16th September 2024
Share

TUMAKURU:SHAKTHIPEETA FOUNDATION

ತುಮಕೂರಿನ ಎತ್ತಿನಹೊಳೆ ಕಚೇರಿಯಲ್ಲಿ  ರಾಜ್ಯ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ನಿವೃತ್ತ ಕಾರ್ಯದರ್ಶಿ ಶ್ರೀ ಕೆ.ಜೈಪ್ರಕಾಶ್ ರವರ ನೇತೃತ್ವದಲ್ಲಿ  ಊರಿಗೊಂದು ಪುಸ್ತಕ’ದ ಬಗ್ಗೆ ಪಿಪಿಟಿ ಪ್ರದರ್ಶನ ಮಾಡಿದ ನಂತರ ಸುಧೀರ್ಘ ಸಮಾಲೋಚನೆ ನಡೆಯಿತು.

ಸಮಾಲೋಚನಾ ಸಭೆಯಲ್ಲಿ ಕೈಗೊಂಡ ನಿರ್ಣಯಗಳು

  1. ಪಿಪಿಟಿಯಲ್ಲಿ ಇರುವ ಸ್ಪೆಲಿಂಗ್ ಮಿಸ್ಟೇಕ್ ಸರಿ ಮಾಡುವುದು.
  2. ಅಗತ್ಯವಿರುವ ಅಂಶಗಳನ್ನು ಸೇರ್ಪಡೆ ಮಾಡುವುದು.
  3. ಸರ್ಕಾರದ ವಿವಿಧ ಇಲಾಖೆಯಲ್ಲಿರುವ ಮಾಹಿತಿಗಳ ಎಲ್ಲಾ ಅಂಶಗಳನ್ನು ಪಟ್ಟಿ ಮಾಡುವುದು.
  4. ಕೊರಟಗೆರೆ ವಿಧಾನಸಭಾ ಕ್ಷೇತ್ರದ ಶ್ರೀ  ಕೆ.ಜೈಪ್ರಕಾಶ್ ರವರ ಹುಟ್ಟೂರಿನ ಊರಿಗೊಂದು ಪುಸ್ತಕ ಬರೆಯಲು ಆರಂಭಿಸುವುದು.
  5. ಸಭೆಯಲ್ಲಿ ಹಾಜರಿದ್ದ ಎಲ್ಲಾ ಇಂಜಿನಿಯರ್‍ಗಳು ಸಹ ಅವರವರ ಹುಟ್ಟೂರಿನ ಊರಿಗೊಂದು ಪುಸ್ತಕ ಬರೆಯಲು ಆರಂಭಿಸುವುದು.
  6. ವಿಧಾನಸಭಾ ಸದಸ್ಯರ ರ್ಯಾಂಕಿಂಗ್ ಅಂಶಗಳನ್ನು ಪಟ್ಟಿ ಮಾಡುವುದು.
  7. ಚಿಕ್ಕನಾಯಕನ ಹಳ್ಳಿ ವಿಧಾನಸಭಾ ಕ್ಷೇತ್ರ, ಶೆಟ್ಟಿಕೆರೆ ಗ್ರಾಮ ಪಂಚಾಯಿತಿ ಗೋಪಾಲನಹಳ್ಳಿ ಗ್ರಾಮದ ಪುಸ್ತಕವನ್ನು ಬರೆಯಲು ಆರಂಭಿಸಿರುವ ಶ್ರೀ ಆರ್ಕ ರಘುರವರೊಂದಿಗೆ ನಿಕಟ ಸಂಪರ್ಕ ಇಟ್ಟು ಕೊಳ್ಳುವುದು.
  8. ಮಧುಗಿರಿ ವಿಧಾನಸಭಾ ಕ್ಷೇತ್ರದ, ನೇರಲೇಕೆರೆ ಗ್ರಾಮ ಪಂಚಾಯಿತಿ. ವೀರಾಪುರ, ಗ್ರಾಮದ ಪುಸ್ತಕವನ್ನು ಬರೆಯಲು ಆರಂಭಿಸಿರುವ ಶ್ರೀ 5 ಎಸ್ ಸಿದ್ಧಗಂಗಪ್ಪನವÀರೊಂದಿಗೆ ನಿಕಟ ಸಂಪರ್ಕ ಇಟ್ಟು ಕೊಳ್ಳುವುದು.
  9. ತುಮಕೂರು ಜಿಲ್ಲೆಯಲ್ಲಿ ಅವರವರ ಅವರವರ ಹುಟ್ಟೂರಿನ ಊರಿಗೊಂದು ಪುಸ್ತಕ ಬರೆಯಲು ಆರಂಭಿಸುವವರೆಗೆ ಮಾರ್ಗದರ್ಶನ ನೀಡುವುದು.