15th September 2024
Share

TUMAKURU:SHAKTHIPEETA FOUNDATION

 ಭಾರತದ ನೂತನ ಸಂಸತ್ ಕಟ್ಟಡ ಲೋಕಾರ್ಪಣೆ ದಿವಸ ಅಂದರೆ ದಿನಾಂಕ: 28.05.2023 ರಂದು ಅಸ್ಸಾಂ ರಾಜ್ಯದ ರಾಜಧಾನಿ ಗೌಹಾತಿಯಲ್ಲಿರುವ ಕಾಮಾಕ್ಯ ಶಕ್ತಿಪೀಠ ದಲ್ಲಿ ಸತಿಯ ಯೋನಿ ಬಿದ್ದ ಸ್ಥಳಕ್ಕೆ ನಾನು, ನನ್ನ ಪತ್ನಿ ಶ್ರೀಮತಿ ಬಿ.ಸುಜಾತಕುಮಾರಿ ಮತ್ತು ನನ್ನ ಮಗ ಕೆ.ಆರ್.ಸೋಹನ್ ಭೇಟಿ ನೀಡಿದ್ದೇವು.

ನನ್ನ ಸ್ನೇಹಿತರಾದ ದೆಹಲಿಯ ಶ್ರೀ ಶ್ರೀನಿವಾಸ್ ರವರು, ಅಸ್ಸಾಂ ರಾಜ್ಯದಲ್ಲಿ ಕಾರ್ಯನಿರ್ವಹಿಸಿದ್ದ ಐಪಿಎಸ್ ಅಧಿಕಾರಿ ಶ್ರೀ ರಾಘವೇಂದ್ರವರ ಸಂಪರ್ಕ ಕಲ್ಪಿಸಿದ್ದರು. ಅವರ ಸಹಕಾರ ಪ್ರೋಟೋಕಾಲ್ ಭೇಟಿಗೆ ಅದ್ಭುತವಾಗಿತ್ತು.

ದೇವಿಯ ಮೂಲ ಸ್ಥಳಕ್ಕೆ ಭೇಟಿ ನೀಡಿದಾಗ ನಾವು ಮೂರು ಜನರು ಪರಸ್ಪರ ತಬ್ಬಿಕೊಂಡು ಕಣ್ಣಿರು ಹಾಕಿದ ಪ್ರಸಂಗವೂ ನಡೆಯಿತು. ನನ್ನ ಇಡೀ ದೇಹ ವೈಬ್ರೇಷನ್ ಆಗಿ, ವಿಶಿಷ್ಟ ಅನುಭವ ಆಗಿದ್ದು ದೇವಿ ಆದೇಶ ಇರಬಹುದು.

 ತಕ್ಷಣ ನನಗೆ ಅಲ್ಲಿಯೇ ಪ್ರೇರಣೆಯಾಗಿದ್ದು ನೂತನ ಸಂಸತ್ ಭವನ ಲೋಕಾರ್ಪಣೆ ಆಗುವ ದಿವಸ ಇಲ್ಲಿಗೆ ಬಂದಿದ್ದೇನೆ. ದೇಶದ ಗ್ರಾಮಗಳ/ ಬಡಾವಣೆಗಳ ದಿಕ್ಕನ್ನೆ ಬದಲಾಯಿಸುವ ಯೋಜನೆಗೆ, ಕೇಂದ್ರ ಸರ್ಕಾರದಿಂದ ಹೆಚ್ಚಿಗೆ ಅನುದಾನ ಪಡೆಯಲು ಶ್ರಮಿಸಲೇ ಬೇಕು ಎಂಬ ಪ್ರತಿಜ್ಞೆ ಮಾಡಲಾಗಿದೆ.

ಅಲ್ಲಿಂದ ದೆಹಲಿಗೆ ಹೋಗಿ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಮನೆಯಲ್ಲಿ ಮಲಗಿದಾಗ ಬೆಳಿಗಿನ ಜಾವ ಮೂರು ಗಂಟೆಗೆ ಬ್ರಾಹ್ಮೀ ಲಗ್ನದಲ್ಲಿ ಶ್ರೀ ಕೃಷ್ಣಮೂರ್ತಿಯವರನ್ನು ಎಬ್ಬಿಸಿ ‘ಊರಿಗೊಂದು ಪುಸ್ತಕದ ಟೆಂಪ್ಲೇಟ್ ಪಿಪಿಟಿ ಡ್ರಾಪ್ಟ್’ ಸಿದ್ಧಪಡಿಸಲು ಡಿಕ್ಟೇಟ್ ಮಾಡಲು ಆರಂಭಿಸಲಾಯಿತು.

ಎಲ್ಲಿಗೆ ಎಲ್ಲಿಯ ಸಂಬಂಧ ?