22nd December 2024
Share

TUMAKURU:SHAKTHIPEETA FOUNDATION

75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ, 100 ನೇ ವರ್ಷದ ಸ್ವಾತಂತ್ರ್ಯ ಆಚರಿಸಲು, ಈಗಿನಿಂದಲೇ ಸಿದ್ಧತೆ ಆರಂಭ ಮಾಡಿದ್ದೇವೆ.

ಮೀಸಲಾತಿ ಜೇನುಗೂಡು ಎಂದು ಸ್ವತಃ ರಾಜ್ಯದ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ರವರು ಪದೇ, ಪದೇ ಹೇಳುತ್ತಿದ್ದಾರೆ. ಹೌದು ಎಲ್ಲರೂ ಒಪ್ಪುವ ಮಾತು. ಬೆಂಕಿಗೆ ಗಂಟೆ ಕಟ್ಟುವರು ಯಾರಾದರೂ ಒಬ್ಬರು ಬೇಕಲ್ಲ.

  1. ಡಾ.ಅಂಬೇಡ್ಕರ್ ರವರ ಸಂವಿಧಾನದ ಪ್ರಕಾರ ಮೀಸಲಾತಿ.
  2. 1947 ರಿಂದ ಇದೂವರೆಗೂ ಆಳ್ವಿಕೆ ಮಾಡಿದ ಎಲ್ಲಾ ಸರ್ಕಾರಗಳ ಕಾಲದ ಮೀಸಲಾತಿ.
  3. ರಾಜಕೀಯ ಪಕ್ಷಗಳವಾರು ಪ್ರತಿಪಾದಿಸುವ ಮೀಸಲಾತಿ.
  4. ಜಾತಿವಾರು/ಉಪಜಾತಿವಾರು ಸಂಘಟನೆಗಳ ಪ್ರಕಾರ ಮೀಸಲಾತಿ.
  5. ಪ್ರತಿಯೊಂದು ಜಾತಿ/ಉಪಜಾತಿಗಳ ಆರ್ಥಿಕ ಸ್ಥಿತಿಗನುಣವಾಗಿ ಮೀಸಲಾತಿ.
  6. ಧರ್ಮವಾರು ಸಂಘಟನೆಗಳ ಪ್ರಕಾರ ಮೀಸಲಾತಿ.
  7. ಇದೂವರೆಗೂ ನಡೆಸಿರುವ ಸಂಶೋಧಕರ ವರದಿಗಳ ಪ್ರಕಾರ ಮೀಸಲಾತಿ.
  8. ಸರ್ಕಾರವೇ ನಡೆಸಿರುವ ಜಾತಿವಾರು ಆರ್ಥಿಕ ಸಮೀಕ್ಷೆವಾರು ಮೀಸಲಾತಿ.
  9. ಜಾತಿಗೊಂದು ನಿಗಮ/ಬೋರ್ಡ್/ಕಾಪೋರೇಷನ್/ ಅಧ್ಯಯನ ಕೇಂದ್ರ- ಮೀಸಲಾತಿ.

ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು 1947 ರಿಂದ 2023 ರವರೆಗಿನ, ಈ ಮೇಲ್ಕಂಡ ಅಂಶಗಳ ಬಗ್ಗೆ ಸರ್ಕಾರದ ಸ್ಪಷ್ಟನೆ ನೀಡಲು ಸಾಧ್ಯವೇ?

ವಿರೋಧ ಪಕ್ಷದ ನಾಯಕರಾದ ಶ್ರೀ ಸಿದ್ಧರಾಮಯ್ಯನವರು 1947 ರಿಂದ 2023 ರವರೆಗಿನ, ಈ ಮೇಲ್ಕಂಡ ಅಂಶಗಳ ಬಗ್ಗೆ ತಮ್ಮ ಸ್ಪಷ್ಟನೆ ನೀಡಲು ಸಾಧ್ಯವೇ?

ಜನತಾದಳದ ಶಾಸಕಾಂಗ ಪಕ್ಷದ ನಾಯಕರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿರವರು 1947 ರಿಂದ 2023 ರವರೆಗಿನ, ಈ ಮೇಲ್ಕಂಡ ಅಂಶಗಳ ಬಗ್ಗೆ ತಮ್ಮ ಸ್ಪಷ್ಟನೆ ನೀಡಲು ಸಾಧ್ಯವೇ?

ಹಿಟ್ ಅಂಡ್ ರನ್ ರೀತಿ ಹೇಳಿಕೆಗಳಿಗೆ ಕಡಿವಾಣ ಹಾಕಿ, ರಾಜಕೀಯ ಹೇಳಿಕೆಗಳಿಗೆ ಇತಿಶ್ರೀ ಹಾಡಿ, ವಾಸ್ತವಿಕವಾದ ಸತ್ಯವನ್ನು ಜನತೆಯ ಮುಂದೆ ಮಂಡಿಸಿ, ತಮ್ಮ ಘನತೆ-ಗೌರವ ಹೆಚ್ಚಿಸಿಕೊಳ್ಳಿ.

ಮುಂಬರುವ ವಿಧಾನಸಭಾ ಚುನಾವಣೆಗೆ, ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳು, ಈ ಮೇಲ್ಕಂಡ ಅಂಶಗಳ ವರದಿಯಾಧರಿv, ತಮ್ಮ, ತಮ್ಮ ಪಕ್ಷದ À ‘ಮೀಸಲಾತಿ ಚುನಾವಣಾ ಪ್ರಣಾಳಿಕೆ’ ಘೋಷಣೆ ಮಾಡುವಿರಾ?

ಹಗಲೆಲ್ಲಾ ಪತ್ರಿಕಾ ಹೇಳಿಕೆ ನೀಡಿ, ರಾತ್ರಿಯೆಲ್ಲಾ ಸರ್ವಪಕ್ಷಗಳ ನಾಯಕರು ಸೇರಿ —– ?

ಅಥವಾ ಯಾವುದಾದರೂ ಅಧ್ಯಯನ ಸಂಸ್ಥೆ, ಈ ಮೇಲ್ಕಂಡ ಅಂಶಗಳ ಬಗ್ಗೆ ತಮ್ಮ ಸ್ಪಷ್ಟನೆ ನೀಡಲು ಸಾಧ್ಯವೇ?

ಮೀಸಲಾತಿ ಸತ್ಯದ ಹುಡುಕಾಟ ಆರಂಭಿಸಲಾಗಿದೆ.

ತಾವೂ ಸಲಹೆ ನೀಡಬಹುದಾಗಿದೆ.