21st July 2024
Share

TUMAKURU:SHAKTHI PEETA FOUNDATION

ಡೆಲ್ಲಿ ದುಡ್ಡು  ಮತ್ತು ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಹೆಚ್ಚಿನ ಅನುದಾನ ತರಲು ಕಾರ್ಯತಂತ್ರ ಒಂದು ಕಾಕತಾಳೀಯ, ಕಳೆದ 35 ವರ್ಷಗಳ ನನ್ನ ಅಭಿವೃದ್ಧಿ ತಪಸ್ಸಿನ ಅಭಿಯಾನÀದಲ್ಲಿ ಸುಮಾರು 33 ವರ್ಷಗಳ ಕಾಲ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಜೊತೆ ಕಾಲ ಕಳೆಯಲಾಗಿದೆ. ನನ್ನ ಹುಟ್ಟೂರು ಕುಂದರನಹಳ್ಳಿ ಜನ ನಾನು ಏನೇ ಮಾಡಿದರೂ ಡೆಲ್ಲಿ ದುಡ್ಡು ಎಂದು ಅಣಕಿಸುತ್ತಾರಂತೆ.

ಈಗ ನಾನು ಡೆಲ್ಲಿ ದುಡ್ಡಿನಿಂದ ಕರ್ನಾಟಕ ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲು ಮತ್ತು ಈ ಮೂಲಕ ವಿಶ್ವದ 7 ದೇಶಗಳ 108 ಶಕ್ತಿಪಿಠಗಳ ನೇತೃತ್ವದ, ಶಕ್ತಿಪೀಠ ಕ್ಯಾಂಪಸ್ ವಿಶ್ವ ವಿಖ್ಯಾತಿ ಮಾಡುವ ಕನಸು ಕಾಣುತ್ತಿದ್ದೇನೆ. ನೋಡಿ ಎತ್ತ ಸಾಗುತ್ತಿದೆ ನನ್ನ ಮುಂದಿನ ನಂಬರ್ ಒನ್ ಕರ್ನಾಟಕ ಜೀವನ.

ಶ್ರೀ ಜಿ.ಎಸ್.ಬಸವರಾಜ್ ರವರ ಸಂಸದರ ಅವಧಿ ಮುಗಿದ ನಂತರ, ದೆಹಲಿಯಲ್ಲಿ ಎಲ್ಲಿ ಉಳಿದು ಕೊಳ್ಳುವುದು, ಯಾರ ಜೊತೆ ವಿವಿಧ ಕಚೇರಿಗಳಿಗೆ ಭೇಟಿ ನೀಡುವುದು ಎಂಬ ಇತ್ಯಾದಿ ಚರ್ಚೆಗಳು ತಲೆ ತಿನ್ನುತ್ತಿವೆ.

ಯಾರ ಸಹಾಯವೂ ಇಲ್ಲದೆ, ನೇರವಾಗಿ ನಾನೇ ದೆಹಲಿಯ ಎಲ್ಲಾ ಅಗತ್ಯ ಕಚೇರಿಗಳಿಗೆ ಭೇಟಿ ಮಾಡುವ ಕಠೀಣ ನಿರ್ಧಾರ ಕೈಗೊಳ್ಳಲಾಯಿತು. ನನ್ನ ನೆಚ್ಚಿನ ಜಲಶಕ್ತಿ ಸಚಿವಾಲಯಕ್ಕೆ ದಿನಾಂಕ:09.08.2023 ರಂದು ಬೇಟಿ ಮಾಡುವ ಮೂಲಕ ‘ದೆಹಲಿಯಲ್ಲಿ ಕಚೇರಿಗೊಬ್ಬರು ಸ್ನೇಹಿತರು ಅಭಿಯಾನ ಕ್ಕೆ ಚಾಲನೆ ನೀಡಲಾಯಿತು.

  ಅಂದು ಸಂಜೆ ಜಲಶಕ್ತಿ ಸಚಿವಾಲಯದ ಒಬ್ಬರು ಸ್ನೇಹಿತರನ್ನು ಶ್ರೀ ಜಿ.ಎಸ್.ಬಸವರಾಜ್ ರವರ ಮನೆಗೆ ಊಟಕ್ಕೆ ಆಹ್ವಾನ ನೀಡಲಾಯಿತು. ಅವರ ಬಳಿ ನಮ್ಮ ಅಭಿಯಾನದ ಬಗ್ಗೆ ತಿಳಿಸಿದಾಗ ಅವರಿಗೆ ಪರಿಚಯ ಇರುವವರ ಪಟ್ಟಿ ಮಾಡಿ ಸಹಕರಿಸುವ ಭರವಸೆ ನೀಡಿದ್ದಾರೆ. ಪ್ರತಿ ತಿಂಗಳು 10 ದಿವಸ ದೆಹಲಿಯಲ್ಲಿ ಇರಲು ಯೋಚಿಸಲಾಗಿದೆ.

ಈಗ ಶ್ರೀ ಜಿ.ಎಸ್.ಬಸವರಾಜ್ ರವರು ಚುನಾವಣಾ ರಾಜಕೀಯದಿಂದ ದೂರ ಇರುವುದಾಗಿ ಘೋಷಣೆ ಮಾಡಿದ್ದಾರೆ. 33 ವರ್ಷಗಳಿಂದ ರಾಜ್ಯ ಸರ್ಕಾರದ ಮತ್ತು ಕೇಂದ್ರ ಸರ್ಕಾರದ ಯಾವುದೇ ಕಚೇರಿಗೆ, ಯಾವುದೇ ವಿಷಯಕ್ಕೆ ಬಹುತೇಕ ಜೊತೆಯಲ್ಲಿಯೇ ಭೇಟಿ ನೀಡಿರುವುದು ಒಂದು ವಿಶಿಷ್ಠ ಅನುಭವ.

3 ವಾರ ನಡೆದ ಕಳೆದ ಲೋಕಸಭಾ ಅಧಿವೇಶನz ಎಲ್ಲಾ ದಿನಗಳು ಶ್ರೀ ಜಿ.ಎಸ್.ಬಸವರಾಜ್ ರವರು ಅಧಿವೇಶನದಲ್ಲಿ ಬಾಗವಹಿಸಿರುವುದು ಒಂದು ವಿಶೇಷ. ನಾನು ಸಹ ಅಷ್ಟು ದಿವಸ ದೆಹಲಿಯಲ್ಲಿ ಉಳಿದಿದ್ದು ಒಂದು ವಿಶೇಷ.

ಬೆಳಿಗ್ಗೆ ನಮ್ಮ ವಾಕ್ ಇಂಡಿಯಾ ಗೇಟ್ ಕರ್ತವ್ಯ ಪಥದ ಸುತ್ತ ಮುತ್ತ ಇಂಜಿನಿಯರ್ ಶ್ರೀ ಕೃಷ್ಣ ಮೂರ್ತಿ ರವರು ಹಾಗೂ  ಲಾಯರ್ ಕೀರ್ತಿ ಜೊತೆಯಲ್ಲಿ ಇರುತ್ತಿದ್ದರು. ಇನ್ನೂ ಮುಂದೆ ದೆಹಲಿಯಲ್ಲಿ ಇದ್ದಾಗ ದಿನಕ್ಕೊಂದು ಕಚೇರಿಯ ಸುತ್ತ ವಾಕ್ ಮಾಡಲು ಯೋಚಿಸಿದೆವು. ರೂಪು ರೇಷೆ ನಿರ್ಧರಿಸಲು ಶ್ರೀ ಕೃಷ್ಣ ಮೂರ್ತಿ ರವರು ಮುಂದಾಗಿದ್ದಾರೆ.

ದೆಹಲಿಯಲ್ಲಿ ಅಭಿವೃದ್ಧಿ ಮ್ಯೂಸಿಯಂ, ತುಮಕೂರಿನಲ್ಲಿ ನಂಬರ್ ಒನ್ ಕರ್ನಾಟಕ ಮ್ಯೂಸಿಯಂ ಬಗ್ಗೆಯೇ ಪ್ರತಿ ದಿನ ಚರ್ಚೆ ನಡೆಯುತ್ತಿತ್ತು.

ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರ ಪರಿಕಲ್ಪನೆ  ನನ್ನ ನೆಲ ನನ್ನ ದೇಶ  ಅಭಿಯಾನದ ಅಂಗವಾಗಿ ನಿರ್ಮಾಣ ಮಾಡುವ ‘ಅಮೃತ ವಾಟಿಕಾ ಉಧ್ಯಾನ ವನದ ಬಗ್ಗೆಯೂ ಬಿಸಿ, ಬಿಸಿ ಚರ್ಚೆ ನಡೆಯಿತು.

ಕರ್ನಾಟಕ ರಾಜ್ಯದಿಂದ ತರುವ ಗಿಡ, ಮಣ್ಣು ಎಲ್ಲಿ ಹಾಕ ಬಹುದು ಎಂಬ ಬಗ್ಗೆಯೂ ಚರ್ಚೆ ನಡೆಯುತ್ತಿತ್ತು. ಯಾರನ್ನು ಕೇಳಿದರೂ ನಮಗೆ ಸರಿಯಾದ ಮಾಹಿತಿ ನೀಡಲಿಲ್ಲ.

 ದೆಹಲಿಯ ಶಕ್ತಿ ಕೇಂದ್ರದ ಹೊರಭಾಗದಲ್ಲಿ ಕುಳಿತು ಒಂದು ನಿರ್ಣಯಕ್ಕೆ ಬರಲಾಗಿದೆ.  ಕರ್ನಾಟಕದಿಂದ ತಂದ ಗಿಡ ಹಾಕಿ ಬೆಳೆಸುವ ಹಸಿರು ಕಾಯಕಕ್ಕೆ ತೊಡಗಿಸಿ ಕೊಂಡು, ದೆಹಲಿಯಲ್ಲಿ ಇರುವ ಎಲ್ಲಾ ಕಚೇರಿಗಳಿಂದ, ಕರ್ನಾಟಕ ರಾಜ್ಯಕ್ಕೆ ಯಾವ ಯೋಜನೆಗೆ ಎಷ್ಟು ಹಣ ತರಬಹುದು ಎಂಬ ಅಧ್ಯಯನದ ಜಿಐಎಸ್ ಲೇಯರ್ ಮಾಡಲು ಸಮಾಲೋಚನೆ ಮಾಡಿದೆವು.

ನಮ್ಮ ರಾಜ್ಯದ ಗಿಡಗಳು ದೆಹಲಿಯಲ್ಲಿ ಬೆಳೆಯುವುದರ ಸಂಕೇತವಾಗಿ, ಕೇಂದ್ರ ಸರ್ಕಾರದಿಂದ ಹೆಚ್ಚಿನ  ಅನುದಾನ ಪಡೆಯಲೇ ಬೇಕು.

ಬ್ರ್ಯಾಂಡ್ ಬೆಂಗಳೂರು ಕನಸು ಕಾಣುತ್ತಿರುವ ಉಪಮುಖ್ಯ ಮಂತ್ರಿ ಶ್ರೀ ಡಿ.ಕೆ.ಶಿವಕುಮಾರ್ ರವರ ಜೊತೆಯಲ್ಲಿ ಚರ್ಚೆ ನಡೆಸಲು ಯೋಚಿಸಿದೆವು.

ದೆಹಲಿ ವಿಶೇಷ ಪ್ರತಿ ನಿಧಿ ಶ್ರೀ ಟಿ.ಬಿ. ಜಯಚಂದ್ರ ರವರು ಮತ್ತು ರಾಜ್ಯ ಮಟ್ಟದ ದಿಶಾ ಸಮಿತಿಯ ಅಧ್ಯಕ್ಷರಾದ ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು ಮತ್ತು ಸದಸ್ಯ ಕಾರ್ಯದರ್ಶಿ ಶ್ರೀಮತಿ ಶಾಲಿನಿ ರಜನೀಶ್ ರವರ ಜೊತೆ ಚರ್ಚೆ ಮಾಡಲು ಯೋಚಿಸಿದೆವು.

  ದೆಹಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಹಾಸ್ಟೆಲ್ ನಿರ್ಮಾಣ ಮಾಡುವ ಕನಸು ಹೊತ್ತಿರುವ, ರಾಜ್ಯ ಸರ್ಕಾರದ ಸಹಕಾರ ಸಚಿವರಾದ ಶ್ರೀ ಕೆ.ಎನ್.ರಾಜಣ್ಣನವರು ಅಭಿವೃದ್ಧಿ ಅಧ್ಯಯನ ಪೀಠವನ್ನು ಆರಂಭಿಸಲು ಒಂದು ಭಾಗವನ್ನು ಮೀಸಲಿಡಲು ಚರ್ಚೆ ಮಾಡಲು ನಿರ್ಧಾರ ಕೈಗೊಳ್ಳಲಾಯಿತು.

ಈ ಬಗ್ಗೆ ವ್ಯಾಪಕ ಚರ್ಚೆ ಅಗತ್ಯ. ದೆಹಲಿಯಲ್ಲಿ ಕರ್ನಾಟಕದ ಸುಮಾರು 15000 ಕುಟುಂಬಗಳು ಇವೆ ಎಂಬ ಸುದ್ದಿ ತಿಳಿಯಿತು. ದೆಹಲಿ ಕನ್ನಡ ಸಂಘದ ಜೊತೆಗೆ, ಕರ್ನಾಟಕದ ಜಾತಿವಾರು ಸಂಘಟನೆಗಳು ಇವೆಯಂತೆ. ಅವುಗಳ ಪಧಾಧಿಕಾರಿಗಳ ಹುಡುಕಾಟವೂ ಆರಂಭವಾಗಿದೆ.

ದೆಹಲಿಯಲ್ಲಿ ಇರುವ ಶ್ರೀ ಮುರುಳೀಧರ್ ನಾಯಕ್ ರವರು, ಕುಂದರನಹಳ್ಳಿಯಿಂದ ತುಮಕೂರಿಗೆ ಬಂದು 25 ವರ್ಷ ಶ್ರೀ ಜಿ.ಎಸ್.ಬಸವರಾಜ್ ರವರು, ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರು, ನಮ್ಮ ತಂದೆ ದಿ. ಕೆ.ಆರ್.ನಾಯಕ್ ರವರು ಸೇರಿದಂತೆ ಸಾವಿರಾರು ಜನರೊಂದಿಗೆ ಜೊತೆಗೂಡಿ, ಅಭಿವೃದ್ಧಿ ಆಟ ಆಡಿದರಿ,

  ಈಗ ಬೆಂಗಳೂರಿನಲ್ಲಿ ನೆಲಸಿ ಅಲ್ಲಿಯೂ ಆಟ ಆಡುತ್ತಿದ್ದೀರಿ, ನೋಡು ನೋಡುತ್ತಲೇ ದೆಹಲಿಯಲ್ಲಿಯೂ ನಿಮ್ಮ ಆಭಿವೃದ್ಧಿ ಆಟ ಆಡಲು ಆರಂಭಿಸಿದಿರಿ, ಎನ್ನುವ ಧಾಟಿಯಲ್ಲಿ ಮಾತನಾಡಿದರು.

ನಿವೃತ್ತರಾದ ನಂತರ ನಿಮ್ಮ ತಂದೆಯವರ ಹಾದಿಯಲ್ಲಿ,  ನೀವೂ ಅಭಿವೃದ್ಧಿ ಅಭಿಯಾನದಲ್ಲಿ ಜೊತೆಯಾಗಿ ಎಂಬ ಮನವಿ ನನ್ನದಾಗಿತ್ತು. ಸುಮಾರು 20 ವರ್ಷಗಳ ದೆಹಲಿ ಅಭಿವೃದ್ಧಿ ಒಡನಾಟ ಅವರೊಂದಿಗೆ ಇದೆ. ಅಭಿಪ್ರಾಯಗಳು, ಸಿದ್ದಾಂತಗಳು ವಿಭಿನ್ನವಾದರೂ, ವಿಷಯಗಳವಾರು ಜಗಳ ಆದರೂ, ಶ್ರೀ ಜಿ.ಎಸ್.ಬಸವರಾಜ್ ರವರ ಜೊತೆ, ಜೊತೆಯಲ್ಲಿಯೇ ಅಭಿವೃದ್ಧಿ ಹಾದಿಯಲ್ಲಿ ಸಾಗುತ್ತಿದ್ದೇವೆ. ಅವರ ಕೊಡುಗೆಯೂ ಅಪಾರ.

 ಎಲ್ಲವೂ ಸರಿ ಹಿಂದಿ ಭಾಷೆಯನ್ನು ಕಲಿಯಲು ಆರಂಭಿಸಿ ಎನ್ನುವ ಸಲಹೆ ಅವರದ್ದಾಗಿದೆ. ನನ್ನ ಪ್ರಯತ್ನವೂ ಆರಂಭವಾಗಿದೆ.

ದೆಹಲಿ ಸ್ನೇಹಿತರೇ ನೀವೂ ಕೈಜೋಡಿಸಿ.