22nd December 2024
Share

TUMAKURU:SHAKTHIPEETA FOUNDATION

ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ’ ದೊರೆಯಬೇಕಾದರೆ, ಇಂಡಿಯಾ @ 100 ಅಂಗವಾಗಿ ನವಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ಜನರ ಮನೆ ಬಾಗಿಲಿಗೆ ತಲುಪಬೇಕಾದರೆ, ರಾಜ್ಯಾಧ್ಯಾಂತ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಪಾತ್ರ ಮಹತ್ತರವಾಗಿದೆ.

ರಾಜ್ಯದ ಪ್ರತಿಯೊಂದು ಗ್ರಾಮದಲ್ಲಿರುವ 7 ನೇ ತರಗತಿ ಮೇಲ್ಪಟ್ಟು ಎಲ್ಲಾ ಹಂತದ ವಿಧ್ಯಾರ್ಥಿಗಳು, ಆಯಾ ಗ್ರಾಮದ

  1. ಅಭಿವೃದ್ಧಿ ಡಿಜಿಟಲ್ ಮ್ಯಾಪ್
  2. ಊರಿಗೊಂದು ಡಾಟಾ ಪುಸ್ತಕ
  3. ಊರಿಗೊಂದು ಥೀಮ್ ಪಾರ್ಕ್
  4. ಊರಿನ ಬಿಪಿಎಲ್ ಲಿಸ್ಟ್.
  5. ಆಯಾ ಗ್ರಾಮದ ತೆರಿಗೆ ಪಾವತಿಸುವವರ ಪಟ್ಟಿ.
  6. 2047 ರವರೆಗೆ ಗ್ರಾಮ/ಬಡಾವಣೆಯ ಪ್ರತಿಯೊಬ್ಬರೂ ತೆರಿಗೆ ಪಾವತಿಸು ಯಾವ ರೀತಿ ದುಡಿಯಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯಾವ ಯೋಜನೆ ಪಡೆಯಬೇಕು.
  7. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರತಿಯೊಂದು ಯೋಜನೆಯು ಅರ್ಹ ಪಲಾನುಭವಿಗಳಿಗೆ ದೊರಕಿದೆಯೇ ಎಂಬ ಬಗ್ಗೆ ಪರಿಶೀಲನೆ ಮಾಡುವುದು.
  8. ಆಯಾ ಗ್ರಾಮ ಪುಣ್ಯ ಕ್ಷೇತ್ರಗಳು, ಪ್ರವಾಸಿ ತಾಣಗಳು, ಶಾಸನಗಳು, ಧಾರ್ಮಿಕ ಸ್ಥಳಗಳ ಮಾಹಿತಿ ಸಂಗ್ರಹ ಮಾಡಬೇಕು.
  9. ಆಯಾ ಗ್ರಾಮದಲ್ಲಿ ಇರುವ ಜಲಸಂಗ್ರಹಗಾರಗಳನ್ನು ಗಂಗಾಮಾತೆ ದೇವಾಲಯ’ ಎಂದು ಎಲ್ಲಾ ಧರ್ಮಗಳವರು ಪೂಜಿಸುವಂತಾಗಬೇಕು.

ಈ ಮೇಲ್ಕಂಡ ಅಂಶಗಳ ಬಗ್ಗೆ  ವ್ಯಾಪಕ ಪ್ರಚಾರ ಮಾಡಲು ಮತ್ತು ಸಿದ್ಧಪಡಿಸಲು ಸರ್ಕಾರಗಳು ಸೂಕ್ತ ರೂಪುರೇಷೆಗಳೊಂದಿಗೆ ಆದೇಶ ಮಾಡುವುದು ಅಗತ್ಯವಾಗಿದೆ. 

ಕೆಳಕಂಡ ಘಟಕಗಳಿಗೆ ವ್ಯಾಪಕ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. 1947 ರಿಂದ 2023 ರವರೆಗಿನ ಎಲ್ಲಾ ಯೋಜನೆಗಳ ಮಾಹಿತಿಗಳ ಹ್ಯಾಂಡ್ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಸರಬರಾಜು ಮಾಡುವುದು.

ಮೂಲ ಉದ್ದೇಶಗಳ ಜೊತೆಗೆ 2047 ವಿಷಯಗಳ ಹೊಣೆಗಾರಿಕೆ ನೀಡುವುದು ಸೂಕ್ತವಾಗಿದೆ.

  1. ಎನ್.ಎಸ್.ಎಸ್ – ಘಟಕಗಳು- ವಿದ್ಯಾರ್ಥಿಗಳ ಸಂಖ್ಯೆ.
  2. ಇಕೋಕ್ಲಬ್ – ಘಟಕಗಳು- ವಿದ್ಯಾರ್ಥಿಗಳ ಸಂಖ್ಯೆ.
  3. ನ್ಯಾಷನಲ್ ಟೂರಿಸಂ ಯೂತ್ ಕ್ಲಬ್ – ಘಟಕಗಳು – ವಿದ್ಯಾರ್ಥಿಗಳ ಸಂಖ್ಯೆ.
  4. ಇಂಜಿನಿಯರಿಂಗ್ ಕಾಲೇಜುಗಳ ಆಕ್ಟಿವಿಟಿ ಪಾಯಿಂಟ್ಸ್ – ಕಾಲೇಜುಗಳು – ವಿದ್ಯಾರ್ಥಿಗಳ ಸಂಖ್ಯೆ.
  5. ಎಲ್ಲಾ ಕಾಲೇಜು ವಿದ್ಯಾರ್ಥಿಗಳ ಕೈಗೊಳ್ಳುವ ಪ್ರಾಜೆಕ್ಟ್ ವರ್ಕ್- ಕಾಲೇಜುಗಳು – ವಿದ್ಯಾರ್ಥಿಗಳ ಸಂಖ್ಯೆ.
  6. ನವ ಕರ್ನಾಟಕ ವಿಷನ್ ಡಾಕ್ಯುಮೆಂಟ್—2027 ರ ಪ್ರಕಾರ 1947 ರಿಂದ 2047 ರವರೆಗಿನ ಒಂದೊಂದು ಯೋಜನೆಯನ್ನು, ಒಂದೊಂದು ವಿದ್ಯಾರ್ಥಿ ತಂಡಕ್ಕೆ ನೀಡಿ ಪ್ರಾಜೆಕ್ಟ್ ವರ್ಕ್’ ಆಗಿ ಮಾಡಿಸಲು ನಿಯಮ ರೂಪಿಸಬೇಕು.

ಆಯಾ ಗ್ರಾಮಗಳಲ್ಲಿರುವ  ರಾಜಕೀಯ ಸರ್ವ ಪಕ್ಷಗಳ ನಾಯಕರು, ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರು, ಧಾರ್ಮಿಕ ಮುಖಂಡರು, ವಿವಿಧ ವರ್ಗದ ಸಂಘ ಸಂಸ್ಥೆಗಳು, ಯುವ ಸಂಘಟನೆಗಳು, ಮಹಿಳಾ ಸಂಘಟನೆಗಳು ಸೇರಿದಂತೆ, ಮನೆತನವಾರು ಎಲ್ಲಾ ವರ್ಗದವರ  ಅಭಿಪ್ರಾಯ ಸಂಗ್ರಹಣೆ ಮಾಡಬೇಕು. ವ್ಯಕ್ತಿ, ಕುಟುಂಬ, ಗ್ರಾಮಗಳಿಗೆ ಸರ್ಕಾರಿ ಯೋಜನೆಗಳ ಜೋಡಣೆ ಬಗ್ಗೆ ಡಿಜಿಟಲ್ ಪಕ್ಕಾ ಮಾಹಿತಿ ಸಂಗ್ರಹಿಸ ಬೇಕು. ಒಂದು ಮಾದರಿ ಟೆಂಪ್ಲೇಟ್’ಸಿದ್ಧಪಡಿಸಿ ಪ್ರತಿಯೊಬ್ಬರಿಗೂ ವಿತರಣೆ ಮಾಡಬೇಕು.

ರಾಜ್ಯಾಧ್ಯಾಂತ ಗ್ರಾಮಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇರುವ ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿಗಳ ಸಹಭಾಗಿತ್ವದಲ್ಲಿ ಜ್ಞಾನಿಗಳ ಪಟ್ಟಿ’ ಸಿದ್ಧಪಡಿಸಬೇಕು. ಅವರೆಲ್ಲರ ಅಭಿಪ್ರಾಯಗಳನ್ನು ಬರವಣಿಗೆ ಮೂಲಕ ಸಂಗ್ರಹ ಮಾಡಿ ಡಾಟಾ ಪುಸ್ತಕದಲ್ಲಿ ನಮೂದಿಬೇಕು.

ರಾಜ್ಯಾಧ್ಯಾಂತ ಇರುವ ಶಾಲಾ-ಕಾಲೇಜುಗಳು, 31 ಜಿಲ್ಲೆವಾರು, 224 ವಿಧಾನ ಸಭಾ ಕ್ಷೇತ್ರವಾರು, ಸ್ಥಳಿಯ ಸಂಸ್ಥೆವಾರು, ಗ್ರಾಮವಾರು, ಆಸಕ್ತ ‘2047-ಸ್ವಯಂ ಸೇವಕರ ತಂಡ’ ರೂಪಿಸ ಬೇಕು. ಆಯಾ ಗ್ರಾಮದ ಜ್ಞಾನಿಗಳ ತಂಡ ವಿಷನ್ ಗ್ರೂಪ್’ ನಂತೆ ಕಾರ್ಯ ನಿರ್ವಹಿಸಿದರೆ, ಸ್ವಯಂ ಸೇವಕರ ತಂಡ ಪ್ರಷರ್ ಗ್ರೂಪ್’ ಆಗಿ ಕಾರ್ಯ ನಿರ್ವಹಿಸಬೇಕು.

ಪ್ರತಿಯೊಂದು ಗ್ರಾಮ ಮತ್ತು ನಗರ ಪ್ರದೇಶಗಳ ಬಡಾವಣೆಗಳು ಡಿಜಿಟಲ್ ಗ್ರಾಮಗಳಾಗ ಬೇಕು. ಸೂಕ್ತ ಆಪ್ ಮಾಡಬೇಕು, ಆಸಕ್ತರಿಗೆ ಸ್ಕಿಲ್ ಇಂಡಿಯಾ ಯೋಜನೆಯಡಿ ಸೂಕ್ತ ತರಬೇತಿ ನೀಡುವುದು ಅಗತ್ಯವಾಗಿದೆ.

ಪ್ರತಿ ವರ್ಷ ಗ್ರಾಮಗಳಲ್ಲಿ ಅಭಿವೃದ್ಧಿ ಹಬ್ಬ’ ಆಚರಣೆ ಮಾಡಬೇಕು. ಪ್ರತಿ ವರ್ಷ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ನಮ್ಮ ಗ್ರಾಮಕ್ಕೆ, ನಮ್ಮ ಬಡಾವಣೆಗೆ ಏನೇನು ಕೆಲಸ ಆಗಿದೆ ಎಂಬ ಮಾಹಿತಿಯನ್ನು ಅಭಿವೃದ್ಧಿ ಡಿಜಿಟಲ್ ಮ್ಯಾಪ್ ನಲ್ಲಿ ನಮೂದಿಸಬೇಕು.

ಸೇವೆ ಮಾಡಿದ ವಿದ್ಯಾರ್ಥಿಗಳಿಗೆ ಡಿಬಿಟಿ ಮೂಲಕ ಸಂಭಾವನೆ ನೀಡಬೇಕು, ಉಚಿತ ಪ್ರವಾಸ ಹಮ್ಮಿಕೊಳ್ಳಬೇಕು. ಪ್ರಶಸ್ತಿ ಪತ್ರ ನೀಡಬೇಕು, ಪರೀಕ್ಷೆಗಳಲ್ಲಿ ಗ್ರೇಸ್ ಅಂಕಗಳನ್ನು ನೀಡಬೇಕು, ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು. ಇತ್ಯಾದಿ ಅವಕಾಶಗಳನ್ನು ಕಲ್ಪಿಸುವುದು ಸೂಕ್ತವಾಗಿದೆ.

ಈ ಎಲ್ಲಾ ರೂಪುರೇಗಳನ್ನು ವಿದ್ಯಾರ್ಥಿಗಳೇ ರೂಪಿಸ ಬೇಕು. ಸರ್ಕಾರ ಮುದ್ರೆ ಹೊತ್ತ ಬೇಕಷ್ಟೆ.

ಈಗಾಗಲೇ ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರು 75 ನೇ ಸ್ವಾvಂÀತ್ರ್ಯದ ದಿವಸ ಘೋಷಣೆ ಮಾಡಿದ್ದಾರೆ, ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು 2023-24 ರ ಆಯವ್ಯಯ ಪತ್ರದಲ್ಲಿ  ವಿಷಯ ಮಂಡಿಸಿದ್ದಾರೆ.

ನನ್ನ ಮನವಿ ಮೇರೆಗೆ ಸ್ಪಂದಿಸಿದ, ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಮತ್ತು ತುಮಕೂರು ನಗರ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರ ಶೀಫಾgಸ್ಸಿನ ಮೇರೆಗೆ, ಯೋಜನಾ ಸಚಿವರಾದ ಶ್ರೀ ಮುನಿರತ್ನರವರು, ಪ್ರವಾಸೋಧ್ಯಮ ಸಚಿವರಾದ ಶ್ರೀ ಆನಂದ್ ಸಿಂಗ್ ರವರು ಸೂಕ್ತ ಆದೇಶ ನೀಡಲು ಸೂಚಿಸಿದ್ದಾರೆ.

ದಿನಾಂಕ:29.12.2021 ರಂದು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಅನುಮತಿ ಪಡೆದು ಈಗಾಗಲೇ ಅಧ್ಯಯನ ಆರಂಭಿಸಿರುವ ಡಾಟಾ ವಿಜ್ಞಾನಿ ಹಾಗೂ ಶಕ್ತಿಪೀಠ ಫೌಂಡೇಷನ್ ಸಿಇಓ ಚಿ.ಕೆ.ಆರ್.ಸೋಹನ್ ರವರು ಮಧ್ಯಂತರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.

 ಪೂರಕವಾಗಿ ಈಗಾಗಲೇ ರಾಜ್ಯದ ವಿವಿಧ ಮೂಲೆಗಳಲ್ಲಿ 13 ಸರಣೆ ಸಭೆಗಳನ್ನು ಮಾಡಿ, ಜನ ಜಾಗೃತಿ ಜೊತೆಗೆ, ವಿವಿಧ ವರ್ಗದವರ ಅಭಿಪ್ರಾಯಗಳನ್ನು ಸಂಗ್ರಹ ಮಾಡುವ ಆಂದೋಲನ ನಡೆಯುತ್ತಿದೆ. ಇಂದು     (09.03.2023) ಮೈಸೂರಿನ ವಿಶ್ವವಿದ್ಯಾನಿಲಯದ ಸಭೆಯಲ್ಲಿ ನಿರ್ಣಯ ಮಾಡಿ ಸರ್ಕಾರಕ್ಕೆ ಸಲ್ಲಿಸಲಾಗುವುದು.

ಈ ಹಿನ್ನಲೆಯಲ್ಲಿ ಯೋಜನಾ ಇಲಾಖೆಯ ಅಪರಮುಖ್ಯ ಕಾರ್ಯದರ್ಶಿಯವರಾದ ಶ್ರೀಮತಿ ಶಾಲಿನಿ ರಜನೀಶ್ ರವರು ಸಂಭಂದಿಸಿದ ಇಲಾಖೆಗಳಿಗೆ ಪತ್ರ ಬರೆದು ಅಭಿಪ್ರಾಯ ಕೇಳಿದ್ದಾರೆ. ಅಧಿಕಾರಿ ಮತ್ತು ನೌಕರರಿಗೆ ಕಡತ ಸಿದ್ಧಪಡಿಸಲು, ಈ ನಿರ್ಣಯ ಅನೂಕೂಲವಾಗಲಿದೆ.

ದಯವಿಟ್ಟು ನಿಮ್ಮ ಐಡಿಯಾ ಕೊಡಿ!