21st November 2024
Share

TUMAKURU:SHAKTHIPEETA FOUNDATION

ಕಳೆದ 23 ವರ್ಷಗಳಿಂದ ನನ್ನ ಜೊತೆ, ನನ್ನ ಕಟು ಮಾತುಗಳ ಮಧ್ಯೆ, ನನ್ನನ್ನು ತಿದ್ದಿ, ಬುದ್ದಿ ಹೇಳಿ ಸ್ವಲ್ಪ ಮಟ್ಟಿಗೆ ಮಾಗಿಸಿದವರಲ್ಲಿ, ಅಭಿವೃದ್ಧಿ ಚಿಂತಕರಾದ ಶ್ರೀ ಟಿ.ಆರ್.ರಘೋತ್ತಮರಾವ್ ರವರು ಒಬ್ಬರು ಎಂದರೆ ತಪ್ಪಾಗಲಾರದು.

ನನ್ನ ಕನಸಿನ ಶಕ್ತಿಪೀಠ ಮ್ಯೂಸಿಯಂ ವಾಸ್ತು ಬಗ್ಗೆ, ವಾಸ್ತು ತಜ್ಞರಾದ ಶ್ರೀ ವಿಜಯ ಸಾಮಗ್ರರವರೊಂದಿಗೆ, ಟಿ.ಆರ್.ರಘೋತ್ತಮರಾವ್ ಶ್ರೀ ಸತ್ಯಾನಂದ್, ಶ್ರೀ ಸಚ್ಚಿನ್, ಶ್ರೀ ಸ್ವಾಮಿ, ಶ್ರೀ ಹರೀಶ್ ರವರು ಮತ್ತು ನಾನು ಗಹನ ಚರ್ಚೆಯಲ್ಲಿ ಸುಮಾರು 3 ಗಂಟೆಗಳಿಗೂ ಹೆಚ್ಚು, ಒಂದೊಂದು ಕೋಠಡಿಯ ಬಗ್ಗೆಯೂ ಚರ್ಚೆ ನಡೆಸಿದೆವು.

   ಅಲ್ಲಿಯೂ ಸಹ ಖಡಕ್ ಚರ್ಚೆ ನಡೆಯುತ್ತಿತ್ತು. ಆಗ ಟಿ.ಆರ್.ರಘೋತ್ತಮರಾವ್ ಹೇಳಿದ ಮಾತು ನಿನೊಬ್ಬ ಶನಿ, ಅಭಿವೃದ್ಧಿ ದೃಷ್ಠಿಯಲ್ಲಿ ನಮ್ಮ ಜಿಲ್ಲೆಗೆ ಕರ್ಮಫಲಧಾತ, ಈಗ ರಾಜ್ಯ ಮಟ್ಟ ಮತ್ತು ಕೇಂದ್ರ ಮಟ್ಟಕ್ಕೆ ಪಾದಾರ್ಪಣೆ ಮಾಡಿದ್ದೀಯಾ. ಮೊದ ಮೊದಲು ನಿಮ್ಮ ನಡವಳಿಕೆ ಬಗ್ಗೆ ನನಗೂ ಕಸಿವಿಸಿಯಾಗುತ್ತಿತ್ತು. ನಂತರ ಗಮನಿಸಿದಾಗ ನಿನ್ನ ಸ್ಟೈಲ್ ನಿಜಕ್ಕೂ ಅಭಿವೃದ್ಧಿ ಲಾಭಿಯಲ್ಲಿ ಬೇಕಿದೆ ಎಂದು ಹೇಳಿದಾಗ ಎಲ್ಲರೂ ಗೊಳ್ ಎಂದು ನಕ್ಕರು.

ಈಗ ಅವರು ಸಹ ಕೆಲವು ಭಾರಿ ನನಗಿಂತಲೂ ಖಡಕ್ ಮಾತು ಆಡಲು ಆರಂಭಿಸಿದ್ದಾರೆ. ನನಗೂ ಆಶ್ಚರ್ಯವಾಗುತ್ತಿದೆ. ಸಂಸದರಾದ ಶ್ರೀ ಜಿ.ಎಸ್.ಬಸವರಾಜ್ ರವರ ಎದುರು ರೈಲ್ವೇ ಅಧಿಕಾರಿಗಳ ಬಗ್ಗೆ ಅವರು ಆಡಿದ ಮಾತು ನೋಡಿ, ಬಸವರಾಜ್ ರವರೇ ಏನಪ್ಪಾ ರಾಯರನ್ನು ರೆಡಿ ಮಾಡಿದ್ದೀಯಾ ಎಂದರಲ್ಲದೆ. ಆ ಅಧಿಕಾರಿ ಆಗಲ್ಲ ಎನ್ನುತ್ತಿದ್ದವರು, ಆಯ್ತು ಸಾರ್ ಎಂದು ಕೆಲಸ ಮಾಡಿದರು.

ಅಧಿಕಾರಿಗಳು ಹೇಗೆ ಎಂದರೆ, ನೋಡಿ ಮಾಡಿ ಸಾರ್ ಎಂದರೆ ನೋಡುತ್ತಲೇ ಇರುತ್ತಾರೆ. ನನಗೆ ಗೊತ್ತಿಲ್ಲ ಇದು ಮಾಡಲೇ ಬೇಕು, ಎಂದರೆ ತಕ್ಷಣ ಮಾಡಿಯೇ ಬಿಡುತ್ತಾರೆ. ಎರಡಕ್ಕೂ ಅವರ ಬಳಿ ನಿಯಮಗಳಿವೆ.

ನಿವೇನಂತೀರಾ ?