22nd December 2024
Share

TUMAKURU:SHAKTHIPEETA FOUNDATION

  ಶಕ್ತಿಪೀಠ, ಜಲಪೀಠ ಮತ್ತು ಅಭಿವೃದ್ಧಿ ಮ್ಯೂಸಿಯಂ ಕಟ್ಟಡ ನಿರ್ಮಾಣ, ಸೆಟ್ ಬ್ಯಾಕ್ ನಿಯಮ ಪ್ರಕಾರ ನಿರ್ಮಾಣ ಮಾಡಲಾಗಿದಿಯೇ, ಒಂದು ವೇಳೆ ಉಲ್ಲಂಘನೆಯಾಗಿದ್ದರೆ ಶೇ ಎಷ್ಟು ಉಲ್ಲಂಘನೆಯಾಗಿದೆ. ಸರಿಯಾಗಿದ್ದರೆ ಪಕ್ಕಾ ನಕ್ಷೆ ಸಿದ್ಧಪಡಿಸಿ ಪ್ರದರ್ಶಿಸಲು, ತುಮಕೂರು ನಗರ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಖಡಕ್ ಸಲಹೆ ನೀಡಿದರು.

 ದೇಶದ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರ ಪರಿಕಲ್ಪನೆ, ವಿಶ್ವಗುರು ಭಾರತ-2047, ಮುಖ್ಯ ಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರ ಪರಿಕಲ್ಪನೆ, ಏಷ್ಯಾದಲ್ಲೇ ಕರ್ನಾಟಕ ನಂಬರ್ ಒನ್ ಮತ್ತು ಉಪಮುಖ್ಯಮಂತ್ರಿಯವರಾದ ಶ್ರೀ ಡಿ.ಕೆ.ಶಿವಕುಮಾರ್ ರವರ ಬ್ರ್ಯಾಂಡ್ ಬೆಂಗಳೂರು ಮತ್ತು ಇತರ ಎಲ್ಲಾ ಸಚಿವರ ಯೋಜನೆಗಳ ವಿಶ್ಲೇಷಣೆ, ಜ್ಞಾನಿಗಳ ಸಲಹೆ, ಸಾಧಕ-ಭಾದಕಗಳ ಬಗ್ಗೆ ಚರ್ಚೆ ಮಾಡಬೇಕಾದರೆ, ಮೊದಲು ನಾವು ಯಾರು? ನಮ್ಮ ಹಿನ್ನಲೆ ಏನು? ಎಂಬ ಬಗ್ಗೆ ಸಾರ್ವಜನಿಕರಿಗೆ ತಿಳಿಸುವುದು ಅಗತ್ಯ ಎನಿಸಿದೆ.

ದಿನಾಂಕ:30.08.2023 ರಂದು ಶಕ್ತಿಭವನದ ಕಟ್ಟಡ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದಾಗ ಶಾಸಕರು ಸಲಹೆ ನೀಡಿದರು. ಶಾಸಕರ ಮಾತಿನ ಧಾಟಿ  ಮೇರೆಗೆ ಈ ಕೆಳಕಂಡ ಮಾಹಿತಿಗಳನ್ನು ಸಂಗ್ರಹಿಸಿ, ಮ್ಯೂಸಿಯಂನಲ್ಲಿ ಇಡಲು ಮತ್ತು ರಾಜ್ಯದ ಮುಖ್ಯಮಂತ್ರಿಯವರು ಹಾಗೂ ದೇಶದ ಪ್ರಧಾನ ಮಂತ್ರಿಯವರಿಗೆ 35 ವರ್ಷದ ‘ಅಭಿವೃದ್ಧಿ ಡೈರಿ’ ಸಲ್ಲಿಸಲು ನಿರ್ಧರಿಸಲಾಗಿದೆ.

  1. ಸ್ವಾತಂತ್ರ್ಯ ಪೂರ್ವದಿಂದ ಇಲ್ಲಿಯವರೆಗೂ ಶಕ್ತಿಪೀಠ ಕ್ಯಾಂಪಸ್, ಶಕ್ತಿಪೀಠ ಡಾಟಾ ಪಾಕ್ ಮತ್ತು ಶಕ್ತಿಪೀಠ ಮ್ಯೂಸಿಯಂ ಜಮೀನು/ ನಿವೇಶನದ ಸಂಪೂರ್ಣ ದಾಖಲೆ.
  2. ಜಮೀನು/ ನಿವೇಶನದಲ್ಲಿ ಯಾವುದಾದರೂ ಕರಾಬುಹಳ್ಳ, ಕರಾಬುದಾರಿ ಇತ್ತೇ ಎಂಬ ಬಗ್ಗೆ ದಾಖಲೆ.
  3. ಜಮೀನು/ ನಿವೇಶನದ ಸೆಟ್ ಬ್ಯಾಕ್ ನಿಯಮದ ಮಾಹಿತಿಯುಳ್ಳ ನಕ್ಷೆ.
  4. ಜಮೀನು/ ನಿವೇಶನದ ಲೇ ಔಟ್ ನಿಯಮ ಬದ್ಧವಾಗಿ ಇದೆಯೇ?
  5. ಜಮೀನು/ ನಿವೇಶನದ ಭೂಬಳಕೆ ಪ್ರಕಾರ ಸಂಶೋಧನೆ, ಅಭಿವೃದ್ಧಿ, ನಾಲೇಡ್ಜ್ ಬ್ಯಾಂಕ್ – 2047, ಯೂ ಟ್ಯೂಬ್, ಗ್ರಂಥಾಲಯ ಯೋಜನೆಗೆ ಕಾನೂನಿನಲ್ಲಿ ಅವಕಾಶ ಇದೆಯೇ?
  6. ಶ್ರೀ ಬಿ.ಸುಜಾv ಕುಮಾರಿÀರವರಿಂದ ಶಕ್ತಿಪೀಠ ಫೌಂಡೇಷನ್ ಗೆ 2047 ನೇ ಇಸವಿವರೆಗೆ 24 ವರ್ಷ ಲೀಸ್ ಕಂ ಅಗ್ರಿಮೆಂಟ್ ಸಬ್ ರಿಜಿಸ್ಟರ್ ಕಚೇರಿಯಲ್ಲಿ ನೋಂದಣೆ.
  7. ಗೂಗಲ್‍ನಲ್ಲಿ ಮಾರ್ಕಿಂಗ್.
  8. ದಿನಾಂಕ:19.08.2019 ರಿಂದ ದಿನಾಂಕ:31.08.2023 ರವರೆಗಿನ ಶಕ್ತಿಪೀಠ ಫೌಂಡೇಷನ್ ಗೆ ಸಂಬಂಧಿಸಿದ ಆಡಿಟ್ ವರದಿ, ಅಗತ್ಯ ದಾಖಲೆಗಳು.
  9. ಶಕ್ತಿಪೀಠ ಫೌಂಡೇಷನ್ ಟ್ರಸ್ಟಿಗಳ ಆದಾಯದ ಮೂಲ, ಇತಿಹಾಸ, ದಿನಾಂಕ:01.08.1988 ರಿಂದ ವಿವಿಧ ಅಭಿವೃದ್ಧಿ ಅನುಭವದ ಮಾಹಿತಿಗಳು.ಕಹಿ ಘಟನೆಗಳು. ಜೀವಮಾನದ ಯಾವುದಾದರೂ ಘಟನೆ, ತಪ್ಪು ಎನಿಸಿದರೆ ಸಾರ್ವಜನಿಕ ಕ್ಷಮಾಪಣೆ.
  10. 1990 ರಿಂದ ಇಲ್ಲಿಯವರೆಗೂ ಸುಮಾರು 33 ವರ್ಷಗಳ ಕಾಲ ತುಮಕೂರು ಲೋಕಸಭಾ ಸದಸ್ಯ ಶ್ರೀ ಜಿ.ಎಸ್.ಬಸವರಾಜ್ ರವರ, ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರ, ದಿನಾಂಕ: 07.01.1997 ರಿಂದ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ, ಅಭಿವೃದ್ಧಿ ತಜ್ಞ ಶ್ರೀ ಟಿ.ಆರ್.ರಘೋತ್ತಮರಾವ್, ಹೋರಾಟ ತಜ್ಞ  ಕೆ.ಆರ್. ನಾಯಕ್ ಮತ್ತು ಇತರರೊಂದಿಗೆ ನನ್ನ ಅಭಿವೃದ್ಧಿ ಒಡನಾಟದ ನಿಖರವಾದ ಮಾಹಿತಿಯುಳ್ಳ ಸಿಹಿ ಅಥವಾ ಕಹಿ ಘಟನೆಗಳು, ವಿವಿಧ ದಾಖಲೆಗಳು. ಸಂಭಂಧಿಸಿದವರೊಂದಿಗೆ  ಘಟನೆವಾರು ವಿಡಿಯೋ ತುಣುಕುಗಳ ಸಂಗ್ರಹ.

   ಕಟ್ಟಡದ ಪ್ರತಿಯೊಂದು ಇಂಚಿನ ಬಳಕೆ ಬಗ್ಗೆ ಆರ್ಟೀಸ್ಟ್ ಗಳಿಂದ, ಇಂಟೀರಿಯರ್ಸ್ ತಜ್ಞರಗಳಿಂದ, ವಾಸ್ತು ಶಾಸ್ತ್ರ ತಜ್ಞರಿಂದ, ಜ್ಯೋತೀಷಿಗಳಿಂದ ನಕ್ಷೆ ಸಿದ್ಧಪಡಿಸಿ, ಎಲ್ಲರ ಅಭಿಪ್ರಾಯದ ಮೇರೆಗೆ, ಗುರುತು ಮಾಡಿ, ನಂತರ ಪಟ್ಟಿ/ಬಣ್ಣ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ.

ಶೀಘ್ರದಲ್ಲಿ ವಿವಿಧ ತಂಡ ರಚಿಸÀಲಾಗುವುದು.

ಸಾರ್ವಜನಿಕರು ಯಾವುದೇ ಸಿಹಿ-ಕಹಿ ಘಟನೆಗಳಿದ್ದಲ್ಲಿ ಸಮಾಲೋಚನೆ ನಡೆಸಲು ಬಹಿರಂಗ ಮನವಿ.ಎಲ್ಲವೂ ಪಾರದರ್ಶಕವಾಗಿರ ಬೇಕು ಎಂಬುದೂ ಸಹ ನನ್ನ ದೃಢ ನಿರ್ಧಾರ.