12th October 2024
Share

TUMAKURU:SHAKTHIPEETA FOUNDATION

ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ನ ನಿರ್ದೇಶಕರಾದ ಶ್ರೀ ಪ್ರಭುರಾಜ್ ರಾವ್ ರವರೊಂದಿಗೆ ಜಿ.ಐ.ಎಸ್ ಆಧಾರಿತ ಅಭಿವೃದ್ಧಿ ಡಿಜಿಟಲ್ ಗ್ರಾಮ ನಕ್ಷೆ ಮತ್ತು ಊರಿಗೊಂದು ಪುಸ್ತಕದ ಬಗ್ಗೆ ಮೊಬೈಲ್ ಮೂಲಕ ಚರ್ಚೆ ನಡೆಸಲಾಯಿತು.

ಆರಂಭದಲ್ಲಿ ಈ ಪೋಟೋದಲ್ಲಿ ಇರುವವರ ಸರ್ವಪಕ್ಷಗಳ ನಾಯಕರು, ಮುಖ್ಯ ಮಂತ್ರಿಯವರು, ವಿರೋಧ ಪಕ್ಷದ ನಾಯಕರ, ಮಾಜಿ ಮುಖ್ಯಮಂತ್ರಿಯವರ,  ಹುಟ್ಟಿದ ಊರಿನ ಪುಸ್ತಕಗಳನ್ನು ಮಾದರಿಯಾಗಿ ಹೊರತರುವ ಪ್ರಯತ್ನಕ್ಕೆ ಸಹಕಾರ ನೀಡಲು ಮನವಿ ಮಾಡಲಾಗಿದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿ ನಕ್ಷೆಯೊಂದಿಗೆ ಮಾಹಿತಿ ನೀಡಲು ಕೋರಲಾಗಿದೆ.

ಈ ಪೋಟೋದಲ್ಲಿ ಇರುವ ನಾಯಕರ ಗ್ರಾಮಗಳ ಊರಿಗೊಂದು ಪುಸ್ತಕ ಬರೆಯಲು ಆಸಕ್ತಿ ಇರುವವರು ಸಂಪರ್ಕಿಸಲು ಮನವಿ.

ಇವರ ಸಂಸ್ಥೆಯಲ್ಲಿ ರಾಜ್ಯದ ಪ್ರತಿಯೊಂದು ಗ್ರಾಮದ ಅಭಿವೃದ್ಧಿ ಮಾಹಿತಿಗಳನ್ನು ಆಯಾ ಇಲಾಖಾ ಅಧಿಕಾರಿಗಳು ಖುದ್ಧಾಗಿ ಬಂದು ಡಿಜಿಟಲ್ ದಾಖಲಿಸಬೇಕು. ಆದರೇ ನಮ್ಮ ಅಧಿಕಾರಿಗಳಿಗೆ ಏನಾಗಿದೆಯೋ ಗೊತ್ತಿಲ್ಲ. ಇದೂವರೆಗೂ ಸಂಪೂರ್ಣವಾಗಿ ದಾಖಲಿಸುವ ಗೋಜಿಗೆ ಹೋಗಿಲ್ಲ. ಈ ಬಗ್ಗೆ ಶಾಸಕರ ಅಧ್ಯಕ್ಷತೆಯ ಸಭೆಯಲ್ಲಿ ಪ್ರಗತಿ ಬಗ್ಗೆ ಚರ್ಚೆ ನಡೆಯುಂತಾಗಬೇಕು.

ಅಂಕಿ ಅಂಶಗಳ ಇಲಾಖೆ, ಎನ್.ಆರ್.ಡಿ.ಎಂ.ಎಸ್, ಕೆ.ಎಂ.ಡಿ.ಎಸ್. ಮಾಹಿತಿ ಕಣಜ, ಕುಟುಂಬ, ಡಾಟಾ ಲೇಕ್, ಎನ್.ಐ.ಸಿ. ಪ್ರತಿಯೊಂದು ಇಲಾಖೆಗಳ ಡಾಟಾ ಆಪರೇಟರ್ ಗಳು, ಎಲ್ಲಾ ಮಾಹಿತಿಗಳನ್ನು ಒಂದು ರಾಜ್ಯಒಂದು ನಕ್ಷೆಒಂದು ಡಾಟಾ ಘೋಷಣೆಯಡಿಯಲ್ಲಿ ಅಪ್ ಡೇಟ್ ಮಾಡಲು ಒಂದು ಆಂದೋಲನ ಆಗಲೇ ಬೇಕು.