21st December 2024
Share

TUMAKURU:SHAKTHIPEETA FOUNDATION

ಹುಟ್ಟಿದ ಪ್ರತಿಯೊಬ್ಬರಿಗೂ ಒಂದು ಕನಸಿನ ಸೂರು ಇರಬೇಕು, ಬಡವನಿರಲಿ, ಬಲ್ಲಿದ ಇರಲಿ,  ಆ ಕನಸಿನ ಅರಮನೆಗೆ ಆಗಾಗ್ಗೆ ವಾಸ್ತು ಬಾಂಬ್, ಆಯಾ ಬಾಂಬ್, ಪುಕ್ಸಟ್ಟೆ ಬಾಂಬ್ ಗಳು ಮನೆಯವರ ನೆಮ್ಮದಿಗೆ ಭಂಗತರುವುದು ಇತ್ತೀಚೆಗೆ ಸಾಮಾನ್ಯವಾಗಿದೆ.

ನಾನು ಎಲ್ಲಾ ಜಾತಿಯವರನ್ನು, ಎಲ್ಲಾ ಧರ್ಮದವರನ್ನು ಪ್ರೀತಿಸುತ್ತೇನೆ, ಎಲ್ಲಾ ವರ್ಗದವರನ್ನು ಗೌರವಿಸುತ್ತೇನೆ. ಎಲ್ಲರನ್ನು ನಂಬುತ್ತೇನೆ, ಯಾರನ್ನೂ ಪೂರ್ಣವಾಗಿ ನಂಬುವುದಿಲ್ಲ, ಎಲ್ಲರನ್ನು ಅವರ ಕೆಲಸಗಳ ಆಧಾರದಲ್ಲಿ ಟೀಕಿಸುತ್ತೇನೆ, ಉತ್ತಮ ಕೆಲಸ ಮಾಡಿದಾಗ ನನ್ನ ಶತೃಗಳನ್ನು ಹೊಗುಳುತ್ತೇನೆ.  ನಾನು ತಪ್ಪು ಮಾಡಿದ್ದು ಅರಿವಾದಾಗ ನನ್ನ ಕೆಲಸವನ್ನು ನಾನೇ ಬಲವಾಗಿ ಶಪಿಸಿಕೊಳ್ಳುತ್ತೇನೆ, ಸಣ್ಣವರಾದರೂ ನನ್ನ ತಪ್ಪು ತಿಳಿಸಿದಾಗ ಬಹಿರಂಗವಾಗಿ ಕ್ಷಮೆ ಕೇಳುತ್ತೇನೆ. 

ಇದೊಂದು ವಿಚಿತ್ರವಾದರೂ ವಾಸ್ತವಿಕ, ನಾನೊಬ್ಬ ರೈತ, ನಾನು ಯಾವುದರಲ್ಲೂ ಪರಿಣಿತನಲ್ಲ, ನನಗೆ ಬಹುತೇಕ ಎಲ್ಲಾ ವಿಚಾರಗಳನ್ನು ತಿಳಿದುಕೊಳ್ಳುವ ಜ್ಞಾನದ ದಾಹ ಇನ್ನೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ನನ್ನ ಈ ವರ್ತನೆ ನನ್ನ ಬದುಕಿಗೆ ಶಾಪವೂ ಆಗಿದೆ, ವರವೂ ಆಗಿದೆ, ನಾನಂತೂ ಅತ್ಯಂತ ನೆಮ್ಮದಿಯಿಂದ ಇದ್ದೇನೆ. ಬಹಳ ಜನರ ನೆಮ್ಮದಿಯನ್ನು ಕೆಡಿಸಿರ ಬಹುದು. ನನಗೆ ಬಿಪಿ ಇಲ್ಲ, ಶುಗರ್ ಇಲ್ಲ, ನನ್ನ ಸ್ನೇಹಿತರು ಹೇಳುವ ಪ್ರಕಾರ ನೀನೂ ಎಲ್ಲರಿಗೂÀ ಬಿಪಿ ಬರುಸುತ್ತೀಯ, ಅದಕ್ಕೆ ನಿನಗೆ ಬಿಪಿ ಇಲ್ಲ ಎಂದು ಹಾಸ್ಯ ಮಾಡುತ್ತಾರೆ.  

ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ ಹೆಚ್ಚು ಅನುದಾನ ತರಲು ಕಾರ್ಯತಂತ್ರ ರೂಪಿಸಲು ಕರ್ನಾಟಕ ಸರ್ಕಾರದಿಂದ ಎಂ.ಓ.ಯು ಮಾಡಿಕೊಂಡಿದ್ದು, ಹಲವಾರು ಜ್ಞಾನಿಗಳ ಸಹಕಾರದಿಂದ,  ಇಂಡಿಯಾ @ 100 ಗೆ ಪೂರಕವಾಗಿ,ಗ್ರಾಮೀಣ ಪ್ರದೇಶದಲ್ಲಿ  ಊರಿಗೊಂದು ಪುಸ್ತಕ ನಗರ ಪ್ರದೇಶಗಳಲ್ಲಿ ಬಡಾವಣೆಗೊಂದು ಪುಸ್ತಕ ಸಿದ್ಧಪಡಿಸುವ ಮೂಲಕ, ಅಂತರ ರಾಷ್ಟ್ರೀಯ ಮಟ್ಟದ  ನಾಲೇಡ್ಜ್ ಬ್ಯಾಂಕ್ ಸ್ಥಾಪಿಸಲು ಶ್ರಮಿಸುವುದು ನನ್ನ ಕುಟುಂಬದ ಎಲ್ಲರ ಕನಸು.

1947 ಕ್ಕೆ ಮೊದಲ, ನಂತರದ 2023 ರವರೆಗಿನ ಅಭಿವೃದ್ಧಿ ಮಾಹಿತಿ, ಮುಂದೆ 2047 ಕ್ಕೆ ಕೈಗೊಳ್ಳ ಬಹುದಾದ ಯೋಜನೆಗಳ ಬಗ್ಗೆ, ಆಯಾ ಗ್ರಾಮಗಳ/ಬಡಾವಣೆಗಳ ಜನರಿಂದ ನೀಡ್ ಬೇಸ್ಡ್ ಯೋಜನೆಗಳಾಗ ಬೇಕಿದೆ. ಎಲ್ಲೋ ಎಸಿ ರೂಮಿನಲ್ಲಿ ಸಿದ್ಧಪಡಿಸುವ ಯೋಜನೆಗೆ ತಿಲಾಂಜಲಿ ಇಡಬೇಕಿದೆ.

 ತುಮಕೂರಿನ ಜಯನಗರದಲ್ಲಿ ಒಂದು ವಿಚಿತ್ರವಾದ ಮ್ಯೂಸಿಯಂ ನಿರ್ಮಾಣ ಮಾಡುತ್ತಿದ್ದೇನೆ. ಕೇವಲ 1520 ಚದುರ ಅಡಿ ನಿವೇಶನದಲ್ಲಿ, ಸುಮಾರು 12 ಎಕರೆ 15 ಗುಂಟೆ ಜಮೀನನಲ್ಲಿ ಶಕ್ತಿ ಪೀಠ, ಜಲಪೀಠ, ಅಭಿವೃದ್ಧಿ ಪೀಠ ಕ್ಯಾಂಪಸ್ ನಿರ್ಮಾಣ ಮಾಡುವ ಕನಸು ಹೊತ್ತಿರುವ ನನಗೆ, ಕ್ಯಾಂಪಸ್ ನಲ್ಲಿ ನಿರ್ಮಾಣ ಮಾಡುವ ಒಂದೊಂದು ಅಂಶದ ಕರಾರುವಕ್ಕಾದ ಮಾಹಿÀತಿ ಸಂಗ್ರಹಿಸಿ ಇಟ್ಟುಕೊಳ್ಳುವ, ನಾವೂ ತುಮಕೂರಿನಲ್ಲಿ ಇದ್ದಾಗ ತಂಗುವ, ಜ್ಞಾನಿಗಳು ಬಂದಾಗ ಉಳಿದುಕೊಳ್ಳುವ ಗೆಸ್ಟ್ ಹೌಸ್/ಜ್ಞಾನ ದೇಗುಲ ಇದಾಗಲಿದೆ.

 ಹಲವಾರು ವಿಚಾರಗಳ ಬಗ್ಗೆ ಗಂಭೀರವಾಗಿ ಚರ್ಚೆ ಮಾಡುವ, ಬಹುತೇಕ ವಿಶ್ವದ ಎಲ್ಲಾ ಅಭಿವೃದ್ಧಿ ಯೋಜನೆಗಳ, ಎಲ್ಲಾ ನದಿಗಳ ನೀರಿನ, ಎಲ್ಲಾ ಜಾತಿಯ ಮರಗಿಡಗಳ, ಎಲ್ಲಾ ಜಾತಿ-ಉಪಜಾತಿಗಳ, ಶಕ್ತಿಪೀಠವೂ ಸೇರಿದಂತೆ ಎಲ್ಲಾ ಧರ್ಮದವರ/ದೇವರುಗ¼/ಧಾರ್ಮಿಕ ಅಂಶಗಳÀ  ಮಾಹಿತಿ,  ಈ ಪುಟ್ಟ ಅರಮನೆಯಲ್ಲಿಯೇ ಸಂಗ್ರಹವಾಗಲಿದೆ.

ಈ ಕಟ್ಟಡದ ಆಯಾ, ವಾಸ್ತು, ಜ್ಯೋತಿಷಿಗಳ ಪೂಜಾ ಸಮಯ, ಧಾರ್ಮಿಕ ವಿಧಿ ವಿಧಾನಗಳ ಪದ್ಧತಿಗಳ ಬಗ್ಗೆ ಹತ್ತಾರು ಜನರಿಂದ ತಿಳಿದು ಕೊಂಡರೂ, ಕೊನೆಗೆ ನಮ್ಮ ಅನೂಕೂಲಕ್ಕೆ ತಕ್ಕಂತೆ ನಿರ್ಮಾಣ ಮಾಡುವ ಗುರಿ ನನ್ನದಾಗಿದೆ.

ಇಟ್ಟಿಗೆ ಕಟ್ಟಡದ ಕೊನೆಯ ಹಂತದಲ್ಲಿ,  ವಾಸ್ತು, ಆಯಾದ ಬಗ್ಗೆ ಮೌಲ್ಯ ಮಾಪನ ಮಾಡಿಸಲು ಇಚ್ಚಿಸಿದ್ದೇನೆ. ಪ್ಲಾಸ್ಟರಿಂಗ್ ಮಾಡುವ ಮುನ್ನ ಇನ್ನೂ ಯಾರಾದರೂ ಯಾವುದಾದರೂ ಸಲಹೆ ನೀಡುವುದಿದ್ದರೆ ಮುಕ್ತ ಆಹ್ವಾನ, ಪ್ಯಾಕೇಜ್ ಪೂಜಾ ವಿಧಾನಕ್ಕೆ ಗುಡ್ ಬೈ, ಭಕ್ತಿ ಪ್ರಧಾನ ಪೂಜೆಗೆ ಸೈ. ಇದರಲ್ಲಿ ಯಾವುದೇ ಗೊಂದಲ ನನಗೆ ಇಲ್ಲ. ಅವರ ಶುಲ್ಕವನ್ನು ಗೌರವದಿಂದ ನೀಡಲಾಗುವುದು.

ಅವರು ಹೇಳುವ ಎಲ್ಲವನ್ನೂ ಡಿಜಿಟಲ್ ರೆಕಾರ್ಡ್ ಮಾಡಲಾಗುವುದು. ಯೂ ಟ್ಯೂಬ್ ನಲ್ಲಿ ಪ್ರಚಾರ ಮಾಡಲಾಗುವುದು. ಒಂದೊಂದು ವಿಚಾರಗಳ ಬಗ್ಗೆ, ಹಲವಾರು ಜ್ಞಾನಿಗಳ ಅಭಿಪ್ರಾಯ ಪಡೆದು, ಅಂತಿಮವಾಗಿ ಒಂದು ನಿರ್ಧಾರಕ್ಕೆ ಬರುವುದು ನನ್ನ ಜೀವನದ ಪರಿಪಾಠ.

ನಾನು ಹಲವಾರು ಜನರ ಅಭಿಪ್ರಾಯ ಪಡೆದರೂ ಜೊತೆಯಲ್ಲಿ, ಆರಂಭದಿಂದಲೂ ತುಮಕೂರಿನ ಸ್ಟೀಲ್ ಬ್ರಹ್ಮ ಶ್ರೀ ಮಲ್ಲೇಶ್‍ರವರು, ಶ್ರೀ ರಾಮಮೂರ್ತಿರವರು, ಶ್ರೀ ಸತ್ಯಾನಂದರವರು, ಶ್ರೀ ವೇದಾನಂದಮೂರ್ತಿರವರು, ಶ್ರೀ ಹರೀಶ್ ರವರು, ಈ ಮನೆ ನಮ್ಮದು ಎಂದು ಶ್ರಮಿಸುತ್ತಿದ್ದಾರೆ. ಈಗ ಶ್ರೀ ಸಚಿನ್‍ರವರು ರೂಪ್ ಗಾರ್ಡನ್, ರೂಪ್ ಟಾಪ್ ಸೋಲಾರ್ ಬಗ್ಗೆ ನಮ್ಮ ಜೊತೆ ಸೇರ್ಪಡೆಯಾಗಿದ್ದಾರೆ.

ಬ್ರಹ್ಮ ಸ್ಥಾನ, ಬಾಗಿಲು ಇಡುವ ಪೂಜೆಯೊಂದಿಗೆ ಮೌಲ್ಯಮಾಪನ ಆರಂಭಿಸಿ, ಅದಿ/ಶಂಕು ಸ್ಥಾಪನೆ ಪೂಜೆಯಿಂದ – ಮನೆಯ ಗೃಹ ಪ್ರವೇಶದವರಿಗೂ, ನನ್ನ ಅನುಭವಗಳನ್ನು ದಾಖಲಿಸಲು ತೀರ್ಮಾನಿಸಿದ್ದೇನೆ, ಇದು ಹೊಸದಾಗಿ ಕಟ್ಟಡ ನಿರ್ಮಾಣ ಮಾಡುವವರಿಗೆ, ಅನೂಕೂಲಕ್ಕೆ ಬರಬಹುದು.