TUMAKURU:SHAKTHIPEETA FOUNDATION
ಕಳೆದ ವಿಧಾನಸಭೆ ಚುನಾವಣಾ ಸಮಯದಲ್ಲಿ, ನನ್ನ ಜೀವನದಲ್ಲಿ ಇದೂವರೆಗೂ ಮಾಡಿರುವ ಎಲ್ಲಾ ತಪ್ಪುಗಳನ್ನು ಸರಮಾಡಿಕೊಂಡು ಮುಂದೆ ಒಂದು ಸಣ್ಣ ತಪ್ಪು ಮಾಡದೇ, ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಅತಿ ಹೆಚ್ಚು ಅನುದಾನ ಪಡೆಯಲು ರಾಜ್ಯದ ಪ್ರತಿಯೊಂದು ಗ್ರಾಮದ, ಕಾಲೋನಿಯ, ನಗರ ಪ್ರದೇಶಗಳ ಬಡಾವಣೆಯ ಜ್ಞಾನ ದಾನಿಗಳ ಸಹಭಾಗಿತ್ವದಲ್ಲಿ, ಸರ್ವಪಕ್ಷಗಳ ನೇತೃತ್ವದಲ್ಲಿ ಶ್ರಮಿಸಲಾಗುವುದು ಎಂದು ಪ್ರತೀಜ್ಞೆ ಮಾಡಿದ್ದು ಇತಿಹಾಸ.
ತುಮಕೂರು ಲೋಕಸಭಾ ಕ್ಷೇತ್ರವನ್ನು ಫೈಲಟ್ ಯೋಜನೆಯಾಗಿ ಆಯ್ಕೆ ಮಾಡಿಕೊಂಡು, ನಂತರ ರಾಜ್ಯದ ಎಲ್ಲಾ 224 ವಿಧಾನಸಭಾ ಸದಸ್ಯರು, 75 ಜನ ವಿಧಾನ ಪರಿಷತ್ ಸದಸ್ಯರು, 28 ಜನ ಲೋಕಸಭಾ ಸದಸ್ಯರು ಮತ್ತು 12 ಜನ ರಾಜ್ಯಸಭಾ ಸದಸ್ಯರು ತಮ್ಮ ವ್ಯಾಪ್ತಿಯಲ್ಲಿ ಇದೇ ಮಾದರಿ ಅನುಸರಿಸಿ ಎಂಬ ಆಂದೋಲನ ಹಮ್ಮಿಕೊಳ್ಳಲಾಗಿದೆ.
ಬೇರೆಯವರಿಗೆ ಹೇಳುವ ನಾನು, ಮೊದಲು ಪಾರದರ್ಶಕವಾಗಿ ಇರಲೇ ಬೇಕು ಎಂಬ ದೃಢ ನಿರ್ಧಾರದಿಂದ, ಸ್ವಯಂ ಆಗಿ ಮೌಲ್ಯಮಾಪನ ವರದಿ ಸಿದ್ಧಪಡಿಸಲು ಯೋಚಿಸಲಾಗಿದೆ.
ಈ ಹಿನ್ನಲೆಯಲ್ಲಿ ಹುಟ್ಟಿದ ದಿನದಿಂದ ಇಲ್ಲಿಯವರೆಗೂ, ನನ್ನ ಜೀವನದ ಎಲ್ಲಾ ಘಟನೆಗಳನ್ನು ಕನ್ನಡದಲ್ಲಿ ಒಂದು ಕುಟುಂಬ, ಇಂಗ್ಲೀಷ್ ನಲ್ಲಿ ಒಂದು ಕುಟುಂಬ, ಹಿಂದಿಯಲ್ಲಿ ಒಂದು ಕುಟುಂಬ ದಾಖಲಿಸಲು ಮತ್ತು ಯೂ ಟ್ಯೂಬ್ ಚಾನಲ್ ನಲ್ಲಿ ಸಂಗ್ರಹಿಸಲು ಮುಂದೆ ಬಂದಿದ್ದಾರೆ. ಉಳಿದವರು ಮೌಲ್ಯ ಮಾಪನ ಮಾಡಲಿದ್ದಾರೆ.
ವಿಶ್ವದ 108 ಶಕ್ತಿಪೀಠಗಳ ಸಮ್ಮುಖದಲ್ಲಿ/ಮ್ಯೂಸಿಯಂನಲ್ಲಿ, ಇಂಡಿಯಾ @ 100 ಅಂಗವಾಗಿ,ಮಾಡುವ ಫಿಸಿಕಲ್ ಗ್ರಂಥಾಲಯ, ಡಿಜಿಟಲ್ ಗ್ರಂಥಾಲಯ ಮತ್ತು ಹೂಮನ್ ಲೈಬ್ರರಿಯಲ್ಲಿ, ಮೊದಲು ನನ್ನ ಜೀವನದ ಮೌಲ್ಯಮಾಪನ ಮಾಡಿಕೊಂಡು, ರಾಜ್ಯದ ಪ್ರತಿಯೊಬ್ಬರು ತಮ್ಮ ವೈಯಕ್ತಿಕ, ಕುಟುಂಬ ವಿಷನ್ ಡಾಕ್ಯುಮೆಂಟ್ ಸಿದ್ಧಪಡಿಸಿಕೊಂಡು ನಂತರದಲ್ಲಿ ತಮ್ಮ ಹುಟ್ಟೂರಿನ ಸಮಗ್ರ ಅಭಿವೃದ್ಧಿಯ ಮೂಲಕ ಭಾರತ ವಿಶ್ವ ಗುರುವಾಗಲು ಶ್ರಮಿಸಲು ಮನವಿ ಬಹಿರಂಗ ಮಾಡಲಾಗುವುದು.
ಆಸಕ್ತರು ಇವರ ಜೊತೆ ಸೇರ ಬಹುದು.
- ಬ್ರಾಹ್ಮಣರ ಕುಟುಂಬ.
- ಬಲಿಜರ ಕುಟುಂಬ.
- ಕುಂಚಿಗರ ಕುಟುಂಬ.
- ವೈಶ್ಯರ ಕುಟುಂಬ.
- ನಾಯಕರ ಕುಟುಂಬ.
- ಮರಾಠಿಗರ ಕುಟುಂಬ
- ಅಗಸರ ಕುಟುಂಬ.
- ಮುಸ್ಲಿಂ ಕುಟುಂಬ.
- ಲಿಂಗಾಯಿತರ ಕುಟುಂಬ.