5th May 2024
Share

TUMAKURU:SHAKTHIPEETA FOUNDATION

ಶಕ್ತಿಪೀಠ ಫೌಂಡೇಷನ್(16.08.2019) ನಾಲ್ಕು ವರ್ಷ ಪೂರ್ಣಗೊಳಿಸಿ, 5 ನೇ ವರ್ಷಕ್ಕೆ ಪಾದಾರ್ಪಣೆ ಮಾಡಲಿದೆ. ಶಕ್ತಿಪೀಠ, ಜಲಪೀಠ ಮತ್ತು ಅಭಿವೃದ್ಧಿ ಪೀಠ ಮೂರು ಪ್ರಮುಖ ಉದ್ದೇಶಗಳ ಅನುಷ್ಠಾನದ ಬಗ್ಗೆ ಜಾಗೃತಿ ಮೂಡಿಸುವುದು ಪ್ರಮುಖ ಉದ್ದೇವಾದರೂ, ಅದೊಂದು ‘ವಿಶ್ವ ಮಟ್ಟದ ಸಂಸ್ಥೆ’ ಆಗಬೇಕು ಎಂಬುದು ನನ್ನ ಪರಿಕಲ್ಪನೆ.

ಫೌಂಡೇಷನ್ ನೊಂದಣೆಯಾದ ಆರಂಭದಲ್ಲಿಯೇ, ಮೊದಲ ಹಂತದಲ್ಲಿ ನನ್ನ 31 ವರ್ಷಗಳ ಅಭಿವೃದ್ಧಿ ಅನುಭವದ ಆಧಾರದಲ್ಲಿ, ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೋಕು, ಜೆಜಿಹಳ್ಳಿ ಹೋಬಳಿ, ಗೌಡನಹಳ್ಳಿ ಗ್ರಾಮಪಂಚಾಯಿತಿ, ಬಗ್ಗನಡು ಕಾವಲ್‍ನ, ಸುಮಾರು 12 ಎಕರೆ 15 ಗುಂಟೆಯಲ್ಲಿ ‘ಶಕ್ತಿಪೀಠ ಕ್ಯಾಂಪಸ್ ನಿರ್ಮಾಣ ಮಾಡಲು ಆರಂಭಿಸಿದೆ.

ಎರಡನೇ ಹಂತದಲ್ಲಿ, ತುಮಕೂರು ಜಿಲ್ಲೆ, ತುಮಕೂರು ತಾಲ್ಲೋಕು, ವಸಂತನರಸಾಪುರದ ಇಂಡಸ್ಟ್ರಿಯಲ್ ಕೈಗಾರಿಕಾ ಕಾರಿಡಾರ್‍ನಲ್ಲಿ, ಸುಮಾರು ಒಂದು ಎಕರೆಯಲ್ಲಿ ಶಕ್ತಿಪೀಠ ಡಾಟಾ ಪಾರ್ಕ್ ಮಾಡಲು ಚಿಂತನೆ ನಡೆಸಿದೆ.

ಶಕ್ತಿಪೀಠ ಎಂದರೆ ವಿಶ್ವದ 108 ಶಕ್ತಿಪೀಠಗಳು ಇರುವ, 7 ದೇಶಗಳ ನಕ್ಷೆಯನ್ನು ಭೂಮಿಯ ಮೇಲೆ ಮಾಡಿ, ಆಯಾ ಸ್ಥಳದಲ್ಲಿಯೇ ಪ್ರಾತ್ಯಾಕ್ಷಿಕೆ ಗುರುತು ಮಾಡುವ ಮೂಲಕ, ಭಕ್ತರಿಗೆ ನಿಖರವಾದ ಮಾಹಿತಿ ನೀಡಲು ಸಂಶೋಧನೆ ನಡೆಸುವುದು. ಕೆಂದ್ರ ಸರ್ಕಾರದ ಗಮನ ಸೆಳೆದು ಶಕ್ತಿಪೀಠ ಸಕ್ರ್ಯೂಟ್ ಮಾಡಿಸುವುದು, ನೀರು ಮತ್ತು ಶಕ್ತಿ ದೇವತೆಗಳಿಗಿರುವ ಸಂಭಂದಗಳ ಬಗ್ಗೆ ಅಧ್ಯಯನ ಮಾಡುವುದು.

ಜಲ  ಪೀಠಎಂದರೆ ಕರ್ನಾಟಕ ರಾಜ್ಯದಲ್ಲಿ ಊರಿಗೊಂದು ಕೆರೆ ಕೆರೆಗೆ ನದಿ ನೀರು ಘೋಷಣೆಯಡಿ, ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ಒದಗಿಸಲು, ನದಿ ನೀರಿನ ಹಂಚಿಕೆ ಮಾಡಲು, ರಾಜ್ಯದ ನದಿ ನೀರಿನ ಉತ್ಪತ್ತಿ, ಕೇಂದ್ರ ಸರ್ಕಾರದ ನದಿ ಜೋಡಣೆಯಿಂದ ದೊರೆಯುವ ನೀರು ಮತ್ತು ವಿವಾದವಿಲ್ಲದ ನದಿ ನೀರಿನ ವೈಜ್ಞಾನಿಕ ಬಳಕೆ ಬಗ್ಗೆ ಜಾಗೃತಿ ಮೂಡಿಸುವುದು.

ಅಭಿವೃದ್ಧಿ ಪೀಠ ಎಂದರೆ ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ ಒದಗಿಸಲು, ಇಂಡಿಯಾ @ 100 ಅಂಗವಾಗಿ, ನವ ಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ರ ವಿಶ್ಲೇಷಣೆ, ಕೇಂದ್ರ ಸರ್ಕಾರದಿಂದ ಹೆಚ್ಚಿಗೆ ಅನುದಾನ ತರುವ ಕಾರ್ಯತಂತ್ರ ರೂಪಿಸುವುದು. 100 ನೇ ವರ್ಷದ ಸ್ವಾತಂತ್ರ್ಯದ ವೇಳೆಗೆ ನಂಬರ್ ಒನ್ ಕರ್ನಾಟಕ’ ಮಾಡಲು ಅಧಿಕಾರಿಗಳಿಗೆ, ಚುನಾಯಿತ ಜನಪ್ರತಿನಿಧಿಗಳ ಕಾರ್ಯವೈಖರಿ ಬಗ್ಗೆ ಜನತೆಗೆ RANKING’ ಸಹಿತ, ಮನವರಿಕೆ ಮಾಡುವುದು.

ಶಕ್ತಿಪೀಠ ಕ್ಯಾಂಪಸ್ ನಿರ್ಮಾಣ, ಶಕ್ತಿಪೀಠ ಡಾಟಾ ಪಾರ್ಕ್ ನಿರ್ಮಾಣದ ಕಾಮಗಾರಿಗಳ ಕಾರ್ಯೋನ್ಮುಖವಾದ ನಂತರ ನನಗೆ ಅರಿವಾದದ್ದು, ಈ ಎರಡು ಕೆಲಸ ಆರಂಭಿಸುವ ಮೊದಲು ಬಹಳಷ್ಟು ಅಧ್ಯಯನ ಮಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಬಾಗಿತ್ವದಲ್ಲಿ,  ಕರಾರು ವಕ್ಕಾದ ತೀರ್ಮಾನ ಮಾಡಿದ ನಂತರ, ಈ ಎರಡು ಕೆಲಸಗಳಿಗೆ ಕೈಹಾಕಬೇಕು ಎಂಬ ಮನವರಿಕೆ ಆಯಿತು.

ಮೂರನೇ ಹಂತದಲ್ಲಿ, ಪೂರಕವಾಗಿ ತುಮಕೂರು ನಗರದ, ಜಯನಗರ ಪೂರ್ವದ, ಒಂದನೇ ಮುಖ್ಯ ರಸ್ತೆಯಲ್ಲಿ ಕೇವಲ 1520 ಚದುರ ಅಡಿ ನಿವೇಶನದಲ್ಲಿ ‘ಶಕ್ತಿ ಭವನ’ನಿರ್ಮಾಣ ಮಾಡಿ, ಮುಂದಿನ 24 ವರ್ಷಗಳ ನಿರ್ಧಿಷ್ಠ ಗುರಿಗಳಿಗೆ ಸಂಭಂಧಿಸಿದ ‘ಮ್ಯೂಸಿಯಂ’ ಮಾಡಲು ಆರಂಭಿಸಿದ್ದೇನೆ. ಈಗ ಕಟ್ಟಡ ನನಗೆ ಅಗತ್ಯವಿರುವಂತೆ ನಿರ್ಮಾಣ ಆಗುತ್ತಿದೆ.

 ಕಟ್ಟಡದ ಟೆರ್ರೆಸ್ ನಲ್ಲಿ, ಸೋಲಾರ್ ರೂಪ್ ಟಾಪ್ ಛಾವಣೆ ಕೆಳಗೆ, ನೀರನ ಟ್ಯಾಂಕ್ ಛಾವಣೆ ಕೆಳಗೆ, ಲಿಪ್ಟ್ ಹೆಡ್ ರೂಂ ಮೇಲೆ ಕುಳಿತರೆ, ಶಕ್ತಿಪೀಠ, ಜಲಪೀಠ ಮತ್ತು ಅಭಿವೃದ್ಧಿ ಪೀಠ ಗಳ ಪರಿಕಲ್ಪನೆಗಳ, ಒಂದೊಂದು ಕಡೆ ಒಂದೊಂದು ಯೋಜನೆಯ ಮಾಹಿತಿಗಳು ಕಣ್ಣ ಮುಂದೆ ಬರಬೇಕು, ಒಂದು ಸುತ್ತು ತಿರುಗಿದರೆ, ನಾಳೆ ಏನು ಮಾಡಬಹುದು ಎಂಬ ಅರಿವು ಬರಬೇಕು.

ಈ ರೀತಿ ತಾತ್ಕಾಲಿಕ ಸ್ಟ್ರಚ್ಚರ್  ನಿರ್ಮಾಣ ಮತ್ತು ಯಾವ ರೀತಿ ಪ್ರಾತ್ಯಾಕ್ಷಿಕೆ ಜೋಡಣೆ ಮಾಡಬಹುದು ಎಂಬ ಐಡಿಯಾ ಕೊಡುವವರಿಗೆ ಬಹಿರಂಗ ಆಹ್ವಾನ.

ಮೇಲ್ಚಾವಣಿ ಮೇಲೆ ಕುಳಿತರೆ ನನಗಂತೂ,   ‘ಸುತ್ತಲಿನ ಪರಿಸರ ಸ್ವರ್ಗದಂತೆ ‘ಕಾಣಿಸುತ್ತಿದೆ. ಈ ಟೆರ್ರೆಸ್ ‘ನಂಬರ್ ಒನ್ ಕರ್ನಾಟಕ’ ದ ಮೊದಲ ಮೆಟ್ಟಿಲು ಆಗಬೇಕು, ‘ಇಂಟೀರಿಯರ್ ಮತ್ತು ಎಕ್ಸ್ ಟೀರಿಯರ್ ಕಲೆಗಾರರು’ ಸಂಪರ್ಕಕಿಸಲು ಮನವಿ.

ನನ್ನ ಪರಿಕಲ್ಪನೆಯ ಈ ಮ್ಯೂಸಿಯಂಗಳ ಕಟ್ಟಡ, ಇನ್ನೂ 75 ದಿವಸದಲ್ಲಿ ಪೂರ್ಣಗೊಳ್ಳ ಬೇಕು, ಲೋಕಾರ್ಪಣೆಯಾಗ ಬೇಕು,ಮಾಹಿತಿಗಳ ಸಂಗ್ರಹ ನಿರಂತರವಾಗಿ ಸಾಗಬೇಕು, ನಂತರ ನನೆಗುದಿಗೆ ಬಿದ್ದಿರುವ  ಶಕ್ತಿಪೀಠ ಡಾಟಾ ಪಾರ್ಕ್ ಮತ್ತು ಶಕ್ತಿಪೀಠ ಕ್ಯಾಂಪಸ್ಗಳ ಕಾಮಗಾರಿಗೆ ಮರುಚಾಲನೆ ನೀಡಬೇಕು.  ಎಂಬುದು ನನ್ನ ಕಾಲಮಿತಿ ಗಡುವು.