TUMAKURU:SHAKTHIPEETA FOUNDATION
ದಿನಾಂಕ:10.11.2017 ರಲ್ಲಿ ಶಕ್ತಿ ಶ್ರೀ ಶಕ್ತಿಪೀಠ ಫೌಂಡೇಷನ್ ಸ್ಥಾಪನೆ ಮಾಡಲು ಆಲೋಚನೆ ಮಾಡಿ ‘ಜನತೆಯ ವಿಷನ್ ಡಾಕ್ಯುಮೆಂಟ್–2025’ ನ್ನು ಬಿಡುಗಡೆ ಮಾಡಿದ್ದು ಇತಿಹಾಸ.
ನಿಯಮ ಬದ್ಧವಾಗಿ ಶಕ್ತಿಪೀಠ ಫೌಂಡೇಷನ್ ಚಾರಿಟಬಲ್ ಟ್ರಸ್ಟ್ ಆಕ್ಟ್ ನಲ್ಲಿ ನೊಂದಾವಣೆ ಆಗಿದ್ದು ದಿನಾಂಕ:16.08.2019 ರಂದು. ಇಂದಿಗೆ 5 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ ಎಂದು ತಿಳಿಸಲು ಹರ್ಷವಾಗುತ್ತಿದೆ.
ನಾನು ಯಾವುದೇ ಕೆಲಸ ಆರಂಭಿಸುವ ಮುನ್ನ ಒಂದು ಪುಸ್ತಕ ಬರೆದು ಜನರಿಗೆ ಹಂಚಿ ಆರಂಭ ಮಾಡುವುದು ಇದೂವರೆಗೂ ನಡೆದು ಕೊಂಡು ಬಂದಿರುವ ಹಾದಿ.
1988 ರಿಂದ ಸಾರ್ವಜನಿಕ ಜೀವನ ಆರಂಭವಾದ ನಂತರ ಮೊದಲು ಬರೆದ ನನ್ನ ಪುಸ್ತಕ ‘ಕುಂದರನಹಳ್ಳಿ ಮಾದರಿ ಗ್ರಾಮ ಯೋಜನೆ’ ಯಿಂದ ಆರಂಭಿಸಿ, ಈಗ ‘ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ’ ಎಂಬ ಪುಸ್ತಕದವರೆಗೂ ಬಂದಿದೆ. 35 ವರ್ಷಗಳಲ್ಲಿ ಸುಮಾರು 12 ಪುಸ್ತಕಗಳಾಗಿವೆ.
ಕುಂದರನಹಳ್ಳಿಯಲ್ಲಿ 1999 ರಲ್ಲಿಯೇ, ಅಫಿಕ್ಸ್ ಆವರಣದಲ್ಲಿ, ಕಟ್ಟಡ ಆರಂಭಿಸಿದ ದಿನದಿಂದ ಇಲ್ಲಿಯವರೆಗೂ ಒಂದಲ್ಲ ಒಂದು ಅಡಚಣೆಯಿಂದ ಯಾವುದೇ ಕಟ್ಟಡದಲ್ಲಿ ನನ್ನ ಕನಸಿನ ಮ್ಯೂಸಿಯಂ ಆರಂಭಿಸಲು ಸಾದ್ಯಾವಾಗಲೇ ಇಲ್ಲ. ಶಕ್ತಿದೇವತೆಯ ಅಡಚಣೆಯಿಂದಲೇ ಎಲ್ಲೂ ಸಾಧ್ಯಾವಾಗಲಿಲ್ಲ ಎಂಬ ನಂಬಿಕೆ ನನ್ನದಾಗಿದೆ. ಪ್ರಯತ್ನಗಳು ಹಲವಾರು ನಡೆದಿವೆ.
ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ದಿನಾಂಕ:20.08.2004 ರಂದು ಆರಂಭಿಸಿದ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಬಾಡಿಗೆ ಕಟ್ಟಡದಲ್ಲಿಯೇ ನನ್ನ ಕುಟುಂಬ ವಾಸವಾಗಿತ್ತು.
ಅದೇ ಕಟ್ಟಡದಲ್ಲಿ ಸುಮಾರು ದಿನಾಂಕ:20.08.2004 ರಿಂದ ದಿನಾಂಕ:05.10.2022 ರವೆಗೆ ಸುಮಾರು 18 ವರ್ಷಗಳ ಕಾಲ ‘ದೇವಿ ಪುಸ್ತಕದ ಪಾರಾಯಣ, ಶರನ್ನವರಾತ್ರಿ ವಿಶೇಷ ಪೂಜೆ ಮಾಡಿದ್ದೂ ಇತಿಹಾಸ.’
ದಿನಾಂಕ:17.10.2022 ರಂದು ಕಟ್ಟಡ ಒಡೆಯಲು ಪೂಜೆ ಮಾಡಲಾಯಿತು. ದಿನಾಂಕ:28.10.2022 ರಂದು ನೂತನ ‘ಶಕ್ತಿಭವನ’ ಕಟ್ಟಡದ ಭೂಮಿ ಪೂಜೆ ಮಾಡಲಾಯಿತು. ದಿನಾಂಕ:06.11.2022 ರಿಂದ ಆರಂಭವಾದ ಕಟ್ಟಡವನ್ನು, ದಿನಾಂಕ:15.10.2023 ರಂದು ಶರನ್ನವರಾತ್ರಿ ಪೂಜೆ ಆರಂಭಿಸುವ ಮೂಲಕ, ನನ್ನ ಕನಸಿನ ಸೌಧ ಲೋಕಾರ್ಪಣೆ ಮಾಡಲು ಸಜ್ಜಾಗಿದೆ.
ಸುಮಾರು 48.99 ಚದುರದ ಕಟ್ಟಡ ಇಂದು ತಲೆ ಎತ್ತಿದೆ. ಈ ಕಟ್ಟಡವನ್ನು 2047 ರವರೆಗೂ ಶಕ್ತಿಪೀಠ ಫೌಂಡೇಷನ್ ಗೆ ಲೀಸ್ ಕಂ ರೆಂಟ್ ಪಡೆಯಲು ಇಂದೇ ಕರಾರು ಮಾಡಿಕೊಳ್ಳಲಾಗಿದೆ.ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ನೊಂದಾವಣೆ ಪ್ರಕ್ರೀಯೆ ಆರಂಭವಾಗಲಿದೆ.
ಮುಂದಿನ 60 ದಿವಸಗಳಲ್ಲಿ ಶೇ 90 ರಷ್ಟು ಕಾಮಗಾರಿ ಪೂರ್ಣಗೊಳ್ಳಲಿದೆ. ದಿನಾಂಕ:15.10.2023 ರಿಂದ 9 ದಿವಸಗಳ ಕಾಲ ಶರನ್ನವರಾತ್ರಿ ಪೂಜೆ ನಡೆಯಲಿದೆ. ನಂತರ ಉಳಿದ ಕಾವiಗಾರಿ ಪೂರ್ಣಗೊಳ್ಳಲಿದೆ.
ಕೇಂದ್ರ ಸರ್ಕಾರ ಕಳೆದ ಲೋಕಸಭಾ ಅಧಿವೇಶನದಲ್ಲಿ ಮಂಡಿಸಿರುವ ‘ನ್ಯಾಷನಲ್ ರೀಸರ್ಚ್ ಫೌಂಡೇಷನ್’ ಬಿಲ್‍ಗೆ, ಪೂರಕವಾಗಿ ‘ನಂಬರ್ ಒನ್ ಕರ್ನಾಟಕ – 2047’ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು, 77 ನೇ ಸ್ವಾತಂತ್ರ್ಯ ದಿನದಿಂದ ಮೌನವಾಗಿ ಆರಂಭಿಸಲಾಗಿದೆ ಎಂದು ತಿಳಿಸಲು ಹರ್ಷಿಸುತ್ತೇನೆ.
545 ಶಕ್ತಿಪೀಠ ಫ್ಯಾಮಿಲಿಗಳು, ಸುಮಾರು 545 ಅಧ್ಯಯನ ಪೀಠಗಳ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿರುವುದು ಒಂದು ದಾಖಲೆಯೇ ಸರಿ. ಅವರೆಲ್ಲರಿಗೂ ಇದೇ ಕಟ್ಟಡದಲ್ಲಿ ಒಂದೊಂದು ‘ಶಕ್ತಿಪೀಠ ಲಾಕರ್’ ಹಂಚಿಕೆ ಮಾಡಲಾಗುವುದು. ಬಹುತೇಕ ಅವರೆಲ್ಲರೂ ನಮ್ಮ ಹೆಸರು ಹಾಕುವುದು ಬೇಡ, ಒಂದೊಂದು ದೇವರ ಹೆಸರಿನಲ್ಲಿ ಲಾಕರ್ ಮಾಡಿ ಎಂಬ ಸಲಹೆ ನೀಡುತ್ತಿದ್ದಾರೆ. ಇನ್ನೂ ಯಾವುದೇ ಅಂತಿಮ ನಿರ್ಧಾರವಾಗಿಲ್ಲ.
ತುಮಕೂರು ಜಿಲ್ಲೆಯ 330 ಗ್ರಾಮಪಂಚಾಯಿತಿಗಳ, ಪ್ರತಿಯೊಂದು ಗ್ರಾಮದ ಮತ್ತು 11 ನಗರ ಸ್ಥಳೀಯ ಸಂಸ್ಥೆಗಳ ಪ್ರತಿಯೊಂದು ಬಡಾವಣೆಯ ‘ಡಾಟಾ ಮಿತ್ರ’ರ ನೇತೃತ್ವದಲ್ಲಿ ‘ಊರಿಗೊಂದು ಪುಸ್ತಕದ ಪರಿಕಲ್ಪನೆ’ ಯ ಪ್ರಸ್ತಾವನೆ, ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರಿಗೆ, ಮುಖ್ಯ ಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರ ಮೂಲಕ ಸಲ್ಲಿಕೆಯಾಗಲಿದೆ. ನಂತರ ರಾಜ್ಯಾಧ್ಯಾಂತ ವಿಸ್ತರಣೆ ಆಗಲಿದೆ.
ಈ ಆಂದೋಲನವೂ ಮೌನವಾಗಿ ಕಾರ್ಯಾರಂಭ ಮಾಡಿದೆ.