22nd December 2024
Share

ಪ್ರಿಯಾಂಕ್ ಖರ್ಗೆ ಫೋಟೋ ಏಕೆ ?

ಮಲ್ಲಿಕಾರ್ಜುನ್ ಖರ್ಗೆ ಫೋಟೋ ಏಕಿಲ್ಲ?

TUMAKURU:SHAKTHIPEETA FOUNDATION

 ‘ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ’ ಪುಸ್ತಕದ ಹಿಂಬದಿ ಪುಟದ ಫೋಟೋಗಳ ಬಗ್ಗೆ ಬಿಜೆಪಿಯ ಒಬ್ಬ ಕಾರ್ಯಕರ್ತರು ನನ್ನನ್ನು ಪ್ರಶ್ನೆ ಮಾಡಿದ್ದು ಹೀಗೆ. ಪ್ರಿಯಾಂಕ್ ಖರ್ಗೆ ಫೋಟೋ ಏಕೆ? ಮಲ್ಲಿಕಾರ್ಜುನ್ ಖರ್ಗೆ ಫೋಟೋ ಏಕಿಲ್ಲ?

ನಾನು ಅವರಿಗೆ ಹೇಳಿದ ಮಾತು, ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರು ದೇಶದ ಎಲ್ಲಾ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರನ್ನು, ಆಯಾ  ರಾಜ್ಯ ಮಟ್ಟದ ದಿಶಾ ಸಮಿತಿಗೆ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ ಸ್ವಾಮಿ. ಅದಕ್ಕೆ ಅವರ ಪೋಟೋ ಹಾಕಲಾಗಿದೆ.

ಸರಿ ಶ್ರೀ ಮಲ್ಲಿಕಾರ್ಜುನ್ ಖರ್ಗೆಯವರ ಪೋಟೋ ಏಕೆ ಹಾಕಬೇಕು ? ಹೇಳಿ ಸ್ವಾಮಿ, ಎಂದು ಅವರನ್ನು ಕೇಳಿದಾಗ ಅವರು ಹೇಳಿದ್ದು, ರಾಜ್ಯದ ಬದುಕಿರುವ ಎಲ್ಲಾ ಮಾಜಿ ಮುಖ್ಯಂಮತ್ರಿಯವರ ಮತ್ತು ಕೇಂದ್ರ ಸಚಿವರ ಪೋಟೋ ಹಾಕಿದ್ದೀರಿ, ಇದೊಂದು ಒಳ್ಳೆಯ ಬೆಳವಣಿಗೆ.

ರಾಜ್ಯ ಮಟ್ಟದ ದಿಶಾ ಸಮಿತಿಗೆ ಸಂಭಂದಿಸಿದಂತೆ,À ರಾಜ್ಯದ ಉಪ ಮುಖ್ಯಮಂತ್ರಿಯವರನ್ನು ಮತ್ತು ಯೋಜನಾ ಸಚಿವರನ್ನು ಉಪಾಧ್ಯಕ್ಷರಾಗಿ ನೇಮಿಸಲು ನೀವೂ ಸಲಹೆ ನೀಡಿರುವದರಿಂದ ಅವರ ಹೆಸರುಗಳು ಮತ್ತು  ದೆಹಲಿ ವಿಶೇಷ ಪ್ರತಿನಿಧಿಯವgನ್ನು ರಾಜ್ಯಮಟ್ಟದ ದಿಶಾ ಸಮಿತಿಗೆ ಕಾರ್ಯಧ್ಯಕ್ಷರನ್ನಾಗಿ ನೇಮಿಸಲು ನೀವೂ ಸಲಹೆ ನೀಡಿರುವದರಿಂದ  ಅವರ ಫೋಟೋ ಹಾಕಿದ್ದೀರಿ ಇದು ಸರಿಯಾಗಿದೆ.

ಅದೇ ರೀತಿ ಕೇಂದ್ರ ಸರ್ಕಾರದ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರು ಹಾಗೂ ಲೋಕಸಭೆಯ ವಿರೋಧ ಪಕ್ಷದ/ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದ ಶ್ರೀ ಮಲ್ಲಿಕಾರ್ಜುನ್ ಖರ್ಗೆಯವರ ಫೋಟೋ ಇಲ್ಲಿ ಇರಲಿ, ಈ ಬಗ್ಗೆ ಪರಿಶೀಲಿಸಿ ಎಂದು ಸಲಹೆ ನೀಡಿದ್ದಾರೆ.

ಜೊತೆಗೆ ರಾಜ್ಯ ಮಟ್ಟದ ದಿಶಾ ಸಮಿತಿಯ ಎಲ್ಲಾ ಸದಸ್ಯರ ಫೋಟೋ ಹಾಕಲು ಸಲಹೆ ನೀಡಿದ್ದಾರೆ. ನನಗೂ ಇದೊಂದು ಒಳ್ಳೆಯ ಸಲಹೆ ಎಂಬ ಮನವರಿಕೆ ಆಗಿದೆ.

ಅವರ ತಂಡವೇ ಈ ಪುಸ್ತಕ ಪ್ರಿಂಟ್ ಹಾಕಿಸಿ ಕೊಟ್ಟಿದ್ದಾರೆ. ಎಲ್ಲೂ ದಾನ ನೀಡಿದ್ದಾರೆ, ಎಂದು ನಮ್ಮಗಳ ಹೆಸರು ಬರೆಯ ಬೇಡಿ ಎಂದು ಹೇಳಿದ್ದಾರೆ. ಅವರಿಗೆ ನನ್ನ ಅಭಿನಂದನೆಗಳು.

ನಿವೇನಂತಿರಿ?