INDIA @ 100: ಸರಣಿ ಸಭೆ ಆತ್ಮಾವಲೋಕನ
TUMAKURU:SHAKTHIPEETA FOUNDATION
ಶಕ್ತಿಪೀಠ ಫೌಂಡೇಷನ್ ಇದೂವರೆಗೂ ವಿವಿಧ ವರ್ಗದವರ ಸಹಭಾಗಿತ್ವದಲ್ಲಿ ನಡೆಸಿದ ಸರಣಿ ಸಭೆಗಳ ಆತ್ಮಾವಲೋಕನ ಸಭೆಯನ್ನು, ಪ್ರೆಸ್ ಕ್ಲಬ್ ಆಪ್ ಬೆಂಗಳೂರು ಅಧ್ಯಕ್ಷರಾದ ಶ್ರೀ ಶ್ರೀಧರ್ ಅಧ್ಯಕ್ಷತೆಯಲ್ಲಿ ನಡೆಸಲು ಯೋಚಿಸಲಾಗಿದೆ. ಈ ಕಾರ್ಯಕ್ರಮವನ್ನು ತ್ಯಾಗಟೂರು ಶ್ರೀ ಸಿದ್ಧೇಶ್ ರವರು ಸಂಘಟನೆ ಮಾಡಲಿದ್ದಾರೆ. ಸಕಲೇಶಪುರದ ಮೂಕಾನನ ರೆಸಾರ್ಟ್‍ನ ಶ್ರೀ ವೇದಾನಂದಾ ಮೂರ್ತಿಯವರು ಸಹಕಾರ ನೀಡಲಿದ್ದಾರೆ.
ಇದೂವರೆಗೂ ನಡೆಸಿದ ಸಭೆ ವಿವರ
- ದಿನಾಂಕ: 08.05.2022 ರಂದು ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೋಕು, ಕುಂದರನಹಳ್ಳಿಯಲ್ಲಿ ಸಭೆ- ಪ್ರಾಯೋಜಕತ್ವÀ ಶಕ್ತಿಪೀಠ ಫೌಂಡೇಷನ್-ಕೆ.ಆರ್.ಸೋಹನ್‍ರವರು ಸಹಕಾರ: ಶ್ರೀ ಸಿದ್ಧರಾಮಣ್ಣನವರು, ಶ್ರೀ ವಿಶ್ವನಾಥ್‍ನವರು, ಶ್ರೀ ಮಹೇಶ್‍ರವರು ಮತ್ತು ತಂಡ.
- ದಿನಾಂಕ: 29.05.2022 ರಂದು ತುಮಕೂರು ನಗರದ ಆರ್.ಎಸ್.ಕಲ್ಯಾಣ ಮಂಟಪ ರಾಜ್ಯ ಮಟ್ಟದ ಸಭೆಯಲ್ಲಿ ಉಪನ್ಯಾಸ – ಆಯೋಜಿಸಿದವರು ರಾಜ್ಯ ಮಟ್ಟದ ಬಿಜೆಪಿ ರೈತ ಮೋರ್ಚಾ. ಸಹಕಾರ: ರಾಜ್ಯಸಭಾ ಸದಸ್ಯ ಶ್ರೀ ಕಡಾಡಿ ಈರಣ್ಣನವರು ಮತ್ತು ಶ್ರೀ ಶಿವಪ್ರಸಾದ್‍ರವರು.
- ದಿನಾಂಕ: 16.06.2022 ರಂದು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ತುಮಕೂರು ಜಿಲ್ಲಾ ಜಲಸಂವಾದ ಸಭೆ- ಆಯೋಜಿಸಿದವರು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಕಾರ: ಶ್ರೀ ಸಿದ್ದಲಿಂಗಪ್ಪನವರು. ಶ್ರೀ ಸಿ.ಕೆ.ಮಹೇಂದ್ರವರು, ಶ್ರೀ ಸಾಯಿ ಗುರುಸಿದ್ದಪ್ಪನವರು ಮತ್ತು ತಂಡ.
- ದಿನಾಂಕ: 21.06.2022 ರಂದು ತುಮಕೂರು ಜಿಲ್ಲೆ, ಕೊರಟಗೆರೆ ತಾಲ್ಲೋಕಿನ, ಹೊಲತಾಳು ಗ್ರಾಮದಲ್ಲಿ ತಲಪುರಿಕೆ ಸಂಶೋದನಾ ಸಭೆ- ಆಯೋಜಿಸಿದವರು ಕುರುಂಕೋಟೆ ಗ್ರಾಮಪಂಚಾಯಿತಿ ಅಧ್ಯಕ್ಷ, ಉಪಾಧ್ಯಾಕ್ಷ, ಸದಸ್ಯರು ಮತ್ತು ಪಿಡಿಓ, ಸಹಕಾರ: ಸಾಹಿತಿ ಮತ್ತು ಸಂಶೋಧಕ ಶ್ರೀ ಹೊಲತಾಳು ಸಿದ್ಧಗಂಗಯ್ಯ, ಶ್ರೀ ಮಣುವಿನ ಕುರಿಕೆ ಶಿವರುದ್ರಯ್ಯನವರು.
- ದಿನಾಂಕ: 28.06.2022 ರಂದು ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ತಾಲ್ಲೋಕಿನ, ಬುಕ್ಕಾಪಟ್ಟದಲ್ಲಿ ಜಲಸಂವಾದ ಸಭೆ-ಆಯೋಜಿಸಿzವರುÀ ಶ್ರೀ ರಘುರಾಂ ರವರು. ಸಹಕಾರ: ಶ್ರೀ ಪುಟ್ಟಕಾಮಣ್ಣನವರು.
- ದಿನಾಂಕ: 06.07.2022 ರಂದು ತುಮಕೂರು ನಗರದ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಕಚೇರಿಯಲ್ಲಿ ಸಭೆ- ಆಯೋಜಿಸಿದವರು ಶಕ್ತಿಪೀಠ ಫೌಂಡೇಷನ್ ಸಹಕಾರ: ಸಿಇಓ ಚಿ.ಕೆ.ಆರ್.ಸೋಹನ್‍ರವರು.
- ದಿನಾಂಕ:15.12.2022 ರಂದು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನದಲ್ಲಿ ತುಮಕೂರು ಜಿಲ್ಲೆಯ ಅಭಿವೃದ್ಧಿ ಆಯಾಮಗಳು ಸಂವಾದ, ಆಯೋಜಿಸಿದವರು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್. ಸಹಕಾರ: ದೆಹಲಿಯಲ್ಲಿ ಅತ್ಯಂತ ಪ್ರಮುಖ ಕಾರ್ಯ ಇದ್ದುದರಿಂದ ಸಭೆಗೆ ಹಾಜರಾಗಲು ಸಾಧ್ಯಾವಾಗಲಿಲ್ಲ.
- ದಿನಾಂಕ:23.01.2023 ಮತ್ತು 24.01.2023 ಎರಡು ದಿವಸಗಳ ಕಾರ್ಯಾಗಾರ –ಆಯೋಜಿಸಿದವರು, ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೋಕು, ಮೂಕಾನನ ರೆಸಾರ್ಟ್, ವೆಸ್ಟರ್ ಘಾಟ್ ಫೌಂಡೇಷನ್, ಸಕಲೇಶಪುರ ರೆಸಾರ್ಟ್ ಓನರ್ಸ್ ಅಸೋಶಿಯೇಷನ್ ಮತ್ತು ಸಕಲೇಶಪುರ ಹೋ ಸ್ಟೇ ಓನರ್ಸ್ ಅಸೋಶಿಯೇಷನ್- ಸಹಕಾರ ಶ್ರೀ ವೇದಾನಂದಾಮೂರ್ತಿಯವರು ಮತ್ತು ತಂಡ.
- ದಿನಾಂಕ:31.01.2023 ರಂದು ತುಮಕೂರು ಜಿಲ್ಲೆ, ತುಮಕೂರು ತಾಲ್ಲೋಕು ಹೆಬ್ಬೂರಿನಲ್ಲಿ ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯವರು ಆಯೋಜಿಸಿದ್ದ ಮಳೆಮಾಪನ ಜನ ಜಾಗೃತಿ ಸಭೆಯಲ್ಲಿ ಉಪನ್ಯಾಸ.
- ದಿನಾಂಕ:12.02.2023 ರಂದು ದೆಹಲಿಯ ಶ್ರೀ ಜಿ.ಎಸ್.ಬಸವರಾಜ್ ರವರ ಮನೆಯಲ್ಲಿ ಜಲಗ್ರಂಥ ದ ಬಗ್ಗೆ ಸಮಾಲೋಚನೆ. ಆಯೋಜನೆ: ಶ್ರೀ ಜಿ.ಎಸ್.ಬಸವರಾಜ್ ರವರು ಸಹಕಾರ: ಸಹಕಾರ ಶ್ರೀ ವೇದಾನಂದಾಮೂರ್ತಿಯವರು, ಶ್ರೀ ಕೃಷ್ಣ ಮೂರ್ತಿಯವರು ಮತ್ತು ಕೆ.ಆರ್.ಸೋಹನ್ ರವರು.
- ದಿನಾಂಕ:22.02.2023 ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಕೆವಿಜೆ ಇಂಜಿನಿÀಯರಿಂಗ್ ಕಾಲೇಜಿನಲ್ಲಿ ಉಪನ್ಯಾಸ. ಆಯೋಜನೆ: ಕಾಲೇಜು ಸಹಕಾರ: ಶ್ರೀ ವಿನಯ್, ಪಟ್ಟಣ ಪಂಚಾಯಿತಿ ಅಧ್ಯಕ್ಷರು, ಶ್ರೀ ಪ್ರತಾಪ್ ಆರಾಧ್ಯರವರು, ಶ್ರೀ ಆನಂದ್ ರವರು.
- ದಿನಾಂಕ:28.02.2023 ರಂದು ಮೈಸೂರು ಜಿಲ್ಲೆಯ ಬಸುದೇವ್ ಸೋಮನಿ ಕಾಲೇಜಿನಲ್ಲಿ ಉಪನ್ಯಾಸ ಆಯೋಜನೆ: ಕಾಲೇಜು ಸಹಕಾರ: ಪ್ರೋ. ಶ್ರೀ ಡಾ.ಎಂ.ಜಿ.ಬಸವರಾಜ ರವರು
- ದಿನಾಂಕ:09.03.2023 ರಂದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸ ಆಯೋಜನೆ: ಮೈಸೂರು ವಿಶ್ವವಿದ್ಯಾನಿಲಯ, ಸಹಕಾರ: ಪ್ರೋ. ಶ್ರೀ ಡಾ.ಎಂ.ಜಿ.ಬಸವರಾಜ ರವರು
ಸರಣಿ ಸಭೆಗಳನ್ನು ಆಯೋಜಿಸುವರು ಯಾರು?
ಸಭೆಗಳನ್ನು ನಡೆಸಿ ಯಾವುದಾದರೂ ದಾಖಲೆ ಮಾಡಬೇಕು ಎಂಬ ಗುರಿಯಿದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರವಾರು ಕನಿಷ್ಠ ಪಕ್ಷ ಒಂದು ಸಭೆಯನ್ನು ನಡೆಸಲು ಗುರಿಯಿದೆ. ಹೆಚ್ಚಿಗೆ ಎಷ್ಟು ಸಭೆಗಳನ್ನಾದರೂ ನಡೆಸಲು ಯೋಚಿಸಲಾಗಿದೆ.
- ಸರ್ವಪಕ್ಷಗಳು,
- ಶಾಲಾ ಕಾಲೇಜುಗಳು- ವಿಶ್ವದ್ಯಾನಿಲಯಗಳು- ಅಧ್ಯಯನ ಸಂಸ್ಥೆಗಳು.
- ವಿವಿಧ ವರ್ಗದ ಸಂಘ ಸಂಸ್ಥೆಗಳು- ಹೋರಾಟ ಸಂಸ್ಥೆಗಳು
- ಜಾತಿ- ಉಪಜಾತಿ-ಧರ್ಮ ಸಂಘÀಟನೆಗಳು,
- ಕಂಪನಿಗಳು,
- ಧಾರ್ಮಿಕ ಸಂಸ್ಥೆಗಳು.
- ಆಸಕ್ತ ವ್ಯಕ್ತಿ, ಕುಟುಂಬ,
- ವಿವಿಧ ಸರ್ಕಾರಿ ಅಥವಾ ಖಾಸಗಿ ಸಮಾರಂಭಗಳಲ್ಲಿ ಉಪನ್ಯಾಸಕ್ಕೆ ಅವಕಾಶ.
- ರಾಜ್ಯಾದ್ಯಾಂತ ಯಾತ್ರೆ ಮಾಡಲು ಚಿಂತನೆ ನಡೆಸಲಾಗುತ್ತಿದೆ.
ಯಾವುದೇ ವರ್ಗದ ಜನತೆ, ಯಾವುದೇ ಸಭೆ ಆಯೋಜಿಸಿದರೂ ಭಾಗವಹಿಸುವ ಮೂಲಕ ಜಾಗೃತಿ ಮೂಡಿಸಲು ಮುಂದಾಗಿದ್ದೇವೆ. ಪ್ರತಿ ಸಭೆಗೂ ಫೈನ್ ಟ್ಯೂನ್ ಅಫ್ ಮಾಡಲಾಗುವುದು.
ಸಭೆವಾರು ಮಾಹಿತಿ ಸಂಗ್ರಹ ಮಾಡಲಾಗುವುದು.
- ಆಹ್ವಾನ ಪತ್ರಿಕಾ.
- ಫೋಟೋಗಳು.
- ಪ್ರೆಸ್ ಕಟಿಂಗ್.
- ಸಭೆ ನಿರ್ಣಯಗಳು
- ಸಭೆ ಖರ್ಚು ವೆಚ್ಚಗಳು.
- ಸಲಹೆಗಳು.
- ಅಭಿಪ್ರಾಯಗಳು.
- ವಿರೋಧ ಅಭಿಪ್ರಾಯಗಳು.
- ಜ್ಞಾನ ದಾನಿಗಳು.
ಎಂ.ಓ.ಯು– ವಿವಿಧ ಸಂಘ ಸಂಸ್ಥೆಗಳ ಒಡಂಬಡಿಕೆ ಮಾಡಿಕೊಳ್ಳಲಾಗುವುದು.
- ರಾಜ್ಯ ಸರ್ಕಾರದಿಂದ ಉಚಿತ ಎಂ.ಓ.ಯು. ಮಾಡಿಕೊಳ್ಳಲಾಗಿದೆ.
- ಪ್ರೆಸ್ ಕ್ಲಬ್ ಆಫ್ ಬೆಂಗಳೂರು ವಿವಿಧ ವರ್ಗದವರ ಸಂವಾದ ಆಯೋಜಿಸಿ, ವ್ಯಾಪಕ ಪ್ರಚಾರ ಮಾಡಲು ಒಡಂಬಡಿಕೆ ಮಾಡಿಕೊಳ್ಳಲು ಮುಂದಾಗಿದೆ.
- ಹಾಸನ ಜಿಲ್ಲೆಯ ಸಕಲೇಶಪುರದ ಮೂಕಾನನ ರೆಸಾರ್ಟ್ ಮತ್ತು ವೆಸ್ಟರ್ನ್ ಘಾಟ್ ಫೌಂಡೇಷನ್, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಪ್ರವಾಸ ಮಾಡಲು ಸೂಕ್ತ ಅನೂಕೂಲ ಕಲ್ಪಿಸಲು ಒಡಂಬಡಿಕೆ ಮಾಡಿಕೊಳ್ಳಲು ಮುಂದಾಗಿದೆ.
- ಸರ್ಕಾರದ ವಿವಿಧ ಸಂಸ್ಥೆಗಳೊಂದಿಗೆ ಎಂ.ಓ.ಯು.
- ವಿಶ್ವ ವಿÀದ್ಯಾಲಯಗಳೊಂದಿಗೆ ಎಂ.ಓ.ಯು.
- ರಾಜಕೀಯ ಪಕ್ಷಗಳೊಂಧಿಗೆ ಎಂ.ಓ.ಯು.
- ಜಾತಿ-ಉಪಜಾತಿ ಸಂಘಟನೆಗಳೊಂದಿಗೆ ಎಂ.ಓ.ಯು.
- ವ್ಯಕ್ತಿ- ಕುಟುಂಬ-ಸಂಘÀಸಂಸ್ಥೆ- ಕಂಪನಿಗಳೊಂದಿಗೆ ಎಂ.ಓ.ಯು.
- ಆಸಕ್ತರು ವಿಷಯವಾರು ಒಡಂಬಡಿಕೆ ಮಾಡಿಕೊಳ್ಳಲು ಮುಕ್ತ ಅವಕಾಶವಿದೆ.
ಆಸಕ್ತರು ಸಲಹೆ ನೀಡಬಹುದಾಗಿದೆ.