19th March 2024
Share

ನ್ಯಾಷನಲ್ ಟೂರಿಸಂ ಯೂತ್ ಕ್ಲಬ್: ಹಂಪಿ ಮಾಡೆಲ್  ರಾಜ್ಯಕ್ಕೆ ಮಾದರಿ ?

TUMAKURU:SHAKTHIPEETA FOUNDATION

 ವಿಜಯನಗರ ಜಿಲ್ಲೆಯ, ಹೊಸಪೇಟೆ ವಿಧಾನಸಭಾ  ಕ್ಷೇತ್ರದ ಹಂಪಿಯ ವಿಶ್ವ ವಿದ್ಯಾನಿಲಯ ಅಥವಾ ಪ್ರವಾಸಿ ಕೇಂದ್ರದ ಒಂದು ಮರದ ಕೆಳಗೆ, ಹೊಸಪೇಟೆ ವಿಧಾನಸಭಾ ಕ್ಷೇತ್ರದ ನ್ಯಾಷನಲ್ ಟೂರಿಸಂ ಯೂತ್ ಕ್ಲಬ್, ಜನಜಾಗೃತಿ ಸಮಾವೇಶಕ್ಕೆ  ಪ್ರವಾಸೋಧ್ಯೋಮ ಸಚಿವರಾದ ಶ್ರೀ ಆನಂದ್ ಸಿಂಗ್ ರವರು ಚಾಲನೆ ನೀಡಲು ಪ್ರವಾಸೋಧ್ಯಮ ಇಲಾಖೆ ಸಜ್ಜಾಗಿದೆ.

ಮಾನ್ಯ ಮುಖ್ಯಂತ್ರಿಯವರ ಅಧ್ಯಕ್ಷತೆಯ ರಾಜ್ಯ ಮಟ್ಟದ ದಿಶಾ ಸಮಿತಿಯ ನೇತೃತ್ವದಲ್ಲಿ, ಇಂಡಿಯಾ @ 100 ಅಂಗವಾಗಿ ನವಕರ್ನಾಟಕ ವಿಷನ್ ಡಾಕ್ಯುಮೆಂಟ್-2047, ನ ರಾಜ್ಯ ಮಟ್ಟದ ಜನಜಾಗೃತಿ ಸಮಾವೇಶ ಮಾಡಬೇಕು ಎಂಬುದು ಜನತೆಯ ಆಗ್ರಹವಾಗಿತ್ತು.

ಯೋಜನಾ ಸಚಿವರಾದ ಶ್ರೀ ಮುನಿರತ್ನರವರು, ಪ್ರವಾಸೋಧ್ಯಮ ಸಚಿವರಾದ ಶ್ರೀ ಆನಂದ್ ಸಿಂಗ್ ರವರು ಸಂಪೂರ್ಣವಾಗಿ ಸಹಕಾರ ನೀಡುತ್ತಿದ್ದಾರೆ. ಮಾನ್ಯ ಮುಖ್ಯ ಮಂತ್ರಿಯವರಿಗೆ ಬಿಡುವು ಇಲ್ಲದ ಸಮಯ ಇದಾಗಿದೆ. ಅವರ ಸಮಯವನ್ನು ನಿಗದಿ ಮಾಡಲು ಈಗಾಗಲೇ, ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು  ಮನವಿ ಸಲ್ಲಿಸಿದ್ದಾರೆ. ಕಷ್ಟ ಎನ್ನತ್ತಿದ್ದಾರೆ ಮುಖ್ಯಮಂತ್ರಿಯವರ ಕಚೇರಿ ಅಧಿಕಾರಿಗಳು.

ಹಂಪಿಯಲ್ಲಿ ನಡೆಯುವ ಸಭೆ, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೂ ಮಾದರಿ ಆಗಬೇಕು ಎಂಬುದು ಇಂಡಿಯಾ @ 100 ಆಸಕ್ತರ ಬಯಕೆಯಾಗಿದೆ. ಇಲ್ಲಿ ಅಬ್ಬರ ಆಡಂಭರದ ಸಮಾವೇಶದ ಅಗತ್ಯವಿಲ್ಲ. ಅತ್ಯಂತ ಕಡಿಮೆ ಖರ್ಚಿನಲ್ಲಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ 6 ನೇ ತರಗತಿಯಿಂದ ಮೇಲ್ಪಟ್ಟ ಎಲ್ಲಾ ಶಾಲಾ ಕಾಲೇಜುಗಳು ಅಂದರೆ ಮಿಡ್ಲ್ ಸ್ಕೂಲ್, ಪ್ರೌಢಶಾಲೆ, ಪಿಯು ಕಾಲೇಜು, ಐಟಿಐ ಕಾಲೇಜು, ಡಿಪ್ಲಮೋ ಕಾಲೇಜು, ಸ್ಕಿಲ್ ಸಂಸ್ಥೆಗಳು, ವಿವಿಧ ಪದವಿ ಕಾಲೇಜು, ಇಂಜಿನಿಯರಿಂಗ್ ಕಾಲೇಜು, ವಿವಿಧ ಪಿಜಿ ಕಾಲೇಜು, ವಿಶ್ವ ವಿದ್ಯಾನಿಲಯ ಹೀಗೆ ಕೇಂದ್ರ ಸರ್ಕಾರದ ಮಾರ್ಗದರ್ಶಿ ಸೂತ್ರದಂತೆ ನ್ಯಾಷನಲ್ ಟೂರಿಸಂ ಯೂತ್ ಕ್ಲಬ್ ರಚಿಸ ಬೇಕಾಗಿರುವ ಶಾಲಾಕಾಲೇಜುಗಳಿಂದ ಕನಿಷ್ಟ ಇಬ್ಬರು ವಿದ್ಯಾರ್ಥಿಗಳು ಹಾಜರಾದರೆ ಸಾಕಾಗುವುದು.

ಗ್ರಾಮ ಮಟ್ಟದಲ್ಲಿ ಮತ್ತು ಬಡಾವಣೆ ಮಟ್ಟದಲ್ಲಿ ಪ್ರತಿ ಶಾಲಾಕಾಲೇಜುಗಳಿಗೂ ನಿರ್ಧಿಷ್ಟ ಪ್ರದೇಶದ ಹೊಣೆಗಾರಿಕೆ ನೀಡುವುದು ಸೂಕ್ತವಾಗಿದೆ. ಈ ಹಿನ್ನಲೆಯಲ್ಲಿ ಸರ್ಕಾರ ಈಗಾಗಲೇ ನಿಗದಿ ಮಾಡಿರುವ ಚುನಾವಣಾ ಬೂತ್ ಮಟ್ಟದ ವ್ಯಾಪ್ತಿಯನ್ನೇ ನ್ಯಾಷನಲ್ ಟೂರಿಸಂ ಯೂತ್ ಕ್ಲಬ್ ವ್ಯಾಪ್ತಿಯಾಗಿ ಘೋಷಣೆ ಮಾಡುವುದು ಸೂಕ್ತವಾಗಿದೆ.

ಸಚಿವರು ಹಂಪಿಯಲ್ಲಿ ಸಭೆ ನಡೆಸುವ ವೇಳೆಯಲ್ಲಿ, ಹೊಸಪೇಟೆ ವಿಧಾನ ಕ್ಷೇತ್ರದ ಪ್ರತಿಯೊಂದು ಶಾಲಾ ಕಾಳೆಜುಗಳು, ಆ ವ್ಯಾಪ್ತಿಯಲ್ಲಿ ಇರುವ ಪ್ರವಾಸಿಕೇಂದ್ರಗಳು, ಪುಣ್ಯ ಕ್ಷೇತ್ರಗಳು, ದೇವಾಲಯಗಳು, ವಿವಿಧ ಧರ್ಮದ ಧಾರ್ಮಿಕ ಕೇಂದ್ರಗಳು, ಶಾಸನಗಳು, ಮಾಸ್ತಿಗಲ್ಲುಗಳು, ವೀರಗಲ್ಲುಗಳು, ಹೆರಿಟೇಜ್ ಕಟ್ಟಡಗಳು, ಹೆರಿಟೇಜ್ ಸ್ಥಳಗಳು, ಹೆರಿಟೇಜ್ ಮರಗಳು, ರೆಸಾರ್ಟ್‍ಗಳು, ಹೋಂಸ್ಟೇಗಳು,  ಇತ್ಯಾದಿ ಪಟ್ಟಿ ಮಾಡಿ, ಆ ವ್ಯಾಪ್ತಿಯ ಶಾಲಾ ಕಾಲೇಜುಗಳ ನ್ಯಾಷನಲ್ ಟೂರಿಸಂ ಯೂತ್ ಕ್ಲಬ್ ಪಧಾದಿಕಾರಿಗಳಾಗ ಬಯಸುವ ವಿದ್ಯಾರ್ಥಿಗಳು,ಪರೀಕ್ಷೆಗಳಿದ್ದಲ್ಲಿ ಅಂತಹ ತರಗತಿ ವಿದ್ಯಾರ್ಥಿಗಳನ್ನು ಹೊರತು ಪಡಿಸಿ, ಮೇಲ್ಕಂಡ ಯಾವುದಾದರೊಂದು ಪ್ರವಾಸಿ ಸ್ಥಳದಲ್ಲಿ, ಒಂದು ಗುಂಪು ಚರ್ಚೆ ಹಾಗೂ ನ್ಯಾಷನಲ್ ಟೂರಿಸಂ ಯೂತ್ ಕ್ಲಬ್ ಪರಿಕಲ್ಪನೆ/ಉದ್ದೇಶಗಳ ಬಗ್ಗೆ ಪೂರ್ವಭಾವಿ ಸಭೆ ಮಾಡುವುದು ಸೂಕ್ತವಾಗಿದೆ.

ಜಿಲ್ಲಾ ಪ್ರವಾಸೋಧ್ಯಮ ಅಧಿಕಾರಿಯವರಿಗೆ ಬಿಇಓ. ಡಿಡಿಪಿಐ, ಪಿಯು ಡಿಡಿ, ವಿಸಿವರು ಸೇರಿದಂತೆ, ಶಿಕ್ಷಣ ಇಲಾಖೆ, ಮುಜರಾಯಿ ಇಲಾಖೆ, ವಕ್ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಅಧಿಕಾರಿಗಳ ಮತ್ತು ವಿದ್ಯಾರ್ಥಿಗಳ ಪೋಷಕರ, ಶಾಲಾಭಿವೃದ್ಧಿ ಸಮಿತಿಗಳ ಸಹಕಾರ ಅಗತ್ಯವಿದೆ. ಈ ಯೋಜನೆ ಹಲವಾರು ಇಲಾಖೆಗಳ ಸಹಭಾಗಿತ್ವದಲ್ಲಿ ಅನುಷ್ಠಾನ ಮಾಡುವುದು ಕೇಂದ್ರ ಸರ್ಕಾರದ ಕನಸಾಗಿದೆ.

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಈ ಕಾರ್ಯಕ್ರಮ ನಡೆಯ ಬೇಕಿದೆ.