TUMAKURU:SHAKTHIPEETA FOUNDATION
‘ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ’ ಕರಡು ಪ್ರತಿಯನ್ನು ಸನ್ಮಾನ್ಯ ಮುಖ್ಯಮಂತ್ರಿ ಯವರಾದ ಶ್ರೀ ಸಿದ್ಧರಾಮಯ್ಯನವರಿಂದ ಬಿಡುಗಡೆ ಮಾಡಲು ಆಲೋಚನೆ ನಡೆಸಲಾಗಿತ್ತು.
ಕರಡು ಪ್ರತಿ ಆದ್ದರಿಂದ ಮುಖ್ಯಮಂತ್ರಿಯವರಿಂದ ಬಿಡುಗಡೆ ಮಾಡಿಸುವುದು ಬೇಡ, ಅಂತಿಮ ವರದಿಯನ್ನು ಅವರಿಂದ ಬಿಡುಗಡೆ ಮಾಡಿಸಲು ಜ್ಞಾನಿಗಳಿಂದ ಸಲಹೆ ಬಂದ ಹಿನ್ನಲೆಯಲ್ಲಿ ದಿನಾಂಕ:22.07.2023 ರಂದು ನನ್ನ ಆರಾಧ್ಯ ದೇವತೆ ಮೈಸೂರು ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪೂಜೆ ಮಾಡಿಸುವ ಮೂಲಕ ಬಿಡುಗಡೆ ಮಾಡಲಾಯಿತು.
ದೆಹಲಿಯಲ್ಲಿ ಕೆಳಕಂಡವರ ಮುಕ್ತ ಭೇಟಿಯೊಂದಿಗೆ ಸಮಾಲೋಚನೆ ಆರಂಭಿಸಲಾಗಿದೆ.
ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು, ದೆಹಲಿ ವಿಶೇಷ ಪ್ರತಿನಿಧಿ, ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು ಹಾಗೂ ರೆಸಿಡೆಂಟ್ ಕಮಿಷನರ್ ದೆಹಲಿ.
ಮಾನ್ಯರೇ.
ವಿಷಯ:ತಮ್ಮ ಸಂದೇಶ ಮತ್ತು ಅಭಿಪ್ರಾಯ ನೀಡುವ ಬಗ್ಗೆ.
ಈ ಪತ್ರದ ಜೊತೆ ‘ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ’ ಕರಡು ಪ್ರತಿಯನ್ನು ಲಗತ್ತಿಸಿದೆ. ಕೆಳಕಂಡ ಅಂಶಗಳ ಬಗ್ಗೆ, ತಮ್ಮ ಸಂದೇಶ ಮತ್ತು ಸ್ಪಷ್ಟ ಅಭಿಪ್ರಾಯವನ್ನು ನೀಡಲು ಹೃದಯಪೂರ್ವಕವಾಗಿ ಈ ಮೂಲಕ ಮನವಿ.
- ಇಂಡಿಯಾ @ 100 ಅಂಗವಾಗಿ, 2047 ಕ್ಕೆ ಅಭಿವೃದ್ಧಿಯಲ್ಲಿ ನಂಬರ್ ಒನ್ ಕರ್ನಾಟP’À ಆಗಲು ತಮ್ಮ ಅಭಿಪ್ರಾಯ ನೀಡುವುದು.
- ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಹೆಚ್ಚಿಗೆ ಅನುದಾನ ತರಲು ಕಾರ್ಯತಂತ್ರ ರೂಪಿಸಲು ತಮ್ಮ ಅಭಿಪ್ರಾಯ ನೀಡುವುದು.
- ರಾಜ್ಯ, ಜಿಲ್ಲಾ ಮತ್ತು ಲೋಕಸಭಾ ವ್ಯಾಪ್ತಿಯ ದಿಶಾ ಸಮಿತಿಗಳು ದೇಶದಲ್ಲಿ ನಂಬರ್ ಒನ್ ಆಗಿ ಕಾರ್ಯನಿರ್ವಹಿಸಲು ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಲು ತಮ್ಮ ಅಭಿಪ್ರಾಯ ನೀಡುವುದು.
- ‘ನಂಬರ್ ಒನ್ ಕರ್ನಾಟP’À ಅಂತಿಮ ವರದಿಗೆ ತಮ್ಮ ಸಂದೇಶ ನೀಡುವುದು.
- ಕರಡು ಪ್ರತಿಯಲ್ಲಿರುವ ಪ್ರತಿಯೊಂದು ಅಂಶಗಳ ಅಗತ್ಯದ ಬಗ್ಗೆ ತಮ್ಮ ಅಭಿಪ್ರಾಯ ನೀಡುವುದು.
ವಂದನೆಗಳೊಂದಿಗೆ ತಮ್ಮ ವಿಶ್ವಾಸಿ
(ಕುಂದರನಹಳ್ಳಿ ರಮೇಶ್) (ಕೆ.ಆರ್.ಸೋಹನ್)
ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ. ಸಿ.ಇ.ಓ ಶಕ್ತಿಪೀಠ ಫೌಂಡೇಷನ್.