12th September 2024
Share

TUMAKURU:SHAKTHI PEETA FOUNDATION

ಆಯಾ ಗ್ರಾಮದ ನಾಲೇಡ್ಜ್ ಪರ್ಸನ್ ಗಳ ಮಾರ್ಗದರ್ಶನದಲ್ಲಿ, ಆಯಾ ಗ್ರಾಮದ ವಿದ್ಯಾರ್ಥಿಗಳು, ಆಯಾ ಗ್ರಾಮದಲ್ಲಿರುವ ಎಲ್ಲಾ ವರ್ಗದ ಸಂಘ ಸಂಸ್ಥೆಗಳ, ಹಿರಿಯರ ಸಹಭಾಗಿತ್ವದಲ್ಲಿ, ವಿವಿಧ ವರ್ಗದ ಜನರ ನೀಡ್ ಬೇಸ್ಡ್  ಯೋಜನೆಗಳೇ, ಇಂಡಿಯಾ @ 100 ಅಂಗವಾಗಿ ಸಿದ್ಧಪಡಿಸುವ ನವ ಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ಕ್ಕೆ ಅಡಿಗಲ್ಲು ಆಗಬೇಕು.

  ಈ ಕೆಳಕಂಡ ಮೂರು ಯೋಜನೆಗಳ ಬಗ್ಗೆ ಜನಜಾಗೃತಿ ಆಗಬೇಕಾದರೆ, ಕೇಂದ್ರ ಸರ್ಕಾರ ಜಾರಿಗೊಳಿಸಿರುವ, 6 ನೇ ತರಗತಿ ಮೇಲ್ಪಟ್ಟ ಎಲ್ಲಾ ಶಾಲಾ, ಕಾಲೇಜುಗಳಲ್ಲಿಯೂ ರಚಿಸಬೇಕಾಗಿರುವ  ನ್ಯಾಷನಲ್ ಟೂರಿಸಂ ಯೂತ್ ಕ್ಲಬ್ ಗಳು  ಮತ್ತು ಎನ್.ಎಸ್.ಎಸ್, ಎನ್.ಸಿ.ಸಿ. ಇಕೋಕ್ಲಬ್, ಸ್ಕೌಟ್ಸ್  ಅಂಡ್ ಗೈಡ್ಸ್, ರೆಡ್ ಕ್ರಾಸ್ ಕ್ಲಬ್, ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ಆಕ್ಟಿವಿಟಿ ಪಾಯಿಂಟ್ಸ್, ವಿದ್ಯಾರ್ಥಿಗಳ ಪ್ರಾಜೆಕ್ಟ್ ವರ್ಕ್ ಮತ್ತು ವಿಶ್ವ ವಿದ್ಯಾನಿಲಯದಲ್ಲಿರುವ ಅಧ್ಯಯನ ಪೀಠಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ.

ರಾಜ್ಯ ಸರ್ಕಾರದ ಯೋಜನಾ ಇಲಾಖೆ, ರಾಜ್ಯದಲ್ಲಿ ‘ನಾಲೇಡ್ಜ್ ಬ್ಯಾಂಕ್’ ಸ್ಫಾಪಿಸಲು ವಿಶೇಷ ಆಸಕ್ತಿ ವಹಿಸಿದೆ, ಯಾವುದೇ ಊರಿನ ಒಬ್ಬ ಕಟ್ಟ ಕಡೆಯ ವ್ಯಕ್ತಿ ನೀಡುವ ಸಲಹೆಗಳು ಇಲ್ಲಿ ಸಂಗ್ರಹವಾಗಲಿವೆ, ಯಾರು ಯಾವ ಯೋಜನೆ ಬಗ್ಗೆ ಸಲಹೆ ನೀಡಿದ್ದಾರೆ ಎಂಬ ಡಿಜಿಟಲ್ ದಾಖಲೆಯಾಗಲಿದೆ.

  ಪ್ರವಾÀಸೋದ್ಯೋಮ ಸಚಿವರಾದ ಶ್ರೀ ಆನಂದ್ ಸಿಂಗ್ ರವರು ಪ್ರತಿನಿಧಿಸುವ ವಿಜಯ ನಗರ ಜಿಲ್ಲೆಯಲ್ಲಿ ಚಾಲನೆ ನೀಡಲು ಸಚಿವರು ಆದೇಶ ನೀಡಿದ ಹಿನ್ನಲೆಯಲ್ಲಿ, ರಾಜ್ಯ ಮಟ್ಟದ ಜನಜಾಗೃತಿ ಆಂದೋಲನವನ್ನು ವಿಜಯನಗರ ಜಿಲ್ಲೆಯ, ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದಲ್ಲಿ ಹಾಗೂ ಏಕ ಕಾಲದಲ್ಲಿ ವಿಜಯನಗರ ಜಿಲ್ಲೆಯ ಪ್ರತಿಯೊಂದು ಶಾಲಾ ಕಾಲೇಜುಗಳಲ್ಲಿಯೂ ನ್ಯಾಷನಲ್ ಟೂರಿಸಂ ಯೂತ್ ಕ್ಲಬ್ ಆರಂಭಿಸಲು, ರೂಪುರೇಷೆಗಳ ಬಗ್ಗೆ, ವಿಜಯನಗರ ಜಿಲ್ಲೆಯ  ಪ್ರವಾಸೋಧ್ಯಮ ಇಲಾಖೆಯ ಉಪನಿರ್ದೇಶಕರಾದ ಶ್ರೀ ತಿಪ್ಪೆಸ್ವಾಮಿರವರೊಂದಿಗೆ ದಿನಾಂಕ: 21.03.2023 ರಂದು ಹಂಪಿಯಲ್ಲಿ ಸುರ್ಧಿರ್ಘ ಸಮಾಲೋಚನೆ ನಡೆಸಲಾಯಿತು.

ಅವರು ನೀಡಿದ ಉತ್ತರ: ಸಚಿವರ ಆದೇಶ, ಹಿರಿಯ ಅಧಿಕಾರಿಗಳ ಸಲಹೆ ಮತ್ತು ಜಿಲ್ಲಾಧಿಕಾರಿಗಳ ಮಾರ್ಗದರ್ಶನದ ಜೊತೆಗೆ, ನಿಮ್ಮ ಪರಿಕಲ್ಪನೆ ನನಗೆ ಸಂಪೂರ್ಣವಾಗಿ ಅರ್ಥವಾಗಿದೆ. ದೇಶದಲ್ಲಿಯೇ ಮಾದರಿಯಾಗಿ ರೂಪಿಸಲು ಶ್ರಮಿಸುತ್ತೇವೆ ಎಂಬುದಾಗಿತ್ತು.

ಜೊತೆಯಲ್ಲಿ ಹಾಸನ ಜಿಲ್ಲೆಯ ಸಕಲೇಶಪುರದ ಮೂಕಾನನ ರೆಸಾರ್ಟ್ ನ ಶ್ರೀ ವೇದಾನಂದಾಮೂರ್ತಿ ಇದ್ದರು.

ಊರಿಗೊಂದು ಪುಸ್ತಕ: ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ ದೊರಕಿಸಲು, 1947 ರಿಂದ ಇದೂವರೆಗೂ ಆಯಾ ಊರಿನ ವ್ಯಕ್ತಿಗಳ, ಕುಟುಂಬಗಳ, ಸಮುದಾಯದಗಳಿಗೆ ಆಗಿರುವ ಅಭಿವೃದ್ಧಿ ಯೋಜನೆಗಳು, 2047 ರವರೆಗೆ ಆಗಬೇಕಾಗಿರುವ ಅಭಿವೃದ್ಧಿ ಯೋಜನೆಗಳ ಮಾಹಿತಿಯುಳ್ಳ, ಜಿಐಎಸ್ ಆಧಾರಿತ ಅಭಿವೃದ್ಧಿ ಡಿಜಿಟಲ್ ಮ್ಯಾಪ್’ ನೊಂದಿಗೆ.

ಊರಿಗೊಂದು ಥೀಂ ಪಾರ್ಕ್/ಪವಿತ್ರ ವನ: ಗತ ಕಾಲದ ವೈಭವ ನೆನಪಿಸುವ, ಆಯಾ ಗ್ರಾಮದ ಕಲೆ. ಸಂಸ್ಕøತಿ, ಇತಿಹಾಸ, ಧಾರ್ಮಿಕ, ಅಭಿವೃದ್ಧಿ ಪ್ರಾತ್ಯಾಕ್ಷಿಕೆ

ಊರಿಗೊಂದು ಕೆರೆ ಕೆರೆಗೆ ನದಿ ನೀರು: ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ದೊರಕಿಸಲು ಮತ್ತು ರೈತನ ಬದುಕು ಹಸನು ಮಾಡಲು, ರಾಜ್ಯದ ಪ್ರತಿಯೊಂದು ಗ್ರಾಮಕ್ಕೂ ನದಿ ನೀರಿನ ಅಲೋಕೇಷನ್, 2047 ರ ಒಳಗೆ ಸಂಪೂರ್ಣ ಜಾರಿ.

   ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು 2023-24 ರ ಆಯವ್ಯಯದಲ್ಲಿ ಮಂಡಿಸಿರುವ 247 ನೇ ಅಂಶದ ಹಿನ್ನಲೆಯಲ್ಲಿ, ಯೋಜನಾ ಸಚಿವರಾದ ಶ್ರೀ ಮುನಿರತ್ನರವರು ಮತ್ತು ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ ಕಾರ್ಯದರ್ಶಿಯವರಾದ ಶ್ರೀ ಮತಿ ಶಾಲಿನಿ ರಜನೀಶ್ ರವರು ವಿಶೇಷ ಆಸಕ್ತಿ ವಹಿಸಿದ್ದಾರೆ. ಪ್ರವಾಸೋಧ್ಯಮ ಸಚಿವರಾದ ಶ್ರೀ ಆನಂದ್ ಸಿಂಗ್ ರವರು ಸಹಮತ ವ್ಯಕ್ತ ಪಡಿಸಿದ್ದಾರೆ.  

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಅಧ್ಯಕ್ಷತೆಯ ತುಮಕೂರು ಜಿಲ್ಲಾ ದಿಶಾ ಸಮಿತಿಯ ಮೇಲ್ಕಂಡ ನಿರ್ಣಯವನ್ನು, ಮಾನ್ಯ ಮುಖ್ಯಮಂತ್ರಿಯವರ ಅಧ್ಯಕ್ಷತೆಯ ರಾಜ್ಯ ಮಟ್ಟದ ದಿಶಾ ಸಮಿತಿಯ ಮೂಲಕ ಅನುಷ್ಠಾನ ಮಾಡುವುದು ಅಗತ್ಯವಾಗಿದೆ.

ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ತುಮಕೂರು ನಗರದಲ್ಲಿ ಜನಜಾಗೃತಿ ಆಂದೋಲನಕ್ಕೆ ಚಾಲನೆ ನೀಡಲು ಮನವಿ ಮಾಡಿದ್ದರು.