8th June 2023
Share

TUMAKURU:SHAKTHIPEETA FOUNDATION

ಹಾಸನ ಜಿಲ್ಲೆಯ, ಸಕಲೇಶಪುರ ತಾಲ್ಲೋಕು ರೆಸಾರ್ಟ್ ಹಾಗೂ ಹೋಂಸ್ಟೇ ಮಾಲೀಕರ ಎರಡು ಅಸೋಯೇಷನ್‍ಗಳು, ದಕ್ಷಿಣ ಭಾರತದ ಕೇಂದ್ರ ಪ್ರವಾಸೋಧ್ಯಮ ರಿಜನಲ್ ಡೈರೆಕ್ಟರ್ ಶ್ರೀ ಮಹಮ್ಮದ್ ಫರೂಕ್ ರವರ ಜೊತೆ ಸಕಲೇಶಪುರ ಟೂರಿಸಂ ಬ್ರ್ಯಾಂಡ್ ಮಾಡುವ ಬಗ್ಗೆ ಸುಧೀರ್ಘ ಸಮಾಲೋಚನೆ ನಡೆಸಲಾಯಿತು.

ಸಕಲೇಶಪುರ ರೋಟರಿ ಶಾಲೆಯ ವಿದ್ಯಾರ್ಥಿಗಳೊಂದಿಗೆ ಇಂಡಿಯಾ @ 100 ಅಂಗವಾಗಿ ನಡೆದ  ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಈ ಬೇಡಿಕೆ ಮುಂದಿಟ್ಟದ್ದರು. ಜೊತೆಗೆ ಸಕಲೇಶಪುರ ಮೂಕಾನನ ರೆಸಾರ್ಟ್‍ನಲ್ಲಿ ನಡೆದ ಸಭೆಯಲ್ಲಿ, ಈ ಎರಡು ಸಂಘಟನೆಗಳ ಮಾಲೀಕರು ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಶ್ರೀ ಮಹಮ್ಮದ್ ಫರೂಕ್ ರವರು ಭಾಗವಹಿಸಿದ್ದವರಿಗೆ ಸಕಲೇಶಪುರ ಟೂರಿಸಂ ಬ್ರ್ಯಾಂಡ್ ಮಾಡಲು, ನಿವiಗೆ ಏನೇನು ಆಗಬೇಕು ಎಂಬ ಬಗ್ಗೆ ಒಂದು ಪರಿಕಲ್ಪನಾ ವರದಿ ಸಿದ್ಧಪಡಿಸಿ, ನಂತರ ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸೋಣ.

ರಾಜ್ಯ ಸರ್ಕಾರದ ಕೆಲಸಗಳನ್ನು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಮಂಜೂರು ಮಾಡಿಸಬೇಕಾಗುವುದು. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ಕೇಂದ್ರ ಸರ್ಕಾರದಿಂದ ಮಂಜೂರು ಮಾಡಿಸ ಬಹುದಾಗಿದೆ ಎಂಬ ಬಗ್ಗೆ ಮಾಹಿತಿ ನೀಡಿದರು.

ಎಲ್ಲರ ಅಭಿಪ್ರಾಯಗಳೊಂದಿಗೆ ಮುಂದಿನ ಒಂದು ತಿಂಗಳೊಳಗಾಗಿ ಪರಿಕಲ್ಪನಾ ವರದಿ ನೀಡುವುದಾಗಿ ಎರಡು ಸಂಘಟನೆಗಳ ಪದಾಧಿಕಾರಿಗಳು ತಿಳಿಸಿದರು.