21st November 2024
Share

TUMAKURU:SHAKTHIPEETA FOUNDATION

ಚಿತ್ರದುರ್ಗ ಜಿಲ್ಲೆಯ, ಹಿರಿಯೂರು ತಾಲ್ಲೋಕಿನ ಪ್ರತಿಷ್ಟಿತ ವಾಣಿ ವಿಲಾಸ ಕಾಲುವೆಯ 128 ಕೀಮೀ  ಇದೆಯಂತೆ. ಈ ಕಾಲುವೆ ಅಕ್ಕ-ಪಕ್ಕ ಕಾಲುವೆ ರಸ್ತೆ ನಂತರ ಸುಮಾರು 704 ಎಕರೆ ಹೆಚ್ಚುವರಿ ಜಮೀನು ಇದೆ.

2015 ರಲ್ಲಿ ಶಕ್ತಿಪೀಠ ಕ್ಯಾಂಪಸ್ ಗಾಗಿ ಜಮೀನು ಹುಡುಕಿ, ಹಿರಿಯೂರು ತಾಲ್ಲೋಕಿನಲ್ಲಿ ಜಮೀನು ಕೊಂಡ ನಂತರ, ನನ್ನ ತಮ್ಮ ಶ್ರೀ ಎಸ್.ಪಿ.ರಾಜೇಶ್ ರವರ ಜಮೀನು ಅಳತೆ ಮಾಡಿಸುವಾಗ ಸುಮಾರು 13 ಎಕರೆ ಕಾಲುವೆ ಜಮೀನು ಇದೆ ಎಂಬ ಮಾಹಿತಿ ಅರಿವಾಯಿತು.

ನಂತರ ಜಿಐಎಸ್ ಪರಿಣಿತ ಶ್ರೀ ಬಸವರಾಜ್ ಸುರಣಗಿಯವರಿಂದ ಅಧ್ಯಯನ ಮಾಡಿಸಿದಾಗ ಸುಮಾರು 90 ಎಕರೆ ಜಮೀನು ಹುಡುಕಿದರು. ಆಗ ವಾಣಿ ವಿಲಾಸ ಕಾಲುವೆ ಪಕ್ಕ ಗ್ರೀನ್ ಕಾರಿಡಾರ್ ಮಾಡಿಸಲು ಜಮೀನು ಗುರುತಿಸಲು, ಆಗಿನ ಮುಖ್ಯ ಇಂಜಿನಿಯರ್ ಶ್ರೀ ರಾಜಶೇಖರ್ ರವರು ಮತ್ತು ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಕೆ.ಜೈಪ್ರಕಾಶ್ ರವರ ಗಮನಕ್ಕೆ ತರಲಾಯಿತು.

ನಂತರದ ಮುಖ್ಯ ಇಂಜಿನಿಯರ್ ಶ್ರೀ ರಾಘವನ್ ರವರು ಮತ್ತು ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಲಕ್ಷಣ್ ರಾವ್ ಪೇಶ್ವೇಯವರ ಕಾಲದಲ್ಲಿ ಸಮೀಕ್ಷೆಗಾಗಿ ಟೆಂಡರ್ ಕರೆದರು.

ಈಗ ಸಮೀಕ್ಷೆ ಮುಗಿದಿದ್ದು ಕಾಲುವೆ ಮತ್ತು ಸರ್ವಿಸ್ ರಸ್ತೆಗಳ ನಂತರ ಹೆಚ್ಚುವರಿಯಾಗಿ 704 ಎಕರೆ ಜಮೀನು ಗುರುತಿಸಲಾಗಿದೆ. ಈ ಹೆಚ್ಚುವರಿ ಜಮೀನನಲ್ಲಿ ರೈತರ ಸಹಬಾಗಿತ್ವದಲ್ಲಿ, ಪಿಪಿಪಿ ಯೋಜನೆಯಾಗಿ, ಗ್ರೀನ್ ಕಾರಿಡಾರ್, ರೂರಲ್ ಪ್ರವಾದ್ಯೋಮ ಸ್ಥಾಪಿಸಿ, ಉದ್ಯೋಗ ನೀಡುವುದರ ಜೊತೆಗೆ ಒಂದು ಐತಿಹಾಸಿಕ ಯೋಜನೆ ರೂಪಿಸಲು ಹಿರಿಯೂರು ಶಾಸಕರು ಹಾಗೂ ರಾಜ್ಯ  ಯೋಜನಾ ಸಚಿವರಾದ ಶ್ರೀ ಸುಧಾಕರ್ ರವರಿಗೆ ಒಂದು ವಿಫುಲ ಅವಕಾಶವಿದೆ.

ಮಾಜಿ ಶಾಸಕಿ ಶ್ರೀಮತಿ ಪೂರ್ಣಿಮಾ ರವರೊಂದಿಗೆ ಹಿಂದೆ ಸಮಾಲೋಚನೆ ನಡೆಸಿದಾಗ ಅವರು ಸ್ಪಂಧಿಸಿದ್ದರು. ಅವರು ಮಾಜಿಯಾಗುವ ವೇಳೆಗೆ ಸಮೀಕ್ಷೆ ಮುಗಿದಿದ್ದು, ಪ್ರಸ್ತುತ ಶ್ರೀ ಸುಧಾಕರ್ ಅವಧಿಯಲ್ಲಿ ಯೋಜನೆ ಪೂರ್ಣಗೊಳಿಸುವರೇ ಕಾದು ನೋಡಬೇಕಿದೆ.