TUMAKURU:SHAKTHIPEETA FOUNDATION
ತುಮಕೂರಿನ ಎತ್ತಿನಹೊಳೆ ಕಚೇರಿಯಲ್ಲಿ ರಾಜ್ಯ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ನಿವೃತ್ತ ಕಾರ್ಯದರ್ಶಿ ಶ್ರೀ ಕೆ.ಜೈಪ್ರಕಾಶ್ ರವರ ನೇತೃತ್ವದಲ್ಲಿ ‘ಊರಿಗೊಂದು ಪುಸ್ತಕ’ದ ಬಗ್ಗೆ ಪಿಪಿಟಿ ಪ್ರದರ್ಶನ ಮಾಡಿದ ನಂತರ ಸುಧೀರ್ಘ ಸಮಾಲೋಚನೆ ನಡೆಯಿತು.


ಸಮಾಲೋಚನಾ ಸಭೆಯಲ್ಲಿ ಕೈಗೊಂಡ ನಿರ್ಣಯಗಳು
- ಪಿಪಿಟಿಯಲ್ಲಿ ಇರುವ ಸ್ಪೆಲಿಂಗ್ ಮಿಸ್ಟೇಕ್ ಸರಿ ಮಾಡುವುದು.
- ಅಗತ್ಯವಿರುವ ಅಂಶಗಳನ್ನು ಸೇರ್ಪಡೆ ಮಾಡುವುದು.
- ಸರ್ಕಾರದ ವಿವಿಧ ಇಲಾಖೆಯಲ್ಲಿರುವ ಮಾಹಿತಿಗಳ ಎಲ್ಲಾ ಅಂಶಗಳನ್ನು ಪಟ್ಟಿ ಮಾಡುವುದು.
- ಕೊರಟಗೆರೆ ವಿಧಾನಸಭಾ ಕ್ಷೇತ್ರದ ಶ್ರೀ ಕೆ.ಜೈಪ್ರಕಾಶ್ ರವರ ಹುಟ್ಟೂರಿನ ಊರಿಗೊಂದು ಪುಸ್ತಕ ಬರೆಯಲು ಆರಂಭಿಸುವುದು.
- ಸಭೆಯಲ್ಲಿ ಹಾಜರಿದ್ದ ಎಲ್ಲಾ ಇಂಜಿನಿಯರ್‍ಗಳು ಸಹ ಅವರವರ ಹುಟ್ಟೂರಿನ ಊರಿಗೊಂದು ಪುಸ್ತಕ ಬರೆಯಲು ಆರಂಭಿಸುವುದು.
- ವಿಧಾನಸಭಾ ಸದಸ್ಯರ ರ್ಯಾಂಕಿಂಗ್ ಅಂಶಗಳನ್ನು ಪಟ್ಟಿ ಮಾಡುವುದು.
- ಚಿಕ್ಕನಾಯಕನ ಹಳ್ಳಿ ವಿಧಾನಸಭಾ ಕ್ಷೇತ್ರ, ಶೆಟ್ಟಿಕೆರೆ ಗ್ರಾಮ ಪಂಚಾಯಿತಿ ಗೋಪಾಲನಹಳ್ಳಿ ಗ್ರಾಮದ ಪುಸ್ತಕವನ್ನು ಬರೆಯಲು ಆರಂಭಿಸಿರುವ ಶ್ರೀ ಆರ್ಕ ರಘುರವರೊಂದಿಗೆ ನಿಕಟ ಸಂಪರ್ಕ ಇಟ್ಟು ಕೊಳ್ಳುವುದು.
- ಮಧುಗಿರಿ ವಿಧಾನಸಭಾ ಕ್ಷೇತ್ರದ, ನೇರಲೇಕೆರೆ ಗ್ರಾಮ ಪಂಚಾಯಿತಿ. ವೀರಾಪುರ, ಗ್ರಾಮದ ಪುಸ್ತಕವನ್ನು ಬರೆಯಲು ಆರಂಭಿಸಿರುವ ಶ್ರೀ 5 ಎಸ್ ಸಿದ್ಧಗಂಗಪ್ಪನವÀರೊಂದಿಗೆ ನಿಕಟ ಸಂಪರ್ಕ ಇಟ್ಟು ಕೊಳ್ಳುವುದು.
- ತುಮಕೂರು ಜಿಲ್ಲೆಯಲ್ಲಿ ಅವರವರ ಅವರವರ ಹುಟ್ಟೂರಿನ ಊರಿಗೊಂದು ಪುಸ್ತಕ ಬರೆಯಲು ಆರಂಭಿಸುವವರೆಗೆ ಮಾರ್ಗದರ್ಶನ ನೀಡುವುದು.