26th December 2024
Share

TUMAKURU:SHAKTHIPEETA FOUNDATION

ತುಮಕೂರು ನಗರ ಗ್ರಂಥಾಲಯವನ್ನು ವಿಶ್ವದಲ್ಲಿಯೇ ನಂಬರ್ ಮಾಡುವ ಪರಿಕಲ್ಪನೆಯ ವಿಷನ್ ಗ್ರೂಪ್ ರಚಿಸಲು ಚಾಲನೆ ನೀಡಲಾಯಿತು

ತುಮಕೂರು ನಗರ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರÀ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಾಗಾರದ ಮುಂಚೆ ಒಂದು ವಿಷನ್ ಗ್ರೂಪ್ ರಚಿಸಿಕೊಂಡು, ಒಂದು ಅತ್ಯತ್ತಮ ಪ್ರಸ್ತಾವನೆ ಸಿದ್ಧಪಡಿಸಲು ಓದುಗರು ಅಭಿಪ್ರಾಯ ವ್ಯಕ್ತ ಪಡಿಸಿದರು.

ಗ್ರಂಥಾಲಯದಲ್ಲಿ RACKS ಸಂದಿಯಲ್ಲಿ ಕುಳಿತು ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳನ್ನು ವಿಚಾರಿಸಿದಾಗ, ಅವರ ಬೇಡಿಕೆ ಸಾರ್ ಮೇಲೆ ಖಾಲಿ ಇರುವ ಕಟ್ಟಡದಲ್ಲಿ ನೆಲದಲ್ಲಿಯೇ ಕುಳಿತು ಓದುತ್ತೇವೆ ನಮಗೆ ಅವಕಾಶ ಕೊಡಿಸಿ ಎಂಬುದಾಗಿತ್ತು.

ಓದುಗರಿಗೆ ಕೆಲವು ಟಾಸ್ಕ್ ನೀಡಿದ್ದು, ಅವರಿಗೆ ಅಗತ್ಯವಿರುವಂತೆ ಸಿದ್ಧಪಡಿಸಲು ಚರ್ಚೆ ನಡೆಸಲಾಯಿತು.ಒಂದು ವಾರದಲ್ಲಿ ಕರಡು ಪ್ರತಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

‘ಊರಿಗೊಂದು/ಬಡಾವಣೆಗೊಂದು ಪುಸ್ತಕ’ ಯೋಜನೆಯ ಅನುಷ್ಠಾನಕ್ಕಾಗಿ, ‘ಊರಿಗೊಬ್ಬ/ಬಡಾವಣೆಗೊಬ್ಬ ಡಾಟಾ ಮಿತ್ರ’ ಬಗ್ಗೆ ಶೀಘ್ರದಲ್ಲಿ ತುಮಕೂರು ಜಿಲ್ಲೆಯ 11 ನಗರ ಸ್ಥಳೀಯ ಸಂಸ್ಥೆಗಳ ಮತ್ತು 330 ಗ್ರಾಮಪಂಚಾಯಿತಿಗಳ ವ್ಯಾಪ್ತಿಯ ಗ್ರಂಥಾಲಯದ ನೌಕರರ ಕಾರ್ಯಾಗಾರ ನೆಡಸಲು ಪೂರ್ವ ಸಿದ್ಧತೆ ಬಗ್ಗೆ ಚರ್ಚೆ ನಡೆಸಲಾಗಿದೆ.

ನಂತರ ತುಮಕೂರು ಗ್ರಂಥಾಲಯದ ಪ್ರಾಧಿಕಾರದ ಅಧ್ಯಕ್ಷರು ಹಾಗೂ ತುಮಕೂರು ಮಹಾನಗರ ಪಾಲಿಕೆ ಮೇಯರ್ ಪೂಜ್ಯ ಶ್ರೀಮತಿ ಪ್ರಭಾವತಿ ರವರೊಂದಿಗೆ ಹಿಂದಿನ ಸಭೆ ನಡವಳಿಕೆಯಂತೆ ಕೈಗೊಂಡ ಕ್ರಮಗಳ ಬಗ್ಗೆ ಶೀಘ್ರ ಸಭೆ ಕರೆಯಲು ಸಮಾಲೋಚನೆ ನಡೆಸಲಾಯಿತು.

ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ. ಡಾ.ಜಿ.ಪರಮೇಶ್ವರ್ ರವರೊಂದಿಗೆ ಸಮಾಲೋಚನೆ ನಡೆಸಿ, ದಿನಾಂಕ ನಿಗದಿ ಗೊಳಿಸಲಾಗುವುದು. ಈ ಕಾರ್ಯಾಗಾರಕ್ಕೆ ಜಿಲ್ಲೆಯ ಎಲ್ಲಾ ಸಚಿವರು, ದೆಹಲಿ ವಿಶೇಷ ಪ್ರತಿನಿಧಿ, ಸಂಸದರು, ರಾಜ್ಯಸಭಾ ಸದಸ್ಯರು. ಶಾಸಕರು, ವಿಧಾನಪರಿಷತ್ ಸದಸ್ಯರನ್ನು ಆಹ್ವಾನಿಸಲು ಸಮಾಲೋಚನೆ ನಡೆದಿದೆ.

ತುಮಕೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಒಂದು ಅತ್ಯುತ್ತಮ ವರದಿ ನೀಡಲು, ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆಯುಕ್ತರು ವರ್ಗಾವಣೆಯಾಗಿದ್ದಾರೆ, ಈಗ ಬಂದಿರುವ ಆಯುಕ್ತ ಗಮನಕ್ಕೆ ತರಲು ಅವರ ಕಚೇರಿಗೆ ಹೋದರೂ ಅವರು ಸಭೆಯೊಂದನ್ನು ನಡೆಸುತ್ತಿದ್ದರು. ಆವರ ಆಪ್ತ ಸಹಾಯಕರಿಗೆ ವಿಷಯ ತಿಳಿಸಲು ಹೇಳಿ ಬರಲಾಯಿತು.