TUMAKURU:SHAKTHIPEETA FOUNDATION
ಕರ್ನಾಟಕ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದಿಂದ ಹೆಚ್ಚಿಗೆ ಅನುದಾನ ಪಡೆಯುವ ಕಾರ್ಯತಂತ್ರ ಪಕ್ಷಿ ನೋಟದ ಡ್ರಾಪ್ಟ್.
ನಿಮ್ಮ ಸಲಹೆಗಾಗಿ
ರಾಜ್ಯದ ಪ್ರತಿಯೊಂದು ಗ್ರಾಮಗಳ ‘ಬ್ರ್ಯಾಂಡ್ ನಮ್ಮೂರು’ ಮತ್ತು ನಗರ ಪ್ರದೇಶಗಳಲ್ಲಿ ‘ಬ್ರ್ಯಾಂಡ್ ನಮ್ಮ ಬಡಾವಣೆ’ ಘೋಷಣೆ ಮಾಡುವುದು ಸಮಯೋಚಿತವಾಗಿದೆ. ‘ನಾಮಕವಸ್ಥೆ ವಿಷನ್ ಡಾಕ್ಯುಮೆಂಟ್-2047 ಬೇಡ’
ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಹೆಚ್ಚಿನ ಅನುದಾನ ಪಡೆಯಲು ಕಾರ್ಯತಂತ್ರ ರೂಪಿಸಬೇಕಾದರೆ, ಕೆಳಹಂತದಿಂದ ಪಕ್ಕಾ ಪ್ರಸ್ತಾವನೆ ಸಿದ್ಧಪಡಿಸಲೇ ಬೇಕು. ಇಂದು ಡಿಜಿಟಲ್ ಇಂಡಿಯಾ, ಇಡೀ ಪ್ರಪಂಚದಲ್ಲಿಯೇ ಮುಂದಿದೆ ಎಂದರೆ ಅತಿಶಯೋಕ್ತಿಯಲ್ಲ. ನಮ್ಮ ‘ಯುವಜ್ಞಾನಿಗಳ ಜ್ಞಾನ ವಿಶ್ವಾದ್ಯಾಂತ ರಾರಾಜಿಸುತ್ತಿದೆ’.
‘ದಿ.ಮಾಜಿ ಪ್ರಧಾನಿಯವರಾದ ಶ್ರೀ ರಾಜೀವ್ ಗಾಂದಿಯವರು ಡಿಜಿಟಲ್ ಇಂಡಿಯಾದ ಬೀಜ ಬಿತ್ತಿದರು, ಮಾಜಿ ಪ್ರಧಾನಿಯವರಾದ ಶ್ರೀ ಮನೋಮೋಹನ್ ಸಿಂಗ್ ರವರು ನರ್ಸರಿ ಮಾಡಿದರು, ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರು ಡಿಜಿಟಲ್ ಹೆಮ್ಮರಕ್ಕೆ ನಾಂದಿ ಹಾಡುತ್ತಿದ್ದಾರೆ.’
ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡೆಸಿದ ವಿವಿಧ ಬಗೆಯ ಸೆನ್ಸೆಸ್, ಸಂಗ್ರಹಿಸಿದ ‘ಡಿಜಿಟಲ್ ಡಾಟಾಗಳು ಎಲ್ಲೋ ಒಂದು ಕಡೆ ದೂಳು ತಿನ್ನತ್ತಿವೆ,’ ಅವೆಲ್ಲಾ ‘ಕನ್ವರ್ಜೆನ್ಸ್’ ಆಗಬೇಕು. ಈ ಡಾಟಾಗಳು ಅನಾಲೀಸಿಸ್ ಆಗಬೇಕಿರುವುದು, ಎಸಿ ಕೊಠಡಿಗಳಲ್ಲಿ ಅಲ್ಲ. ಗ್ರಾಮೀಣ ಪ್ರದೇಶದಲ್ಲಿ ಪ್ರತಿಯೊಂದು ಗ್ರಾಮಗಳ ಮತ್ತು ನಗರ ಪ್ರದೇಶಗಳ ಪ್ರತಿಯೊಂದು ಬಡಾವಣೆಗಳ ಜನರಿಂದ ಆಗಬೇಕಿದೆ. ‘ರಿಯಲ್ ಟೈಮ್’ ಡಾಟಾಗಳಾಗಬೇಕಿದೆ. ‘ಅಂಕಿ ಅಂಶಗಳ ಇಲಾಖೆ ಹೈಟೆಕ್’ ಆಗಬೇಕು.
‘ಒಂದು ರಾಜ್ಯ- ಒಂದು ನಕ್ಷೆ ಮತ್ತು ಒಂದು ರಾಜ್ಯ- ಒಂದೇ ಡಾಟಾ’ ಘೋಷಣೆ ಗುತ್ತಿಗೆದಾರರೇ ಜಿಐಎಸ್ ಪೋರ್ಟಲ್‍ನಲ್ಲಿ ಅಫ್ ಡೇಟ್ ಮಾಡಬೇಕು. ಗುತ್ತಿಗೆ ಕರಾರಿನಲ್ಲಿಯೇ ಇದಕ್ಕೆ ಹಣ ಮೀಸಲೀಡಬೇಕು, ಬಿಲ್ ಮಾಡುವಾಗ ಇದು ಕಡ್ಡಾಯವಾಗಬೇಕು. ಎಲ್ಲಾ ಇಲಾಖೆಗಳ ಡಾಟಾ ಆಪರೇಟರ್ ಜಿಐಎಸ್ ಗೆ ಅಫ್ ಡೇಟ್ ಆಗಬೇಕು.
ಗ್ರಾಮೀಣ ಪ್ರದೇಶಗಳಲ್ಲಿ
- ಊರಿಗೊಂದು ಪುಸ್ತಕ. (ಅಂದು-ಇಂದು-ಮುಂದು)
- ಊರಿಗೊಂದು ಥೀಮ್ ಪಾರ್ಕ್/ ಪವಿತ್ರವನ. (ಗ್ರಾಮದ ಮಾಡೆಲ್)
- ಊರಿಗೊಂದು ಕೆರೆ _ ಆ ಕೆರೆಗೆ ನದಿ ನೀರು
ನಗರ ಪ್ರದೇಶಗಳಲ್ಲಿ
- ಬಡಾವಣೆಗೊಂದು ಪುಸ್ತಕ. (ಅಂದು-ಇಂದು-ಮುಂದು)
- ಬಡಾವಣೆಗೊಂದು ಥೀಮ್ ಪಾರ್ಕ್/ ಪವಿತ್ರವನ.(ಬಡಾವಣೆ ಮಾಡೆಲ್)
- ಬಡಾವಣೆಗೊಂದು ಜಲಸಂಗ್ರಹಾಗಾರ/ ಕೆರೆ _ ಆ ಕೆರೆಗೆ ನದಿ ನೀರು
ಹಲವಾರು ವರ್ಷಗಳಿಂದ ‘ರೆವಿನ್ಯೂ ಸರ್ವೇ ವಿಲೇಜ್ ಮ್ಯಾಪ್’ ಗಳಿವೆ, ಅವುಗಳ ಜೊತೆಗೆ ‘ಡೆವಲಪ್ ಮೆಂಟ್ ಡಿಜಿಟಲ್ ವಿಲೇಜ್ ಮ್ಯಾಪ್’ ಆಗಬೇಕಿದೆ. ಇಲ್ಲಿ 1947 ಕ್ಕಿಂತ ಮೊದಲು ಆಗಿರುವ ಕಾಮಗಾರಿಗಳು ಒಂದು ಕಲರ್‍ನಲ್ಲಿ, 75 ನೇ ಸ್ರಾತಂತ್ರ್ಯದ ವೇಳೆವರೆಗೆ ಆಗಿರುವ ಕಾಮಗಾರಿಗಳು ಒಂದು ಕಲರ್‍ನಲ್ಲಿ, ಜಿಐಎಸ್ ಆಧಾರಿತ ನಕ್ಷೆಯೊಂದಿಗೆ ಮಾಹಿತಿ ಲಭ್ಯವಾಗಬೇಕು.
ಮುಂದಿನ 2047 ರವರೆಗೆ ಅಂದರೆ 100 ನೇ ಸ್ರಾತಂತ್ರ್ಯದ ವೇಳೆವರೆಗೆ ಏನೇನು ಕೆಲಸ ಆಗಬೇಕು ಎಂಬ ‘ನೀಡ್ ಬೇಸ್ಡ್’ ಯೋಜನೆಗಳ ಡಿಜಿಟಲ್ ದಾಖಲೆ ಇನ್ನೊಂದು ಕಲರ್‍ನಲ್ಲಿ ಆಗಬೇಕು.
‘ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ’ ದೊರೆಯಲು, ಪ್ರತಿವರ್ಷ ಕೈಗೊಳ್ಳುವ ಕಾಮಗಾರಿಗಳು ಒಂದು ಕಲರ್‍ನಲ್ಲಿ ಇರಬೇಕು. ಪ್ರತಿವರ್ಷ ನಮ್ಮೂರಿಗೆ/ಬಡಾವಣೆಗೆ ಏನೇನು ಕೆಲಸ ಆಗಿದೆ, ಅಂದರೆ, ವ್ಯಕ್ತಿ, ಕುಟುಂಬ ಮತ್ತು ಸಮುದಾಯ/ಗ್ರಾಮ/ಬಡಾವಣೆಯ ಹಂತದಲ್ಲಿ ಜನರಿಂzಲೇÀ ಮೌಲ್ಯಮಾಪನವಾಗಬೇಕು.
ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ತಮ್ಮ ಪ್ರಣಾಳಿಕೆಯಲ್ಲಿ ಮತ್ತು ಸರ್ಕಾರಗಳ ಆಯವ್ಯಯ ಮಂಡಿಸುವಾಗ, ಈ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು. ಪಾರzರ್ಶಕವಾಗಿ ಎಲ್ಲರಿಗೂ ತಿಳಿಯುವಂತಿರಬೇಕು.
ರಾಜ್ಯದ ನಗರ ಪ್ರದೇಶಗಳಲ್ಲಿ ಇದೂವರೆಗೂ ಶಾಸಕರ ಅಧ್ಯಕ್ಷತೆಯಲ್ಲಿ ಕೆಡಿಪಿ ಮಾದರಿ ಅಥವಾ ದಿಶಾ ಮಾದರಿ ಸಮಿತಿಗಳೇ ಇಲ್ಲ. ತಾಲ್ಲೋಕು ಕೆಡಿಪಿ ಸಮಿತಿಗಳು ಮಾತ್ರ ಇವೆ. ಈ ಸಮಿತಿಯಲ್ಲಿ ನಗರ ಪ್ರದೇಶದ ಶಾಸಕರು ಇರುತ್ತಾರೆ. ಇದು ಬದಲಾಗಬೇಕು. ‘ನಗರ ಶಾಸಕರ ಅಧ್ಯಕ್ಷತೆ ಸಮಿತಿ ರಚಿಸಬೇಕು.’
ರಾಜ್ಯದ 28 ಜನ ಲೋಕಸಭಾ ಸದಸ್ಯರ, 12 ಜನ ರಾಜ್ಯಸಭಾ ಸದಸ್ಯರ, 225 ಜನ ವಿಧಾನಸಭಾ ಸದಸ್ಯರ,75 ಜನ ವಿಧಾನಪರಿಷತ್ ಸದ್ಯಸ್ಯರ ವಿವಿಧ ಸಭೆ ನಡೆವಳಿಕೆ ಟೆಂಪ್ಲೇಟ್ ಸಿದ್ಧಪಡಿಸಬೇಕು. ರ್ಯಾಂಕಿಂಗ್ ನೀಡಿ, ಉತ್ತಮ ಕೆಲಸ ಮಾಡುವವರಿಗೆ ಗೌರವಿಸುವ ಪದ್ಧತಿ ಜಾರಿಯಾಗಬೇಕು. ‘ಕಡಿಮೆ RANKING ಇರುವವರ ವೇತನ ಕಟ್’ ಮಾಡಬೇಕು. ಅದೇ ರೀತಿ ಸದಸ್ಯ ಕಾರ್ಯದರ್ಶಿ ಅಧಿಕಾರಿಗೂ ವೇತನ ಕಟ್ ಮಾಡಬೇಕು.
ಇವರೆಲ್ಲರಿಗೂ, ಅವರೆಲ್ಲರ ವ್ಯಾಪ್ತಿಯಲ್ಲಿ ಇಂಡಿಯಾ @ 100 ಅಂಗವಾಗಿ, ಒಂದೊಂದು ‘ಥೀಮ್ ಪಾರ್ಕ್’ ಸ್ಥಾಪಿಸಬೇಕು, ಆಯಾ ವ್ಯಾಪ್ತಿಯ ಎಲ್ಲಾ ರಾಜಕೀಯ ಪಕ್ಷಗಳ, ಚುನಾಯಿತ ಮಾಜಿ ಜನಪ್ರತಿನಿಧಿಗಳ, ಸ್ಪರ್ಧೇ ಮಾಡಿದವರ, ಜಾತಿ ಸಂಘಟನೆಗಳ, ಪತ್ರಕರ್ತರ ಸಂಘ, ಕನ್ನಡ ಸಾಹಿತ್ಯ ಪರಿಷತ್, ನಾಲೇಡ್ಜ್ ಬ್ಯಾಂಕ್, ನಿವೃತ್ತ ನೌಕರರ ಸಂಘಗಳ ಮತ್ತು ಐಎಎಸ್ ಮತ್ತು ಕೆ.ಎ.ಎಸ್. ಸ್ಪರ್ಧಾತ್ಮಕ ಪರೀಕ್ಷೆಗಳ ವಿದ್ಯಾರ್ಥಿಗಳು ‘ನಿರ್ವಹಣೆ ಮಾಡಲು ಮಾರ್ಗದರ್ಶಿ ಸೂತ್ರ’ ಸಿದ್ಧಪಡಿಸಬೇಕು.
ಇಲ್ಲಿ 1947 ಕ್ಕೆ ಮೊದಲು, ನಂತರ ಬಂದ ಮುಖ್ಯಮಂತ್ರಿಗಳವಾರು, ಪ್ರಧಾನ ಮಂತ್ರಿಗಳವಾರು ಯೋಜನೆಗಳ, ಕನ್ವರ್ಜೆನ್ಸ್ ಯೋಜನೆಗಳ ಮತ್ತು ಮುಂದೆ ಮಾಡಬೇಕಾಗಿರುವ ಯೋಜನೆಗಳ ಬಗ್ಗೆ ಗ್ರಾಮ/ಬಡಾವಣೆಯಿಂದ ಆರಂಭಿಸಿ, ರಾಷ್ಟ್ರಮಟ್ಟದವರೆಗೂ ಚರ್ಚೆ ನಡೆಯಬೇಕು. ಇಲ್ಲಿಗೆ ಬರುವವರ ‘ಆಧಾರ್ ಬಯೋಮೆಟ್ರಿಕ್ ಡಿಜಿಟಲ್ ದಾಖಲೆ’ ಇರಬೇಕು. ಸರ್ಕಾರಗಳು ನೀಡುವ ಎಲ್ಲಾ ‘ಪ್ರಶಸ್ಥಿಗಳಿಗೂ ಇವರ ಸೇವೆ’ ಪರಿಗಣಿಸಬೇಕು.
31 ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ, ಜಿಲ್ಲಾಧಿಕಾರಿಗಳ ಮತ್ತು ಜಿಲ್ಲಾ ಪಂಚಾಯಿತ್ ಸಿಇಓಗಳ ಎಲ್ಲಾ ಸಭೆಗಳಿಗೆ ಟೆಂಪ್ಲೇಟ್ ಸಿದ್ಧಪಡಿಸಬೇಕು, ಇವರ ಕೆಲಸಗಳಿಗೂ ರ್ಯಾಂಕಿಂಗ್ ನೀಡಬೇಕು.
ರಾಜ್ಯ ಸರ್ಕಾರದ ಯೋಜನಾ ಇಲಾಖೆ ಇಂಡಿಯಾ @ 100 ಅಂಗವಾಗಿ, ನವಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ಜಾರಿಗಾಗಿ, ‘ನಾಲೇಡ್ಜ್ ಬ್ಯಾಂಕ್’ ಸ್ಥಾಪಿಸಲು, ಈಗಾಗಲೇ ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳ, ಎಲ್ಲಾ ಗ್ರಾಮ ಪಂಚಾಯಿತಿಗಳ, ನಗರ ಸ್ಥಳೀಯ ಸಂಸ್ಥೆಗಳ ಅಭಿಪ್ರಾಯ ಕೋರಿ ಪತ್ರ ಬರೆದಿದೆ.
ವಿದ್ಯಾರ್ಥಿಗಳ ಹಂತದಲ್ಲಿ ಇರುವ ಇಕೋಕ್ಲಬ್, ರೆಡ್‍ಕ್ರಾಸ್ ಕ್ಲಬ್, ಎನ್.ಎಸ್.ಎಸ್. ಎನ್.ಸಿ.ಸಿ. ನ್ಯಾಷನಲ್ ಟೂರಿಸಂ ಯೂತ್ ಕ್ಲಬ್, ಇಂಜಿನಿಯರಿಂಗ್ ವಿದ್ಯಾರ್ಥಿಗಳ ಆಕ್ಟಿವಿಟಿ ಪಾಯಿಂಟ್ ಪಿ.ಹೆಚ್.ಡಿ ಮಾಡುವ ವಿಷಯ ಮತ್ತು ಎಲ್ಲಾ ಹಂತದ ಪದವಿಗಳಲ್ಲಿ ಪ್ರಾಜೆಕ್ಟ್ ಮಾಡುವ ವಿದ್ಯಾರ್ಥಿಗಳು, ಎಲ್ಲೇ ಯಾವುದೇ ಕಾಲೆಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದರು, ಅವರವರ ಹುಟ್ಟೂರಿನ/ಬಡಾವಣೆಯ, ‘ಊರಿಗೊಂದು/ಬಡಾವಣೆಗೊಂದು ಪುಸ್ತಕ ರಚಿಸುವುದು ಒಂದು ಪ್ರಾಜೆಕ್ಟ್’ ಎಂದು ಸರ್ಕಾರಿ ಆದೇಶವಾಗಬೇಕು.
ವಿದ್ಯಾರ್ಥಿಗಳ ಜೊತೆಗೆ ಆಯಾ ಗ್ರಾಮದ ವಿವಿಧ ಸಂಘ ಸಂಸ್ಥೆಗಳು, ಯುವ ಸಂಘಟನೆಗಳು, ಹಾಲಿ ಮತ್ತು ನಿವೃತ್ತ ಸರ್ಕಾರಿ ಅಧಿಕಾರಿಗಳು, ಗ್ರಾಮ ಮಟ್ಟದ ಸರ್ಕಾರಿ ನೌಕರರ, ಎಲ್ಲಾ ರಾಜಕೀಯ ಪಕ್ಷಗಳ ಪ್ರಮುಖರು, ಸ್ತ್ರಿ ಶಕ್ತಿ ಸ್ವಸಹಾಯ ಸಂಘಗಳ, ಆಯಾ ಹಂತದಲ್ಲಿ ವಾಸಿಸುವ ಎಲ್ಲಾ ಜಾತಿಯ ಪ್ರತಿನಿಧಿಗಳು, ಎಲ್ಲಾ ಧರ್ಮದ ಪ್ರತಿನಿಧಿಗಳು, ಚುನಾಯಿತ ಪ್ರತಿನಿಧಿಗಳು ಮತ್ತು ವಿಷಯವಾರು ಪರಿಣಿತರು/ಜ್ಞಾನಿಗಳು ಭಾಗಿಯಾಗಲು ‘ಮಾರ್ಗದರ್ಶಿ ಸೂತ್ರ’ ಸಿದ್ಧಪಡಿಸಬೇಕು.
ರಾಜ್ಯದ ಎಲ್ಲಾ ವಿಶ್ವ ವಿದ್ಯಾನಿಲಯಗಳಿಗೆ, ‘ವಿಧಾನಸಭಾ ಕ್ಷೇತ್ರವಾರು ವ್ಯಾಪ್ತಿ’ ಹಂಚಿಕೆ ಮಾಡಬೇಕು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ‘ಯೋಜನೆಗಳನ್ನು ಹಂಚಿಕೆ’ ಮಾಡಬೇಕು. ವಿಶ್ವ ವಿದ್ಯಾನಿಲಯಗಳಲ್ಲಿರುವ ಅಧ್ಯಯನ ಪೀಠಗಳಿಗೆ ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಬೇಕು. ಯೋಜನಾ ಇಲಾಖೆಯ ಅಡಿಯಲ್ಲಿ ಇರುವ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ಅಗತ್ಯ ‘ಅನುದಾನ’ ನೀಡಬೇಕು.
ಎಲ್ಲಾ ವರದಿಗಳ/ಯೋಜನೆಗಳ ‘ಮೌಲ್ಯಮಾಪನ ಆಯಾ ಗ್ರಾಮ/ಬಡಾವಣೆಗಳ ಜನತೆಯ’ ಮುಂದೆಯೇ ಆಗಬೇಕು. ಆಯಾ ಗ್ರಾಮ/ಬಡಾವಣೆ ಹಂತದ ಸೋಶಿಯಲ್ ಮೀಡಿಯಾಗಳಲ್ಲಿ ವ್ಯಾಪಕ ಪ್ರಚಾರ ಮಾಡಬೇಕು. ಗ್ರಂಥಾಲಯಗಳ ಸಹಭಾಗಿತ್ವದಲ್ಲಿ, ಗ್ರಾಮಗಳ/ಬಡಾವಣೆಗಳ ಹಂತದಲ್ಲಿ ‘ಡಾಟಾ ಮಿತ್ರ’ ನೇಮಕವಾಗಬೇಕು.
ಈ ಎಲ್ಲಾ ಯೋಜನೆಗಳ ‘ಮಾನಿಟರಿಂಗ್ ಸೆಲ್’ ಅಥವಾ ‘ಫಿಸ್ಕಲ್ ಪಾಲಿಸಿ ಇನ್‍ಸ್ಟಿಟ್ಯೂಟ್’ ಮಾದರಿಯಲ್ಲಿ ‘ಸೆಂಟರ್ ಆಫ್ ಎಕ್ಸಲೆನ್ಸ್ ಕ್ಯಾಪ್ಚರಿಂಗ್ ಗೌರ್ವನಮೆಂಟ್ ಇಂಡಿಯಾ ಫಂಡ್ಸ್’ ಸಂಸ್ಥೆಯನ್ನು ಸ್ಥಾಪಿಸಬೇಕು.
‘ದೆಹಲಿ ಪ್ರತಿನಿಧಿ ಕಚೇರಿಯನ್ನು ಸಚಿವಾಲಯವಾಗಿ ಮಾರ್ಪಡಿಸಬೇಕು, ಹಿರಿಯ ಅನುಭವಿಗಳು ಮತ್ತು ಉತ್ಸಾಹಿ ಯುವಕರನ್ನು ದೆಹಲಿ ಪ್ರತಿನಿಧಿಗಳಾಗಿ ನೇಮಿಸ ಬೇಕು. ಪಕ್ಷಾತೀತವಾಗಿ ಎಲ್ಲಾ ಪಕ್ಷಗಳ ನೇತೃತ್ವದಲ್ಲಿ, ಪಿಪಿಪಿ ಮಾದರಿಯಲ್ಲಿ ಸ್ಥಾಪಿಸಿದರೆ ಒಳ್ಳೆಯದು.’
ಕೇಂದ್ರದಲ್ಲಿ ಯಾವುದೇ ಸರ್ಕಾರವಿರಲಿ, ರಾಜ್ಯದಲ್ಲಿ ಯಾವುದೇ ಸರ್ಕಾರವಿರಲಿ, ಎಲ್ಲರ ವಿಶ್ವಾಸ ಪಡೆದು ‘ಅಭಿವೃದ್ಧಿ ಲಾಭಿ’ಯ ಪಲಿತಾಂಶ ಕಾಣುವಂತಹ ಮನಸ್ಥಿತಿಯ ಜನ, ಇಲ್ಲಿ ಕಾರ್ಯ ನಿರ್ವಹಿಸಬೇಕು. ಎಂಥಹುದೇ ಸಂದರ್ಭದಲ್ಲಿ ರಾಜಕೀಯ ಮಾಡದೆ, ಎಲ್ಲಾ ಹಂತದ ಚುನಾಯಿತ ಜನಪ್ರತಿನಿಧಿಗಳು ಕೇಳಿದ ತಕ್ಷಣ, ನಿಖರವಾದ ಮಾಹಿತಿ ನೀಡುವ ‘ಡಾಟಾ ಬ್ಯಾಂಕ್’ ನಂತಿರ ಬೇಕು.
ಎಲ್ಲಾ ಹಂತದ ಸಹಕಾರಿ ಸಂಸ್ಥೆಗಳಲ್ಲಿ ‘ಅಭಿವೃದ್ಧಿ ನಿಧಿ’ ಸ್ಥಾಪಿಸಬೇಕು, ಎಲ್ಲಾ ಹಂತದ ಗ್ರಾಮ ಮತ್ತು ನಗರ ಪ್ರದೇಶಗಳ ಸ್ಥಳೀಯ ಸಂಸ್ಥೆಗಳಲ್ಲಿಯೂ ‘ಅಭಿವೃದ್ಧಿ ನಿಧಿ’ ಸ್ಥಾಪಿಸಬೇಕು. ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರಕ್ಕೆ ಅಭಿವೃದ್ಧಿನಿಧಿ ವರ್ಗಾವಣೆ ಮಾಡಿ, ಒಂದೇ ಸೂರಿನಡಿ ವಿದ್ಯಾರ್ಥಿಗಳಿಗೆ ಮತ್ತು ಜ್ಞಾನಿಗಳಿಗೆ ಈ ನಿಧಿಯಿಂದ ಸಂಭಾವನೆ, ಟಿಎ.ಡಿಎ ಕಡ್ಡಾಯವಾಗಿ ನೀಡಬೇಕು.
–ಕುಂದರನಹಳ್ಳಿ ರಮೇಶ್, ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ