4th February 2025
Share

TUMAKURU:SHAKTHIPEETA FOUNDATION

ದಿನಾಂಕ:05.03.2023 ರಂದು ತುಮಕೂರಿನಲ್ಲಿ ನಡೆದ ಸ್ಮಾರ್ಟ್ ಸಿಟಿ ಕಾಮಗಾರಿಗಳ ಲೋಕಾರ್ಪಣೆ ಸಮಯದಲ್ಲಿ, ರಾಜ್ಯದ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು ಹೇಳಿದ ವಾಕ್ಯ, ತುಮಕೂರು ಬೆಂಗಳೂರಿನ ನ್ಯಾಚುರಲ್ ಉಪನಗರವಾಗಿ ನಿರ್ಮಾಣವಾಗಿದೆ.

ತುಮಕೂರಿಗರೇ, ಅಧಿಕೃತ ಉಪನಗರವಾಗ ಬೇಕಾದರೆ ಮುಂದೆ ಏನೇನು ಮಾಡಬೇಕು ಪಟ್ಟಿ ಆರಂಭಿಸೋಣ,

  1. ಮುಂಗಡ ಪತ್ರದಲ್ಲಿ ಮಂಡಿಸಿದ್ಧ ಸರ್ಕಾರಿ ಮೆಡಿಕಲ್ ಕಾಲೇಜು ಕಡತ ಏನಾಯಿತು?
  2. ತುಮಕೂರಿನ ವಸಂತನಗರದವರಿಗೂ ಮೆಟ್ರೋ ಸಮೀಕ್ಷೆ ಕಡತ ಏನಾಯಿತು?
  3. ತುಮಕೂರು ಇಂಟರ್ ನ್ಯಾಷನಲ್ ಏರ್ ಪೋರ್ಟ್ ಕಡತ ಏನಾಯಿತು?
  4. ತುಮಕೂರು ನಗರಕ್ಕೆ ಜಯದೇವ ಆಸ್ಪತ್ರೆ ಮಂಜೂರು ಮಾಡುತ್ತೇವೆ ಎಂದು ಹೇಳಿದ ಮಾತು ಯಾರಿಗೆ ನೆನಪಿದೆ?
  5. ಮುಂಗಡ ಪತ್ರದಲ್ಲಿ ಮಂಡಿಸಿದ್ದ ಕ್ರೀಡಾ ವಿವಿ ಕಡತ ಏನಾಯಿತು?
  6. ಮುಂಗಡ ಪತ್ರದಲ್ಲಿ ಮಂಡಿಸಿದ್ದ ಕ್ರೀಡಾ ಕ್ಲಸ್ಟರ್ ಕಡತ ಏನಾಯಿತು?
  7. ಗೃಹ/ಪೋಲೀಸ್ ವಿಶ್ವ ವಿದ್ಯಾಲಯ ಕಡತ ಏನಾಯಿತು?
  8. ಕೋಕೋನಟ್ ಸ್ಪೆಷಲ್ ಎಕನಾಮಿಕ್ ಕಡತ ಏನಾಯಿತು?
  9. ಸೋರುತ್ತಿರುವ ತುಮಕೂರು ಜಿಲ್ಲಾಧಿಕಾರಿ ಕಚೇರಿ ನಿರ್ಮಾಣದ ಕಡತ ಏನಾಯಿತು?

ತಮ್ಮ ಕನಸಿನ ಬೇಡಿಕೆಗಳನ್ನು ಮುಂದುವರೆಸುತ್ತಿರಾ ಓದುಗರೇ? ಅಧಿಕೃತ ಉಪನಗರವಾಗಬೇಕಾದರೆ, ಇನ್ನೂ ಯಾವ ಯೋಜನೆಗಳು ತುಮಕೂರಿಗೆ ಮಂಜೂರಾಗ ಬೇಕು.

ಮುಂದಿನ ವಿಧಾನಸಭಾ ಕ್ಷೇತ್ರದ ಚುನಾವಣೆಗೆ 11 ವಿಧಾನಸಭಾ ಕ್ಷೇತ್ರವಾರು, ಎಲ್ಲಾ ರಾಜಕೀಯ ಪಕ್ಷಗಳು, ಈ ಪಟ್ಟಿಯನ್ನು ತಮ್ಮ ತಮ್ಮ ಪ್ರಣಾಳಿಕೆಯಲ್ಲಿ ಸೇರ್ಪಡೆ ಮಾಡಲು ಆಗ್ರಹ ಮಾಡೋಣ.