TUMAKURU:SHAKTHIPEETA FOUNDATION
ಕರ್ನಾಟಕ ರಾಜ್ಯದಲ್ಲಿ 5951 ಗ್ರಾಮ ಪಂಚಾಯಿತಿಗಳಿವೆಯಂತೆ, 315 ನಗರ ಸ್ಥಳೀಯ ಸಂಸ್ಥೆಗಳಿವೆಯಂತೆ.(ಬೃಹತ್ ಬೆಂಗಳೂರು-1, ನಗರ ಪಾಲಿಕೆಗಳು-10, ನಗರಸಭೆ-61, ಪುರಸಭೆ-125, ಪಟ್ಟಣ ಪಂಚಾಯಿತಿ:114 ಮತ್ತು ನೋಟಿಪೈಡ್ ಎರಿಯಾ-4)
2023 ರಲ್ಲಿ ನಡೆಯುವ 224 ವಿಧಾನಸಭೆ ಚುನಾವಣೆಗೆ ಸುಮಾರು 58282 ಮತಗಟ್ಟೆಗಳು ಇವೆಯಂತೆ. ಸುಮಾರು 30000 ಕ್ಕೂ ಹೆಚ್ಚು ಗ್ರಾಮಗಳಾಗಿರಬಹುದು.
ನಗರ ಪ್ರದೇಶಗಳಲ್ಲಿ ವಾರ್ಡ್‍ಗಳು ಮತ್ತು ಬೂತ್‍ಗಳು ಜನಸಂಖ್ಯೆಗೆ ಅನುಗುಣವಾಗಿ ಬದಲಾಗುತ್ತವೆ, ಒಮ್ಮೆ ಬಡಾವಣೆಗಳ ವಿಸ್ಥೀರ್ಣ ಘೋಷಣೆ ಮಾಡಿದರೆ, ಪಕ್ಕಾ ಇರುತ್ತದೆಯಂತೆ.
ಯೋಜನಾ ಇಲಾಖೆ ಇಂಡಿಯಾ @ 100 ಅಂಗವಾಗಿ ನವಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ಸಿದ್ಧಪಡಿಸಲು, ಗ್ರಾಮ ಪಂಚಾಯತ್ ಗಳಲ್ಲಿ ಮತ್ತು ನಗರಸ್ಥಳೀಯ ಸಂಸ್ಥೆಗಳಲ್ಲಿ ಇರುವ ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿಗಳಲ್ಲಿ ಪ್ರತಿ ಗ್ರಾಮವಾರು/ಬಡಾವಣೆವಾರು ನಾಲೇಡ್ಜಬಲ್ ಪರ್ಸನ್‍ಗಳ ಪಟ್ಟಿ ಮತ್ತು ನಾಟಿ ವೈಧ್ಯರ, ಹಕೀಮರ, ಪಾರಂಪರಿಕ ವೈಧ್ಯರ ಪಟ್ಟಿಗಳನ್ನು ಮಾಡಬೇಕಿದೆ.
ಇವರ ಮೂಲಕ ಆಯಾ ಪ್ರದೇಶಗಳ ವ್ಯಾಪ್ತಿಯ ಅಭಿವೃದ್ಧಿ ಸಲಹೆಗಳನ್ನು ಕ್ರೋಡೀಕರಿಸುವುದು ಸರ್ಕಾರದ ಉದ್ದೇಶವಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ನಗರಾಭಿವೃದ್ಧಿ ಇಲಾಖೆಗಳಿಗೆ, ಯೋಜನಾ ಇಲಾಖೆಯಿಂದ ಪತ್ರ ಬರೆದು ಅವರ ಅಭಿಪ್ರಾಯಗಳನ್ನು ಕೋರಲಾಗಿದೆ.
ಇನ್ನೂ ಎರಡು ಇಲಾಖೆಗಳಿಂದ ಯಾವುದೇ ಉತ್ತರ ಬಂದಿಲ್ಲವಂತೆ. ನಗರಾಭಿವೃದ್ಧಿ ಇಲಾಖೆಗೆ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ.