22nd November 2024
Share

TUMAKURU:SHAKTHIPEETA FOUNDATION

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ, ರಾಜ್ಯದ ಸರ್ವಪಕ್ಷಗಳು ಹೊರತರುವ ಚುನಾವಣಾ ಪ್ರಣಾಳಿಕೆ, ನವ ಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ರ ದಿಕ್ಸೂಚಿಯಂತೆ ಇರುವುದು ಅಗತ್ಯವಾಗಿದೆ.

ಈಗ ಪ್ರಧಾನಿ ಶ್ರೀ ನರೇಂದ್ರಮೋದಿಯವರು ದೇಶದ ಪ್ರಧಾನಿಯಾಗಿದ್ದಾರೆ. ರಾಜ್ಯದ ಮುಖ್ಯಮಂತ್ರಿಯವರು ಶ್ರೀ ಬಸವರಾಜ್ ಬೊಮ್ಮಾಯಿರವರು ಇದ್ದಾರೆ. 100 ನೇ ಸ್ವಾತಂತ್ರ್ಯದ ವೇಳೆಗೆ ಯಾರು ದೇಶದ ಪ್ರಧಾನಿಯಾಗುತ್ತಾರೋ, ಯಾರು ರಾಜ್ಯದ ಮುಖ್ಯ ಮಂತ್ರಿಯಾಗುತ್ತಾರೋ?

ಈಗಿನ ಅಭಿವೃದ್ಧಿ ಗಮನಿಸಿದರೆ, ಭಾರತವಂತೂ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಕರ್ನಾಟಕ ದೇಶದಲ್ಲಿಯೇ ಅತಿ ಹೆಚ್ಚು ಅಭಿವೃದ್ಧಿ ರಾಜ್ಯವಾಗಲು, ಸರ್ವಪಕ್ಷಗಳು ಭಧ್ರಬುನಾದಿ ಹಾಕಲೇ ಬೇಕಿದೆ.

ಜೊತೆಗೆ ಎಲ್ಲಾ ವರ್ಗದ ಜನತೆಯೂ ಕೈಜೋಡಿಸಬೇಕಿದೆ. ಸಂಘಸಂಸ್ಥೆಗಳು, ಜಾತಿ ಸಂಘಟನೆಗಳು, ಧರ್ಮಸಂಘಟನೆಗಳು, ಚಿಂತಕರು,ಧಾರ್ಮಿಕ ಮುಖಂಡರು, ಉದ್ದಿಮೆದಾರ ಸಂಘಟನೆಗಳು ಸೇರಿದಂತೆ ಎಲ್ಲಾ ವರ್ಗದವರು ತಮ್ಮ ತಮ್ಮ ವ್ಯಾಪ್ತಿಯ ಕನಸಿನ ಮುಂದಿನ 25 ವರ್ಷಗಳ ಯೋಜನೆಗಳತ್ತ ಗಮನ ಸೆಳೆಯ ಬೇಕಿದೆ.

ವಿದ್ಯಾರ್ಥಿಗಳು ಪ್ರಮುಖ ಪಾತ್ರವಹಿಸುವುದು ಸೂಕ್ತವಾಗಿದೆ. ಮುಂದಿನ 25 ವರ್ಷದ ಯುಗ, ಈಗಿನ ವಿದ್ಯಾರ್ಥಿಗಳ ಯುಗ.  ಇಡೀ ರಾಜ್ಯಾಧ್ಯಾಂತ ಉದ್ದೇಶಿತ 500 ಅಭಿವೃದ್ಧಿ ಅಧ್ಯಯನ ಪೀಠಗಳ ಸ್ಥಾಪನೆಗೆ ಕೇವಲ 500 ವಿದ್ಯಾರ್ಥಿಗಳು, ಅಡಿಪಾಯ ಹಾಕಲು ವಿದ್ಯಾರ್ಥಿಗಳಲ್ಲಿ  ಜಾಗೃತಿ ಮೂಡಿಸಬೇಕಿದೆ.

224 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೂ ಒಂದೊಂದು ಪ್ರಣಾಳಿಕೆ ರಚಿಸುವುದು ಅನಿವಾರ್ಯವಾಗಿದೆ. ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ ದೊರಕಬೇಕಾದರೆ, ರಾಜ್ಯದ ಪ್ರತಿಯೊಂದು ಗ್ರಾಮ ಅಭಿವೃದ್ಧಿ ಡಿಜಿಟಲ್ ನಕ್ಷೆ ಸಿದ್ಧವಾಗಲೇ ಬೇಕು.

224 ವಿಧಾನ ಸಭಾ ಕ್ಷೇತ್ರಗಳ ಅಧ್ಯಯನ ಪೀಠಗಳಲ್ಲಿಯೂ ತಲಾ ಕನಿಷ್ಟ ಪಕ್ಷ, 200 ರಿಂದ 250 ಗ್ರಾಮಗಳು ಬರಬಹುದು. ಗ್ರಾಮಕ್ಕೊಂದು/ನಗರ ಪ್ರದೇಶಗಳ ಬಡಾವಣೆಗೊಂದು ವಿದ್ಯಾರ್ಥಿ ತಂಡ ಕಾರ್ಯ ನಿರ್ವಹಿಸಲೇ ಬೇಕಿದೆ. ವಿದ್ಯಾರ್ಥಿಗಳು ಯಾವುದೇ ಪಕ್ಷದ ಪರ ಕೆಲಸ ಮಾಡಿದರೂ, ತಮ್ಮ ಗ್ರಾಮಕ್ಕೆ/ ಬಡಾವಣೆಗೆ ನಿಮ್ಮ ಕೊಡುಗೆ ಏನು ಎಂದು, ಎಲ್ಲಾ ಪಕ್ಷಗಳನ್ನು ಕೇಳುವ ಧೈರ್ಯ ಮಾಡಲೇ ಬೇಕಿದೆ.

ಪ್ರತಿಯೊಂದು ಗ್ರಾಮದ/ಬಡಾವಣೆಯ, ಪ್ರತಿಯೊಂದು ಪಕ್ಷದ ವತಿಯಿಂದ ಮುಂದಿನ 25 ವರ್ಷಗಳ ಅವಧಿಯ, ಅಭಿವೃದ್ಧಿ ಪ್ರಣಾಳಿಕೆ ಹೊರತುರುವ ಸಾಹಸ ಮಾಡುವುದು ಅಗತ್ಯವಾಗಿದೆ. ಎಲ್ಲಾ ಪಕ್ಷಗಳ ಯೋಜನೆಗಳ ಹೂರಣವೇ ಊರಿಗೊಂದು ಪುಸ್ತಕ Àವಾಗ ಬೇಕು. ಆ ಗ್ರಾಮದ ವಿಷನ್-2047 ಆಗಬೇಕು. ಆಗ ಮಾತ್ರ ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ ದೊರಕಲಿದೆ.