12th September 2024
Share

TUMAKURU:SHAKTHIPEETA FOUNDATION

ತುಮಕೂರು ನಗರದ, ಜಯನಗರ ಪೂರ್ವದ, ಒಂದನೇ ಮುಖ್ಯ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿರುವ, ಪಾರ್ವತಿ ನಿಲಯದಲ್ಲಿ ದಿನಾಂಕ:15.10.2023 ರಂದು ಬ್ರಾಹ್ಮಿ ಲಗ್ನದಲ್ಲಿ ವಿಶ್ವಗುರು-2047-ನಾಲೇಡ್ಜ್ಬ್ಯಾಂಕ್ ಪ್ರಾರಂಭೊತ್ಸವ ಮಾಡಲು ಉದ್ದೇಶಿಸಲಾಗಿದೆ.

  ಭಾರತ ದೇಶ 2047 ರ ವೇಳಗೆ ‘ವಿಶ್ವ ಗುರು ಆಗಬೇಕು. ಕರ್ನಾಟಕ ರಾಜ್ಯ ಏಷ್ಯಾದಲ್ಲಿಯೇ ನಂಬರ್ ಒನ್ ಆಗಬೇಕು. ಈ ಬಗ್ಗೆ ಅಭಿವೃದ್ಧಿ ವಿಷಯ ತಜ್ಞರ ಜ್ಞಾನಗಳನ್ನು ಸಂಗ್ರಹ ಮಾಡುವುದೇ ಪ್ರಮುಖ ಉದ್ದೇಶ.

ಯಾವುದೇ ಹಣಕಾಸು ವ್ಯವಹಾರ ಇರುವುದಿಲ್ಲ. ನೊಂದಾವಣೆ ಇರುವುದಿಲ್ಲ, ಭಾರತ @ 100 ಸ್ವಾತಂತ್ರ್ಯ ಸೇನೆ(ಬಿ.ಎಸ್.ಎಸ್) ಅಡಿಯಲ್ಲಿ ಅಭಿವೃದ್ಧಿ ಜ್ಞಾನಿಗಳ ಸಂಗಮವಾಲಿದೆ. ಶಕ್ತಿಪೀಠ ಫೌಂಡೇಷನ್ ಸಂಪೂರ್ಣ ಹೊಣೆಗಾರಿಕೆ ನಿರ್ವಹಿಸಲಿದೆ.

ಪಾರ್ವತಿ ನಿಲಯ’ದ ನೂತನ ಕಟ್ಟಡದ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ, ಶಕ್ತಿ ಭವನ ದ ವಿವಿಧ ಕಾಮಗಾರಿ ನಿರ್ವಹಣೆ ಮಾಡುವವರು, ಕಾಲಮಿತಿಯಲ್ಲಿ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ.

ದಿನಾಂಕ:15.10.2023 ರಿಂದ ದಿನಾಂಕ:15.10.2047 ರವರೆಗೆ 24 ವರ್ಷಗಳ ಕಾಲ, ಪ್ರತಿ ತಿಂಗಳ ಖರ್ಚು ವೆಚ್ಚಗಳನ್ನು ಇ-ಪೇಪರ್ ಶಕ್ತಿಪೀಠದಲ್ಲಿ ಪ್ರಕಟಿಸಲಾಗುವುದು. ಅದೇ ರೀತಿ ಪ್ರತಿಯೊಂದು ಅಭಿವೃದ್ಧಿ ಅನುಸರಣೆಯ ವಿಧಾನಗಳನ್ನು ಇ-ಪೇಪರ್ ಶಕ್ತಿಪೀಠದಲ್ಲಿ ಪ್ರಕಟಿಸಲಾಗುವುದು.

ಜ್ಞಾನದಾನಿಗಳ ಹೆಸರುಗಳನ್ನು ಬರೆಯಲು, ಭಾವಚಿತ್ರ ಪ್ರಕಟಿಸಲು ಒಪ್ಪಿಗೆ ನೀಡಿದವರ ವಿವರ ಪ್ರಕಟಿಸಲಾಗುವುದು. ಹೆಸರು ಗೌಪ್ಯವಾಗಿಡಲು ಬಯಸಿದವರ ಹೆಸರು, ಭಾವಚಿತ್ರವನ್ನು ಪ್ರಕಟಣೆ ಮಾಡುವುದಿಲ್ಲ.

ಬಗ್ಗೆ ಜ್ಞಾನಿಗಳ ಸಲಹೆ ಪಡೆದು ರೂಪುರೇಷೆ ನಿರ್ಧರಿಸಲಾಗುವುದು. ಆಸಕ್ತರು ಕೈಜೋಡಿಸಲು ಮನವಿ ಮಾಡಲಾಗಿದೆ.

ನೀರಿನ ಟ್ಯಾಂಕ್- ಜಲಪೀಠ