16th September 2024
Share

TUMAKURU:SHAKTHIPEETA FOUNDATION

ವಿಶ್ವಪರಿಸರ ದಿನಚಾರಣೆಯ ಅಂಗವಾಗಿ, ನಗರದ ವಿದ್ಯೋದಯ ಲಾ ಕಾಲೇಜು, ವೃಕ್ಷ ಮಿತ್ರ, ಅರಣ್ಯ ಇಲಾಖೆ ನೇತೃತ್ವದಲ್ಲಿ ಬೆಳಗುಂಬ ರಸ್ತೆಯಲ್ಲಿ ಗಿಡ ನೆಡುವ ಮೂಲಕ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಚಾಲನೆ ನೀಡಿದರು.

ಬೇವಿನ ಮರದ ಶ್ರೀ ಸಿದ್ಧಪ್ಪನವರು ಅವರ ತಂಡದ ಸಹಕಾರದೊಂದಿಗೆ ಮತ್ತು ಅಧಿಕಾರಿಗಳ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದರು.

ಬಸವರಾಜ್ರವರ  ಕನಸಿನ ವಿಳಂಬ ಧೋರಣೆಗೆಅಧಿಕಾರಿಗಳಿಗೆ ಹಸಿರು ಎಚ್ಚರಿಕೆ ನೀಡಲಾಗಿದೆ.

  ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರ ಅಧ್ಯಕ್ಷತೆಯಲ್ಲಿ, ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ನೇತೃತ್ವದಲ್ಲಿ ನಡೆದ ಹಸಿರು ತುಮಕೂರು ಸಭೆಯ ನಡವಳಿಕೆಗಳ ಕಡತ ಯಾವ ಅಧಿಕಾರಿ ಟೇಬಲ್ ನಲ್ಲಿ ಇದೆಯೋ ಆ ಅಧಿಕಾರಿ ಟೇಬಲ್ ಮುಂದೆ ಧರಣಿ ಕೂರುವುದಾಗಿ ಎಚ್ಚರಿಕೆ ನೀಡಲಾಗಿದೆ.

ನಾಮಕವಸ್ಥೆ ಪರಿಸರ ದಿನದ ನಾಟಕ ಬಿಡಿ, ನಗರವನ್ನು ಹಸಿರು ಮಯ ಮಾಡಲು ನಿಸ್ವಾರ್ಥವಾಗಿ ಸಹಕರಿಸಿ.ಅನುದಾನ ನೀಡಿದರೂ ಬಳಸಿಕೊಳ್ಳಲು ನಿಮಗೆ ಏನಾಗಿದೆ. ತುಮಕೂರು ಮಹಾನಗರ ಪಾಲಿಕೆಯಲ್ಲಿರುವ ಬಯೋಮ್ಯಾನೇಜ್ ಮೆಂಟ್ ಕಮಿಟಿ(ಬಿಎಂಸಿ) ಜೀವಂತವಾಗಿ ಇದೆಯೋ ಅಥವಾ ಸತ್ತಿದೆಯೋ ನನಗೆ ಗೊತ್ತಿಲ್ಲ.

ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಒಂದು ಕೋಟಿ ಅನುದಾನ, ಪಾಲಿಕೆಯಿಂದ 30 ಲಕ್ಷ ಅನುದಾನ, ಟೂಡಾ ದಿಂದ 10 ಲÀಕ್ಷ ಅನುದಾನ ಮತ್ತು ಸಂಸದರ ನಿಧಿಯಿಂದ 17.50 ಲಕ್ಷ ಅನುದಾನದ ಹಸಿರು ತುಮಕೂರು ಯೋಜನೆಗೆ ಚಾಲನೆ ನೀಡಲು ನಿರ್ಣಯ ಮಾಡಲಾಗಿತ್ತು.

ವಿಶ್ವ ಪರಿಸರ ದಿನಾಚರಣೆಯ ದಿವಸ ಅಧಿಕಾರಿಗಳಿಗೆ ಒಂದು ಹಸಿರು ಮನವಿಯನ್ನು ಮಾಡುತ್ತಿದ್ದೇನೆ. ತುಮಕೂರು ಇಂಡಸ್ಟ್ರಿಯಲ್ ಕಾರಿಡಾರ್ ನಲ್ಲಿ ಒಂದು ಗಿಡ ಹಾಕಿ ಪೋóಷಣೆ ಮಾಡಲು ರೂ 3000 ಕ್ಕೂ ಹೆಚ್ಚು, ನಗರದಲ್ಲಿ ಗಿಡಹಾಕಲು ಗಿಡವೊಂದಕ್ಕೆ ರೂ 1400 ಕ್ಕೂ ಹೆಚ್ಚು ಅಂದಾಜು ಪಟ್ಟಿ ಮಾಡಿದ್ದೀರಿ.

ಬೇವಿನ ಮರದ ಶ್ರೀ ಸಿದ್ಧಪ್ಪನವರು ರೂ 300 ಕ್ಕೆ ಪಿಪಿಪಿ ಯೋಜನೆಯಡಿಯಲಿÉೂಂದು ಗಿಡ ಹಾಕಿ 3 ವರ್ಷ ಪೋóಷಣೆ ಮಾಡುವುದಾಗಿ ಲಿಖಿತ ಪತ್ರ ನೀಡಿದ್ದಾರೆ. ಏಕೆ ನಿಮ್ಮ ಮೌನ. ಒಂದು ವಾರದೊಳಗೆ ಸಭೆಯ ನಿರ್ಣಯ ಜಾರಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲು ಗಡುವು ನೀಡಲಾಗಿದೆ.