21st November 2024
Share

TUMAKURU:SHAKTHIPEETA FOUNDATION

 ಇಂಡಿಯಾ @ 100 ಅಂಗವಾಗಿ ನವಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ಸಿದ್ಧಪಡಿಸಲು ಗ್ರಾಮ ಮಟ್ಟದ ನಿಖರವಾದ ಮಾಹಿತಿಯನ್ನು ಒಳಗೊಂಡ ಊರಿಗೊಂದು ಪುಸ್ತಕ’ ರಚಿಸುವ ಸಂಬಂದ ವಿಜಯನಗರ ಜಿಲ್ಲೆಯ, ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದ ವಿ.ಸಿ ಯವರಾದ ಶ್ರೀ ವಿಜಯ್ ರವರು, ರಿಜಿಸ್ಟರ್ ಶ್ರೀ ಸುಬ್ಬಣ್ಣ ರೈ ರವರೊಂದಿಗೆ ಸಮಾಲೋಚನೆ ನಡೆಸಲಾಯಿತು. 

ಜಿ.ಐ.ಎಸ್.ಆಧಾರಿತ, ಅಭಿವೃದ್ಧಿ ಡಿಜಿಟಲ್ ವಿಲೇಜ್ ಮ್ಯಾಪ್ ನೊಂದಿಗೆ, ಗ್ರಾಮ ಹುಟ್ಟಿದ ಮಾಹಿತಿಯನ್ನು ಒಳಗೊಂಡಂತೆ, ಜನಸಂಖ್ಯೆ, ಮನೆತನ, ಭೂ ಬಳಕೆ, 1947 ರಿಂದ  ಇಲ್ಲಿಯವರೆಗೂ ಕೈಗೊಂಡಿರುವ ಯೋಜನೆಗಳು ಮತ್ತು 2047 ರವರೆಗೆ ಗ್ರಾಮದ ಜನರ ನೀಡ್ ಬೇಸ್ಡ್ ಯೋಜನೆಗಳ ಮಾಹಿತಿಯೊಂದಿಗೆ, ಏನೇನು ಅಗತ್ಯವಿದೆ ಎಂಬ ಬಗ್ಗೆ ಒಂದು ಗ್ರಾಮದ ಮಾದರಿ ಸಿದ್ಧಪಡಿಸಿ, ಹಾಲಿ ಇರುವ ಮಾಹಿತಿಯನ್ನು ಯಾವ, ಯಾವ ಇಲಾಖೆಗಳಿಂದ ದೃಢೀಕರಿಸಬೇಕು ಎಂಬ ಬಗ್ಗೆ ನಿರ್ಧಿಷ್ಟವಾದ ಟೆಂಪ್ಲೇಟ್ ಸಿದ್ಧಪಡಿಸಿ ನಂತರ ರಾಜ್ಯದ ಪ್ರತಿಯೊಂದು ಗ್ರಾಮದ ಪುಸ್ತಕ ಸಿದ್ಧಪಡಿಸಲು ಅನೂಕೂಲವಾಗಲಿದೆ ಎಂಬ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳಲಾಯಿತು.

ಶ್ರೀ ವಿಜಯ್ ರವರು ಪರಿಣಿತರೊಂದಿಗೆ ವಿಚಾರಸಂಕಿರಣ, ಸಂವಾದ ನಡೆಸಿ ಒಂದು ಅಂತಿಮ ರೂಪುರೇಷೆ ಸಿದ್ಧಪಡಿಸ ಬಹುದಾಗಿದೆ, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳ ಸಹಭಾಗಿತ್ವದೊಂದಿಗೆ, ಆಯಾ ಗ್ರಾಮದ ಸಂಶೋದಕರು, ಹಿರಿಯರು, ವಿದ್ಯಾರ್ಥಿಗಳು, ಯುವಕರು ಹೀಗೆ ಎಲ್ಲಾ ವರ್ಗದವರ ಸಹಕಾರದ ಅಗತ್ಯದ ಬಗ್ಗೆ ಮನವರಿಕೆ ಮಾಡಿದರು.

ರಾಜ್ಯ ಮಟ್ಟದ ನ್ಯಾಷನಲ್ ಯೂತ್ ಟೂರಿಸಂ ಕ್ಲಬ್ ಜನಾಂದೋಲನವನ್ನು ಹಂಪಿ ವಿಶ್ವವಿದ್ಯಾನಿಲಯದಲ್ಲಿ ನಡೆಸುವ ಬಗ್ಗೆಯೂ ಚರ್ಚಿಸಲಾಯಿತು. ಪ್ರವಾಸೋಧ್ಯಮ ಇಲಾಖೆಯ ಉಪನಿರ್ದೇಶಕರಾದ ಶ್ರೀ ತಿಪ್ಪೆಸ್ವಾಮಿರವರು ಸಮಾವೇಶದ ರೂಪುರೇಷೆಗಳ ಒಂದು ಪಿಪಿಟಿ ಸಿದ್ಧಪಡಿಸುವ ಬಗ್ಗೆ  ವಿವರಿಸಿದರು.

ದಿನಾಂಕ:21.03.2023 ರಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಗ್ರಂಥಾಲಯದಲ್ಲಿರುವ ಜಿಲ್ಲಾ ದರ್ಶನ, ತಾಲ್ಲೋಕು ದರ್ಶನ, ನಗರಗಳ ದರ್ಶನ, ಗ್ರಾಮದರ್ಶನ ಇತ್ಯಾದಿ ಪುಸ್ತಕಗಳ ಮಾಹಿತಿ ಸಂಗ್ರಹಿಸಲಾಯಿತು.

ಮುಖ್ಯ ಗ್ರಂಥಪಾಲಕರಾದ ಶ್ರೀ ಗುಡಿಮನಿಯವರು ವಿಶೇಷ ಆಸಕ್ತಿ ವಹಿಸಿದಂತೆ ಕಾಣಿಸಿತು, ತಮ್ಮ ಗ್ರಾಮದ ಪುಸ್ತಕ ಬರೆಯುವ ಮೂಲಕ ಮಾದರಿ ಪುಸ್ತಕ ಮಾಡುವ ಇಚ್ಚೆ ಇರುವಂತಿತ್ತು.

ಜೊತೆಯಲ್ಲಿ ಶ್ರೀವೇದಾನಂದಾಮೂರ್ತಿ ಇದ್ದರು.