TUMAKURU:SHAKTHIPEETA FOUNDATION
ಇಂಡಿಯಾ @ 100 ಅಂಗವಾಗಿ ನವಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ಜನ ಜಾಗೃತಿ 2 ಸಭೆಗಳು ಸಕಲೆಶಪುರದಲ್ಲಿ ನಡೆದಿವೆ. ಮೂಕಾನನ ರೆಸಾರ್ಟ್ ನಲ್ಲಿ ರಾಜ್ಯ ಮಟ್ಟದ ಕಾರ್ಯಾಗಾರ ನಡೆದರೆ, ಸಕಲೇಶಪುರದ ರೋಟರಿ ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು.
ಎರಡು ಸಭೆಗಳಲ್ಲಿ ‘ಸಕಲೇಶಪುರ ಟೂರಿಸಂ ಮತ್ತು ಸಕಲೇಶಪುರ ಕಾಫಿ ಬ್ರ್ಯಾಂಡ್’ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ಧಿಮಾಡುವಂತೆ ಮಾಡಲು ಒಕ್ಕೊರಲಿನ ಬೇಡಿಕೆ ಮುಂದಿಟ್ಟದ್ದರು.
ಈ ಹಿನ್ನಲೆಯಲ್ಲಿ ಮೂಕನಾನನ ರೆಸಾರ್ಟ್ ಮತ್ತು ವೆಸ್ಟ್ರರ್ನ್ ಘಾಟ್ ಫೌಂಡೇಷನ್ ಸಂಸ್ಥಾಪಕರಾದ ಶ್ರೀ ವೇದಾನಂದಾಮೂರ್ತಿಯವರ ಜೊತೆಯಲ್ಲಿ ಭಾರತ ಸರ್ಕಾರದ ಟೂರಿಸಂ ಇಲಾಖೆಯ ರಿಜಿನಲ್ ಡೈರೆಕ್ಟರ್ ಕಚೇರಿಗೆ ಭೇಟಿ ನೀಡಿ ಸಮಾಲೋಚನೆ ನಡೆಸಿದೆವು.
ದಿನಾಂಕ:20.03.2023 ರಂದು ಬೆಂಗಳೂರಿನ ರಿಜಿನಲ್ ಡೈರಕ್ಟರ್ ಜೊತೆ ಸಮಾಲೋಚನೆ ಸಭೆ ನಡೆಯಲಿದೆ. ಈ ಸಭೆಗೆ ಸಕಲೇಶಪುರದ ರೆಸಾರ್ಟ್ ಮತ್ತು ಹೋಂ ಸ್ಟೇ ಮಾಲೀಕರ ಅÀಸೋಯೇಷನ್ ಪದಾಧಿಕಾರಿಗಳು, ಕಾಫಿ ಬೆಳೆಗಾರರು ಹಾಗೂ ಸಕಲೇಶಪುರದ ರೋಟರಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಭಾಷಣ ಮಾಡಿ ಚಪ್ಪಾಳೆ ತಟ್ಟಿದರೆ ಯಾವುದೂ ಆಗುವುದಿಲ್ಲ, ನಿರಂತರವಾಗಿ 224 ವಿಧಾನಸಭಾ ಕ್ಷೇತ್ರಗಳ ಸಂವಾದದ ಬೇಡಿಕೆ ಬಗ್ಗೆಯೂ ಜೊತೆ, ಜೊತೆಯಲ್ಲಿ ಸರ್ಕಾರದೊಂದಿಗೆ ವ್ಯವಹರಿಸುವುದು ನಮ್ಮ ಆಧ್ಯಕರ್ತವ್ಯವಾಗಿದೆ. ನಮ್ಮದು ಬರೀ ‘ವಿಷನ್ ಗ್ರೂಪ್’ ಅಲ್ಲ. ಜೊತೆಗೆ ‘ಪ್ರಷರ್ ಗ್ರೂಪ್’ ಹೌದು.
ಶ್ರೀ ವೇದಾನಂದಾಮೂರ್ತಿಯವರು ಸಕಲೇಶಪುರದ, ಈ ಎರಡು ಬ್ರ್ಯಾಂಡ್‍ಗೆ ನೀವೇ ‘ಅಂಬಾಸಿಡರ್’ ರೀತಿ ಕಾರ್ಯನಿರ್ವಹಿಸಿ, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಸಂವಾದದ ಸಭೆಗಳಿಗೂ, ನಿಮ್ಮನ್ನು ನೀವೂ ಇರುವ ಸ್ಥಳದಿಂದ ಕರೆದೊಯ್ದು, ನಿಮ್ಮ ಮನೆ ಬಾಗಿÀಲಿಗೆ ಮತ್ತೆ ಬಿಡುವವರೆಗೂ ಪ್ರವಾಸದ ಎಲ್ಲಾ ಖರ್ಚುವೆಚ್ಚವನ್ನು ನಾವು ಅಸೋಯೇಷನ್ ರವರು ಭರಿಸುತ್ತೇವೆ ಎಂಬ ‘ವಿಶಿಷ್ಠವಾದ ಆಸೆ’ ತೋರಿಸಿದ್ದಾರೆ.
ಇದೂವರೆಗೂ ಸುಮಾರು ಒಂದು ತಿಂಗಳಗಳಿನಿಂದ ಆ ಕೆಲಸ ಮಾಡುತ್ತಿದ್ದಾರೆ. ಈ ಎರಡು ಸಭೆಗಳಿಗೂ ಶಕ್ತಿಪೀಠ ಫೌಂಡೇಷನ್ ನಿಂದ ಒಂದು ರೂಪಾಯಿ ಖರ್ಚು ಭರಿಸಿಲ್ಲ. ಈ ಬಗ್ಗೆಯೂ ಸೋಮವಾರದ ಸಭೆಯಲ್ಲಿ ನಿರ್ಣಯ ಆಗಲಿದೆ.
ಜೊತೆಗೆ ವಿಜಯನಗರ ಜಿಲ್ಲೆಯಿಂದ ಆರಂಭವಾಗುವ ನ್ಯಾಷನಲ್ ಟೂರಿಸಂ ಯೂತ್ ಕ್ಲಬ್ ಜನ ಜಾಗೃತಿ ಆಂದೋಲನದ ಬಗ್ಗೆಯೂ ಚರ್ಚೆ ನಡೆಯಲಿದೆ.