22nd December 2024
Share

TUMAKURU:SHAKTHIPEETA FOUNDATION

ಬೆಂಗಳೂರಿನ ಅಶೋಕ್ ಹೋಟೆಲ್ ನಲ್ಲಿ ದಿನಾಂಕ: 29.03.2023 ರಂದು ನಡೆದ ಇಂಡಿಯಾ ಮತ್ತು ಗಬಾನ್ ದೇಶಗಳ ಕಾರ್ಯಕ್ರಮದಲ್ಲಿ Embassy Of Gabon In India Smt Josephine Patrica Ntyam  ರವರ ಭೇಟಿ. ಇಂಡಿಯಾ @ 100 ಅಂಗವಾಗಿ ನವಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ರ ಸಮಾಲೋಚನೆ, ಸುಧೀರ್ಘವಾಗಿ ಚರ್ಚಿಸಲು ದೆಹಲಿಯ ಕಚೇರಿಗೆ ಬರಲು ಆಹ್ವಾನ ನೀಡಿದರು

ಜೊತೆಯಲ್ಲಿ ಶ್ರೀ ತ್ಯಾಗಟೂರು ಸಿದ್ದೇಶ್ ರವರು, ಶ್ರೀ ನಾಗಣ್ಣನವರು, ಮತ್ತು ಶ್ರೀ ವೇದಾನಂದಮೂತಿರವರು ಇದ್ದರು.

ಸಭೆಯಲ್ಲಿ ತುಮಕೂರು ಏರ್ ಪೋರ್ಟ್ ಬಗ್ಗೆ ಒಂದು ಸ್ವಾರಸ್ಯಕರ ಚರ್ಚೆ

ಇಲ್ಲಿ ಭಾಗವಹಿಸಿದ್ದ ಒಬ್ಬರು ನನ್ನೊಂದಿಗೆ ಮಾತು ಆರಂಭಿಸಿದರು, ನಾನು ತುಮಕೂರಿನವನು ಎಂದು ಹೇಳಿದಾಗ, ಅವರು ನನಗೆ ಹೇಳಿದ ಮಾತು ತುಮಕೂರಿನಲ್ಲಿ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಮಾಡಿಸುತ್ತಿದ್ದೇವೆ  ನಿಮಗೆ ಗೊತ್ತಾ ಎಂದರು.

ಹೌದಾ! ಎಲ್ಲಿ ಎಂದೆ, ಫುಡ್ ಪಾರ್ಕ್ ಬಳಿ ಎಂದರು, ನಿಮಗೂ ತುಮಕೂರಿಗೂ ಏನು ಸಂಬಂದ ಎಂದಾಗ ಅವರು ಹೇಳಿದ ಮಾತು ಕೇಳಿ ನಾನು ಸುಸ್ತಾದೆ.

ತುಮಕೂರಿನ ಎಂಪಿ ಶ್ರೀ ಜಿ.ಎಸ್.ಬಸವರಾಜ್ ರವರು, ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯರಾದ ಕುಂದರನಹಳ್ಳಿ ರಮೇಶ್ ರವರು  ನನ್ನ ಆತ್ಮೀಯರು. ಅವರೊಂದಿಗೆ ಸೇರಿ ನಾವೂ ಶ್ರಮಿಸುತ್ತಿದ್ದೇವೆ ಎಂದರು.

ಅವರು ನಿಮಗೆ ಹೇಗೆ ಪರಿಚಯ ಎಂದಾಗ, ಅವರು ಹೇಳಿದ ಮಾತು ನಾನು ಇರುವ ಒಂದು ವಾಟ್ಸ್ ಗ್ರೂಪ್ ನಲ್ಲಿ ಅವರ ನಿಮಗಿದು ಗೊತ್ತೇ? ಇ ಪೇಪರ್ ಶಕ್ತಿಪೀಠ ಬರುತ್ತದೆ, ಅದರಲ್ಲಿ ಅವರ ಲೇಖನ ಓದುತ್ತಾ ನನಗೆ ಅವರ ಪರಿಚಯ ಆಯಿತು ಎಂದರು.

ಮುಕ್ತವಾಗಿ ಎಂದಾದರೂ ಭೇಟಿಯಾಗಿದ್ದೀರಾ ಎಂದಾಗ, ಇನ್ನೂ ಇಲ್ಲಾ ಸಾರ್, ಓನ್ಲಿ ಸೋಶಿಯಲ್ ಮೀಡಿಯಾ ಪ್ರೆಂಡ್ಸ್ ಎಂದರು ಸಾಧ್ಯವಾದರೇ ನನಗೂ ಅವರ ಪರಿಚಯ ಮಾಡಿಕೊಂಡಿ ಎಂದು ಹೇಳಿ ಹೊರಬಂದೆ.