30th April 2024
Share

TUMAKURU:SHAKTHIPEETA FOUNDATION

ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೋಕು, ರೆಸಾರ್ಟ್ ಓನರ್ಸ್ ಅಸೋಯೇಷನ್ ಮಹತ್ವದ ನಿರ್ಧಾರ ಕೈಗೊಂಡಿದೆ. ಸುಮಾರು 25 ಕ್ಕೂ ಹೆಚ್ಚು ರೆಸಾರ್ಟ್ ಮಾಲೀಕರು  ಸೇರಿ, ದಿನಾಂಕ:26.06.2023 ರಂದು  ಒಂದು ಅರ್ಥಪೂರ್ಣ ಸಮಾಲೋಚನೆ ನಡೆಸಿದರು.

ಪಶ್ಚಿಮಘಟ್ಟಗಳ ಪ್ರವಾಸೋಧ್ಯೋಮವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸಬೇಕು. ಇಲ್ಲಿ ಏನೇನು ಇದೆ ಎಂಬ ಮಾಹಿತಿಗಳನ್ನು ಒಳಗೊಂಡ ಎಲ್ಲವನ್ನು ಗುರುತಿಸುವ ಕೆಲಸ ಆಗಬೇಕು. ಈ ಪಶ್ಚಿಮಘಟ್ಟಗಳ ಬಗ್ಗೆ ಅಧ್ಯಯನ ಮಾಡಿರುವ, ಮಾಡುತ್ತಿರುವ, ಗ್ರಾಮೀಣ ಪ್ರತಿಭೆಗಳ ವಿವಿಧ ಸಂಗ್ರಹ, ಜಾನಪಾದ ಹಾಡು, ಸೋಲಿಗರ ಅನುಭವ ಹೀಗೆ ಜ್ಞಾನಿಗಳ ‘ನಾಲೇಡ್ಜ್ ಬ್ಯಾಂಕ್’ ಅನ್ನು ಸ್ಥಾಪಿಸಲು ಚಿಂತನೆ ಮಾಡಿದ್ದಾರೆ.

ನಂತರ ಎರಡನೇ ಹಂತದಲ್ಲಿ ಗ್ರಾಮ ಮಟ್ಟದಿಂದ ಆರಂಭಿಸಿ, ಸ್ಥಳೀಯ ಸಂಸ್ಥೆ, ತಾಲ್ಲೋಕು, ಜಿಲ್ಲಾ, ರಾಜ್ಯ, ಕೇಂದ್ರ ಸರ್ಕಾರದ ಜೊತೆ ನಿರಂತರವಾಗಿ ಶ್ರಮಿಸುವ ಒಂದು ಸಲಹಾಗಾರರ ಸಂಸ್ಥೆಯನ್ನು ನೇಮಕಮಾಡಿ, ಪರಿಸರ ಸಂರಕ್ಷಣೆ ಪೂರಕವಾಗಿರುವ ಯೋಜನೆಗಳ ಮಂಜೂರಾತಿಗೆ ಶ್ರಮಿಸಲು ಆಲೋಚಿಸಿದ್ದಾರೆ.

ನಾನು ಮುಖ್ಯ ಅತಿಥಿಯಾಗಿ ಸಭೆಯಲ್ಲಿ ಭಾಗವಹಿಸಿದ್ದರಿಂದ, ಪಶ್ಚಿಮ ಘಟ್ಟದ ಜ್ಞಾನವಿರುವವರ ಜೊತೆ ಸಮಾಲೋಚನೆ ನಡೆಸುವ ಹಿನ್ನಲೆಯಲ್ಲಿ ಈ ಮೂಲಕ ಮನವಿ ಮಾಡಿದ್ದೇನೆ.

ಮೊದಲು ಪಶ್ಚಿಮಘಟ್ಟದಲ್ಲಿ ಹುಟ್ಟುವ ನದಿಗಳ ಉಗಮ ಸ್ಥಾನವನ್ನು ಗುರುತಿಸಲು ಜಲಸಂಪನ್ಮೂಲ ಇಲಾಖೆಗೆ ಸಲಹೆ ನೀಡಲಾಗುವುದು. ಯಾರಿಗಾದರೂ ಎಲ್ಲಾ ನದಿಗಳ ಉಗಮ ಸ್ಥಾನಗಳ  ಪರಿಚಯವಿದ್ದಲ್ಲಿ ಸಂಪರ್ಕಿಸಲು ಮನವಿ.

ಸಭೆ ನಡೆಸಿದ ಸ್ಥಳ, ಹಾಜರಿದ್ದವರ ಹೆಸರು, ಫೋಟೋ ಮತ್ತು ಅವರು ಕೈಗೊಂಡ ನಿರ್ಣಯಗಳ ಬಗ್ಗೆ ನಾನು ಬರೆದಿಲ್ಲ. ಅವರು ಪಕ್ಕಾ  ಮಾಹಿತಿ ಕಳುಹಿಸಿದ ನಂತರ ಬರೆಯಲಾಗುವುದು.