31st October 2024
Share

ಪಿಜೆಸಿ:ನೇಚರ್ ಈಸ್ ಗಾಡ್: ಪಂಚವಟಿ ಗಿಡ

TUMAKURU:SHAKTHIPEETA FOUNDATION

ಪಿಜೆಸಿ ನಿವಾಸಿಗಳ ನೇತೃತ್ವದಲ್ಲಿ ದಿನಾಂಕ: 23.10.2023 ರಂದು ಬೆಂಗಳೂರಿನ ಪ್ರಿಸ್ಟೇಜ್ ಜಿಂದಾಲ್ ಸಿಟಿಯಲ್ಲಿ ಪಂಚವಟಿ ಗಿಡಗಳನ್ನು ಹಾಕಲಾಯಿತು. ಗಿಡ ಬೆಳೆಸುತ್ತಿರುವ ಪಿಜೆಸಿ ನಿವಾಸಿಗಳ ಕಾಳಜಿ ಅದ್ಭುತ.

ನಾನು ಬೆಂಗಳೂರಿನ ಪಿಜೆಸಿ ನಿವಾಸಿಯಾಗಿ ಬಂದ ಉದ್ದೇಶವೇ ‘ಇಂಡಿಯಾ @ 100 ಅಂಗವಾಗಿ ನವಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ‘ ಅನ್ನು ಸಿದ್ಧಪಡಿಸಲು ಶ್ರಮಿಸುವುದಾಗಿತ್ತು.

ಇದರ ಗುರುತಾಗಿ ನೇಚರ್ ಈಸ್ ಗಾಡ್ ಎಂಬ ಪರಿಕಲ್ಪನೆಯೊಂದಿಗೆ ಪಿಜಿಸಿ ನಿವಾಸಿ ಶ್ರೀ ಸಿದ್ಧಲಿಂಗಪ್ಪನವರ ಬಳಿ ಹಂಚಿಕೊಂಡಾಗ ಚಾಲನೆ ದೊರೆಯಿತು. ಬಹಳಷ್ಟು ಜನ ಸಹಕರಿಸಿದರು. ಕೊರಟಗೆರೆಯ ಪಾರಂಪರಿಕ ವೈಧ್ಯ ಶ್ರೀ ಗುರುಸಿದ್ಧಪ್ಪನವರಿಂದ ತುಮಕೂರಿನಿಂದ ಕೆಲವು ಗಿಡಗಳು ಹಾಗೂ ನಮ್ಮ ಶಕ್ತಿಪೀಠ ಕ್ಯಾಂಪಸ್ ನಿಂದ ಶ್ರೀ ರಾಜೇಶ್ ರವರು ಕೆಲವು ಗಿಡಗಳನ್ನು ತರಿಸÀಲಾಯಿತು.

ಈ ಗಿಡಗಳನ್ನು ಹಾಕಿರುವ ಸ್ಥಳದಲ್ಲಿ ಆಯುಷ್ ಪಾರ್ಕ್ ಮಾಡುವ ಉದ್ದೇಶ ಇನ್ನೂ ಹಿಡೇರಲಿಲ್ಲ. ರೀಡಿಂಗ್ ರೂಂ ನಲ್ಲಿ, ಇಂಡಿಯಾ @ 100 ಅಂಗವಾಗಿ ನವಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ಪೂರಕವಾಗಿ ಗ್ರಂಥಾಲಯ, ಡಿಜಿಟಲ್ ಗ್ರಂಥಾಲಯ, ಹ್ಯೂಮನ್ ಗ್ರಂಥಾಲಯದ ಕನಸು ಕನಸಾಗಿಯೇ ಉಳಿಯಿತು.

ಈ ಎರಡು  ಯೋಜನೆಗಳು ನನೆಗುದಿಗೆ ಬೀಳಲು ಕಾರಣ, ತುಮಕೂರಿನಲ್ಲಿಯೇ ಇಂಡಿಯಾ @ 100 ಅಂಗವಾಗಿ ನವಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ಪೂರಕವಾಗಿ ಗ್ರಂಥಾಲಯ, ಡಿಜಿಟಲ್ ಗ್ರಂಥಾಲಯ, ಹ್ಯೂಮನ್ ಗ್ರಂಥಾಲಯ ಹಾಗೂ ಶಕ್ತಿಪೀಠ ಮ್ಯೂಸಿಯಂ ಮಾಡಬೇಕು ಎಂಬ ನಿರ್ಣಯ ಎಂದರೆ ತಪ್ಪಾಗಲಾರದು. 

ತುಮಕೂರಿನಲ್ಲಿ ಕಟ್ಟಡ ನಿರ್ಮಾಣ ನಡೆಯುತ್ತಿದೆ, ಇನ್ನೂ 6 ತಿಂಗಳೊಳಗೆ ನನ್ನ ಕನಸು ನನಸಾಗಲಿದೆ. ನಮ್ಮ ಈ ಕಟ್ಟಡದ ಹಿಂಬಾಗ ಇರುವ ಉದ್ಯಾನವನದಲ್ಲಿಯೂ ಪಂಚವಟಿ ಗಿಡ ಹಾಕಲು ಚಿಂತನೆಯಿದೆ.

ಜೊತೆಗೆ ಮ್ಯೂಸಿಯಂ/ಗ್ರಂಥಾಲಯದ ಕಟ್ಟಡ ಲೋಕಾರ್ಪಣೆ ಆಗುವ ವೇಳೆಗೆ, ತುಮಕೂರು ನಗರದಲ್ಲಿ ಇರುವ ಸುಮಾರು 935 ಉದ್ಯಾನವನಗಳು ಹಾಗೂ ಕೆರೆಗಳ ಸುತ್ತಲೂ ಒಂದೊಂದು ಪಂಚವಟಿ ತಂಡದ ಗಿಡಗಳನ್ನು ಹಾಕಲು ಯೋಚಿಸಲಾಗಿದೆ.

ಈ ಉದ್ಯಾನವನನ್ನು ತುಮಕೂರಿನ ಇಂಜಿನಿಯರ್ಸ್ ಅಸೋಯೇಷನ್ಸ್ ದತ್ತು ಪಡೆಯಲಿದ್ದಾರೆ. ಈಗಾಗಲೇ ತುಮಕೂರಿನ ಸ್ಮಾರ್ಟ್ ಸಿಟಿ ವತಿಯಂದ ಕಾಮಗಾರಿ ನಡೆಯುತ್ತಿದೆ. ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಚಾಲನೆ ನೀಡಿದ್ದಾರೆ. ಶ್ರೀ ರಾಮಮೂರ್ತಿರವರು ಮತ್ತು ಸತ್ಯಾನಂದ್ ರವರು ನಿರಂತರವಾಗಿ ಶ್ರಮಿಸುತ್ತಿದ್ದಾರೆ.

ಪಿಜೆಸಿಯ ಪಂಚವಟಿ ಗಿಡಗಳಿಗೆ ವರ್ಷಕ್ಕೊಮ್ಮೆ ಪೂಜೆ ಮಾಡಲು ಅದೇ ಶ್ರೀ ಸಿದ್ಧಲಿಂಗಪ್ಪನವರು, ಶ್ರೀ ವಿಶ್ವನಾಥ್ ರವರು, ಶ್ರೀ ಶೇಖಪ್ಪನವರು, ಶ್ರೀ ನಾಗರಾಜ್ ರವರ ಬಳಿ ಸಮಾಲೋಚನೆ ನಡೆಸಿದ ಹಿನ್ನಲೆಯಲ್ಲಿ, ಮೊದಲನೇ ವರ್ಷ 6 ತಿಂಗಳೊಳಗಾಗಿ ಪೂಜೆ ಮಾಡೋಣ ಎಂಬ ತೀರ್ಮಾನಕ್ಕೆ ಬಂದು, ಇಂದು 30.03.2023 ರಂದು ಸಂಜೆ 5.30 ಗಂಟೆಗೆ ಅದ್ದೂರಿ ಪೂಜೆ ಕಾರ್ಯಕ್ರಮ ಇಟ್ಟು ಕೊಂಡಿದ್ದಾರೆ.

ನಿಜಕ್ಕೂ ಪಿಜೆಸಿಯ ನಿವಾಸಿಗಳ ಸಿದ್ಧತೆ ನೋಡಿದರೆ ಖುಷಿ ಎನಿಸುತ್ತದೆ.