9th October 2024
Share

TUMAKURU:SHAKTHIPEETA FOUNDATION

ಇಂಡಿಯಾ @ 100 ಅಂಗವಾಗಿ ನವಕರ್ನಾಟಕ ವಿಷನ್ ಡಾಕ್ಯುಮೆಂಟ್-2047  ಸಿದ್ಧತೆಗೆ, ರಾಜ್ಯದ ಎಲ್ಲಾ ವಿಧವಾದ ವಿಶ್ವ ವಿದ್ಯಾನಿಲಯಗಳಲ್ಲಿರುವ ಅಧ್ಯಯನ ಪೀಠಗಳ ಮಾಹಿತಿ ಪಡೆಯಲು ಹೈಯರ್ ಎಜುಕೇಷನ್ ಕೌನ್ಸಿಲ್ ಉಪಾಧ್ಯಕ್ಷರÀ ಕಚೇರಿಗೆ ಹೋಗಿ, ಕೆಲವು ಮಾಹಿತಿ ಪಡೆಯಲು ಯೋಚಿಸಿದೆ.

  ಉಪಾಧ್ಯಕ್ಷರಾಗಿ ಶ್ರೀ ತಿಮ್ಮೆಗೌಡರು ಇದ್ದಾರೆ, ಅವರು ನಿಮ್ಮ ತುಮಕೂರು ಜಿಲ್ಲೆಯವರು ಭೇಟಿಯಾಗಿ ಎಂದು, ನನ್ನ ಸ್ನೇಹಿತರೊಬ್ಬರು ನಂಬರ್ ಕೊಟ್ಟಿದ್ದರು. ಅವರ ಕಚೇರಿಗೆ ಹೋಗಬೇಕು ಎನ್ನುವಷ್ಟರಲ್ಲಿ, ಅವರು ಈಗ ಬದಲಾಗಿದ್ದಾರೆ, ನಿಮ್ಮ ತುಮಕೂರು ವಿಶ್ವ ವಿದ್ಯಾನಿಲಯದಲ್ಲಿ ವಿಸಿಯಾಗಿದ್ದ ಶ್ರೀ ವೈ.ಎಸ್.ಸಿದ್ಧೇಗೌಡರವರು ಹೊಸದಾಗಿ ಬಂದಿದ್ದಾರೆ ಎಂದರು.

ನಾನು ಅವರಿಗೆ ಹೇಳಿದ ಮಾತು ಸಿದ್ಧೇಗೌಡರು ಹೋದ ಪೀಶಾಚಿ ಅಂದರೆ ಬಂದೆ ಗವಾಕ್ಷಿಲಿಎನ್ನುತ್ತಾರೆ ನೋಡಿ, ಎಂದಾಗ ಅವರು ಜೋರಾಗಿ ನಕ್ಕರು. ಏಕೆ ಏನಾಗಿತ್ತು ಎಂದಾಗ, ತುಮಕೂರು ವಿಶ್ವ ವಿದ್ಯಾನಿಲಯದಲ್ಲಿ ಇರುವ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠದ ಬಗ್ಗೆ ನನಗೂ ಅವರಿಗೂ, ವೈಮನಸ್ಯ ಇತ್ತು. ಈಗ ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿರುವ ಅಧ್ಯಯನ ಪೀಠಗಳ ಬಗ್ಗೆ, ಮತ್ತೆ ಶುರು ಎಂದು ಸ್ವಾರಸ್ಯಕರವಾಗಿ ತಿಳಿಸಿದೆ.

ನಂತರ ಫೋನ್ ಮಾಡಿದೆ, ಕಚೇರಿಯಲ್ಲಿದ್ದೇನೆ ಬೇಗ ಬನ್ನಿ ಎಂದರು. ನನಗೆ ಅವರ ನೂತನ ಕಚೇರಿ ಮಾಹಿತಿ ಇರಲಿಲ್ಲ. ಹಳೆ ಕಚೇರಿಗೆ ಹೋಗಿ, ನೂತನ ಕಚೇರಿಗೆ ಹೋಗುವ ವೇಳೆಗೆ ಅವರಿಂದ ಫೋನ್ ಬಂತು, ನಾನು ಸಿಎಂ ಮನೆಗೆ ಬಂದೆ, ಇಲ್ಲಿಗೆ ಬನ್ನಿ ಮಾತನಾಡೋಣ ಎಂದು ಕರೆದರು.

ಸಿದ್ದೇಗೌಡರು ನನ್ನ ಬರವಣೆಗೆಯನ್ನು ಗಮನಿಸುತ್ತಾರೆ, ಜೊತೆಗೆ ಬೆಳಿಗ್ಗೆ ಎದ್ದ ತಕ್ಷಣ ಒಂದು ದೇವರ ಫೋಟೋ ರವಾನಿಸುತ್ತಾರೆ. ನಾನು ಸಿಎಂ ಮನೆಗೆ ಹೋಗಿ, ನನ್ನ ಭೇಟಿ ವಿಚಾರ ಪ್ರಸ್ತಾಪ ಮಾಡಿದೆ.

ರಾಜ್ಯದ ಎಲ್ಲಾ ವರ್ಗದ ವಿಶ್ವ ವಿದ್ಯಾನಿಲಯಗಳಲ್ಲಿರುವ ಅಧ್ಯಯನ ಪೀಠಗಳ ಪಟ್ಟಿ, ಸ್ಥಾಪನೆಯಾದ ದಿನದಿಂದ ಏನೇನು ಅಧ್ಯಯನ ಮಾಡಿದ್ದಾರೆ, ಅವುಗಳ ಸ್ಥಿತಿ ಗತಿ ಹೇಗೆ ಇದೆ, ಎಂಬ ಮಾಹಿತಿ ನನಗೆ ಬೇಕು ಸಾರ್ ಎಂದಾಗ ಅವರು ಮಾತನಾಡುವ ಮೊದಲೇ,

 ಅವರ ಜೊತೆಯಲ್ಲಿದ್ದವರು ಹೇಳಿದ ಮಾತು, ಅಧ್ಯಯನ ಪೀಠಗಳು ಸಮಾಧಿ ಪೀಠ’ ಗಳಾಗಿವೆ, ಇಲ್ಲಿಯವರೆಗೂ ಏನಾಗಿವೆ ಎಂಬ ಮಾಹಿತಿ ಬಿಟ್ಟು ಬಿಡಿ, ಮುಂದೆ ಯಾವ ರೀತಿ ಅವುಗಳಿಗೆ ಪುನರ್ ಜೀವನ ಕೊಡಬಹುದು ಎಂಬ ಬಗ್ಗೆ ಚಿಂತನೆ ಆರಂಭಿಸಿ ಎಂಬ ಸಲಹೆ ನೀಡಿದರು. ಅದು ಎಲ್ಲರಿಗೂ ಒಪ್ಪಿಗೆ ಆಯಿತು.

ಇದೊಂದು ಒಳ್ಳೆಯ ಕೆಲಸ, ನಾನೂ ಸಂಪೂರ್ಣವಾಗಿ ಸಹಕರಿಸುತ್ತೇನೆ. ನಮ್ಮ ಪ್ರಧಾನಿಯವರು ಮತ್ತು ಮುಖ್ಯಮಂತ್ರಿಯವರ ಆಶಯದಂತೆ, 2047 ರ ವೇಳೆಗೆ ಭಾರತ ವಿಶ್ವ ಗುರು’ ವಾಗಲು ಶಕ್ತಿ ಮೀರಿ ಶ್ರಮಿಸೋಣ. ಇದು ಸಿದ್ದೇಗೌಡರು ಹೇಳಿದ ಖಡಕ್ ಮಾತು,

ಮುಕ್ತವಾಗಿ ಅವರೊಂದಿಗೆ ಚರ್ಚಿಸಬೇಕಾದ ಅಂಶಗಳ ಪಟ್ಟಿ

  1. ರಾಜ್ಯದ 224 ವಿಧಾನಸಭಾ ಕ್ಷೇತ್ರವಾರು, ಜಿಲ್ಲಾವರು ವಿಶ್ವ ವಿದ್ಯಾನಿಲಯದ ಪಟ್ಟಿ.
  2. ವಿಶ್ವ ವಿದ್ಯಾನಿಲಯವಾರು ಅಧ್ಯಯನ ಪೀಠಗಳ ಪಟ್ಟಿ.
  3. ಇನ್ನೂ ಯಾವ ವಿದ್ಯಾನಿಲಯದಲ್ಲಿ, ಯಾವ ಅಧ್ಯಯನ ಪೀಠಗಳ ಸ್ಥಾಪನೆ ಬಗ್ಗೆ ಚರ್ಚೆಯಾಗುತ್ತಿದೆ ಅಥವಾ ಪ್ರಗತಿಯಲ್ಲಿವೆ ಅವುಗಳ ಪಟ್ಟಿ.
  4. ಅಧ್ಯಯನ ಪೀಠಗಳ ಮೂಲಭೂತ ಸೌಕರ್ಯ ಮತ್ತು ಉದ್ಯೋಗಿಗಳ ಮಾಹಿತಿ. 
  5. ಅಧ್ಯಯನ ಪೀಠಗಳಿಗೆ 224 ವಿಧಾನ ಸಭಾ ಕ್ಷೇತ್ರವಾರು ಮತ್ತು ಇಲಾಖಾವಾರು, ಯೋಜನಾವಾರು ಹಂಚಿಕೆ ಪಟ್ಟಿ.
  6. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ವಿದ್ಯಾನಿಲಯಗಳಲ್ಲಿರುವ ಅಧ್ಯಯನ ಪೀಠಗಳ ಸಮನ್ವಯತೆ ಬಗ್ಗೆ ನಿರ್ದಿಷ್ಠ ರೂಪುರೇಷೆ ಸಿದ್ಧಪಡಿಸುವುದು.
  7. ತಾಜಾ ಮಾಹಿತಿಗಾಗಿ, ಮಾನಿಟರಿಂಗ್ ಸೆಲ್ ಸ್ಥಾಪಿಸಲು ರೂಪುರೇಷೆ ಸಿದ್ಧಪಡಿಸುವುದು.
  8. ಇಂಡಿಯಾ @ 100 ಅಂಗವಾಗಿ ನವ ಕರ್ನಾಟಕ ವಿಷನ್ ಡಾಕ್ಯುಮೆಂಟ್-2047  ಪೂರಕವಾಗಿ ನಾಲೇಡ್ಜ್ ಬ್ಯಾಂಕ್ ಸ್ಥಾಪಿಸಲು ರೂಪುರೇಷೆ ಸಿದ್ಧಪಡಿಸುವುದು.
  9. ಎಲ್ಲಾ ಹಂತದ ವಿದ್ಯಾರ್ಥಿಗಳ ಸಮರ್ಪಕ ಬಳಕೆಗೆ ರೂಪುರೇಷೆ ಸಿದ್ಧಪಡಿಸುವುದು.

ತಾವೂ ಸಲಹೆ ನೀಡಬಹುದು.