9th January 2025
Share

TUMAKURU:SHAKTHIPEETA FOUNDATION

ಪ್ರೋ.ಶ್ರೀ ಮುಜಾಫರ್ ಹೆಚ್.ಅಸ್ಸಾದಿ ರವರು.

ಕುಲಪತಿ(ಪ್ರ).

ಮೈಸೂರು ವಿಶ್ವ ವಿದ್ಯಾನಿಲಯ

ಮಾನ್ಯರೇ,

ವಿಷಯ: ಇಂಡಿಯಾ @ 100  ಅಂಗವಾಗಿ ನವ ಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ಕಾರ್ಯಕ್ರಮ ರೂಪಿಸಿರುವ ಬಗ್ಗೆ.

ನನ್ನ ಮೌಖಿಕ ಮನವಿಗೆ ಸ್ಪಂಧಿಸಿ, ದಿನಾಂಕ:09.03.2023 ರಂದು ಮೈಸೂರು ವಿಶ್ವವಿದ್ಯಾಲಯ   ನಮ್ಮ ಕರ್ನಾಟಕ ರಾಜ್ಯ  ದೇಶದಲ್ಲಿಯೇ ಅಭಿವೃದ್ಧಿ ಹೊಂದಿದ ರಾಜ್ಯವಾಗಬೇಕಾದರೆ, ಏನೇನು ಕಾರ್ಯತಂತ್ರ ರೂಪಿಸಬೇಕು ಎಂಬ ಬಗ್ಗೆ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸುವ ಮೂಲಕ ಇಂಡಿಯಾ @ 100  ಅಂಗವಾಗಿ ನವ ಕರ್ನಾಟಕ ವಿಷನ್ ಡಾಕ್ಯುಮೆಂಟ್-2047’ ಕ್ಕೆ  ಚಾಲನೆ ನೀಡಿರುವುದಕ್ಕೆ ಅಭಿನಂದನೆಗಳು.

ಉಪನ್ಯಾಸ ನೀಡಲು ರಾಜ್ಯ ದಿಶಾ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಯೋಜನಾ ಇಲಾಖೆಯ ಅಪರಮುಖ್ಯ ಕಾರ್ಯದರ್ಶಿಯವರಾದ ಶ್ರೀಮತಿ ಶಾಲಿನಿ ರಜನೀಶ್ ರವರನ್ನು ಆಹ್ವಾನಿಸಿರುವುದು ನಿಜಕ್ಕೂ ಒಳ್ಳೆಯ ನಿರ್ಧಾರ.

ಶ್ರೀಮತಿ ಶಾಲಿನಿ ರಜನೀಶ್ ಅವರು ಆನ್ ಲೈನ್ ಗಿಂತ, ನೇರವಾಗಿ ಬರಲಿ ಎಂಬುದು ವಿದ್ಯಾರ್ಥಿಗಳ ಬಯಕೆ ಆದರೇ ಅವರ ವೇಳಾಪಟ್ಟಿ ಹೇಗಿರುತ್ತದೆಯೋ ಅವರಿಗೆ ಗೊತ್ತು.

ಶಕ್ತಿಪೀಠ ಫೌಂಡೇಷನ್ ಶಕ್ತಿಪೀಠ, ಜಲಪೀಠ ಮತ್ತು ಅಭಿವೃದ್ಧಿ ಪೀಠ ಎಂಬ ಮೂರು ವಿಭಾಗಗಳನ್ನು ತೆರೆದು ಸರ್ಕಾರಗಳ ಗಮನ ಸೆಳೆಯುವುದರ ಜೊತೆಗೆ ನಿರಂತರವಾಗಿ ಜನಜಾಗೃತಿ ಮೂಡಿಸುತ್ತಿದೆ.

ಕರ್ನಾಟಕ ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯನಾಗಿ ಕೇಂದ್ರ ಸರ್ಕಾರದಿಂದ ನಮ್ಮ ರಾಜ್ಯ ಹೆಚ್ಚಿಗೆ ಅನುದಾನ ತರಲು ಸ್ಟ್ರಾಟಜಿ ಸಿದ್ಧಪಡಿಸುವ ಜೊತೆಗೆ, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ ಒದಗಿಸಲು ಇಂಡಿಯಾ @ 100  ಅಂಗವಾಗಿ ನವ ಕರ್ನಾಟಕ ವಿಷನ್ ಡಾಕ್ಯುಮೆಂಟ್-2047’  ಒಳ್ಳೆಯ ದಿಕ್ಸೂಚಿ ಆಗಲಿದೆ.

ಮೈಸೂರಿನಲ್ಲಿ ಈಗಾಗಲೇ ಆಯೋಜಿಸಿದ್ಧ ಕಾರ್ಯಕ್ರಮ, ವಿವಿಧ ಗಣ್ಯರೊಂದಿಗೆ ನಡೆಸಿದ ಸಮಾಲೋಚನೆ ಗಮನಿಸಿದರೆ, ಮೈಸೂರು ಮೀಟಿಂಗ್ ಯಾವುದಾದರೂ ದಾಖಲೆ ಆಗುವ ರೀತಿ ಕಾಯಕ್ರಮ ರೂಪಿಸಲು ಪೂರ್ವಭಾವಿ ಸಭೆಯಂತೆ ಇರಲಿದೆ ಎಂಬುದು ನನ್ನ ಅನಿಸಿಕೆ.

ಮೈಸೂರಿನ ವಿಶೇಷತೆಯೊಂದಿಗೆ, ಮೈಸೂರಿನ ಚಾಮುಂಡೇಶ್ವರಿ ದೇವಿಯ ಆಶೀರ್ವಾದೊಂದಿಗೆ, ಮೈಸೂರಿನ ರಾಜ ಮನೆತನದ ಹಿರಿಮೆಯೊಂದಿಗೆ ಒಂದು ದಾಖಲೆ ನಿರ್ಮಿಸುವ ಆಶಾಭಾವನೆ ನನ್ನದಾಗಿದೆ. ಆಸಕ್ತ ಎಲ್ಲರ ಸಹಭಾಗಿತ್ವಕ್ಕೆ ಆಲೋಚನೆ ಮಾಡಲಾಗಿದೆ.

ಉಪನ್ಯಾಸದ ನಂತರ ಚರ್ಚಿಸುವ ವಿಚಾರಗಳು

  1. ಮೈಸೂರು ವಿಶ್ವ ವಿದ್ಯಾಲಯ- ಅಭಿವೃದ್ಧಿ ಪೀಠಗಳ ಯೋಜನೆ ಸಹಕಾರ.
  2. ಕರ್ನಾಟಕ ಮುಕ್ತ ವಿಶ್ವ ವಿದ್ಯಾಲಯ- ಶಕ್ತಿಪೀಠಗಳ ಯೋಜನೆ ಸಹಕಾರ.
  3. ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರ – ಜಲಪೀಠ ಯೋಜನೆ ಸಹಕಾರ.
  4. ಆಡಳಿತ ತರಭೇತಿ ಸಂಸ್ಥೆ- ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಡಳಿತ ವ್ಯವಸ್ಥೆ ಮಾಹಿತಿ ಸಹಕಾರ.
  5. ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ- ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆ ಮಾಹಿತಿ ಸಹಕಾರ.
  6. 1947 ರಿಂದ 2023-24 ರವರೆಗಿನ ಯೋಜನೆಗಳ- ವಿದ್ಯಾರ್ಥಿಗೊಂದು ಯೋಜನೆ ಪ್ರಾಜೆಕ್ಟ್ ವರ್ಕ್.
  7. 2023-24 ರಿಂದ 2047 ರವರೆಗಿನ ಯೋಜನೆಗಳವಾರು ವಿದ್ಯಾರ್ಥಿಗೊಂದು ಯೋಜನೆ ಪ್ರಾಜೆಕ್ಟ್ ವರ್ಕ್.
  8. 75 ವರ್ಷಗಳವಾರು  ಯೋಜನೆವಾರು ವಿದ್ಯಾರ್ಥಿಗೊಂದು ಯೋಜನೆ ಪ್ರಾಜೆಕ್ಟ್ ವರ್ಕ್.
  9. ಮುಂದಿನ 25 ವರ್ಷಗಳ ಅವಧಿಯ ಯೋಜನೆಗಳವಾರು ವಿದ್ಯಾರ್ಥಿಗೊಂದು ಯೋಜನೆ ಪ್ರಾಜೆಕ್ಟ್ ವರ್ಕ್.
  10. ರಾಜ್ಯದ ಪ್ರತಿಯೊಂದು ಗ್ರಾಮಗಳ ಜಿಐಎಸ್ ಆಧಾರಿತ ಅಭಿವೃದ್ಧಿ ಡಿಜಿಟಲ್ ಮ್ಯಾಪ್
  11. ರಾಜ್ಯ ಸರ್ಕಾರಿ ಇಲಾಖಾವಾರು ಇರುವ ವಿವಿಧ ಕಮಿಟಿಗಳಿಗಳವಾರು ವಿದ್ಯಾರ್ಥಿಗೊಂದು ಯೋಜನೆ ಪ್ರಾಜೆಕ್ಟ್ ವರ್ಕ್.
  12. ಕೇಂದ್ರ ಸರ್ಕಾರಿ ಇಲಾಖಾವಾರು ಇರುವ ವಿವಿಧ ಕಮಿಟಿಗಳಿಗಳವಾರು ವಿದ್ಯಾರ್ಥಿಗೊಂದು ಯೋಜನೆ ಪ್ರಾಜೆಕ್ಟ್ ವರ್ಕ್.
  13. ಕೇಂದ್ರ ಸರ್ಕಾರದ ಇಲಾಖಾವಾರು ವಿದ್ಯಾರ್ಥಿಗೊಂದು ಯೋಜನೆ ಪ್ರಾಜೆಕ್ಟ್ ವರ್ಕ್.
  14. ರಾಜ್ಯ ಸರ್ಕಾರದ ಇಲಾಖಾವಾರು ವಿದ್ಯಾರ್ಥಿಗೊಂದು ಯೋಜನೆ ಪ್ರಾಜೆಕ್ಟ್ ವರ್ಕ್.
  15. ವರ್ಷದ 365 ದಿನಗಳವಾರು ಪ್ರಗತಿ ಪರಿಶೀಲನೆ ನಡೆಸಲು ವಿದ್ಯಾರ್ಥಿಗೊಂದು ದಿನದ ಯೋಜನೆ ಪ್ರಾಜೆಕ್ಟ್ ವರ್ಕ್.
  16. ಉದ್ಧೇಶಿತ 500 ಸಂಶೋಧನಾ ಪೀಠಗಳವಾರು  ವಿದ್ಯಾರ್ಥಿಗೊಂದು ಯೋಜನೆ ಪ್ರಾಜೆಕ್ಟ್ ವರ್ಕ್.

ಇತ್ಯಾದಿ ಬಗ್ಗೆ ಸಮಾಲೋಚನೆ ನಡೆಸಲಾಗುವುದು. ಆಸಕ್ತರು ಸಂಪರ್ಕಿಸಲು ಮನವಿ ಮಾಡಲಾಗಿದೆ, ಎಂಬ ಅಂಶವನ್ನು ತಮ್ಮ ಆದ್ಯಗಮನಕ್ಕೆ ತರಬಯಸುತ್ತೇನೆ.

ತಮ್ಮ ಅಮೂಲ್ಯವಾದ ಸಲಹೆಗಳಿಗೂ ಮುಕ್ತ ಅವಕಾಶವಿದೆ.

ವಂದನೆಗಳೊಂದಿಗೆ                                          ತಮ್ಮ ವಿಶ್ವಾಸಿ

(ಕುಂದರನಹಳ್ಳಿ ರಮೇಶ್)

ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ.-9886774477