21st November 2024
Share

TUMKURU:SHAKTHI PEETA FOUNDATION

 ನಮ್ಮ ಮುಖ್ಯ ಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು 2014 ರಲ್ಲಿ ಕೈಗೊಂಡ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ ಅಥವಾ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಹಾಗೂ ನಮ್ಮ ಪ್ರಧಾನಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರು ತರಲು ಉದ್ದೇಶಿರುವ ‘NATIONAL RESERCH FOUNDATION BILL -2023’ ಬಿಲ್‍ಗಳ  ಫೈಲಟ್ ಪ್ರಾಜೆಕ್ಟ್ ಅನ್ನು, ತುಮಕೂರು ಜಿಲ್ಲೆಯಲ್ಲಿ ಕೈಗೊಳ್ಳಲು ಪ್ರಸ್ತಾವನೆ ಸಲ್ಲಿಸುವ ದಿಟ್ಟ ನಿರ್ಧಾರ ಕೈಗೊಳ್ಳಲಾಗಿದೆ.

ಎರಡು ಯೋಜನೆಗಳು ಸರ್ಕಾರಗಳಿಂದ ಇನ್ನೂ ಅಂಗೀಕಾರವಾಗ ಬೇಕಿದೆ. ಅಂಗೀಕಾರವಾಗುವ ಮುನ್ನ ಒಂದು ಜಿಲ್ಲೆಯಲ್ಲಿ ಸಾಧಕ-ಬಾಧಕಗಳನ್ನು ಅಧ್ಯಯನ ಮಾಡಲು, ಎರಡು ಸರ್ಕಾರಗಳಿಗೆ ಮನವರಿಕೆ ಮಾಡಲಾಗುವುದು.

ಇದೊಂದು ಐತಿಹಾಸಿಕವಾಗಲಿದೆ, ಊರಿಗೊಂದು/ಬಡಾವಣೆಗೊಂದು ಪುಸ್ತಕ ದ ರೂಪದಲ್ಲಿ, ತುಮಕೂರು ಜಿಲ್ಲೆಯ ಪ್ರತಿಯೊಂದು ಗ್ರಾಮ ಹಾಗೂ ನಗರ ಪ್ರದೇಶಗಳ ಪ್ರತಿಯೊಂದು ಬಡಾವಣೆಗಳಲ್ಲೂ, ಅಲ್ಲಿನ ಜನರಿಂದಲೇ ಮೌಲ್ಯಮಾಪನ ಮಾಡಿಸುವ ಮೂಲಕ ನಿಖರವಾದ ಮಾಹಿತಿಗಳೊಂದಿಗೆ ಯೋಜನೆಗಳ ಯಶಸ್ವಿಗೆ ಶ್ರಮಿಸಲಾಗುವುದು.

  ಬಹಳ ವರ್ಷಗಳಿಂದ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಮತ್ತು ನನ್ನ ಕನಸಾಗಿತ್ತು. ಈ ಕನಸನ್ನು ನನಸು ಮಾಡಲು ಇಂಜಿನಿಯರ್ ಕೆ.ಆರ್.ಸೋಹನ್ ತುಮಕೂರಿನ ವಸಂತನರಸಾಪುರದಲ್ಲಿ ಶಕ್ತಿಪೀಠ ಡಾಟಾ ಪಾರ್ಕ್ ಆರಂಭಿಸುವ ಮೂಲಕ ಚಾಲನೆ ನೀಡಲು ಮುಂದಾಗಿದ್ದಾರೆ.

ಏಕಕಾಲದಲ್ಲಿ ತುಮಕೂರು ಜಿಲ್ಲೆಯ ಪ್ರತಿಯೊಂದು ಗ್ರಾಮ ಹಾಗೂ ನಗರ ಪ್ರದೇಶಗಳ ಪ್ರತಿಯೊಂದು ಬಡಾವಣೆಗಳಲ್ಲೂ, ಆಯಾ ಗ್ರಾಮ ಹಾಗೂ ಬಡಾವಣೆ ಹೆಸರಿನ ರೀಸರ್ಚ್ ಫೌಂಡೇಷನ್ ಗಳನ್ನು, ಮಾನ್ಯ ಪ್ರಧಾನ ಮಂತ್ರಿಯವರು ಹಾಗೂ ಮಾನ್ಯ ಮುಖ್ಯಮಂತ್ರಿಯವರು ಆನ್ ಲೈನ್ ಮೂಲಕ ಉದ್ಘಾಟಿಸಲು ಮನವಿ ಮಾಡಲಾಗುವುದು.

ದಿನಾಂಕ:01.08.2023 ರಿಂದ, ಈ ಬಗ್ಗೆ ಜಿಲ್ಲಾಧ್ಯಂತ, ಹಲವಾರು ಸಭೆಗಳನ್ನು ನಡೆಸುವ ಮೂಲಕ ಜನಜಾಗೃತಿ ಮೂಡಿಸಲಾಗುವುದು. ಸರ್ಕಾರಕ್ಕೆ ಈಗಾಗಲೇ ನಾನು ಸಲ್ಲಿಸಿರುವ ವರದಿಯ ಆಧಾರದ ಮೇಲೆ ಸರ್ಕಾರದಿಂದ ಅಧಿಕೃತ ಆದೇಶ ಪಡೆಯಲು ನಿರಂತರ ಪ್ರಯತ್ನ ಆರಂಭವಾಗಿದೆ.

ಈ ಎರಡು ವಿಷಯಗಳ ಪರಿಣಿತ ತಜ್ಞರು ಸಹಕರಿಸಲು ಬಹಿರಂಗ ಮನವಿ ಮಾಡಲಾಗಿದೆ.

‘ಶಕ್ತಿಪೀಠ ಡಾಟಾ ಪಾರ್ಕ್’ ಕಾಮಗಾರಿ ಆರಂಭ.