.

2.2047 ಯೂ ಟ್ಯೂಬ್ ಚಾನಲ್.

3.2047 ಹೆಸರಿನಲ್ಲಿ ಎಲ್ಲಾ ವಿಧವಾದ ಸೋಶಿಯಲ್ ಮೀಡಿಯಾಗಳ ಮೂಲಕ ಪ್ರತಿ ಕ್ಷಣದ ಮಾಹಿತಿ ಅಫ್ ಡೇಟ್ ಮಾಡುತ್ತಿರಬೇಕು.

4.ಎಲ್ಲಾ ಮಾಹಿತಿಗಳು ಒಂದೇ ರೂಪ್‍ನಲ್ಲಿ ದೊರೆಯುವಂತ ವೆಬ್ ಪೋರ್ಟಲ್.

9.ಉದ್ಯೋಗ ಮಾನಿಟರಿಂಗ್ ಸೆಲ್.

1.ಕರ್ನಾಟಕ ರಾಜ್ಯದಲ್ಲಿ ಯಾರೊಬ್ಬರೂ ನಿರುದ್ಯೋಗಿಯಾಗಿರ ಬಾರದು,

2.ಪ್ರತಿಯೊಬ್ಬರೂ ಕೃಷಿ, ಕಾರ್ಮಿಕ, ಸ್ವಯಂ ಉದ್ಯೋಗಿ, ಖಾಸಗಿ ಉದ್ಯೋಗಿ ಅಥವಾ  ಹಣೆ ಬರವಿದ್ದವರೂ ಸರ್ಕಾರಿ ಉದ್ಯೋಗಿಯಾಗಿರ ಬೇಕು.

3.ಪ್ರತಿಯೊಬ್ಬರೂ ದಿನದ 24 ಗಂಟೆಯಲ್ಲಿ 8 ಗಂಟೆ ನಿರ್ಧಿಷ್ಠ ಕೆಲಸ,

4.ಪ್ರತಿಯೊಬ್ಬರೂ ದಿನದ 24 ಗಂಟೆಯಲ್ಲಿ 4 ಗಂಟೆ ಇನ್ನೊಂದು ಉಪ ಕಸುಬು/ಉದ್ಯೋಗ,

5.ಪ್ರತಿಯೊಬ್ಬರೂ ದಿನದ 24 ಗಂಟೆಯಲ್ಲಿ 2 ಗಂಟೆ ಸಮಾಜ ಸೇವೆ

6.ಪ್ರತಿಯೊಬ್ಬರೂ ದಿನದ 24 ಗಂಟೆಯಲ್ಲಿ 10 ಗಂಟೆ ವಿಶ್ರಾಂತಿ, ಯೋಗ, ಕ್ರೀಡೆ, ಚಟ ಧ್ಯಾನ ಇತ್ಯಾದಿಗೆ ಸೀಮಿತ ಗೊಳಿಸಬೇಕು.

7.ಸಮಾಜ ಸೇವೆ ಗುರುತಿಸಿ, ಸಂಭಾವನೆ ಮತ್ತು ಗೌರವ ಪುರಸ್ಕಾರ ನೀಡಬೇಕು.

8.ಮೈಗಳ್ಳರಾದರೆ ‘ವಿಶ್ವಗುರು ‘ಕನಸಿನ ಮಾತು.

9.ನಿರುದ್ಯೋಗಿಯಾಗಿ ಯಾರೊಬ್ಬರೂ ಇರಬಾರದು ಸರ್ಕಾರಿ ಕೆಲಸವೊಂದನ್ನು ಬಿಟ್ಟು ಉಳಿದ ಯಾವುದೇ ನೆರವು ಕೇಳಿದರೂ ಸಿಗುವಂತಾಗಬೇಕು.

10.ರಾಜ್ಯದ ಪ್ರತಿಯೊಬ್ಬರ ಸಮಯ ಬಳಕೆ/ಉದ್ಯೋಗದ ಬಗ್ಗೆ ಡಿಜಿಟಲ್ ಮಾನಿಟರಿಂಗ್ ವ್ಯವಸ್ಥೆ ಇರಬೇಕು. ನಿರ್ಧಿಷ್ಟ ಹೊಣೆಗಾರಿಕೆ ನಿರ್ವಹಿಸದೇ ಇರುವವರಿಗೆ ಶಿಕ್ಷೆ ಆಗಬೇಕು.

11.ಡಾ.ಸರೋಜಿನಿ ಮಹಿಷಿ ವರದಿ ಜಾರಿ, ಅದೇ ಮಾದರಿಯಲ್ಲಿ ಕೇಂದ್ರ ಸರ್ಕಾರದಲ್ಲೂ ಕಾನೂನು ಜಾರಿ.

12.ಭೂ ಸಂತ್ರಸ್ಥರಿಗೆ ಅದೇ ಯೋಜನೆಯಡಿಯಲ್ಲಿ ಉದ್ಯೋಗ ಮೀಸಲಾತಿ.